-ಶೌರ್ಯ ಡೆಸ್ಕ್

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 67 ಸಾಧಕರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಸರ್ಕಾರ ಇಂದು ಸಂಜೆ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದ್ದು 67 ಸಾಧಕರ ಜೊತೆಗೆ ಸ್ವಾತಂತ್ಯ ಅಮೃತ ಮಹೋತ್ಸವ ಪ್ರಯುಕ್ತ 10 ಸಮಾಜ ಸೇವೆ ಸಂಸ್ಥೆಗಳಿಗೂ ಪ್ರಶಸ್ತಿ ನೀಡಲಾಗಿದೆ.
ಇಸ್ರೋ ಮಾಜಿ ಅಧ್ಯಕ್ಷ ಕೆ. ಶಿವನ್, ಹಿರಿಯ ನಟ ದತ್ತಣ್ಣ, ಅವಿನಾಶ್, ಸಿಹಿಕಹಿ ಚಂದ್ರು, ಸಾಹಿತ್ಯ ಕ್ಷೇತ್ರದ ಅ.ರಾ.ಮಿತ್ರ, ಪ್ರೊ. ಕೃಷ್ಣೇಗೌಡ ಅವರಿಗೆ ಪ್ರಶಸ್ತಿ ದೊರೆತಿದೆ.

ಸೈನಿಕರಾದ ಸುಬೇದಾರ್ ಬಿ.ಕೆ.ಕುಮಾರಸ್ವಾಮಿ, ಪತ್ರಕರ್ತರಾದ ಹೆಚ್.ಆರ್ ಶ್ರೀಶ, ಜಿ.ಎಂ.ಶಿರಹಟ್ಟಿ, ಮತ್ತಿತರರು ಪಟ್ಟಿಯಲ್ಲಿದ್ದಾರೆ.

ಕೃಷಿ: ಗಣೇಶ್ ತಿಮ್ಮಯ್ಯ, ಚಂದ್ರಶೇಖರ್ ನಾರಾಯಣಪುರ
ಪರಿಸರ: ಸಾಲು ಮರದ ನಿಂಗಣ್ಣ
ಪೌರಕಾರ್ಮಿಕ: ಮಲ್ಲಮ್ಮ ಹೂವಿನ ಹಡಗಲಿ
ಆಡಳಿತ: ಡಾ.ಎಲ್.ಎಚ್. ಮಂಜುನಾಥ್, ಮದನ್ ಗೋಪಾಲ್
ಸಾಹಿತ್ಯ: ಶಂಕರ ಚಚಡಿ, ಪ್ರೊ. ಕೃಷ್ಣೇಗೌಡ, ಅ.ರಾ.ಮಿತ್ರ, ಅಶೋಕ್ ಬಾಬು ನೀಲಗಾರ್, ರಾಮಕೃಷ್ಣ ಮರಾಠೆ

ನ್ಯಾಯಾಂಗ: ವೆಂಕಟಾಚಲಪತಿ, ನಂಜುಂಡರೆಡ್ಡಿ
ವಾಣಿಜೋದ್ಯಮ: ಬಿ.ವಿ. ನಾಯ್ಡು, ಜಯರಾಮ್ ಬನಾನ್, ಜೆ. ಶ್ರೀನಿವಾಸ್
ಸಮಾಜಸೇವೆ: ರವಿ ಶೆಟ್ಟಿ, ಸಿ.ಕರಿಯಪ್ಪ, ಎಂ.ಎಸ್.ಕೋರಿ ಶೆಟ್ಟರ್, ಡಿ. ಮಾದೇಗೌಡ, ಬಲಬೀರ್ ಸಿಂಗ್
ರಂಗಭೂಮಿ: ತಿಪ್ಪಣ್ಣ ಹೆಳವರ್, ಲಲಿತಾಬಾಯಿ ಚನ್ನದಾಸರ್, ಗುರುನಾಥ್ ಹೂಗಾರ್, ಪ್ರಭಾಕರ್ ಜೋಶಿ, ಶೈಶೈಲ ಹುದ್ದಾರ್
ಮತ್ತಿತರರಿಗೆ ಪ್ರಶಸ್ತಿ ಸಿಕ್ಕಿದೆ.