–ಶೌರ್ಯ ಡೆಸ್ಕ್
ಭಾರತೀಯರು ವೀಸಾ ಇಲ್ಲದೆ ಅಥವಾ ಸರಳ ವೀಸಾ (ಈ ವೀಸಾ ) ಪಡೆದು 60 ದೇಶಗಳಿಗೆ ಹೋಗಬಹುದೇನೋ ಸರಿ. ಆದರೆ ಇವುಗಳಲ್ಲಿ ಹಲವು ಬಹಳ ದೂರದಲ್ಲಿವೆ. ಸಮೀಪದಲ್ಲಿರುವ ವೀಸಾ ಇಲ್ಲದೆ ಹೋಗಬಹುದಾದ ದೇಶಗಳು ಮತ್ತು ಪ್ರವಾಸಕ್ಕೆ ಸೂಕ್ತವಾದ ದೇಶಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ವಿಶ್ವದ ಅತ್ಯಂತ ಪ್ರಬಲ ಪಾಸ್‌ಪೋಟ್‌ಗಳ ಪೈಕಿ ಭಾರತದ ಶ್ರೇಯಾಂಕವು ಏಳು ಸ್ಥಾನಗಳಿಗೆ ಸುಧಾರಿಸಿ 83 ನೇ ಸ್ಥಾನಕ್ಕೆ ತಲುಪಿದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಈಗ ವೀಸಾ ಇಲ್ಲದೆ ಪ್ರಪಂಚದ 60 ದೇಶಗಳಿಗೆ ಭೇಟಿ ನೀಡಬಹುದಾಗಿದೆ. ಭಾರತವು 2022 ರಲ್ಲಿ ತನ್ನ ಪಾಸ್‌ಪೋರ್ಟ್ ಬಲವನ್ನು ಸುಧಾರಿಸಿಕೊಂಡಿದ್ದು, ಕಳೆದ ವರ್ಷದ 90 ನೇ ಸ್ಥಾನದಿಂದ ಏಳು ಸ್ಥಾನಗಳನ್ನು ಮೇಲೇರಿ ಈಗ 83 ನೇ ಸ್ಥಾನಕ್ಕೆ ತಲುಪಿದೆ. ಈಗ ಪೂರ್ವ ವೀಸಾ ಅಗತ್ಯವಿಲ್ಲದ 60 ದೇಶಗಳಿಗೆ ಭಾರತೀಯರು ಪ್ರಯಾಣ ಮಾಡಬಹುದಾಗಿದೆ.
ಭಾರತೀಯರು ವೀಸಾ ಇಲ್ಲದೆ ಅಥವಾ ಸರಳ ವೀಸಾ (ಈ ವೀಸಾ ) ಪಡೆದು 60 ದೇಶಗಳಿಗೆ ಹೋಗಬಹುದೇನೋ ಸರಿ. ಆದರೆ ಇವುಗಳಲ್ಲಿ ಹಲವು ಬಹಳ ದೂರದಲ್ಲಿವೆ.
ಸಮೀಪದಲ್ಲಿರುವ ವೀಸಾ ಇಲ್ಲದೆ ಹೋಗಬಹುದಾದ ದೇಶಗಳು ಮತ್ತು ಪ್ರವಾಸಕ್ಕೆ ಸೂಕ್ತವಾದ ದೇಶಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಶ್ರೀಲಂಕಾ

ಶ್ರೀಲಂಕಾ ಬಹು ಸುಂದರವಾದ ದೇಶ. ಇಲ್ಲಿನ ಸಮುದ್ರ ಕಿನಾರೆಗಳು ಎಲ್ಲರನ್ನೂ ಆಕರ್ಷಿಸುತ್ತವೆ. ಬೆಟ್ಟ ಕಣಿವೆಗಳು, ಹಸಿರು ತಬ್ಬಿದ ಪರ್ವತಮಯ ಪ್ರದೇಶಗಳು ಒಮ್ಮೆಯಾದರೂ ಹೋಗಬೇಕು ಅನಿಸುತ್ತವೆ. ಇಲ್ಲಿಗೆ ಭೇಟಿ ನೀಡಲು ನಿಮಗೆ ಯಾವುದೇ ವೀಸಾ ಅಗತ್ಯವಿಲ್ಲ. ಶ್ರೀಲಂಕಾ ಭಾರತೀಯ ಜನರಿಗೆ ಆನ್ ಅರೈವಲ್ ವೀಸಾವನ್ನು ನೀಡುತ್ತದೆ.
ಪ್ರಸ್ತುತ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೋರಿ ಪ್ರವಾಸೋದ್ಯಮ ನೆಲಕಚ್ಚಿದೆಯಾದರೂ ಪರಿಸ್ಥಿತಿ ಸುಧಾರಿಸಿದ ಬಳಿಕ ಭೇಟಿ ನೀಡಬಹುದು.
ಮಾಲ್ಡೀವ್ಸ್

ಮಾಲ್ಡೀವ್ಸ್ ಪ್ರತಿಯೊಬ್ಬರ ನೆಚ್ಚಿನ ಪ್ರವಾಸಿ ತಾಣವಾಗಿದೆ. ನೀಲ ಸಮುದ್ರಗಳ ಸ್ವರ್ಗ ಈ ದೇಶ. ಸುಂದರ ದ್ವೀಪಗಳು ನೋಡಲು ಮತ್ತು ಅಲ್ಲಿನ ನೀರವ ನಿಶ್ಯಬ್ಧದ ನಡುವಿನ ಕಡಲ ಮೊರೆತವನ್ನು ಆನಂದಿಸಲು ಪ್ರತಿವರ್ಷ ಲಕ್ಷಾಂತರ ಇಲ್ಲಿಗೆ ಭೇಟಿ ನೀಡುತ್ತಾರೆ. ಈ ದ್ವೀಪ ರಾಷ್ಟ್ರಕ್ಕೆ ಪ್ರಯಾಣಿಸಲು ನಿಮಗೆ ಭಾರತೀಯ ಪಾಸ್ ಪೋರ್ಟ್ ಮಾತ್ರ ಬೇಕಾಗುತ್ತದೆ.
ಫಿಜಿ
ನೀವು ವೀಸಾ ಇಲ್ಲದೆಯೂ ಫಿಜಿಗೆ ಭೇಟಿ ನೀಡಬಹುದು. ಇದು ಭಾರತೀಯರ ನೆಚ್ಚಿನ ಸ್ಥಳವಾಗಿದೆ. ಇಲ್ಲಿ ಹಿಂದಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆನ್ ಅರೈವಲ್ ವೀಸಾ ಸೌಲಭ್ಯವೂ ಇದೆ.

ಭೂತಾನ್
ವೀಸಾ ರಗಳೆ ಇಲ್ಲದ ಪ್ರಯಾಣಿಸಬಹುದಾದ ದೇಶಗಳ ಪಟ್ಟಿಯಲ್ಲಿ ನೆರೆಯ ಪುಟ್ಟ, ನಿಸರ್ಗ ಸೌಂದರ್ಯವನ್ನೇ ಹೊದ್ದು ಮಲಗಿರುವ ಭೂತಾನ್ ಹೆಸರೂ ಸೇರಿದೆ. ಇತ್ತೀಚೆಗೆ, ಕೋವಿಡ್ ಸಾಂಕ್ರಾಮಿಕದ ನಂತರ ಪ್ರವಾಸಿಗರಿಗೆ ಭೂತಾನ್ ತನ್ನ ಗಡಿಗಳನ್ನು ತೆರೆದಿದೆ, ಇಲ್ಲಿಗೆ ಹೋಗಲು ನಿಮಗೆ ಭಾರತೀಯ ಪಾಸ್‌ಪೋರ್ಟ್ ಮಾತ್ರ ಬೇಕಾಗುತ್ತದೆ.

ನೇಪಾಳ
ಪಕ್ಕದ ನೇಪಾಳ ದೇಶ ಸುತ್ತಾಡಲು ಕೂಡಾ ಭಾರತೀಯ ಪಾಸ್ ಪೋರ್ಟ್ ಇದ್ದರೆ ಸಾಕು. ಈ ದೇಶ ಒಂದು ರೀತಿಯಲ್ಲಿ ಭಾರತದ ಹೆಗಲ ಮೇಲಿನ ನೆಲ. ಭಾರತದ ಕರೆನ್ಸಿಯೂ ಇಲ್ಲಿ ಚಲಾವಣೆಯಾಗುತ್ತದೆ.

ಥೈಲ್ಯಾಂಡ್
ಥೈಲ್ಯಾಂಡ್ ಗೆ ಭೇಟಿ ನೀಡಲು ವೀಸಾ ಅಗತ್ಯವಿಲ್ಲ. ಭಾರತೀಯ ಪಾಸ್ ಪೋರ್ಟ್ ಇದ್ದರೆ ಪ್ರವೇಶ ಸರಾಗ. ಫುಕೆಟ್ ನ ಉಷ್ಣವಲಯದ ಕಡಲತೀರಗಳಿಂದ ಪ್ರಾಚೀನ ದೇವಾಲಯಗಳಿಗೆ ಮತ್ತು ಬ್ಯಾಂಕಾಕ್ ನಗರ ಸೌಂದರ್ಯದಿಂದ ಪುರಾತನ ಸಾಂಸ್ಕೃತಿಕ ತಾಣಗಳವರೆಗೆ ಥೈಲ್ಯಾಂಡ್ ಕೆಲವು ಏಷ್ಯಾದ ಇತರ ಸ್ಥಳಗಳಂತೆ ಆಸೆಗಳನ್ನು ಹೊರಹೊಮ್ಮಿಸುತ್ತದೆ. ಈ ಏಷ್ಯಾದ ಸ್ವರ್ಗದ ಪ್ರವಾಸಕ್ಕೆ ಪಾಸ್ ಪೋರ್ಟ್ ಇದ್ದರೆ ಸಾಕು.

ಮಾರಿಷಸ್- ಸೆಷೆಲ್ಲ್ಸ್

ಸುಂದರ ದ್ವೀಪ ರಾಷ್ಟ್ರಗಳಾದ ಮಾರಿಷಸ್ ಮತ್ತು ಸೆಷೆಲ್ಸ್ಸ್ ದೇಶಗಳಿಗೂ ಭಾರತೀಯರು ವೀಸಾ ಇಲ್ಲದೆ ಪ್ರಯಾಣ ಮಾಡಬಹುದು.
ಪ್ರಯಾಣಕ್ಕೆ ಮುನ್ನ ಬದಲಾದ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು.