-ಶೌರ್ಯ ಡೆಸ್ಕ್
ಈಗ ಈ ಜೋಡಿ ಸಿಗಬಾರದ ಸ್ಥಿತಿಯಲ್ಲಿ ಸೈಫ್ ಎರಡನೇ ಪತ್ನಿ ಕರೀನಾಗೆ ಸಿಕ್ಕಿಬಿದ್ದಿದೆ ಎಂಬ ಗುಸುಗುಸು ಕೇಳಿಬರುತ್ತಿದೆ. ಶುಭಗಿಲ್ ಜತೆ ‘ಏಕಾಂತ’ ದಲ್ಲಿ ಮುಳುಗಿ ಬಿಸಿಯೇರಿಸಿಕೊಂಡಿದ್ದಾಗ ಪಾರ್ಟಿಯೊಂದರಲ್ಲಿ ಚಿಕ್ಕಮ್ಮ ಕರೀನಾ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸುದ್ದಿ ತೇಲಿಬಂದಿದೆ. ಇದರ ಬೆನ್ನಿಗೇ ಈ ಪ್ರೇಮಪಕ್ಷಿಗಳು ಮುಂಬೈ ಟು ದೆಹಲಿಗೆ ಜೊತೆಯಲ್ಲಿ ಹಾರಿ ಅಲ್ಲಿ ಅಭಿಮಾನಿಗಳ ಕಣ್ಣಿಗೆ ಬಿದ್ದಿದೆ.

ಸೈಫ್ ಅಲಿ ಖಾನ್ ಪುತ್ರಿ, ಪಟೌಡಿ ಕುಟುಂಬದ ಕುಡಿ ಸಾರಾ ಅಲಿಖಾನ್ ಕ್ರಿಕೆಟಿಗ ಶುಭಮನ್ ಗಿಲ್ ಜತೆ ಲವಿಡವಿಗೆ ಬಿದ್ದಿರುವುದು ಬಿಟೌನ್ ಇಡೀ ಗೊತ್ತಿರುವ ಸುದ್ದಿ.
ಈಗ ಈ ಜೋಡಿ ಸಿಗಬಾರದ ಸ್ಥಿತಿಯಲ್ಲಿ ಸೈಫ್ ಎರಡನೇ ಪತ್ನಿ ಕರೀನಾಗೆ ಸಿಕ್ಕಿಬಿದ್ದಿದೆ ಎಂಬ ಗುಸುಗುಸು ಕೇಳಿಬರುತ್ತಿದೆ. ಶುಭಗಿಲ್ ಜತೆ ‘ಏಕಾಂತ’ ದಲ್ಲಿ ಮುಳುಗಿ ಬಿಸಿಯೇರಿಸಿಕೊಂಡಿದ್ದಾಗ ಪಾರ್ಟಿಯೊಂದರಲ್ಲಿ ಚಿಕ್ಕಮ್ಮ ಕರೀನಾ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸುದ್ದಿ ತೇಲಿಬಂದಿದೆ. ಇದರ ಬೆನ್ನಿಗೇ ಈ ಪ್ರೇಮಪಕ್ಷಿಗಳು ಮುಂಬೈ ಟು ದೆಹಲಿಗೆ ಜೊತೆಯಲ್ಲಿ ಹಾರಿ ಅಲ್ಲಿ ಅಭಿಮಾನಿಗಳ ಕಣ್ಣಿಗೆ ಬಿದ್ದಿದೆ.

ಬಿಟೌನ್ನ ಸಾಲು ಸಾಲು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಸೈಫ್ ಅಲಿ ಖಾನ್ ಪುತ್ರಿ ಸಾರಾ ಸದ್ಯ ಸಿನಿಮಾಗಿಂತ ಡೇಟಿಂಗ್ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಮುಂಬೈ ಮತ್ತು ದೆಹಲಿಯಲ್ಲಿ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರ ಲವ್ವಿ ಡವ್ವಿ ವಿಚಾರ ನಿಜ ಎನ್ನುವುದು ಈ ಎಲ್ಲಾ ಪ್ರಕರಣಗಳಿಂದ ರುಜುವತಾಗಿದೆ.

ಮುಂಬೈನ ಬಾಸ್ಟಿಯನ್ ರೆಸ್ಟೋರೆಂಟ್ನಲ್ಲಿ ಇಬ್ಬರೂ ಒಟ್ಟಿಗೆ ಡಿನ್ನರ್ ಮಾಡಿದ್ದರು. ಮತ್ತೊಂದು ಪಾರ್ಟಿಯಲ್ಲಿ ಕರೀನಾಗೆ ಸಿಕ್ಕಿಬಿದ್ದಿದ್ದರು. ಇದೀಗ ದೆಹಲಿಯಲ್ಲಿ ಈ ಜೋಡಿ ಕಾಣಿಸಿಕೊಂಡಿದೆ. ಕ್ಯಾಶುಯಲ್ ಉಡುಗೆಯಲ್ಲಿ ದೆಹಲಿ ಹೋಟೆಲ್ನಿಂದ ಇಬ್ಬರು ನಿರ್ಗಮಿಸಿದ್ದಾರೆ. ಬಳಿಕ ವಿಮಾನದಲ್ಲಿ ಅಭಿಮಾನಿಗಳಿಗೆ ಸೆಲ್ಫಿ ಕೊಡುತ್ತಿರುವ ವೀಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಈ ವೇಳೆ ಶುಭಮನ್ ಕೂಡ ಇದ್ದರು ಎನ್ನಲಾಗಿದೆ.

ಸದ್ಯ ಬಿಟೌನ್ನಲ್ಲಿ ಸಾರಾ ಮತ್ತು ಶುಭಮನ್ ಗಿಲ್ ಲವ್ವಿ ಡವ್ವಿ ವಿಚಾರವೇ ಸಖತ್ ಸೌಂಡ್ ಮಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ ಎಂಬುದು ಈವರೆಗೂ ಅಧಿಕೃತವಾಗಿ ಇಬ್ಬರ ಬಾಯಿಯಿಂದಲೂ ಹೊರಬಿದ್ದಿಲ್ಲ. ಸಾರಾ ಸೈಫ್ ಅಲಿಖಾನ್ ಮೊದಲ ಪತ್ನಿ ಅಮೃತ ಸಿಂಗ್ ಮಗಳು.

ಅಮೃತ ಸಿಂಗ್ ಗೆ 2004 ರಲ್ಲಿ ವಿಚ್ಚೇದನ ನೀಡಿದ್ದ ಸೈಫ್ ಅಲಿಖಾನ್ 2012 ರಲ್ಲಿ ಕರೀನಾ ಕಪೂರ್ ಮದುವೆ ಆಗಿದ್ದರು.

ಅಮೃತಗೆ ಸಾರಾ ಮತ್ತು ಇಬ್ರಾಹಿಂ ಅಲಿಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಕರೀನಾಗೂ ಇಬ್ಬರು ಮಕ್ಕಳಿದ್ದಾರೆ.