-ಶೌರ್ಯ ಡೆಸ್ಕ್
ಯಾತ್ರೆ ಆರಂಭವಾಗಿ 17 ದಿನಗಳೇ ಕಳೆದಿದೆ. ಕರ್ನಾಟಕದಲ್ಲೇ ಇದ್ರೂ ರಮ್ಯಾ ಯಾಕೆ ಪಾದಯಾತ್ರೆಯಲ್ಲಿ ಭಾಗಿಯಾಗಿಲ್ಲ? ರಮ್ಯಾ ಕಾಂಗ್ರೆಸ್ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದಾರಾ? ಎನ್ನುವ ಪ್ರಶ್ನೆಗಳು ಎದ್ದಿದ್ದವು. ಪಾದಯಾತ್ರೆ ಮೈಸೂರು ತಲುಪಿದಾಗ ರಾಹುಲ್ ಮಳೆಯಲ್ಲಿ ತೋಯುತ್ತಾ ಭಾಷಣ ಮಾಡಿದ ಬಗ್ಗೆ ಅದೇನೂ ಅಂತ ದೊಡ್ಡ ವಿಷಯವಾ ಅನ್ನೋ ದಾಟಿಯಲ್ಲಿ ಮಾತನಾಡಿದಾಗ ರಮ್ಯಾ ರಾಜಕೀಯವನ್ನೇ ಬಿಡುತ್ತಾರೆ ಅನ್ನೋ ಮಾತು ಕೂಡಾ ಕೇಳಿಬಂದಿತ್ತು. ಈಗ ರಾಹುಲ್ ಗೆ ಸಾಥ್ ನೀಡಿ ನಾನು ರಾಜಕೀಯದಲ್ಲೂ ಸಕ್ರಿಯಳಾಗಿದ್ದೇನೆ ಎಂದು ರಮ್ಯಾ ಈ ಮೂಲಕ ತೋರಿಸಿ ಕೊಟ್ಟಿದ್ದಾರೆ. ರಮ್ಯಾ ಏಕೆ ಇಷ್ಟು ದಿನ ಪಾದಯಾತ್ರೆಗೆ ಬರಲಿಲ್ಲ ? ಉತ್ತರ ಸಿಕ್ಕಿದೆ. ಅದನ್ನು ತಿಳಿಯೋಣ ಬನ್ನಿ.

ಕೊನೆಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆಗೆ ರಮ್ಯಾ ಆಗಮನವಾಗಿದೆ. ಯಾತ್ರೆ ಕರ್ನಾಟಕವನ್ನು ಇನ್ನೇನು ದಾಟುವ ಸಮಯದಲ್ಲಿ ಮಾಜಿ ಸಂಸದೆ, ನಟಿ ರಮ್ಯಾ ಭಾಗಿಯಾಗಿದ್ದಾರೆ. ರಾಯಚೂರಿನ ರೈಲ್ವೇ ನಿಲ್ದಾಣದ ಬಳಿ ನಟಿ ರಮ್ಯಾ, ರಾಹುಲ್ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.
ಯಾತ್ರೆ ಆರಂಭವಾಗಿ 17 ದಿನಗಳೇ ಕಳೆದಿದೆ. ಕರ್ನಾಟಕದಲ್ಲೇ ಇದ್ರೂ ರಮ್ಯಾ ಯಾಕೆ ಪಾದಯಾತ್ರೆಯಲ್ಲಿ ಭಾಗಿಯಾಗಿಲ್ಲ? ರಮ್ಯಾ ಕಾಂಗ್ರೆಸ್ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದಾರಾ? ಎನ್ನುವ ಪ್ರಶ್ನೆಗಳು ಕೂಡ ಎದ್ದಿದ್ದವು. ಪಾದಯಾತ್ರೆ ಮೈಸೂರು ತಲುಪಿದಾಗ ರಾಹುಲ್ ಮಳೆಯಲ್ಲಿ ತೋಯುತ್ತಾ ಭಾಷಣ ಮಾಡಿದ ಬಗ್ಗೆ ಅದೇನೂ ಅಂತ ದೊಡ್ಡ ವಿಷಯವಾ ಅನ್ನೋ ದಾಟಿಯಲ್ಲಿ ಮಾತನಾಡಿದಾಗ ರಮ್ಯಾ ರಾಜಕೀಯವನ್ನೇ ಬಿಡುತ್ತಾರೆ ಅನ್ನೋ ಮಾತು ಕೂಡಾ ಕೇಳಿಬಂದಿತ್ತು. ಈಗ ರಾಹುಲ್ ಗೆ ಸಾಥ್ ನೀಡಿ ನಾನು ರಾಜಕೀಯದಲ್ಲೂ ಸಕ್ರಿಯಳಾಗಿದ್ದೇನೆ ಎಂದು ರಮ್ಯಾ ಈ ಮೂಲಕ ತೋರಿಸಿ ಕೊಟ್ಟಿದ್ದಾರೆ. ರಮ್ಯಾ ಏಕೆ ಇಷ್ಟು ದಿನ ಪಾದಯಾತ್ರೆಗೆ ಬರಲಿಲ್ಲ ? ಉತ್ತರ ಸಿಕ್ಕಿದೆ. ಅದನ್ನು ತಿಳಿಯೋಣ ಬನ್ನಿ.
ಗಂಟು ಮೂಟೆ ಕಟ್ಟಿಕೊಂಡು ಬಂದಿದ್ದ ನಟಿ
ದೆಹಲಿ ದರ್ಬಾರ್ ಮುಗಿಸಿ ಗಂಟು ಮೂಟೆ ಕಟ್ಟಿಕೊಂಡು ಮತ್ತೆ ಬೆಂಗಳೂರಿಗೆ ಬಂದ ನಟಿ, ಮಾಜಿ ಸಂಸದೆ, ಎಐಸಿಸಿ ಮಾಜಿ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರನ್ನು ಇಲ್ಲಿ ಕ್ಯಾರೇ ಎನ್ನುವವರೇ ಇರಲಿಲ್ಲ. ಅತ್ತ ಸಿನಿಮಾದವರೂ ಕರೆಯಲಿಲ್ಲ, ಇತ್ತ ಕಾಂಗ್ರೆಸ್ ರಾಜಕಾರಣಿಗಳು ಕ್ಯಾರೇ ಅಂದಿರಲಿಲ್ಲ. ಫಿಲ್ಮು, ಪಾಲಿಟಿಕ್ಸು ಎರಡು ರಂಗದಲ್ಲೂ ಮಿಂಚಿ ಹಸ್ತ ಪಕ್ಷದ ದೊಡ್ಡ ದೊರೆಗಳ ಖಾಸಗಿ ದರ್ಬಾರ್ನಲ್ಲಿ ಮಿನುಗಿ ಯೌವ್ವನ ಬರಿದು ಮಾಡಿಕೊಂಡು ಕರ್ನಾಟಕದ ರಾಜಧಾನಿಗೆ ಮರಳಿ ಪ್ರತಿಷ್ಠಿತ ಹೋಟೆಲ್ನಲ್ಲಿ ಜಾಂಡಾ ಊರಿ ಇತ್ತೀಚೆಗೆ ತಮ್ಮದೇ ಬ್ಯಾನರ್ ಅಡಿ ಸಿನಿಮಾ ನಿರ್ಮಾಣ ಆರಂಭಿಸಿದ್ದಾರೆ ರಾಜ್ ಶೆಟ್ಟಿ ಜತೆ ಸ್ವಾತಿ ಮುತ್ತಿನ ಮಳೆ ಹನಿಯೇ ಅನ್ನೋ ಸಿನಿಮಾ ಘೋಷಿಸಿದ್ದಾರೆ.

ಅದು ಆಗಿರಲಿ. ಕಾಂಗ್ರೆಸ್ ಹೈಕಮಾಂಡ್ನಲ್ಲಿ ತನ್ನದೇ ಆದ ಪ್ರಭಾವ ಗಳಿಸಿಕೊಂಡಿದ್ದ ರಮ್ಯಾ ಅವರನ್ನು ಹಲವು ಕಾರಣಗಳಿಗಾಗಿ ವರಿಷ್ಠರು ಮೂಲೆಗೆ ತಳ್ಳಿದರು. ರಾಹುಲ್ ಗಾಂಧಿ ಜೊತೆ ಇದ್ದ ಅನ್ಯೋನ್ಯತೆಯನ್ನೇ ಬಳಸಿಕೊಂಡು ನಾನೇ ಎಐಸಿಸಿ ಮಿನಿ ಬಾಸು ಎಂಬಂತೆ ಈಕೆ ಆಡುತ್ತಾರೆ ಎಂಬ ಆರೋಪಗಳ ಹಿನ್ನೆಲೆ ರಮ್ಯಾ ಅವರನ್ನು ರಾಹುಲ್ ಟೀಮ್ನಿಂದ ರಾತ್ರೋರಾತ್ರಿ ಹೊರತಳ್ಳಿದ್ದಾರೆ ಎಂದು ಆಗ ರಾಜಕೀಯ ವಲಯದಲ್ಲಿ ಟಾಕ್ ಇತ್ತು.
ಅಲ್ಲಿಂದ ರಮ್ಯಾ ವರ್ಷಕ್ಕೂ ಹೆಚ್ಚು ಕಾಲ ನಾಪತ್ತೆಯೇ ಆಗಿಬಿಟ್ಟಿದ್ದರು. ಆದರೆ ಎಷ್ಟು ದಿನ ಅಜ್ಞಾತವಾಸದಲ್ಲಿರಲು ಸಾಧ್ಯ? ಹೀಗಾಗಿ ಮತ್ತೆ ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿಯೇ ಬಿಟ್ಟಿದ್ದರು. ಹಳೆಯದನ್ನೆಲ್ಲ ಮರೆತು ಹೊಸ ಭವಿಷ್ಯದ ಭರವಸೆಯಲ್ಲಿ ಸಿನಿಮಾ ಹಾಗೂ ರಾಜಕೀಯ ರಂಗದತ್ತ ಕಣ್ಣು ನೆಟ್ಟಿದ್ದರು. ರಾಜಧಾನಿಯ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಕೂಗಳತೆಯ ದೂರದ ಪಂಚತಾರಾ ಹೋಟೆಲ್ನಲ್ಲಿ ಮತ್ತೆ ವಾಸ್ತವ್ಯ ಹೂಡಿದ್ದಾರೆ.

ಬೆಂಗಳೂರಿಗೆ ಬಂದೊಡನೆ ಪುನೀತ್ ರಾಜ್ಕುಮಾರ್ ಹಾಡಿ ಹೊಗಳಿದ್ದ ರಮ್ಯಾ ಅವರ ಮೂಲಕ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಲು ಪ್ರಯತ್ನಿಸಿದ್ದರು. ಎರಡು ಚಿತ್ರಕಥೆ ಕೇಳಿ `ನಾಟ್ ಓಕೆ ಅಪ್ಪು’ ಎಂದು ಹೇಳಿ ಸುಮ್ಮನಾದೆ ಎಂದು ಹೇಳಿಕೊಂಡಿದ್ದರು. ಅತ್ತ ಪುನೀತ್ ಅಕಾಲಿಕವಾಗಿ ಇಹಲೋಕ ತ್ಯಜಿಸುತ್ತಿದ್ದಂತೆ ಚಿತ್ರರಂಗದಲ್ಲಿ ರಮ್ಯಾಗಿದ್ದ ಆಧಾರಸ್ಥಂಭವೇ ಕುಸಿದಂತಾಯಿತು. ಸಿನಿಮಾ ಮಂದಿ ಈಕೆಯ ಹತ್ತಿರ ಸುಳಿಯಲಿಲ್ಲ. ಹೀಗಿರುವಾಗ ರಮ್ಯಾ ಸಿನಿಮಾಗೆ ರೀ ಎಂಟ್ರಿ ಮಾಡಬಹುದು ಎಂದು ಅಭಿಮಾನಿಗಳು ಕಾಯುತ್ತಿರುವಾಗಲೇ ತಾವೇ ಅಪಲ್ ಬಾಕ್ಸ್ ಅನ್ನೋ ಸಂಸ್ಥೆಯಡಿ ಚಿತ್ರ ನಿರ್ಮಿಸೋದಾಗಿ ಪ್ರಕಟಿಸಿದ್ದರು.
ಪಕ್ಷದವರೇ ಹತ್ತಿರಕ್ಕೆ ಸೇರಿಸಲಿಲ್ಲ
ರಮ್ಯಾಗೆ ಮತ್ತೆ ರಾಜಕಾರಣಕ್ಕೆ ಮರಳುವ ಆಸೆ ಇದ್ದರೂ ಕಾಂಗ್ರೆಸ್ ಪಕ್ಷದವರೇ ಹತ್ತಿರ ಸೇರಿಸಲಿಲ್ಲ.
ಸಂಸದರಾಗಿದ್ದ ವೇಳೆ ರಾಜಕಾರಣದಲ್ಲಿ ಬೆಳೆಸಿದವರ ವಿರುದ್ಧವೇ ನಿಂತು, ಹೈಕಮಾಂಡ್ ಆಯ್ತು ನಾನಾಯ್ತು ಎಂದು ಮಾಡಿಕೊಂಡ ಎಡವಟ್ಟು ಅಷ್ಟು ಸುಲಭವಾಗಿ ಮತ್ತೆ ರಾಜ್ಯ ರಾಜಕೀಯ ಅಖಾಡಕ್ಕೆ ಮರಳಲು ಬಿಡಲಿಲ್ಲ. ದೆಹಲಿಯಲ್ಲೇ ಕುಳಿತು ರಮ್ಯಾ ತೋರಿದ್ದ ವರ್ತನೆಗಳನ್ನು ಮನಸ್ಸಿನಲ್ಲೇ ಇಟ್ಟುಕೊಂಡಿರುವ ಕಾಂಗ್ರೆಸ್‌ನ ಘಟಾನುಘಟಿ ನಾಯಕರೇ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಕೆಡಿಸಿಕೊಳ್ಳುತ್ತಿಲ್ಲ. ಆದರೆ ರಮ್ಯಾ ಮಾತ್ರ ಮತ್ತೆ ರಾಜಕಾರಣಕ್ಕೆ ಬರಲು ಶತಪ್ರಯತ್ನ ಮಾಡುತ್ತಿದ್ದಾರೆ.

ಭಾರತ್ ಜೋಡೋ ಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಯಾರೊಬ್ಬರೂ ರಮ್ಯಾ ಅವರನ್ನು ಕರೆದಿರಲಿಲ್ಲ. ಹಿಂದೆ ನಾನು ಕೆಪಿಸಿಸಿ ಅಧ್ಯಕ್ಷನಾಗುವುದನ್ನು ತಡೆದ ಕೈಗಳಿಗೆ ರಮ್ಯಾ ಬೆಂಬಲ ಇತ್ತು ಎಂಬ ಕಾರಣಕ್ಕೆ ಡಿಕೆಶಿ ರಮ್ಯಾ ಅವರನ್ನು ಹತ್ತಿರ ಸೇರಿಸುವುದಿರಲಿ ಮಾತನ್ನೂ ಆಡಿಸುವುದಿಲ್ಲ. ಇನ್ನು ಉಳಿದ ಯಾವ ನಾಯಕರ ಜೊತೆಯೂ ರಮ್ಯಾಗೆ ಸಂಪರ್ಕ ಇಲ್ಲ.

ರಮ್ಯಾ ಬಂದರೆ ಅದೇ ದೊಡ್ಡ ಸುದ್ದಿಯಾಗುತ್ತೆ ಎಂಬ ಕಾರಣಕ್ಕೂ ಆಕೆಯನ್ನು ಭಾರತ್ ಜೋಡೋದಿಂದ ದೂರ ಇಟ್ಟಿರಬಹುದು. ಒಟ್ಟಾರೆ ಈಗ ರಮ್ಯಾ ರಾಯಚೂರು ಜಿಲ್ಲೆಯಲ್ಲಿ ಕಾಣಿಸಿಕೊಂಡು ಪಾದಯಾತ್ರೆ ಮಾಡಿದ್ದಾರೆ. ಯಾರಾದರೂ ಕರೆದರಾ? ಕರೆಯದೇ ಹೋದರಾ ? ಗೊತ್ತಿಲ್ಲ. ಅದನ್ನು ಅವರೇ ಹೇಳಬೇಕು.