-ಜೋಷಿ
ಅಹಿಂದ ವರ್ಗಗಳು ದೊಡ್ಡ ಮಟ್ಟದಲ್ಲಿ ಯಾವಾಗೆಲ್ಲ ಒಂದುಗೂಡಿವೆಯೋ ಅನಂತರದ ದಿನಗಳಲ್ಲಿ ರಾಜ್ಯದ ಪ್ರಬಲ ಸಮುದಾಯಗಳು ರಾಜಕೀಯವಾಗಿ ಒಂದಾಗುವ ಅಥವಾ ಅಹಿಂದ ಶಕ್ತಿ ಎದುರು ತನ್ನ ಶಕ್ತಿಯನ್ನೂ ಪ್ರದರ್ಶಿಸಿದ ಉದಾಹರಣೆಗಳು ರಾಜ್ಯದಲ್ಲಿವೆ. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ನಂತರ ಇಂತಹ ರಾಜಕೀಯ ಬೆಳವಣಿಗೆಗಳನ್ನು ಗುರುತಿಸಬಹುದಾಗಿದೆ. ಜನತಾ ದಳ ಅಧಿಕಾರಕ್ಕೆ ಬರಲು ಪ್ರಬಲ ಲಿಂಗಾಯತ ಮತ್ತು ಒಕ್ಕಲಿಗರು ದೊಡ್ಡ ಮಟ್ಟದಲ್ಲಿ ಒಂದಾಗಿದ್ದು ಕಾರಣವಾಗಿತ್ತು. ಇದು ರಾಮಕೃಷ್ಣ ಹೆಗಡೆಯವರನ್ನು ಎರಡು ಸಲ ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರುವಂತೆ ಮಾಡಿತ್ತು. ದೇವೇಗೌಡರು ಮುಖ್ಯಮಂತ್ರಿಯಾದಾಗಲೂ ಕೂಡಾ ಎರಡು ಸಮುದಾಯಗಳು ಜನತಾ ದಳದೊಂದಿಗೆ ಗುರುತಿಸಿಕೊಂಡಿದ್ದವು. ಈಗ ಸಿದ್ದರಾಮಯ್ಯ ಅಹಿಂದ ಸಮುದಾಯಗಳೊಂದಿಗೆ ಶಕ್ತಿ ಪ್ರದರ್ಶಿಸಲು ಮುಂದಾಗಿದ್ದಾರೆ. ಹೀಗಾಗಿ ಸಿದ್ದು ವಿರುದ್ಧ ಲಿಂಗಾಯತ ಮತ್ತು ಒಕ್ಕಲಿಗರು ಒಂದಾಗಲಿದ್ದಾರೆ. ಹೀಗಾದಾಗ ಲಿಂಗಾಯತರು ಬಿಜೆಪಿಗೆ, ಒಕ್ಕಲಿಗರು ಜೆಡಿಎಸ್‌ಗೆ ಕಚ್ಚಿಕೊಳ್ಳಲಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ನೀಡಲಿದೆ ಎಂಬ ವಿಶ್ಲೇಷಣೆಯೂ ನಡೆದಿದೆ.
ಸಿದ್ದರಾಮಯ್ಯ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲು ಅವರ ಬೆಂಬಲಿಗ ಪಡೆ ನಡೆಸಿರುವ ಸಿದ್ದರಾಮೋತ್ಸವ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟವನ್ನು ತಾರಕಕ್ಕೇರಿಸುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಕೂಗು ಬಲವಾಗಿಸುವ ಮತ್ತು ಕಾರ್ಯಕ್ರಮದ ನೆಪದಲ್ಲಿ ಸಿದ್ದು ಇಮೇಜ್ ಹೆಚ್ಚಿಸುವ ಪ್ರಯತ್ನಕ್ಕೆ ಡಿಕೆಶಿ ಗುಂಪಿನಿAದ ಪ್ರಬಲ ಪ್ರತಿರೋಧ ವ್ಯಕ್ತವಾಗುತ್ತಿದ್ದು, ಹೈಕಮಾಂಡ್ ಮಧ್ಯಸ್ಥಿಕೆ ಹಿನ್ನೆಲೆ ಸದ್ಯಕ್ಕೆ ಆಕ್ರೋಶವನ್ನು ನುಂಗಿಕೊAಡು ಹೊಗೆಯನ್ನಷ್ಟೆ ಉಗುಳುತ್ತಿರುವ ಸಿದ್ದು ವಿರೋಧಿ ಗ್ಯಾಂಗ್ ಸಿದ್ದರಾಮೋತ್ಸವದ ನಂತರ ಬೆಂಕಿ ಉಗುಳಲು ಸಜ್ಜಾಗುತ್ತಿದೆ. ಏನೇ ಡ್ಯಾಮೇಜ್ ಕಂಟ್ರೋಲ್ ಮಾಡಿದರೂ ಮುಂದೆ ಪ್ರತಿ ಜಿಲ್ಲೆಯಲ್ಲಿಯೂ ಎರಡು ಗುಂಪುಗಳು ಪ್ರತ್ಯೇಕವಾಗಿ ಗುರುತಿಸಿಕೊಂಡು ಪರಸ್ಪರ ಕಾಲೆಳೆಯುವ ಆಟ ಆರಂಭಿಸಲು ಕಾಲು ಕೆದರುತ್ತಿವೆ.
ಪ್ರಬಲವಾಗುತ್ತಿದೆ ಡಿಕೆಶಿ ಪಡೆ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಕೆಪಿಸಿಸಿ ಅಧ್ಯಕ್ಷ ಗಾದಿಗಾಗಿ ಶತಪ್ರಯತ್ನ ನಡೆಸುತ್ತಲೇ ಇದ್ದ ಡಿ.ಕೆ. ಶಿವಕುಮಾರ್ ಆಗ ಪಕ್ಷದಲ್ಲಿ ಹಾಗೂ ಹೈಕಮಾಂಡ್ ಮಟ್ಟದಲ್ಲಿ ಎಷ್ಟು ದುರ್ಬಲರಾಗಿದ್ದರೆಂದರೆ ಅವರಿಗೆ ಅಧಿನಾಯಕಿ ಸೋನಿಯಾ ಭೇಟಿಗೆ ಒದ್ದಾಡುವ ಸ್ಥಿತಿ ಇತ್ತು. ಯಾವಾಗ ಗುಜರಾತ್‌ನಿಂದ ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರನ್ನು ರಾಜ್ಯಸಭೆಗೆ ಕಳುಹಿಸುವುದನ್ನು ತಡೆಯಲು ಬಿಜೆಪಿ ಚಾಣಾಕ್ಯ ಅಮಿತ್ ಷಾ ಅಡ್ಡಗಾಲು ಹಾಕತೊಡಗಿದರೋ ಆಗ ಅಲ್ಲಿನ ಶಾಸಕರನ್ನು ಕರ್ನಾಟಕಕ್ಕೆ ಕರೆತಂದು ನಿಭಾಯಿಸುವ ಹೊಣೆಯನ್ನು ಡಿಕೆಶಿಗೆ ಹೊರೆಸಲಾಯಿತು. ಅಧಿನಾಯಕಿ ವಹಿಸಿದ ಕೆಲಸವನ್ನು ಡಿಕೆಶಿ ಅಮಿತ್ ಷಾ ಎದುರು ಹಾಕಿಕೊಂಡು ಸಾಧಿಸಿಬಿಟ್ಟರು. ಅಲ್ಲಿಂದ ಹೈಕಮಾಂಡ್ ಮಟ್ಟದಲ್ಲಿ ಅವರ ಖರ‍್ರೇ ಬದಲಾಗಿಹೋಯಿತು. ಮುಂದೆ ಇಡಿ ಪ್ರಕರಣದಲ್ಲಿ ಡಿಕೆಶಿ ಜೈಲಿಗೆ ಹೋದಾಗ ಸೋನಿಯಾ ಗಾಂಧಿ ಅಲ್ಲಿಗೆ ಹೋಗಿ ಧೈರ್ಯ ತುಂಬಿ ಬರುವ ಮಟ್ಟಕ್ಕೆ ವರಿಷ್ಠರ ನಂಬಿಕೆ ಗಳಿಸಿಕೊಂಡರು. ಮುಂದೆ ಕೆಪಿಸಿಸಿ ಅಧ್ಯಕ್ಷ ಗಾದಿಯೂ ಸಿಕ್ಕಿತು. ಯಾವ ಡಿಕೆಶಿ ೨೦೧೩ರ ನಂತರ ಸಚಿವ ಸ್ಥಾನಕ್ಕಾಗಿ ಸಿದ್ದು ಮುಂದೆ ಮಂಡಿಯೂರಿದ್ದರೋ ಅದೇ ಡಿಕೆಶಿ ಈಗ ಅವರಿಗೆ ಸಮಬಲದ ಪೈಪೋಟಿ ಕೊಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ತಮ್ಮ ದೌರ್ಬಲ್ಯಗಳನ್ನೂ ಸಾಮರ್ಥ್ಯವನ್ನಾಗಿ ಮಾಡಿಕೊಂಡು ಸಿದ್ದುಗೆ ಟಕ್ಕರ್ ಕೊಡುತ್ತಿದ್ದಾರೆ.
ಒಂದು ಹಂತದಲ್ಲಿ ಡಿಕೆಶಿ ವಿರುದ್ಧ ಸಿದ್ದು ಗುಂಪು ಹಲ್ಲು ಮಸೆಯುತ್ತಿರುವುದು ಸಿಎಂ ಅಭ್ಯರ್ಥಿ ರೇಸ್‌ನಿಂದ ಔಟ್ ಮಾಡಲು ಪ್ರಯತ್ನಿಸುತ್ತಿರುವುದೇ ಡಿಕೆಶಿಗೆ ಬಲ ತುಂಬುತ್ತಿದೆ. ಸಿದ್ದರಾಮಯ್ಯ ವಿರುದ್ಧದ ಸ್ಪರ್ಧೆಯಲ್ಲಿ ಸಮಬಲ ಸಾಧಿಸಿ ಮುಂದುವರೆಯುವAತೆ ಮಾಡಿದೆ. ಈಗ ಸಿದ್ದರಾಮೋತ್ಸವ ಡಿಕೆಶಿಯನ್ನು ಮತ್ತಷ್ಟು ಪ್ರಬಲವಾಗಿಸುವುದರ ಜೊತೆಗೆ ಅವರ ಬೆಂಬಲಿಸುವ ಗುಂಪು ಕೂಡಾ ಬಲಗೊಳ್ಳಲು ಕಾರಣವಾಗುತ್ತಿದೆ.
ಸಿದ್ದು ಶಕ್ತಿ ಪ್ರದರ್ಶನದಿಂದ ಪ್ರಬಲ ಸಮುದಾಯಗಳಿಗೆ ಮುನಿಸು
ಅಹಿಂದ ವರ್ಗಗಳು ದೊಡ್ಡ ಮಟ್ಟದಲ್ಲಿ ಯಾವಾಗೆಲ್ಲ ಒಂದುಗೂಡಿವೆಯೋ ಅನಂತರದ ದಿನಗಳಲ್ಲಿ ರಾಜ್ಯದ ಪ್ರಬಲ ಸಮುದಾಯಗಳು ರಾಜಕೀಯವಾಗಿ ಒಂದಾಗುವ ಅಥವಾ ಅಹಿಂದ ಶಕ್ತಿ ಎದುರು ತನ್ನ ಶಕ್ತಿಯನ್ನೂ ಪ್ರದರ್ಶಿಸಿದ ಉದಾಹರಣೆಗಳು ರಾಜ್ಯದಲ್ಲಿವೆ. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ನಂತರ ಇಂತಹ ರಾಜಕೀಯ ಬೆಳವಣಿಗೆಗಳನ್ನು ಗುರುತಿಸಬಹುದಾಗಿದೆ. ಜನತಾ ದಳ ಅಧಿಕಾರಕ್ಕೆ ಬರಲು ಪ್ರಬಲ ಲಿಂಗಾಯತ ಮತ್ತು ಒಕ್ಕಲಿಗರು ದೊಡ್ಡ ಮಟ್ಟದಲ್ಲಿ ಒಂದಾಗಿದ್ದು ಕಾರಣವಾಗಿತ್ತು. ಇದು ರಾಮಕೃಷ್ಣ ಹೆಗಡೆಯವರನ್ನು ಎರಡು ಸಲ ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರುವಂತೆ ಮಾಡಿತ್ತು. ದೇವೇಗೌಡರು ಮುಖ್ಯಮಂತ್ರಿಯಾದಾಗಲೂ ಕೂಡಾ ಎರಡು ಸಮುದಾಯಗಳು ಜನತಾ ದಳದೊಂದಿಗೆ ಗುರುತಿಸಿಕೊಂಡಿದ್ದವು. ಈಗ ಸಿದ್ದರಾಮಯ್ಯ ಅಹಿಂದ ಸಮುದಾಯಗಳೊಂದಿಗೆ ಶಕ್ತಿ ಪ್ರದರ್ಶಿಸಲು ಮುಂದಾಗಿದ್ದಾರೆ. ಹೀಗಾಗಿ ಸಿದ್ದು ವಿರುದ್ಧ ಲಿಂಗಾಯತ ಮತ್ತು ಒಕ್ಕಲಿಗರು ಒಂದಾಗಲಿದ್ದಾರೆ. ಹೀಗಾದಾಗ ಲಿಂಗಾಯತರು ಬಿಜೆಪಿಗೆ, ಒಕ್ಕಲಿಗರು ಜೆಡಿಎಸ್‌ಗೆ ಕಚ್ಚಿಕೊಳ್ಳಲಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ನೀಡಲಿದೆ ಎಂಬ ವಿಶ್ಲೇಷಣೆಯೂ ನಡೆದಿದೆ.
ಒಟ್ಟಾರೆ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಲು ಹೆಣೆಯುತ್ತಿರುವ ತಂತ್ರಗಾರಿಕೆ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗುತ್ತಿದೆ. ಸಿದ್ದು ಮತ್ತು ಡಿಕೆಶಿ ಅಧಿಕಾರಕ್ಕೆ ಬರುವ ಮುನ್ನವೇ ಆರಂಭಿಸಿರುವ ಘರ್ಷಣೆ ಬಿಜೆಪಿಗಂತೂ ಖುಷಿ ಕೊಟ್ಟಿದೆ.