-ಶೌರ್ಯ ಡೆಸ್ಕ್
ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಹದಿಹರೆಯದಲ್ಲಿ ಪ್ರೀತಿಸಿದ ಜೋಡಿ. ಇವರ ನಡುವೆ ಪ್ರೀತಿ ಚಿಗುರೊಡೆದಿದ್ದೆಲ್ಲಿ? ಇವರಿಬ್ಬರ ಮೊದಲ ಭೇಟಿ ಯಾವಾಗ? ಮೊದಲು ಪ್ರಪೋಸ್ ಮಾಡಿದ್ದು ಯಾರು? ಇವರ ಪ್ರೀತಿಗೆ ಒಂದೇ ಬಾರಿಗೆ ಪೋಷಕರು ಒಪ್ಪಿಕೊಂಡ್ರಾ? ಪ್ರೀತಿ ಗೆದ್ದ ಜೋಡಿ ಮದುವೆಯಾಗಿದ್ದು ಹೇಗೆ? ಎಲ್ಲಿ ಈ ರೀತಿಯ ಹತ್ತು ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ…

ಭಾರತೀಯ ಮೂಲದ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇದೇ ತಿಂಗಳ 28ರಂದು ಅಧಿಕಾರ ವಹಿಸುತ್ತಿದ್ದಾರೆ. ರಿಷಿ ಸುನಕ್ ಭಾರತೀಯ ಅನ್ನುವುದ್ದಕ್ಕಿಂತ ಕರ್ನಾಟಕದ ಅಳಿಯ ಎಂಬುದು ಹೆಚ್ಚು ಸಮಂಜಸ. ಏಕೆಂದರೆ ಸುನಕ್ ತಾತ ಹಾಗೂ ಪೂರ್ವಿಕರು ಬ್ರಿಟಿಷ್ ಆಡಳಿತದ ಭಾರತದ, ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದವರು. ಹೀಗಾಗಿ ನಮಗೆ ಹತ್ತಿರ ಅಂದರೆ ಕರ್ನಾಟಕದ ಅಳಿಯ ಎಂಬುದು. ಅಪ್ಪಟ ಕನ್ನಡತಿಯ ಪತಿರಾಯ ರಿಷಿ.
ಹೌದು, ಇನ್ಫೊಸೀಸ್ (Infosys) ನಾರಾಯಣ ಮೂರ್ತಿ (Narayana Murthy), ಸುಧಾ ಮೂರ್ತಿ (Sudha Murthy) ಯವರ ಪುತ್ರಿ ಅಕ್ಷತಾ ಮೂರ್ತಿ (Akshata Murthy) ಯವರ ಪತಿ ಈ ರಿಷಿ ಸುನಕ್.
ಅಕ್ಷತಾ -ರಿಷಿ ಪ್ರೇಮಿಸಿ ಮದುವೆಯಾದವರು. ಈ ಅಪರೂಪದ ಪ್ರೇಮಕಥೆಯ ಬಗ್ಗೆ ತಿಳಿಯೋಣ ಬನ್ನಿ.

ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಹದಿಹರೆಯದಲ್ಲಿ ಪ್ರೀತಿಸಿದ ಜೋಡಿ. ಇವರ ನಡುವೆ ಪ್ರೀತಿ ಚಿಗುರೊಡೆದಿದ್ದೆಲ್ಲಿ? ಇವರಿಬ್ಬರ ಮೊದಲ ಭೇಟಿ ಯಾವಾಗ? ಮೊದಲು ಪ್ರಪೋಸ್ ಮಾಡಿದ್ದು ಯಾರು? ಇವರ ಪ್ರೀತಿಗೆ ಒಂದೇ ಬಾರಿಗೆ ಪೋಷಕರು ಒಪ್ಪಿಕೊಂಡ್ರಾ? ಪ್ರೀತಿ ಗೆದ್ದ ಜೋಡಿ ಮದುವೆಯಾಗಿದ್ದು ಹೇಗೆ? ಎಲ್ಲಿ ಈ ರೀತಿಯ ಹತ್ತು ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ರಿಷಿ ಸುನಕ್ ಬ್ರಿಟಿಷ್ ಆಳ್ವಿಕೆಯ ಭಾರತದ ಪಂಜಾಬ್ ಪ್ರಾಂತ್ಯ ಮೂಲದ ಯಶ್ವೀರ್ ಮತ್ತು ಉಷಾ ಸುನಕ್ ಅವರ ಮಗ. ಹುಟ್ಟಿದ್ದು ಬ್ರಿಟನ್ನಿನ ಸೌತಾಂಪ್ಟನ್ ನಲ್ಲಿ.
ಕರ್ನಾಟಕದದ ಸಾಫ್ಟವೇರ್ ಕಂಪೆನಿ ಇನ್ಫೋಸಿಸ್ ಸಹ ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ ಅವರ ಮೊದಲ ಪುತ್ರಿ ಅಕ್ಷತಾ ಮೂರ್ತಿ. ಇವರು ಹುಟ್ಟಿದ್ದು ಹುಬ್ಬಳ್ಳಿಯಲ್ಲಿ. ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಬೆಂಗಳೂರಿನ ಬಾಲ್ಡ್ ವಿನ್ ಶಾಲೆಯಲ್ಲಿ ಆಯಿತು. ನಂತರ ಅಮೆರಿಕಾದ ಕ್ಯಾಲಿಪೋರ್ನಿಯಾದ ಕ್ಲೇರ್ ಮೌಂಟ್ ಮೆಕೆನ್ನಾ ಕಾಲೇಜಿನಲ್ಲಿ ಅರ್ಥಶಾಸ್ತ್ರ ಓದಿ, ಮುಂದೆ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಫ್ಯಾಷನ್ ಡಿಸೈನ್ ನಲ್ಲಿ ಎಂಬಿಎ ಗೆ ಸೇರಿದರು. ಅಲ್ಲಿ ಭೇಟಿಯಾದವರೇ ರಿಷಿ ಸುನಕ್. ಭೇಟಿ ಸ್ನೇಹಕ್ಕೆ ತಿರುಗಿತ್ತು. ಆ ಸ್ನೇಹ ಪ್ರೀತಿಗೆ ತಿರುಗಿತ್ತು.
ಪ್ರೇಮ ನಿವೇದನೆ

ಸುಮಾರು 5000 ಕೋಟಿ ಮೌಲ್ಯದ ಇನ್ಫೋಸಿಸ್ ಪಾಲನ್ನು ಹೊಂದಿರುವ ಅಕ್ಷತಾ ಓದಿನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಅಷ್ಟೇಲ್ಲಾ ಸಂಪತ್ತಿದ್ದರು, ವಿದ್ಯಾರ್ಥಿವೇತನ ಮೇಲೆ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಸೀಟು ಪಡೆದುಕೊಂಡಿದ್ದರು. ಈ ವೇಳೆ ರಿಷಿ ಸುನಕ್ ಅವರಿಗೆ ಈಕೆ ಮೇಲೆ ಪ್ರೇಮಾಂಕುರವಾಗಿತ್ತು. ಅಕ್ಷತಾ ಕೂಡಾ ನೋಡಿದ ಮೊದಲ ನೋಟದಲ್ಲೇ ಅವರೇ ನನಗೆ ಸರಿಯಾದ ಜೀವನ ಸಂಗಾತಿ ಅಂದುಕೊಂಡಿದ್ದರಂತೆ. ಇಬ್ಬರು ಪರಸ್ಪರ ಪ್ರೇಮ ನಿವೇದನೆ ಮಾಡಿಕೊಳ್ಳಲು ಕೆಲ ಕಾಲ ಸಮಯ ತೆಗೆದುಕೊಂಡಿದ್ದರಂತೆ. ಇಬ್ಬರೂ ಒಟ್ಟಾಗಿಯೇ ತಮ್ಮ ಮಧ್ಯೆ ಇರುವುದು ಪ್ರೀತಿ ಎಂಬುದನ್ನು ಪರಸ್ಪರ ಒಪ್ಪಿಕೊಂಡರು ಒಂದಾಗಿಬಾಳಲು ನಿರ್ಧರಿಸಿದರಂತೆ.
ಮದುವೆಯಾದ ಜೋಡಿ!
ಪ್ರೇಮ ನಿವೇದನೆ ಬಳಿಕ ಇಬ್ಬರು ತಮ್ಮ ಪೋಷಕರಿಗೆ ಪ್ರೀತಿ ಬಗ್ಗೆ ಹೇಳಿಕೊಂಡಿದ್ದಾರೆ. ಇಬ್ಬರ ಮನೆಯಲ್ಲೂ ಒಪ್ಪಿಕೊಂಡ ನಂತರ ದಂಪತಿಗಳು ಆಗಸ್ಟ್ 2009ರಲ್ಲಿ ಮದುವೆಯಾದರು. ಬೆಂಗಳೂರಿನಲ್ಲಿ ನಡೆದ ವಿವಾಹದಲ್ಲಿ ಸಂಬಂಧಿಕರು ಮತ್ತು ಸ್ನೇಹಿತರು ಭಾಗಿಯಾಗಿದ್ದರು. ಬ್ರಾಹ್ಮಣ ಸಂಪ್ರದಾಯದಂತೆ ಮದುವೆ ಕಾರ್ಯಕ್ರಮಗಳು ಜರುಗಿತ್ತು.

ಸಮಾರಂಭದಲ್ಲಿ ಬಿಲಿಯನೇರ್ಗಳು, ಸಿಇಒಗಳು, ಕ್ರಿಕೆಟಿಗರು, ಮುಂಬೈನ ಹೆಸರಾಂತ ಗಣ್ಯರು, ಮಾಧ್ಯಮ ಉದ್ಯಮಿಗಳು, ಕೇಂದ್ರ ಮತ್ತು ಸ್ಥಳೀಯ ಮಂತ್ರಿಗಳು ಭಾಗಿಯಾಗಿದ್ದರು. ನಗರದ ಹೊರವಲಯದಲ್ಲಿರುವ ತನ್ನ ವಿಶಾಲವಾದ ಹಸಿಯೆಂಡಾ ಶೈಲಿಯ ಬಂಗಲೆಯಲ್ಲಿ ಆಪ್ತ ಸ್ನೇಹಿತೆ ಮತ್ತು ಪ್ರಸ್ತುತ ಇನ್ಫೋಸಿಸ್ ಮಂಡಳಿಯ ಸದಸ್ಯೆ ಕಿರಣ್ ಮಜುಂದಾರ್-ಶಾ ಅವರು ಆಯೋಜಿಸಿದ್ದ ಮೆಹಂದಿ ಸಮಾರಂಭದೊಂದಿಗೆ ಆಚರಣೆಗಳು ಪ್ರಾರಂಭವಾಗಿತ್ತು.

ಜಯನಗರದಲ್ಲಿ ನಡೆದಿತ್ತು ವರ ಪೂಜೆ!
ಮರುದಿನ, ಜಯನಗರದ ಚಾಮರಾಜ ಕಲ್ಯಾಣ ಮಂಟಪದಲ್ಲಿ ವರ ಪೂಜೆ ನಡೆದಿತ್ತು. ಪೂರ್ವ ವಿವಾಹ ಸಮಾರಂಭದಲ್ಲಿ ಅಡಿಗರು ಪೂರೈಸುವ ಸಾಂಪ್ರದಾಯಿಕ ಕನ್ನಡ ಊಟವಿತ್ತು. ಆಗಸ್ಟ್ 30 ರ ಬೆಳಿಗ್ಗೆ ದಂಪತಿಗಳು ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ತಮ್ಮ ಹತ್ತಿರದ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾದರು. ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರ ಸಂಪತ್ತಿಗೆ ಹೋಲಿಸಿದರೆ ಅಷ್ಟೇನೂ ಅದ್ದೂರಿಯಲ್ಲದ ರೀತಿ ಮದುವೆ ನಡೆದಿತ್ತು.

ಇನ್ಫೋಸಿಸ್ ಸಂಸ್ಥಾಪಕರಾದ ನಂದನ್ ನೀಲಕೇಣಿ, ಕ್ರಿಸ್ ಗೋಪಾಲ್ ಕೃಷ್ಣನ್, ಎಸ್.ಡಿ.ಶಿಬುಲಾಲ್, ಕೆ.ದಿನೇಶ್, ಮೋಹನ್ ದಾಸ್ ಪೈ, ವಿಪ್ರೊದ ಸಹ ಟೆಕ್ ಟೈಟಾನ್ ಅಜೀಂ ಪ್ರೇಮ್ಜಿ, ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ, ಎನಾಮ್ನ ವಲ್ಲಭ್ ಭನ್ಸಾಲಿ, ಐಸಿಐಸಿಐ ಬ್ಯಾಂಕ್ನ ಕೆ.ವಿ.ಕಾಮತ್, ಅಹ್ಲುವಾಲಿಯಾಸ್, ಮಾಂಟೆಕ್ & ಇಷರ್, ದೆಹಲಿ ಮತ್ತು ರಾಜ್ಯದ ರಾಜಕಾರಣಿಗಳು ಉಪಸ್ಥಿತರಿದ್ದರು.
ದಂಪತಿಗೆ ಇಬ್ಬರು ಪುತ್ರಿಯರು
ಪ್ರಸ್ತುತ ನವೀಕರಣಗೊಂಡ ವೆಸ್ಟ್ ಲಂಡನ್ ನ 11 ಡೌನಿಂಗ್ ಸ್ಟ್ರೀಟ್ ಮನೆಯಲ್ಲಿ ರಿಷಿ-ಅಕ್ಷತಾ ನೆಲೆಸಿದ್ದಾರೆ. ಈ ದಂಪತಿಗೆ ಅನುಷ್ಕಾ ಮತ್ತು ಕೃಷ್ಣ ಎಂಬ ಇಬ್ಬರು ಪುತ್ರಿಯರಿದ್ದಾರೆ.

ಅಕ್ಷತಾ ಅವರ ಸ್ವಂತ ನಿವಾಸ ಕಿರ್ಬಿ ಸಿಗ್ಸ್ಟನ್ ಮ್ಯಾನರ್. ಇದು ಇಂಗ್ಲೆಂಡ್ ನ ಯಾರ್ಕ್ ಶೈರ್ ನಲ್ಲಿದೆ.