ಬೆಂಗಳೂರು ದಕ್ಷಿಣದ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧೆ?
-ಜಿ. ಅರುಣ್‌ಕುಮಾರ್
ಅಣ್ಣಾವ್ರು ಬಣ್ಣ ಹಚ್ಚೋ ಮಂದಿ ರಾಜಕೀಯಕ್ಕೆ ಬರಬಾರದು ಅನ್ನೋ ಧೋರಣೆ ಹೊಂದಿದ್ದರು ನಿಜ. ಆದರೆ, ಲೀಡರ್ ಶಿಪ್ ಕ್ವಾಲಿಟಿಯನ್ನು ಪಾರ್ವತಮ್ಮನವರಿಗೆ ಕಲಿಸಿ, ಅವರನ್ನು ನಿರ್ಮಾಪಕಿಯನ್ನಾಗಿ ಮಾಡಿದರು. ಆ ಮೂಲಕ ಸಾವಿರಾರು ಕುಟುಂಬಕ್ಕೆ ಅನ್ನದಾತೆಯಾಗುವ ಅಪೂರ್ವ ಅವಕಾಶ ಮತ್ತು ಸ್ವಾತಂತ್ರ್ಯವನ್ನು ಕೊಟ್ಟಿದ್ದರು. ಸ್ವತಃ ಪಾರ್ವತಮ್ಮನವರಲ್ಲೂ ಸಹ ಅಂಥದೊಂದು ನಾಯಕತ್ವ ಗುಣ ಇತ್ತು… ಆದರೆ ಅವರು ಯಾವತ್ತೂ ರಾಜಕೀಯದ ಕಡೆ ಮುಖ ಮಾಡಲಿಲ್ಲ… ಅಂತೆಯೇ ಪುನೀತ್ ಅವರಿಗೂ ಸಾಕಷ್ಟು ರಾಜಕೀಯ ಆಫರ್ಸ್ ಬಂದಿದ್ದವು. ನಾನು ಕಲಾವಿದನಾಗಿಯೇ ಇರುತ್ತೇನೆ ಎಂದು ನಯವಾಗಿ ಅವನ್ನೆಲ್ಲಾ ತಿರಸ್ಕರಿಸಿದ್ದರು. ಹಾಗಂತ ಅಶ್ವಿನಿ ಅವರು ಬರುವುದರಿಂದ ಯಾವುದೇ ನಷ್ಟವಂತೂ ಇಲ್ಲ…

ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ರಾಜಕೀಯ ರಂಗಕ್ಕೆ ಪ್ರವೇಶ ಮಾಡಲಿದ್ದಾರಾ? ಇಂಥದ್ದೊಂದು ಪ್ರಶ್ನೆಗೆ ಹೌದು ಹೌದು ಅನ್ನುತ್ತಿದೆ ಮೂಲ!
ಒಂದು ವೇಳೆ ಎಂಟ್ರಿ ಆದರೂ ಅದರಲ್ಲಿ ತಪ್ಪೇನಿದೆ ಹೇಳಿ? ಈಗಾಗಲೇ ದೊಡ್ಮನೆಯ ದೊಡ್ಡ ಸೊಸೆ ಗೀತಾ ಶಿವರಾಜ್ ಕುಮಾರ್ ಅವರು ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು ಗೊತ್ತೇ ಇದೆ. ಅದೇ ರೀತಿ ಅಶ್ವಿನಿ ಮೇಡಮ್ ಕೂಡ ಜನಸೇವೆ ಮಾಡುವ ಉದ್ದೇಶದಿಂದ ಪಾಲಿಟಿಕ್ಸ್ಗೆ ಬರುವ ಮನಸ್ಸು ಮಾಡಿರಬಹುದು.
ಸಾಕಷ್ಟು ಯೋಚಿಸಿ ಅಶ್ವಿನಿ ಅವರು ಇಂಥದೊಂದು ಮಹಾನ್ ತೀರ್ಮಾನಕ್ಕೆ ಮುಂದಾಗಿದ್ದಾರಂತೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಕಣಕ್ಕಿಳಿಯುವ ಯೋಜನೆ ಹೊಂದಿದ್ದು, ಈ ಬಗ್ಗೆ ಅವರು ಅತೀ ಶೀಘ್ರದಲ್ಲೇ ಒಂದು ದೃಢ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದು ಮೂಲದ ಪ್ರಕಾರ ಬಿಜೆಪಿ ವತಿಯಿಂದಲೇ ಅವರಿಗೆ ಟಿಕೆಟ್ ಕೊಡುವ ಬಗ್ಗೆ ದೊಡ್ಡ ಮಟ್ಟದ ಆಂತರಿಕ ಚರ್ಚೆ ನಡೆಯುತ್ತಿದೆಯಂತೆ. ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಅವರನ್ನು ಕಣಕ್ಕಿಳಿಸುವ ಬಗ್ಗೆ ರಾಷ್ಟ್ರೀಯ ನಾಯಕರ ವಲಯದಲ್ಲೂ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ!

ಎಲ್ಲಕ್ಕಿಂತ ಹೆಚ್ಚಾಗಿ ಅಪ್ಪು ಅವರಂತೆಯೇ ಅಶ್ವಿನಿ ಕೂಡಾ ಸೇವಾಮನೋಭಾವ ಹೊಂದಿದ್ದಾರೆ. ಪುನೀತ್ ಅವರ ಕನಸು ನನಸು ಮಾಡಬೇಕು ಎನ್ನುವುದು ಅವರ ಉದ್ದೇಶ. ಸುಮಲತಾ ಅಂಬರೀಷ್ ಅವರಂತೇ ಅಶ್ವಿನಿ ಅವರೂ ಮುಂದೊಂದು ದಿನ ದೇಶಮಟ್ಟದಲ್ಲಿ ಜನಸೇವೆ ಯಾಕೆ ಮಾಡಬಾರದು? ಅನ್ನೋದು ಹಲವರ ಅಭಿಪ್ರಾಯ.
ಎಲ್ಲಕ್ಕಿಂತ ಹೆಚ್ಚಾಗಿ ಅಪ್ಪು ಅವರ ಆದರ್ಶಗಳು, ಸೇವಾಗುಣಗಳು ಜನಕ್ಕೆ ಇವತ್ತಿಗೂ ಆದರ್ಶಪ್ರಾಯ. ಅವರ ಆ ಧ್ಯೇಯ ಇನ್ನೂ ದೊಡ್ಡ ಪ್ರಮಾಣದಲ್ಲಿ ತಲುಪಬೇಕು ಎಂದಾದರೆ ಅಶ್ವಿನಿ ಮೇಡಮ್ ಜನಸೇವೆಯ ಅತೀ ದೊಡ್ಡ ವೇದಿಕೆಯಾಗಿರುವ ರಾಜಕೀಯ ರಂಗಕ್ಕೆ ಬರಬೇಕು. ಅಂಥದೊಂದು ದಿವ್ಯ ಉದ್ದೇಶವೇನಾದರೂ ಇದ್ದು, ಅಶ್ವಿನಿ ಅವರು ಮನಸ್ಸು ಮಾಡಿದರೆ ಖಂಡಿತ ಅವರು ಗೆಲ್ಲುತ್ತಾರೆ. ಅಪ್ಪು ಆಶೀರ್ವಾದ ಸದಾ ಅವರ ಮೇಲಿರುತ್ತದೆ!

ಹಾಗೆ ನೋಡಿದರೆ, ಅಣ್ಣಾವ್ರು ಬಣ್ಣ ಹಚ್ಚೋ ಮಂದಿ ರಾಜಕೀಯಕ್ಕೆ ಬರಬಾರದು ಅನ್ನೋ ಧೋರಣೆ ಹೊಂದಿದ್ದರು ನಿಜ. ಆದರೆ, ಲೀಡರ್ ಶಿಪ್ ಕ್ವಾಲಿಟಿಯನ್ನು ಪಾರ್ವತಮ್ಮನವರಿಗೆ ಕಲಿಸಿ, ಅವರನ್ನು ನಿರ್ಮಾಪಕಿಯನ್ನಾಗಿ ಮಾಡಿದರು. ಆ ಮೂಲಕ ಸಾವಿರಾರು ಕುಟುಂಬಕ್ಕೆ ಅನ್ನದಾತೆಯಾಗುವ ಅಪೂರ್ವ ಅವಕಾಶ ಮತ್ತು ಸ್ವಾತಂತ್ರ್ಯವನ್ನು ಕೊಟ್ಟಿದ್ದರು. ಸ್ವತಃ ಪಾರ್ವತಮ್ಮನವರಲ್ಲೂ ಸಹ ಅಂಥದೊಂದು ನಾಯಕತ್ವ ಗುಣ ಇತ್ತು… ಆದರೆ ಅವರು ಯಾವತ್ತೂ ರಾಜಕೀಯದ ಕಡೆ ಮುಖ ಮಾಡಲಿಲ್ಲ… ಅಂತೆಯೇ ಪುನೀತ್ ಅವರಿಗೂ ಸಾಕಷ್ಟು ರಾಜಕೀಯ ಆಫರ್ಸ್ ಬಂದಿದ್ದವು. ನಾನು ಕಲಾವಿದನಾಗಿಯೇ ಇರುತ್ತೇನೆ ಎಂದು ನಯವಾಗಿ ಅವನ್ನೆಲ್ಲಾ ತಿರಸ್ಕರಿಸಿದ್ದರು. ಹಾಗಂತ ಅಶ್ವಿನಿ ಅವರು ಬರುವುದರಿಂದ ಯಾವುದೇ ನಷ್ಟವಂತೂ ಇಲ್ಲ… ಅತ್ತೆಯವರಂತೇ ಇವರಲ್ಲಿಯೂ ಲೀಡರ್ ಶಿಪ್ ಕ್ವಾಲಿಟಿಗಳಿವೆ. ಈಗಾಗಲೇ ಪುನೀತ್ ಅವರ ಎಲ್ಲಾ ಜವಾವ್ದಾರಿಗಳನ್ನ ಅವರು ಹೊತ್ತಿರುವುದು ಜಗತ್ತಿಗೇ ಗೊತ್ತಾಗಿದೆ… ಅದು ರಾಜಕೀಯ ವೇದಿಕೆಯ ಮೂಲಕ ಇನ್ನಷ್ಟು ವಿಸ್ತಾರಗೊಳ್ಳುತ್ತದೆ ಎನ್ನುವುದಾದರೆ, ಆಗಲಿ ಬಿಡಿ!