-ಡಾ. ಶುಭಾ
ಇಲ್ಲಿ ಹೇಳಹೊರಟಿರುವುದು ಆರೋಗ್ಯ ಲಾಭಕ್ಕಾಗಿ ಖಾಲಿ ಹೊಟ್ಟೆಗೆ ಏನು ಸೇವಿಸಿದರೆ ಸೂಕ್ತ ಎಂಬುದರ ಬಗ್ಗೆ.

ಬೆಳಗೆದ್ದು ಒಬ್ಬೊಬ್ಬರಿಗೊಂದು ಪೇಯ, ಧೂಮ ಸೇವನೆ ಅಭ್ಯಾಸವಿರುತ್ತದೆ. ಕೆಲವರು ಕಾಫಿ, ಟೀ, ಹಾಲು ಕುಡಿದರೆ ಇನ್ನೂ ಕೆಲವರು ತಾಜಾ ಹಣ್ಣಿನ ರಸ, ಬೂದುಗುಂಬಳ, ಹಾಗಲಕಾಯಿ ರಸ, ಹೀಗೆ ತರಕಾರಿ ರಸವನ್ನು ಕುಡಿಯುತ್ತಾರೆ. ಕೆಲವರಲ್ಲಿ ಕೆಲವರು ಹಾಸಿಗೆಯಿಂದ ಏಳುತ್ತಲೇ ಸಿಗರೇಟು ಹಚ್ಚಿಕೊಳ್ಳುತ್ತಾರೆ. ಹಾಳು ಹೊಟ್ಟೆಗೆ ಮದ್ಯ ಸೇವಿಸುವವರೂ ಇದ್ದಾರೆ. ಇದರಲ್ಲಿ ದುಶ್ಚಟ, ಒಳ್ಳೆಯ ಅಭ್ಯಾಸಗಳ್ಯಾವೆಂದು ನೀವೇ ವಿಂಗಡಣೆ ಮಾಡಿಕೊಳ್ಳಿ. ಇಲ್ಲಿ ಹೇಳಹೊರಟಿರುವುದು ಆರೋಗ್ಯ ಲಾಭಕ್ಕಾಗಿ ಖಾಲಿ ಹೊಟ್ಟೆಗೆ ಏನು ಸೇವಿಸಿದರೆ ಸೂಕ್ತ ಎಂಬುದರ ಬಗ್ಗೆ.
ಎಳನೀರು ಹಾಳು ಹೊಟ್ಟೆಗೆ ಅಮೃತ
ಆರೋಗ್ಯ ರಕ್ಷಣೆ ವಿಚಾರದಲ್ಲಿ ಎಳನೀರಿಗೆ ತನ್ನದೇ ಆದ ಮಹತ್ವ ಇದೆ. ಬೆಳಗ್ಗೆ ಬಿಸಿಲು ಬರುವ ಮುನ್ನ ಎಳನೀರನ್ನು ಸೇವಿಸಿದರೆ ಚೆನ್ನ. ದೇಹ ತಂಪಾಗಿಡುವ ಜೊತೆ ಬೇರೆ ರೀತಿಯ ಸಾಕಷ್ಟು ಅನುಕೂಲಗಳನ್ನು ಇದು ಮಾಡಿಕೊಡುತ್ತದೆ. ವಾರಕ್ಕೆ ಮೂರು ಬಾರಿ ಎಳನೀರು ಕುಡಿದರೆ ನಿಮ್ಮ ದೇಹದಲ್ಲಾಗುವ ಬದಲಾವಣೆಗಳನ್ನು ನೀವೇ ಗುರುತಿಸಿಕೊಳ್ಳಬಹುದು.

ಎಳನೀರು ಸೇವನೆಯಿಂದ ದೇಹ ಹೈಡ್ರೇಟ್ ಆಗಿರುತ್ತದೆ. ಬ್ಲಡ್ ಪ್ರೆಶರ್ ಸರಿಯಾಗಿರುವಂತೆ ಕಾಪಾಡುತ್ತದೆ. ಹೃದಯದ ಸಂಪೂರ್ಣ ಆರೋಗ್ಯವನ್ನು ರಕ್ಷಿಸುವುದಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಎಳನೀರು ಜೀರ್ಣಕ್ರಿಯೆಗೂ ಸಹಕಾರಿ. ಕಿಡ್ನಿ ಫಂಕ್ಷನ್ ಸುಗಮಗೊಳಿಸುತ್ತದೆ. ಯುರಿನರಿ ಟ್ರಾಕ್ ಹಾಗೂ ಬ್ಲಾಡನ್‌ನ್ನು ಕ್ಲೀನ್ ಮಾಡುತ್ತದೆ. ಮಲಬದ್ಧತೆ ನಿವಾರಿಸುತ್ತದೆ. ಫ್ಯಾಟ್ ಬರ್ನ್ ಮಾಡುತ್ತದೆ. ಕಿಡ್ನಿ ಸ್ಟೋನ್ ಇದ್ದರೆ ಕರಗಿಸುತ್ತದೆ. ಇಷ್ಟೇ ಅಲ್ಲದೆ ಬಾಹ್ಯ ಅಂದಕ್ಕೂ ಮೆರುಗು ನೀಡುತ್ತದೆ. ನಿಯಮಿತ ಎಳನೀರು ಸೇವನೆಯಿಂದ ಮುಖದಲ್ಲಿ ಕಲೆಗಳಿದ್ದರೆ ಮಾಯವಾಗುತ್ತವೆ. ಚರ್ಮದ ಕಾಂತಿ ಹೆಚ್ಚುತ್ತದೆ. ಡಯಾಬಿಟಿಸ್ ಇರುವವರ ಬ್ಲಡ್ ಶುಗರ್ ಲೆವೆಲ್ ಕಡಿಮೆ ಮಾಡಬಹುದು.
ಏಲಕ್ಕಿ ನೀರು ಕುಡಿದರೆ ಹಲವು ಪ್ರಯೋಜನ
ನಮ್ಮಲ್ಲಿ ಸಾಂಬಾರ್ ಪದಾರ್ಥವಾಗಿ ಬಳಸುವ ಏಲಕ್ಕಿಯ ಮಹತ್ವ ಗೊತ್ತಿದೆಯಾ? ಇದನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನಲ್ಲಿ ನೆನಸಿ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಏಲಕ್ಕಿ ನೀರು ಸೇವಿಸುವುದರಿಂದ ಹೊಟ್ಟೆಯಲ್ಲಿ ಶೇಖರಣೆಯಾಗಿರುವ ಕೆಟ್ಟ ಫ್ಯಾಟ್, ಬೊಜ್ಜು ಕಡಿಮೆಯಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ. ಆಂಟಿ ಆಕ್ಸಿಡೆಂಟ್ ಅಂಶಗಳು ಜೀವಕೋಶಗಳನ್ನು ರಕ್ಷಿಸಿ, ಹೃದಯ ಸಮಸ್ಯೆ, ಉರಿಯೂತ ಸಮಸ್ಯೆಯನ್ನು ತಡೆಯಲು ಸಹಕಾರಿಯಾಗಲಿದೆ.

ಏಲಕ್ಕಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಧಾರಿಸುತ್ತದೆ ಜೊತೆಗೆ ಹೊಟ್ಟೆಯಲ್ಲಿನ ಹುಣ್ಣುಗಳನ್ನು ಕಡಿಮೆ ಮಾಡುತ್ತದೆ. ಏಲಕ್ಕಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ ಜೊತೆಗೆ ಒಸಡುಗಳಿಗೆ ಬಲಕೊಡಲಿದೆ. ಇಷ್ಟೇ ಅಲ್ಲದೆ ಏಲಕ್ಕಿ ನೀರು ಸೇವಿಸುವುದರಿಂದ ಉಸಿರಾಟ ಸುಧಾರಿಸಲಿದೆ.
ತುಪ್ಪ ಸೇವನೆಯಿಂದ ರೋಗ ನಿರೋಧಕ ಶಕ್ತಿ
ಸಾಮಾನ್ಯವಾಗಿ ತುಪ್ಪ ಸೇವಿಸಿದರೆ ದೇಹದ ತೂಕ ಹೆಚ್ಚಾಗುತ್ತದೆ ಎಂಬುದು ಎಲ್ಲರೂ ನಂಬುತ್ತಾರೆ. ಆದರೆ ನಿಜವಾಗಿಯೂ ತುಂಬಾ ಸೇವಿಸಿದರೆ ಏನಾಗುತ್ತೇ? ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ ನೋಡಿ.

ತುಪ್ಪ ಸೇವಿಸುವುರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಲಿದೆ. ಇದರಲ್ಲಿರುವ ವಿಟಮಿನ್ ಎ, ಡಿ, ಇ ಹಾಗೂ ಕೆ ಅಂಶಗಳು ಮಲಬದ್ಧತೆ ಸಮಸ್ಯೆಯನ್ನು ನಿಯಂತ್ರಿಸುತ್ತದೆ. ಅಡುಗೆ ಎಣ್ಣೆ ಬಳಸುವುದಕ್ಕಿಂತ ತುಪ್ಪ ಬಳಸುವುದು ಹೆಚ್ಚು ಲಾಭದಾಯಕವಾಗಿದ್ದು, ದೇಹದಲ್ಲಿನ ಕೆಟ್ಟ ಕೊಲೆಸ್ಟಾçಲ್ ಅನ್ನು ಕಡಿಮೆ ಮಾಡುತ್ತದೆ. ಇದರಲ್ಲಿನ ಅಮಿನೋ ಆಸಿಡ್ಸ್ ಅಂಶವು ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದರಲ್ಲಿನ ವಿಟಮಿನ್ ಅಂಶಗಳು ಜೀರ್ಣಕ್ರಿಯೆಯನ್ನು ಸುಧಾರಿಸಿ ತೂಕ ಇಳಿಕೆಯಾಗಿಸುತ್ತದೆ. ಸ್ನಾಯುಗಳ ನೋವು, ಮೂಳೆಗಳ ನೋವಿಗೆ ತುಪ್ಪ ಹೆಚ್ಚು ಪರಿಣಾಮಕಾರಿಯಾಗಿದೆ. ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ. ರಕ್ತ ಪರಿಚಲನೆ ಸುಧಾರಿಸುತ್ತದೆ.
ಹೇಗೆ ಸೇವಿಸೋದು?
ತರಹೇವಾರಿ ಕಂಪನಿಗಳ ತುಪ್ಪಕ್ಕಿಂತ ದೇಸಿ ಹಸುವಿನ ತುಪ್ಪ ಬಳಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮ. ನಾಟಿ ಹಸುವಿನ ತುಪ್ಪ ಅನೇಕ ರೋಗಗಳಿಗೆ ರಾಮಬಾಣ. ಇದನ್ನು ಸೇವಿಸಲು ಅನೇಕ ವಿಧಾನಗಳಿವೆ.
ಮೊದಲಿಗೆ ಒಂದು ಸ್ಪೂನ್‌ನಲ್ಲಿ ತುಪ್ಪ ಬಿಸಿ ಮಾಡಿ ಕರಗಿಸಿಕೊಳ್ಳಿ. ನಂತರ ಅದನ್ನು ಒಂದು ಲೋಟ ಬಿಸಿ ನೀರಿಗೆ ಬೆರಸಿ ಪ್ರತಿದಿನ ಬೆಳಗ್ಗೆ ಸೇವಿಸಿ. ಬಳಿಕ 3೦ ನಿಮಿಷ ಬೇರೆ ಏನನ್ನು ಸೇವಿಸಬೇಡಿ.
(ಲೇಖಕರು: ಆಯುರ್ವೇದ ವೈದ್ಯರು)