-ಶೌರ್ಯ ಡೆಸ್ಕ್
‘ಕುಟುಂಬವಲ್ಲದ, ಅಣ್ಣ ತಮ್ಮ, ಅಕ್ಕ ತಂಗಿ, ಅಣ್ಣ ತಂಗಿ ಹೀಗೆ ಯಾವುದೂ ಅಲ್ಲದ, ಪಡ್ಡೆಗಳನ್ನು ತಂದು ಒಂದೇ ಮನೆಯಲ್ಲಿ ಕೂಡಿ ಹಾಕುತ್ತೀರಿ. ಅವರೇನೂ ಮಹಾ ಸಾಧಕರಲ್ಲ. ಅಂತವರು ಸಂಬಂಧವೇ ಇಲ್ಲದ ಮನೆಯಲ್ಲಿ ಒಂದಾದರೆ ಏನಾಗುತ್ತೆ ಹೇಳಿ? ನನಗೆ ಬಿಗ್ ಬಾಸ್ ಮನೆ ವೇಶ್ಯಾಗೃಹದಂತೆ ಕಾಣುತ್ತಿದೆ’ ಎಂದು ಅವರು ಹೇಳಿದ್ದಾರೆ.

ಕಳೆದ ವಾರದಿಂದ ಶುರುವಾಗಿರುವ ತೆಲುಗು ಬಿಗ್ ಬಾಸ್ ಅನ್ನು ಆಂಧ್ರದ ಸಿಪಿಐ ಮುಖಂಡ ನಾರಾಯಣ್ ಅವರು ವೇಶ್ಯಾಗೃಹಕ್ಕೆ ಹೋಲಿಸಿದ್ದಾರೆ.
‘ಕುಟುಂಬವಲ್ಲದ, ಅಣ್ಣ ತಮ್ಮ, ಅಕ್ಕ ತಂಗಿ, ಅಣ್ಣ ತಂಗಿ ಹೀಗೆ ಯಾವುದೂ ಅಲ್ಲದ, ಪಡ್ಡೆಗಳನ್ನು ತಂದು ಒಂದೇ ಮನೆಯಲ್ಲಿ ಕೂಡಿ ಹಾಕುತ್ತೀರಿ. ಅವರೇನೂ ಮಹಾ ಸಾಧಕರಲ್ಲ. ಅಂತವರು ಸಂಬಂಧವೇ ಇಲ್ಲದ ಮನೆಯಲ್ಲಿ ಒಂದಾದರೆ ಏನಾಗುತ್ತೆ ಹೇಳಿ? ನನಗೆ ಬಿಗ್ ಬಾಸ್ ಮನೆ ವೇಶ್ಯಾಗೃಹದಂತೆ ಕಾಣುತ್ತಿದೆ’ ಎಂದು ಅವರು ಹೇಳಿದ್ದಾರೆ.
ತೆಲುಗು ಬಿಗ್ ಬಾಸ್ ಅನ್ನು ನಡೆಸಿಕೊಡುವ ನಾಗಾರ್ಜುನ್ ಅವರಿಗೆ ಪ್ರಶ್ನೆ ಕೇಳುತ್ತಾ, ‘ನಾಗಣ್ಣ ಬಿಗ್ ಬಾಸ್ ಮನೆಯಲ್ಲಿ ಮದುವೆಯಾದವರಿಗೆ ಲೈಸೆನ್ಸ್ ಕೊಟ್ಟಿದ್ದೀರಿ. ಏನೆಲ್ಲ ಮಾಡಬೇಕೋ ಅದಕ್ಕೆಲ್ಲ ವ್ಯವಸ್ಥೆ ಮಾಡಿದ್ದೀರಿ. ಶೋಭನಾ ರೂಮ್ ಕೂಡ ರೆಡಿಯಿದೆ. ಆದರೆ, ಮದುವೆ ಆಗದೇ ಇರೋರ ಕಥೆ ಏನು? ನೂರು ದಿನಗಳ ಕಾಲ ಅವರು ಏನು ಮಾಡಬೇಕು? ಎಂದು ಕೇಳಿದ್ದಾರೆ. ನಾರಾಯಣ್ ವಿಡಿಯೋ ತೆಲುಗು ಕಿರುತೆರೆ ಜಗತ್ತಿನಲ್ಲಿ ಸಖತ್ ವೈರಲ್ ಆಗಿದೆ.

ಇಂತಹ ಅಸಹ್ಯಗಳನ್ನು ಒಟ್ಟು ಮಾಡಿ ಸಮಾಜದ ಮನಸ್ಥಿತಿಯನ್ನು ಹಾಳು ಮಾಡುತ್ತಿದ್ದೀರಿ. ಕೂಡಲೇ ಇಂತಹ ಶೋ ನಿಲ್ಲಿಸಬೇಕು ಎಂದು ಅವರು ಆಗ್ರಹ ಪಡಿಸಿದ್ದಾರೆ. ನಾರಾಯಣ್ ಅವರ ಈ ಮಾತಿಗೆ ಭಾರೀ ಬೆಂಬಲ ಕೂಡ ವ್ಯಕ್ತವಾಗಿದೆ.
ಟಾಲಿವುಡ್ ಮನ್ಮಥ ಅಕ್ಕಿನೇನಿ ನಾಗಾರ್ಜುನ್ ಅವರು ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ತೆಲುಗು ಸೀಸನ್-6 ಅನ್ನು ಮೊದಲ ವಾರವನ್ನು ಪೂರ್ಣಗೊಳಿಸಿದ್ದಾರೆ. ನಿರೀಕ್ಷೆಗೂ ಮೀರಿ ನಡೆಯುತ್ತಿದೆ. ಸ್ಪರ್ಧಿಗಳ ನಡುವೆ ಬಿಗ್ ಬಾಸ್ ಹಾಕುವ ಆಟಗಳು ಕುತೂಹಲ ಮೂಡಿಸುತ್ತಿವೆ. ಮೊದಲ ವಾರದಲ್ಲಿ ಬಾಲಾದಿತ್ಯ ಹೌಸ್ ಕ್ಯಾಪ್ಟನ್ ಆಗಿ ಆಯ್ಕೆಯಾದರು. ಅವರು ವಾರದ ಸ್ಟಾರ್ ಪ್ರಶಸ್ತಿಯನ್ನೂ ಗೆದ್ದರು. ಮೊದಲ ಗಿಫ್ಟ್ ಹ್ಯಾಂಪರ್ ಪಡೆದರು.