-ಶೌರ್ಯ ಡೆಸ್ಕ್
ಬಣ ರಾಜಕೀಯಕ್ಕೆ ಅಸ್ಪದ ನೀಡದಂತೆ, ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ ಎಲ್ಲ ಆಕಾಂಕ್ಷಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಮುನಿಸಿಕೊಂಡ ಕಾರ್ಯಕರ್ತರ ಮನವೊಲಿಕೆ ಮಾಡಿ ಶತಾಯಗತಾಯ ಗೆದ್ದು ಬರಲೇಬೇಕು ಎಂದು ಅಭ್ಯರ್ಥಿಗಳಿಗೆ ಟಾಸ್ಕ್ ನೀಡಲಾಗಿದೆ.

ಕಾಂಗ್ರೆಸ್ ಪಕ್ಷ ಈ ಸಲ ಅಧಿಕಾರಕ್ಕೇರಲೇಬೇಕೆಂಬ ನಿಟ್ಟಿನಲ್ಲಿ ಅನೇಕ ಕಾರ್ಯತಂತ್ರಗಳನ್ನು ಮಾಡುತ್ತಿದ್ದು, ಇದರ ಭಾಗವಾಗಿ ಹಾಲಿ ಶಾಸಕರು ಸೇರಿ ಗೆಲ್ಲಲು ಶಕ್ತರು ಎನ್ನಲಾದ 125 ಅಭ್ಯರ್ಥಿಗಳನ್ನು ಪಟ್ಟಿ ಮಾಡಿ ಕೂಡಲೇ ಕ್ಷೇತ್ರದ ತಳಮಟ್ಟದಿಂದ ಕೆಲಸ ಮಾಡುವಂತೆ, ನೇರ ಜನರ ಬಳಿಗೆ ಹೋಗಿ ಅವರ ವಿಶ್ವಾಸ ಗಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬಣ ರಾಜಕೀಯಕ್ಕೆ ಅಸ್ಪದ ನೀಡದಂತೆ, ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ ಎಲ್ಲ ಆಕಾಂಕ್ಷಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಮುನಿಸಿಕೊಂಡ ಕಾರ್ಯಕರ್ತರ ಮನವೊಲಿಕೆ ಮಾಡಿ ಶತಾಯಗತಾಯ ಗೆದ್ದು ಬರಲೇಬೇಕು ಎಂದು ಟಾಸ್ಕ್ ನೀಡಲಾಗಿದೆ.

ಸ್ಪಷ್ಟವಾಗಿ ಅಭ್ಯರ್ಥಿ ಸೂಚಿಸದೆ ತಡವಾಗಿ ಟಿಕೆಟ್ ನೀಡಿದರೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಈ ಸಲ ಮೊದಲೇ ನಿಮಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದೇವೆ ಎಂದು ರಾಜ್ಯ ನಾಯಕರು ತಿಳಿಸಿದ್ದಾರೆ. ಸಂಬಂಧಪಟ್ಟ ಜಿಲ್ಲಾಧ್ಯಕ್ಷರಿಗೂ ಈ ಸಂಬಂಧ ಮಾಹಿತಿ ನೀಡಲಾಗಿದೆ ಎಂಬ ಖಚಿತ ಮಾಹಿತಿ ಮೂಲಗಳಿಂದ ದೊರೆತಿದೆ.

ಹಿರಿಯ ನಾಯಕರು ಮತ್ತು ಕಾಂಗ್ರೆಸ್ ಪಕ್ಷದ ಘಟಾನುಘಟಿಗಳು ಇರುವ ತುಮಕೂರು ಜಿಲ್ಲೆಯ 11 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫಿಕ್ಸ್ ಆಗಿದೆ. ಜಿಲ್ಲೆಯ ಪ್ರಭಾವಿ ಮುಖಂಡರಾದ ಟಿ.ಬಿ. ಜಯಚಂದ್ರ ಹಾಗೂ ಕೆ.ಎನ್. ರಾಜಣ್ಣ ಅವರ ಸಲಹೆ, ಕೆಪಿಸಿಸಿ ಮಾಜಿ ಅಧ್ಯಕ್ಷ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರ ಅನುಮೋದನೆ ಮೇರೆಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿದೆ.
ಅಭ್ಯರ್ಥಿಗಳ ಪಟ್ಟಿ
ಕೊರಟಗೆರೆ-ಡಾ. ಜಿ. ಪರಮೇಶ್ವರ್ (ಹಾಲಿ ಶಾಸಕರು, ಮಾಜಿ ಡಿಸಿಎಂ), ಶಿರಾ-ಟಿ.ಬಿ. ಜಯಚಂದ್ರ (ಮಾಜಿ ಸಚಿವ, ಮಾಜಿ ವಿಪಕ್ಷ ಉಪನಾಯಕ) ಮಧುಗಿರಿ- ಕೆ.ಎನ್. ರಾಜಣ್ಣ (ಮಾಜಿ ಶಾಸಕ),

ಪಾವಗಡ-ವೆಂಕಟರವಣಪ್ಪ ( ಹಾಲಿ ಶಾಸಕರು, ಮಾಜಿ ಸಚಿವರು),

ಗುಬ್ಬಿ- ಶ್ರೀನಿವಾಸ್ (ಹಾಲಿ ಶಾಸಕರು, ಮಾಜಿ ಸಚಿವರು),

ಕುಣಿಗಲ್-ಡಾ. ರಂಗನಾಥ್ (ಹಾಲಿ ಶಾಸಕರು),

ತುಮಕೂರು ನಗರ-ರಫೀಕ್ ಅಹ್ಮದ್ (ಮಾಜಿ ಶಾಸಕರು),

ತುರುವೇಕೆರೆ-ಬೆಮೆಲ್ ಕಾಂತರಾಜು (ಮಾಜಿ ಪರಿಷತ್ ಸದಸ್ಯರು),

ತಿಪಟೂರು-ಷಡಕ್ಷರಿ (ಮಾಜಿ ಶಾಸಕರು),

ಚಿಕ್ಕನಾಯಕನಹಳ್ಳಿ- ಸಿ.ಎಂ. ಧನಂಜಯ್ (ಮಾಜಿ ಅಧ್ಯಕ್ಷರು, ಕೆಎಸ್‌ಐಐಡಿಸಿ), ತುಮಕೂರು ಗ್ರಾಮಾಂತರ- ರವಿಕುಮಾರ್.