-ಶೌರ್ಯ ಡೆಸ್ಕ್
ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಿತೇಶ್, ಬಿಹಾರದ ಪಾಟ್ನಾ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ (ಪಿಎಂಸಿಹೆಚ್) ಗೆ ದಾಖಲಾಗಿದ್ದರು. ಈ ವೇಳೆ ವೈದ್ಯರು ಆತನಿಗೆ ಎಕ್ಸ್ ರೇ ಮಾಡಿದ್ದಾರೆ. ಎಕ್ಸ್ ರೇ ನೋಡಿದ ವೈದ್ಯರೇ ದಂಗಾಗಿ ಹೋಗಿದ್ದಾರೆ. ಆತನ ಹೊಟ್ಟೆಯಲ್ಲಿ ಲೋಟವೊಂದು ಪತ್ತೆ ಆಗಿದೆ. ರೋಗಿಯನ್ನು ಪರೀಕ್ಷೆ ಮಾಡಿದ ವೈದ್ಯರು ತಕ್ಷಣ ಆತನಿಂದ ಯಾವುದೇ ಹಣವನ್ನು ತೆಗೆದುಕೊಳ್ಳದೆ ಚಿಕಿತ್ಸೆ ನೀಡಲು ನಿರ್ಧರಿಸಿದರು. ಶಸ್ತ್ರಚಿಕಿತ್ಸೆ ಮೂಲಕ ಸ್ಟೀಲ್ ಲೋಟ ಹೊರತೆಗೆದು ಆತನ ಜೀವ ಕಾಪಾಡಿದರು.

ವೈದ್ಯಕೀಯ ಲೋಕದಲ್ಲಿ ಅನೇಕ ಹುಬ್ಬೇರಿಸುವ ಬೆಳವಣಿಗೆಗಳು ವರದಿಯಾಗುತ್ತವೆ. ವೈದ್ಯಕೀಯ ಕ್ಷೇತ್ರ ಮುಂದುವರೆದಿರುವುದರಿಂದಲೇ ಮನುಷ್ಯ ಯಾವುದೇ ಕಾಯಿಲೆಯನ್ನು ಗೆಲ್ಲಬಲ್ಲವನಾಗಿದ್ದಾನೆ. ಆರೋಗ್ಯ ಸಮಸ್ಯೆಗೆ ಸಿಲುಕಿದಾಗ ಎಂತದ್ದೇ ಸವಾಲು ನಿಭಾಯಿಸುವ ಸಾಮರ್ಥ್ಯ ವೈದ್ಯಕೀಯ ವ್ಯವಸ್ಥೆಗೆ ಇದೆ. ಇಂತದ್ದೆ ಸವಾಲೊಂದನ್ನು ವೈದ್ಯರು ಮಾಡಿ ರೋಗಿಯ ಪ್ರಾಣ ಉಳಿಸಿದ್ದಾರೆ.
ವ್ಯಕ್ತಿಯೊಬ್ಬನ ಹೊಟ್ಟೆ ಸೇರಿದ್ದ ಸ್ಟೀಲ್ ಲೋಟವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದಿದ್ದಾರೆ.
ವ್ಯಕ್ತಿಯನ್ನು ರಿತೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತನ ಹೊಟ್ಟೆಯಿಂದ 5.5 ಇಂಚು ಉದ್ದದ ಗ್ಲಾಸ್ ಹೊರತೆಗೆಯಲಾಗಿದೆ.
ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಿತೇಶ್, ಬಿಹಾರದ ಪಾಟ್ನಾ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ (ಪಿಎಂಸಿಹೆಚ್) ಗೆ ದಾಖಲಾಗಿದ್ದರು. ಈ ವೇಳೆ ವೈದ್ಯರು ಆತನಿಗೆ ಎಕ್ಸ್ ರೇ ಮಾಡಿದ್ದಾರೆ. ಎಕ್ಸ್ ರೇ ನೋಡಿದ ವೈದ್ಯರೇ ದಂಗಾಗಿ ಹೋಗಿದ್ದಾರೆ. ಆತನ ಹೊಟ್ಟೆಯಲ್ಲಿ ಲೋಟವೊಂದು ಪತ್ತೆ ಆಗಿದೆ. ರೋಗಿಯನ್ನು ಪರೀಕ್ಷೆ ಮಾಡಿದ ವೈದ್ಯರು ತಕ್ಷಣ ಆತನಿಂದ ಯಾವುದೇ ಹಣವನ್ನು ತೆಗೆದುಕೊಳ್ಳದೆ ಚಿಕಿತ್ಸೆ ನೀಡಲು ನಿರ್ಧರಿಸಿದರು. ಶಸ್ತ್ರಚಿಕಿತ್ಸೆ ಮೂಲಕ ಸ್ಟೀಲ್ ಲೋಟ ಹೊರತೆಗೆದು ಆತನ ಜೀವ ಕಾಪಾಡಿದರು.

ರಿತೇಶ್ ಹೊಟ್ಟೆಯೊಳಗೆ ಸ್ಟೀಲ್ ಗ್ಲಾಸ್ ಹೇಗೆ ಇಳಿಯಿತು ಎಂಬುದರ ಕುರಿತು ಮಾತನಾಡಿರುವ ವೈದ್ಯರು, ಘಟನೆ ನಡೆದಾಗ ರೋಗಿಯು ಕುಡಿದಿರಬೇಕು ಅಥವಾ ಯಾರಾದರೂ ಅದನ್ನು ಅವನ ದೇಹದೊಳಗೆ ಹಾಕಿರಬೇಕು ಅಬಿಸುತ್ತದೆ. ಸದ್ಯ ರೋಗಿಯು ಈ ಬಗ್ಗೆ ಸ್ಪಷ್ಟವಾಗಿ ತಿಳಿಸಲು ಸಾಧ್ಯವಿಲ್ಲ. ಹೀಗಾಗಿ ಆತ ಸಂಪೂರ್ಣ ಗುಣಮುಖನಾದ ಬಳಿಕ ಆತನಿಂದ ಕಾರಣ ಕೇಳಲಾಗುವುದು ಎಂದು ಅವರು ಹೇಳಿದ್ದಾರೆ.
ಸದ್ಯ ರೋಗಿ ಐಸಿಯುನಲ್ಲಿದ್ದಾರೆ. ಈ ರೀತಿಯ ಯಾವುದೇ ಪ್ರಕರಣವನ್ನು ನಾವು ಕಂಡಿರಲಿಲ್ಲ ಎಂದು ಇದೇ ವೇಳೆ ಡಾ.ಕುಮಾರ್ ಬೈಭವ್ ಹೇಳಿದರು.