21.9 C
Bengaluru
Monday, March 20, 2023
spot_img

ರಫೆಲ್ ಫ್ರಿಲ್ ಡ್ರೆಸ್ ಕಾಂಬಿನೇಷನ್ ಉಡುಪು ಟ್ರೆಂಡ್

-ಶೌರ್ಯ ಡೆಸ್ಕ್

ಮಾನೋಕ್ರೋಮ್‌ನಲ್ಲೂ ಟ್ರೆಂಡಿಯಾಗಿರುವ ರಫೆಲ್ ಹಾಗೂ ಫ್ರಿಲ್ ವಿನ್ಯಾಸದ ಕಾಸ್ಟೂಮ್‌ಗಳು ಸಾಕಷ್ಟು ಬಂದು ಹೋಗಿವೆ. ತಾರೆಯರು ಕೂಡ ಡಿಫರೆಂಟ್ ವಿನ್ಯಾಸದ ಊಹೆಗೂ ನಿಲುಕದ ಮಟ್ಟಿಗೆ ರಫೆಲ್ಸ್ ಹಾಗೂ ಫ್ರಿಲ್ ಕಾಂಬಿನೇಷನ್‌ನ ಡಿಸೈನ್‌ಗಳ ಪ್ರಯೋಗ ಮಾಡಿದ್ದಾರೆ.

ಫ್ರಿಲ್ ಹಾಗೂ ರಫೆಲ್ ಕಾಂಬಿನೇಷನ್‌ನ ಉಡುಪುಗಳು ಇತ್ತೀಚಿನ ಕಾಲದಲ್ಲಿ ಟ್ರೆಂಡಿಯಾಗಿವೆ. ನೋಡಲು ರೆಕ್ಕೆಪುಕ್ಕದಂತೆ ನಿಲ್ಲುವ ರಫೆಲ್ಸ್ ಇಲ್ಲವೇ ಹಾಗೆಯೇ ಸ್ಲೊಪಿಯಾಗಿ ಕಾಣುವ ಫ್ರಿಲ್ ಡ್ರೆಸ್‌ಗಳು ಹೆಚ್ಚು ಬೇಡಿಕೆಯಲ್ಲಿವೆ.

ಸೀದಾ ಸಾದಾ ಉಡುಪುಗಳಿಗೆ ಲುಕ್ ನೀಡುವ ರಫೆಲ್ಸ್ ಹಾಗೂ ಫ್ರಿಲ್ ವಿನ್ಯಾಸ ಇಡೀ ಡ್ರೆಸ್‌ನ ಡಿಸೈನ್‌ನ ಮೂಲ ವಿನ್ಯಾಸವನ್ನೇ ಬದಲಿಸಿದೆಯೇನೋ ಎಂದೆನಿಸುತ್ತದೆ. ಆದರೆ ಸ್ಟಿಚ್ಚಿಂಗ್ ಹಾಗೂ ಅದನ್ನು ಜೋಡಿಸುವ ಟೆಕ್ನಿಕ್ ಮಾತ್ರ ಅದೇ ಉಳಿದಿರುತ್ತದೆ ಎನ್ನುತ್ತಾರೆ ವಿನ್ಯಾಸಗಾರರು.

ನೋಡಿದಾಗ ತಕ್ಷಣಕ್ಕೆ ಪ್ಲೀಟ್ಸ್ನಂತೆ ಕಾಣುವ ಮಾರುದ್ದದ ರಫೆಲ್ಸ್, ಪುಕ್ಕದಂತಿರುವ ಶೋಲ್ಡರ್ ಸೈಡ್ ರಫೆಲ್ಸ್, ವೇಸ್ಟ್ಲೈನ್‌ಗೆ ಅಂಟಿಕೊಂಡಂತಿರುವ ರಫೆಲ್ಸ್ ವಿನ್ಯಾಸಗಳು ಇಂದು ಡಿಸೈನರ್ ವೇರ್‌ನ ವಿನ್ಯಾಸಗಳನ್ನೇ ಬದಲಿಸಿದೆ. ಅಂದಹಾಗೆ, ಫ್ರಿಲ್ ಹಾಗೂ ರಫೆಲ್ ಡಿಸೈನ್ ಬಳಸುವುದು ಹೊಸತಲ್ಲ. ಆದರೆ ಇವೆರಡು ಒಟ್ಟಿಗೆ ಕಾಂಬಿನೇಷನ್‌ನಲ್ಲಿ ಬಿಡುಗಡೆಗೊಳ್ಳುತ್ತಿರುವುದು ಪ್ರಯೋಗಾತ್ಮಕ ಉಡುಪುಗಳಿಗೆ ನಾಂದಿ ಹಾಡಿದೆ.

ರೆಡ್‌ಕಾರ್ಪೆಟ್‌ನಲ್ಲೂ ಡಿಸೈನ್

ಗೌನ್‌ನಿಂದ ಹಿಡಿದು ಸಾಮಾನ್ಯ ಬಾಡಿಕಾನ್ ಫ್ರಾಕ್‌ಗಳಿಗೂ ಇದೀಗ ರಫೆಲ್ ಹಾಗೂ ಫ್ರಿಲ್ ಕಾಂಬಿನೇಷನ್ ಇರುವ ಉಡುಪುಗಳು ಕಾಮನ್ ಆಗಿವೆ. ಸಿಲೆಬ್ರಿಟಿಗಳು ಕೂಡ ಕಂಪ್ಲೀಟ್ ಡಿಫರೆಂಟ್ ಲುಕ್ ನೀಡಲು ರೆಡ್ ಕಾರ್ಪೆಟ್‌ನಲ್ಲೂ ಮಿನಿಮಲ್ ಕಾಂಬಿನೇಷನ್ ಇರುವಂತದ್ದನ್ನು ಧರಿಸುತ್ತಿದ್ದಾರೆ. ಇದು ಪೇಜ್ 3 ಹಾಗೂ ಹಾಲಿವುಡ್ ತಾರೆಯರ ನೆಚ್ಚಿನ ವಿನ್ಯಾಸಗಳಾಗಿರುವುದರಿಂದ ಸಾಕಷ್ಟು ಟೀನೇಜ್ ಹುಡುಗಿಯರನ್ನು ಇವು ಆಕರ್ಷಿಸುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್.

ಇಲ್ಯೂಷನ್ ಕ್ರಿಯೆಟ್ ಮಾಡುವ ಡಿಸೈನ್ಸ್

ತೀರಾ ಸ್ಲಿಮ್ ಆಗಿರುವವರಿಗೆ ಇದು ಬೆಸ್ಟ್ ಡ್ರೆಸ್. ಪರ್ಫೆಕ್ಟ್ ಅಲ್ಲದ ಬಾಡಿ ಮಾಸ್ ಇಂಡೆಕ್ಸ್ ಹೊಂದಿರುವವರಿಗೂ ಇದು ಹೇಳಿ ಮಾಡಿಸಿದ ಡ್ರೆಸ್. ರಫೆಲ್ಸ್ ಹಾಗೂ ಫ್ರಿಲ್ ಡಿಸೈನ್ ಇತರೆ ಡಿಸೈನ್‌ಗಳಂತೆ ಬಾಡಿ ಮಾಸ್ ಇಂಡೆಕ್ಸ್ಗೆ ತಕ್ಕಂತಿರುವುದಿಲ್ಲ. ನೋಡಲು ಇದು ಫಿಟ್ ಆಗಿ ಕಂಡರೂ ಕೆಲವೆಡೆ ಹರಡಿಕೊಂಡಿರುತ್ತದೆ.

ಪರ್ಸನಾಲಿಟಿಗೆ ತಕ್ಕಂತೆ ಚೂಸ್ ಮಾಡಿ

ಟ್ರೆಡಿಷನಲ್ ಎಥ್ನಿಕ್ ಸ್ಟೈಲ್‌ಗೆ ಹೊಂದುವ ಹುಡುಗಿಯರಿಗೆ ರಫೆಲ್ಸ್ ವಿನ್ಯಾಸ ತಕ್ಷಣಕ್ಕೆ ಸೂಟ್ ಆಗದು. ಅಂತಹವರು ಫ್ರಿಲ್‌ಗಳ ವಿನ್ಯಾಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬಹುದು. ಟ್ರಡಿಷನಲ್ ಹಾಗೂ ವೆಸ್ಟರ್ನ್ ಸ್ಟೈಲ್ ಎರಡೂ ಹೊಂದುವವರಿಗೆ ತಲೆ ಬಿಸಿಯಿಲ್ಲ. ಅವರವರ ಸ್ಟೈಲ್ ಸ್ಟೇಟ್‌ಮೆಂಟ್ ಜತೆಗೆ ಡ್ರೆಸ್ಸಿಂಗ್ ಸೆನ್ಸ್ ಕೂಡ ಹೊಂದುವುದು ಅಗತ್ಯ. ಬಾಡಿ ಮಾಸ್ ಇಂಡೆಕ್ಸ್ಗೆ ಸೂಟ್ ಆಗುವಂತಹ ಫ್ರಿಲ್ ಹಾಗೂ ಕಾಂಬಿನೇಷನ್ ಇರುವ ರಫೆಲ್ಸ್ ಉಡುಪುಗಳನ್ನು ಆಯ್ಕೆ ಮಾಡಿ. ರೆಡಿ ಟು ವೇರ್ ರಫೆಲ್ ಹಾಗೂ ಫ್ರಿಲ್ ಡಿಸೈನ್ ಉಡುಪುಗಳು ಟ್ರೆಂಡಿಯಾಗಿರುತ್ತವೆ. ಗೌನ್ ಆದಲ್ಲಿ ಆದಷ್ಟೂ ಫಿಟ್ ಆಗಿ ಕೂರುತ್ತದೆಯೇ ಎಂಬುದನ್ನು ಗಮನಿಸಬೇಕು. ಫ್ರಾಕ್‌ಗಳಾದಲ್ಲಿ ನೋ ಪ್ರಾಬ್ಲಂ. ಪ್ಲಂಪಿಯಾಗಿರುವವರು ಆದಷ್ಟೂ ಮತ್ತಷ್ಟು ಅಗಲವಾಗಿ ಕಾಣುವಂತಹ ಡ್ರೆಸ್ ಬೇಡ ಎನ್ನುತ್ತಾರೆ ವಸ್ತ್ರವಿನ್ಯಾಸಕಿ ಪಲ್ಲವಿ.

ಮಾನೋಕ್ರೋಮ್‌ನಲ್ಲೂ ಟ್ರೆಂಡಿಯಾಗಿರುವ ಈ ವಿನ್ಯಾಸ ನಟಿಯರಿಗೂ ಅಚ್ಚುಮೆಚ್ಚಾಗಿದೆ. ಹಾಲಿವುಡ್ ಹಾಗೂ ಬಾಲಿವುಡ್‌ನಲ್ಲಿ ರಫೆಲ್ ಹಾಗೂ ಫ್ರಿಲ್ ವಿನ್ಯಾಸದ ಕಾಸ್ಟೂಮ್‌ಗಳು ಸಾಕಷ್ಟು ಬಂದು ಹೋಗಿವೆ. ತಾರೆಯರು ಕೂಡ ಡಿಫರೆಂಟ್ ವಿನ್ಯಾಸದ ಊಹೆಗೂ ನಿಲುಕದ ಮಟ್ಟಿಗೆ ರಫೆಲ್ಸ್ ಹಾಗೂ ಫ್ರಿಲ್ ಕಾಂಬಿನೇಷನ್‌ನ ಡಿಸೈನ್‌ಗಳ ಪ್ರಯೋಗ ಮಾಡಿದ್ದಾರೆ. ಅದರಲ್ಲೂ ಸೋನಂ ಕಪೂರ್, ದಿಶಾ, ರಾಧಿಕಾ ಆಪ್ಟೆ, ಪ್ರಿಯಾಂಕಾ ಚೋಪ್ರಾ, ಸೋನಾಕ್ಷಿ ಹೀಗೆ ಸಾಕಷ್ಟು ಬಾಲಿವುಡ್ ತಾರೆಯರು ಈ ಕಾಂಬಿನೇಷನ್‌ನ ಉಡುಪುಗಳನ್ನು ಧರಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles