-ಶೌರ್ಯ ಡೆಸ್ಕ್
ಹೌದು. ಈಗ ರಶ್ಮಿಕಾಗೆ ಹಳೇ ಹುಡುಗನ ನೆನಪುಗಳು ಮುತ್ತುತ್ತಿವೆ. ಅತ್ತ ಸೋತು ಸುಣ್ಣವಾದ ನಟ ಇತ್ತ `ನಾಯಿ’ ಇಟ್ಟುಕೊಂಡು ಚಾರ್ಲಿ 777 ಸಿನಿಮಾ ಮಾಡಿ ನೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮೂಲಕ ಬಾಕ್ಸಾಫೀಸ್ ದೋಚಿದ ನಿರ್ದೇಶಕ ಕಮ್ ನಟ. ಇಬ್ಬರ ನಡುವೆ ಈಗ ಗೆದ್ದ ನಿರ್ದೇಶಕನೊಂದಿಗಿನ ಹಳೇಯ ಸಂಬಂಧ ರಶ್ಮಿಕಾಗೆ ಮತ್ತೆ ನೆನಪಾಗಿದೆ.

ಲೈಗರ್ ಸಿನಿಮಾ ಹೀನಾಯ ಸೋಲಿನಿಂದ ವಿಜಯ್ ದೇವರಕೊಂಡ ಮಾರ್ಕೆಟ್ ಪಾತಾಳಕ್ಕೆ ಕುಸಿದಿದೆ. ಹಾಕಿದ ದುಡ್ಡು ಮುಳುಗಿದ ನಂತರ ನಿರ್ಮಾಪಕರು ಆತನೊಂದಿಗಿನ ಹೊಸ ಸಿನಿಮಾಗಳ ಕಾಲ್‌ಶೀಟ್ ರದ್ದು ಮಾಡಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ನಟಿ ರಶ್ಮಿಕಾ ಮಂದಣ್ಣಗೆ ಎಕ್ಸ್ ಬಾಯ್‌ಫ್ರೆಂಡ್ ನೆನಪಾಗಿದೆ.
ಹೌದು. ಈಗ ರಶ್ಮಿಕಾಗೆ ಹಳೇ ಹುಡುಗನ ನೆನಪುಗಳು ಮುತ್ತುತ್ತಿವೆ. ಅತ್ತ ಸೋತು ಸುಣ್ಣವಾದ ನಟ ಇತ್ತ `ನಾಯಿ’ ಇಟ್ಟುಕೊಂಡು ಚಾರ್ಲಿ 777 ಸಿನಿಮಾ ಮಾಡಿ ನೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮೂಲಕ ಬಾಕ್ಸಾಫೀಸ್ ದೋಚಿದ ನಿರ್ದೇಶಕ ಕಮ್ ನಟ. ಇಬ್ಬರ ನಡುವೆ ಈಗ ಗೆದ್ದ ನಿರ್ದೇಶಕನೊಂದಿಗಿನ ಹಳೇಯ ಸಂಬಂಧ ರಶ್ಮಿಕಾಗೆ ಮತ್ತೆ ನೆನಪಾಗಿದೆ.
ನಟ ರಕ್ಷಿತ್ ಶೆಟ್ಟಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಆದರೆ, ಅವರ ಸಂಬಂಧ ಮುರಿದು ಬಿತ್ತು. ಆ ಬಳಿಕ ಅವರು ವಿಜಯ್ ದೇವರಕೊಂಡ ಜತೆ ಕ್ಲೋಸ್ ಆದರು.

ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‌ನಲ್ಲಿ ಬ್ಯುಸಿ ಇದ್ದಾರೆ. ಅವರ ನಟನೆಯ ಮೊದಲ ಹಿಂದಿ ಸಿನಿಮಾ ‘ಗುಡ್ ಬೈ’ ರಿಲೀಸ್‌ಗೆ ರೆಡಿ ಇದೆ. ಆ ಚಿತ್ರ ಅವರ ಮೊದಲ ಚಿತ್ರ ಆದ್ದರಿಂದ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ನೆಲೆ ನಿಲ್ಲಲು ಈ ಚಿತ್ರ ಗೆಲ್ಲಬೇಕು. ಅದಾಗದಿದ್ದರೆ ಹೊಸ ಬಾಯ್‌ಫ್ರೆಂಡ್‌ಗೆ ಒದಗಿದ ಗತಿ ಆಕೆಗೂ ಆಗುತ್ತದೆ. ಮುಂಬೈನಿಂದ ಗಂಟು ಮೂಟೆ ಕಟ್ಟಬೇಕಾಗುತ್ತದೆ. ಈ ಸಮಯದಲ್ಲಿ ಆಕೆ ಕಾಕತಾಳೀಯ ಎಂಬಂತೆ ಹಳೇ ಸಂಬಂಧ ಸ್ಮರಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಆ ಸಂಬಂಧ ಈಗಲೂ ಉಳಿಸಿಕೊಂಡಿರುವುದಾಗಿ ಹೇಳಿಕೊಂಡು ಹಲ್‌ಚಲ್ ಸೃಷ್ಟಿಸಿದ್ದಾರೆ. ರಕ್ಷಿತ್ ಶೆಟ್ಟಿಯದಾ ಅಥವಾ ವಿಜಯ್ ದ ಅನ್ನೋದು ಮಾತ್ರ ಆಕೆ ಸ್ಪಷ್ಟಪಡಿಸಿಲ್ಲ.

ರಶ್ಮಿಕಾ ಮಂದಣ್ಣ ಹಾಗೂ ನಟ ರಕ್ಷಿತ್ ಶೆಟ್ಟಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಆದರೆ, ಅವರ ಸಂಬಂಧ ಮುರಿದು ಬಿತ್ತು. ಆ ಬಳಿಕ ಅವರು ವಿಜಯ್ ದೇವರಕೊಂಡ ಜತೆ ಕ್ಲೋಸ್ ಆದರು. ಇಬ್ಬರೂ ಪ್ರೀತಿಯಲ್ಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಇದನ್ನು ಅವರ ಅಲ್ಲಗಳೆಯುತ್ತಲೇ ಬಂದಿದ್ದಾರೆ. ‘ಇಬ್ಬರೂ ರಿಲೇಶನ್ಶಿಪ್ನಲ್ಲಿದ್ದರು. ಆದರೆ, ಈಗ ಬೇರೆ ಆಗಿದ್ದಾರೆ’ ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಆಗಿದ್ದಿದೆ. ಈಗ ಇದೇ ವಿಚಾರ ಇಟ್ಟುಕೊಂಡು ಎಕ್ಸ್ಗಳ ವಿಚಾರವಾಗಿ ರಶ್ಮಿಕಾಗೆ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಉತ್ತರಿಸಿದ ಅವರು, ‘ನನ್ನ ಎಕ್ಸ್ಗಳ ಜತೆ ಈಗಲೂ ಫ್ರೆಂಡ್ಶಿಪ್ ಉಳಿಸಿಕೊಂಡಿದ್ದೇನೆ. ಅವರ ಕುಟುಂಬವನ್ನು, ಅವರ ಪಾಲಕರನ್ನು ಭೇಟಿ ಮಾಡುತ್ತೇನೆ. ನನಗೆ ಗೊತ್ತು ಅದು ಒಳ್ಳೆಯ ಲಕ್ಷಣ ಅಲ್ಲ. ಆದರೆ, ಅವರ ಜತೆ ನನಗೆ ಫ್ರೆಂಡ್ಶಿಪ್ ಇದೆ. ಅದು ಒಳ್ಳೆಯದು’ ಎಂದು ರಶ್ಮಿಕಾ ಹೇಳಿದ್ದಾರೆ.

ರಶ್ಮಿಕಾ ಹಾಗೂ ವಿಜಯ್ ‘ಗೀತ ಗೋವಿಂದಂ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಯಿತು. ಆ ಬಳಿಕ ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ಈ ಜೋಡಿ ಒಟ್ಟಾಗಿ ನಟಿಸಿತು. ಆದರೆ, ಈ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸು ಪಡೆದಿಲ್ಲ. ಅತ್ತ ವಿಜಯ್ ದೇವರಕೊಂಡ ಲೈಗರ್ ಸಿನಿಮಾದ ಸೋಲಿನಿಂದ ಕಂಗೆಟ್ಟು ಕೂತಿದ್ದಾರೆ. ಆ ಸಿನಿಮಾಗೆ ಹಣ ನಿರ್ಮಾಪಕರು ಹಣ ಕಳೆದುಕೊಂಡು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ನಿರ್ದೇಶಕ ಪುರಿ ಜಗನ್ನಾಥ್ ಮುಂಬೈ ಖಾಲಿ ಮಾಡಿ ಹೈದರಬಾದ್‌ಗೆ ಬಂದಿದ್ದಾರೆ.