20.8 C
Bengaluru
Friday, March 17, 2023
spot_img

ಶಿವ 143: ರಿಮೇಕ್ ಮಾಡಿದ್ದೇ ಯಡವಟ್ಟಾಯ್ತಾ?

-ಶೌರ್ಯ ಸಿನಿ ಡೆಸ್ಕ್

ಧೀರೇನ್ ವಿಚಾರಕ್ಕೆ ಬರೋದಾದರೆ, ಈ ಸಲ ಕೂಡಾ ದೊಡ್ಮನೆಯವರು ಆಯ್ಕೆಯಲ್ಲಿ ಎಡವಿದರಾ ಅನ್ನಿಸುತ್ತದೆ. ಹಾಗೆ ನೋಡಿದರೆ ಶಿವ 143 ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಅನುಭವಿ. ಸ್ಟಾರ್‌ಗಳ ಜೊತೆ ಕೆಲಸ ಮಾಡಿ ಗೆದ್ದಿದ್ದಾರೆ. ಆದರೆ ಧೀರೇನ್ ಥರದ ಹುಡುಗನನ್ನು ಲಾಂಚ್ ಮಾಡಲು ಈ ಕತೆಯನ್ನು ಒಪ್ಪಿಕೊಂಡಿದ್ದೇ ಯಡವಟ್ಟಾಯ್ತೇನೋ. ಇದರ ಫಲವಾಗಿ ಏನೇ ಸರ್ಕಸ್ ಮಾಡಿದರೂ ಜನ ಥೇಟರಿಗೇ ಬರುತ್ತಿಲ್ಲ. ಬಿಡುಗಡೆಯ ದಿನ ಕೂಡಾ ಚಿತ್ರಮಂದಿರಗಳು ಭರ್ತಿಯಾಗಲಿಲ್ಲ. ದೊಡ್ಮನೆ ಹುಡುಗನಿಗೆ ಹೀಗಾಗಬಾರದಿತ್ತು!

ಶಿವ 143 ಚಿತ್ರದಲ್ಲಿ ಧೀರೇನ್ ಮತ್ತು ಮಾನ್ವಿತಾ.

ಶಿವ 143 ಎನ್ನುವ ಸಿನಿಮಾವೊಂದು ಬಿಡುಗಡೆಯಾಗಿದೆ. ಹಿರಿಯನಟ ರಾಮ್ ಕುಮಾರ್ ಪುತ್ರ ಧೀರೇನ್ ನಟನೆಯ ಮೊದಲ ಸಿನಿಮಾ ಇದು. ಡಾ. ರಾಜ್ ಮೊಮ್ಮಗನ ಮೊದಲ ಸಿನಿಮಾ ತೆರೆಗೆ ಬರುತ್ತದೆ. ಹೀರೋ ಆಗಿ ಲಾಂಚ್ ಆಗುತ್ತಿದ್ದಾನೆ ಅಂದಾಗ ಸಹಜವಾಗೇ ಎಲ್ಲರಲ್ಲೂ ಕುತೂಹಲಗಳಿರುತ್ತವೆ. ಆದರೆ ಶಿವ 143 ಸಿನಿಮಾ ಕುರಿತು ಇಂಥಾ ಯಾವ ಕೌತುಕಗಳೂ ಕಡೇತನಕ ಹುಟ್ಟಲೇ ಇಲ್ಲ. ದುರಂತವೆಂದರೆ ಸಿನಿಮಾ ತೆರೆಗೆ ಬಂದಿರುವ ವಿಚಾರ ಕೂಡಾ ಎಷ್ಟೋ ಜನಕ್ಕೆ ಗೊತ್ತೇ ಆಗಿಲ್ಲ.

ಯಾಕೆ ಹೀಗಾಯ್ತು? ಸಿನಿಮಾದ ಗೆಲುವು, ಸೋಲುಗಳೇನೇ ಇರಲಿ, ಕಡೇಪಕ್ಷ ಇಂಥದ್ದೊಂದು ಸಿನಿಮಾ ಬಂದಿದೆ ಅನ್ನೋದಾದರೂ ಜನಕ್ಕೆ ಗೊತ್ತಾಗಬೇಕಲ್ಲವಾ? ಅದಿಲ್ಲಿ ಸಾಧ್ಯವೇ ಆಗಿಲ್ಲ.

ಹಿಂದೆ ಇದೇ ರಾಜ್ ಕುಟುಂಬದಿಂದ ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅದ್ಭುತ ಪ್ರಚಾರದೊಂದಿಗೆ ಚಿತ್ರ ರಿಲೀಸಾಗಿತ್ತು. ಆ ಚಿತ್ರವನ್ನು ರಘು ಶಾಸ್ತ್ರಿ ಹೊಸ ನಿರ್ದೇಶಕನಿಗೆ ಕೊಟ್ಟಿದ್ದರು. ಕಥೆ ಹೇಳುವಾಗ ಅದ್ಭುತವಾಗಿ ಹೇಳಿ ಒಪ್ಪಿಸಿದ್ದ ಶಾಸ್ತ್ರಿ ಅದನ್ನು ದೃಶ್ಯ ರೂಪದಲ್ಲಿ ರೂಪಿಸಿದ್ದ ಪರಿ ಅತ್ಯದ್ಭುತವಾಗಿತ್ತು. ಆದರೆ ಮೊದಲ ಶೋ ನೋಡಿ ಹೊರಬಂದ ಪ್ರೇಕ್ಷಕರು ಬೆಚ್ಚಿಬಿದ್ದಿದ್ದರು. ಸಿನಿಮಾದಲ್ಲಿ ಧಮ್ಮಿರಲಿಲ್ಲ. ಥೇಟರಲ್ಲಿ ನಿಲ್ಲಲಿಲ್ಲ. ಅದೊಂದು ಸಿನಿಮಾ ಕೊಟ್ಟ ಏಟಿಂದ ವಿನಯ್ ಈ ಕ್ಷಣಕ್ಕೂ ಹೊರಬರಲು ಸಾಧ್ಯವಿಲ್ಲ. ಸದ್ಯ ಇದೇ ವಿನಯ್ ಅಭಿನಯದ `ಪೆಪೆ’ ಎನ್ನುವ ಸಿನಿಮಾ ವಿನಯ್ ಅವರನ್ನು ಹಳೇ ಸೋಲುಗಳಿಂದ ಮೇಲೆತ್ತುವ ಎಲ್ಲ ಸಾಧ್ಯತೆ ಎದ್ದುಕಾಣುತ್ತಿದೆ.

ಇರಲಿ, ಈಗ ಮತ್ತೆ ಧೀರೇನ್ ವಿಚಾರಕ್ಕೆ ಬರೋದಾದರೆ, ಈ ಸಲ ಕೂಡಾ ದೊಡ್ಮನೆಯವರು ಆಯ್ಕೆಯಲ್ಲಿ ಎಡವಿದರಾ ಅನ್ನಿಸುತ್ತದೆ. ಹಾಗೆ ನೋಡಿದರೆ ಶಿವ 143 ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಅನುಭವಿ. ಸ್ಟಾರ್‌ಗಳ ಜೊತೆ ಕೆಲಸ ಮಾಡಿ ಗೆದ್ದಿದ್ದಾರೆ. ಆದರೆ ಧೀರೇನ್ ಥರದ ಹುಡುಗನನ್ನು ಲಾಂಚ್ ಮಾಡಲು ಈ ಕತೆಯನ್ನು ಒಪ್ಪಿಕೊಂಡಿದ್ದೇ ಯಡವಟ್ಟಾಯ್ತೇನೋ. ಇದರ ಫಲವಾಗಿ ಏನೇ ಸರ್ಕಸ್ ಮಾಡಿದರೂ ಜನ ಥೇಟರಿಗೇ ಬರುತ್ತಿಲ್ಲ. ಬಿಡುಗಡೆಯ ದಿನ ಕೂಡಾ ಚಿತ್ರಮಂದಿರಗಳು ಭರ್ತಿಯಾಗಲಿಲ್ಲ.

ದೊಡ್ಮನೆ ಹುಡುಗನಿಗೆ ಹೀಗಾಗಬಾರದಿತ್ತು!

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles