-ಶೌರ್ಯ ಡೆಸ್ಕ್
ಗಂಡಸರು ನಿಂತು ಚುಂಬನ ಸ್ವೀಕರಿಸಬೇಕೆಂದೂ ಇಲ್ಲವಾದಲ್ಲಿ ಪರಿಣಾಮ ಹೆದರಿಸಬೇಕೆಂದು ಕೂಗುತ್ತಾ ಹೆಂಗಸರು ಗುಂಪುಗಳಲ್ಲಿ ಗಂಡಸರನ್ನು ಅಟ್ಟಿಸಿಕೊಂಡು ಹೋಗುತ್ತಿರುತ್ತಾರೆ. ಪೊಲೀಸರು ಅವರನ್ನು ಬಿಡಿಸಲು ಮಧ್ಯಪ್ರವೇಶಿಸಿದರೆ ಹುಡುಗಿಯರು ಅವರನ್ನೂ ಸುತ್ತುಗಟ್ಟಿ ಚುಂಬಿಸತೊಡಗುತ್ತಾರೆ.

ವಿಶ್ವದ ನಾನಾ ಭಾಗಗಳಲ್ಲಿ ತರಹೇವಾರಿ ಮೇಳಗಳು ನಡೆಯುವುದನ್ನು ಎಲ್ಲರೂ ನೋಡಿದ್ದೇವೆ. ಆದರೆ ಜರ್ಮನಿಯಲ್ಲಿಂದು ವಿಶಿಷ್ಟವಾದ ಮೇಳ ನಡೆಯುತ್ತದೆ. ಅದು ಚುಂಬನ ಮೇಳ! ಹೌದು, ನಾವು 21ನೇ ಶತಮಾನದಲ್ಲಿ ಜೀವಿಸುತ್ತಿದ್ದೇವೆ. ಚುಂಬನ ಅನೇಕ ದೇಶಗಳಲ್ಲಿ ಮುಕ್ತ. ರೋಮನ್ ಕ್ಯಾಥೋಲಿಕ್ ರಾಷ್ಟ್ರಗಳಲ್ಲಿ ಮುಕ್ತ ಮುಕ್ತ. ಜರ್ಮನಿಯಲ್ಲಿ ಪ್ರತಿ ವರ್ಷ ಆಲ್‌ಮ್ಯಾನಕ್ ಕಾರ್ನಿವಲ್ ಜರುಗುತ್ತದೆ. ಮೆರವಣಿಗೆ, ಸಂಗೀತ, ನೃತ್ಯದೊಂದಿಗೆ ನಡೆಯುವ ಈ ಹಬ್ಬದಲ್ಲಿ ಲಿಂಗಭೇದ, ಕಟ್ಟಳೆಗಳಿಲ್ಲದೆ ಗಂಡು-ಹೆಣ್ಣು ಪರಸ್ಪರ ಮೋಜಿನಲ್ಲಿ ತೊಡಗುತ್ತಾರೆ. ಸಾಂಪ್ರದಾಯಿಕ ಆಚರಣೆಗಳ ನಂತರ ಗಂಡು ಅಲ್ಲಿರುವ ಯಾವುದೇ ವಯೋಮಾನದ, ಹೆಣ್ಣಿಗೆ ಮುತ್ತಿಡಬಹುದು. ರೋಸೆನ್‌ಮಾಂಟಕ್ ಮತ್ತು ವಾನ್ ಸೇರಿದಂತೆ ಜರ್ಮನಿಯ ನಗರಗಳಲ್ಲಂತೂ ಚುಂಬನ ಮೇಳಗಳು ರೋಮಾಂಚನಕಾರಿಯಾಗಿರುತ್ತವೆ.

ರೈನ್‌ಲ್ಯಾಂಡ್‌ನಲ್ಲಿರುವ ಜರ್ಮನ್ ಹುಡುಗಿಯರ ಚುಂಬನ ವಾರ್ತೆಗಳಂತೂ ಜಗತ್ತಿನಾದ್ಯಂತ ಹಬ್ಬಿವೆ. ಧಾರ್ಮಿಕ ಹಿನ್ನೆಲೆಯ ವಾರ್ಷಿಕ ಮೇಳದ ಸಂದರ್ಭ ಅವರು ಯಾರನ್ನಾದರೂ ಮುದ್ದಿಸುವ ಅವಕಾಶ ಪಡೆಯುತ್ತಾರೆ. ನಾಲ್ಕು ದಿನ ಹಗಲು ರಾತ್ರಿ ಅಲ್ಲಿಯ ಜನರೊಂದಿಗೆ ವಿದೇಶಗಳಿಂದ ಬಂದ ಪ್ರವಾಸಿಗರೂ ಈ ಮೋಜು ಮೇಳದಲ್ಲಿ ಪಾಲ್ಗೊಳ್ಳುತ್ತಾರೆ. ಗಂಡಂದಿರು ಮತ್ತು ಹುಡುಗಿಯರ ಸ್ನೇಹಿತರು ಕೂಡಾ ತಮ್ಮ ಪತ್ನಿಯರು ಹಾಗೂ ಗೆಳತಿಯರನ್ನು ಬಿಟ್ಟು ಇತರರ ಮುದ್ದು ಮೋಹ ಪಡೆಯುತ್ತಾರೆ. ಈ ಸ್ವಾತಂತ್ರ್ಯವನ್ನು ಅಲ್ಲಿಯ ಹೆಂಗಸರು ಹಾಗೂ ಹುಡುಗಿಯರು ತತ್ವಶಃ ಬಳಸಿಕೊಳ್ಳುತ್ತಾರೆ. ವಾನ್ ನಗರದಲ್ಲಿ ಈಚೆಗೆ ಇಂತಹ ಮೋಜಿನ ಮೇಳ ನಡೆದಾಗ ಸರ್ಕಾರಿ ಕೆಲಸದಲ್ಲಿರುವ ಸಾವಿರಾರು ಸುಂದರ ಹುಡುಗಿಯರು ಗಂಡಸರ ಕಚೇರಿಗಳಿಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿದರು. ಅವರು ಮಂತ್ರಿಗಳನ್ನು ಕೂಡಾ ಬಿಡಲಿಲ್ಲ. ಗಂಡಸರನ್ನು ಚೆನ್ನಾಗಿ ಚುಂಬಿಸಿದ ಬಳಿಕ ಕತ್ತರಿಗಳನ್ನು ಹೊರತೆಗೆದು ಗಂಡಸರ ನೆಕ್ ಟೈಗಳನ್ನು ಗಂಟಿನ ಕೆಳಗೆ ಕತ್ತರಿಸಿ ಹಾಕಿದರು. ಅದು ಕೂಡಾ ಹಿಂದಿನಿಂದ ನಡೆದು ಬಂದ ಪದ್ಧತಿಯಾಗಿದ್ದು, ಗಂಡಸಿನ ಮೇಲೆ ಹೆಣ್ಣಿನ ಪ್ರಭುತ್ವವನ್ನು ಅದು ಸೂಚಿಸುತ್ತದೆ.

ಕೊಲೋನ್‌ನಲ್ಲಿ ಮೋಜಿನ ಮೇಳ ಇನ್ನೂ ವ್ಯಾಪಕವಾಗಿದೆ. ಬೀದಿಗಳು, ನೃತ್ಯ ಭವನಗಳು ಮುಂತಾದ ಕಡೆಯೆಲ್ಲಾ ಚುಂಬನ ಮಹಾಪೂರವಾಗುತ್ತದೆ. ಗಂಡಸರು ನಿಂತು ಚುಂಬನ ಸ್ವೀಕರಿಸಬೇಕೆಂದೂ ಇಲ್ಲವಾದಲ್ಲಿ ಪರಿಣಾಮ ಹೆದರಿಸಬೇಕೆಂದು ಕೂಗುತ್ತಾ ಹೆಂಗಸರು ಗುಂಪುಗಳಲ್ಲಿ ಗಂಡಸರನ್ನು ಅಟ್ಟಿಸಿಕೊಂಡು ಹೋಗುತ್ತಿರುತ್ತಾರೆ. ಪೊಲೀಸರು ಅವರನ್ನು ಬಿಡಿಸಲು ಮಧ್ಯಪ್ರವೇಶಿಸಿದರೆ ಹುಡುಗಿಯರು ಅವರನ್ನೂ ಸುತ್ತುಗಟ್ಟಿ ಚುಂಬಿಸತೊಡಗುತ್ತಾರೆ.

ಕಳೆದ ಎರಡು ವರ್ಷ ಮಾರಕ ಕೊರೊನಾ ಜಗತ್ತಿಗೆ ವಕ್ಕರಿಸಿದ ಪರಿಣಾಮ ವೈರಸ್ ಹಬ್ಬುವ ಕಾರಣಕ್ಕೆ ಇಂತಹ ಆಚರಣೆಗಳಿಗೆ ಬ್ರೇಕ್ ಹಾಕಲಾಗಿತ್ತು. ಈಗ ಮತ್ತೆ ಆರಂಭವಾಗಿದ್ದು ಗಂಡಸರು ಚುಂಬನ ಸುಖವನ್ನು ನೆನೆದು ಮನಸ್ಸಲ್ಲೇ ಮಂಡಿಗೆ ತಿನ್ನುವಂತಾಗಿದೆ.
