ಪಕ್ಷದ ನಾಯಕರ ಬಗೆಗಿನ ಬಿಡುಬೀಸು ಹೇಳಿಕೆ ಮತ್ತು ವಿವಾದಗಳ ಕಾರಣಕ್ಕೆ ಬಸವರಾಜ ಪಾಟೀಲ್ ಯತ್ನಾಳ್ ಅವರಿಗೆ ವಾರ್ನಿಂಗ್ ಕೊಡುವ ರೀತಿ ಮಾತನಾಡಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ವಿಜಯಪುರಕ್ಕೇ ಬಂದು ಯತ್ನಾಳ್ ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿರುವುದು ಸಂಚಲನ ಸೃಷ್ಟಿಸಿದೆ.
ಮಂಗಳವಾರ ರಾತ್ರಿ ವಿಜಯಪುರದಲ್ಲಿ ಯತ್ನಾಳ್ ಭೇಟಿಯಾದ ಅರುಣ್ ಸಿಂಗ್ ಮಾತುಕತೆ ನಡೆಸಿದರು.

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಜಯ ತಂದುಕೊಟ್ಟಿದ್ದಕ್ಕೆ ಅಭಿನಂದಿಸಿದರು. ಗೆದ್ದ 17 ಸದಸ್ಯರೊಂದಿಗೆ ಉಪಹಾರ ಸೇವಿಸಿದರು. ನಂತರ ಯತ್ನಾಳ್ ಅವರೊಂದಿಗೆ ಅರ್ಧ ತಾಸಿಗೂ ಹೆಚ್ಚುಕಾಲ ರಹಸ್ಯ ಚರ್ಚೆ ನಡೆಸಿದರು. ಈ ಸಮಯದಲ್ಲಿ ಎಲ್ಲರನ್ನು ಹೊರಗೆ ಕಳುಹಿಸಲಾಗಿತ್ತು.

ಯತ್ನಾಳ್ ಯಡಿಯೂರಪ್ಪ ವಿರುದ್ಧ ಮತ್ತು ಸರ್ಕಾರದ ಅಪಸವ್ಯಗಳ ಬಗ್ಗೆ ನೇರವಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ. ಅವರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬ ಮಾತೂ ಇದೆ.