30.6 C
Bengaluru
Wednesday, March 15, 2023
spot_img

ಪ್ರೇಮಿಗಳ ಅಗಲಿಸಿ ಪ್ರಿಯಾಂಕ ಛೋಪ್ರಾ ಬಲವಂತವಾಗಿ ನಿಕ್ ಮದುವೆ ಆದಳೇ?

ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್ ಹಳೇ ಪ್ರೇಮ ಪುರಾಣ ಹೊರಬಿದ್ದಿದ್ದು, ಮತ್ತೊಬ್ಬ ಸಮ ವಯಸ್ಸಿನ ಬೆಡಗಿ ಜೊತೆ ಪ್ರೀತಿಯಲ್ಲಿದ್ದ ಆತನನ್ನು ಪ್ರಿಯಾಂಕ ಬಲವಂತದಿಂದ ಮದುವೆ ಆದರೇ? ಎಂಬ ಅನುಮಾನ‌ ಈಗ ವ್ಯಕ್ತವಾಗುತ್ತಿದೆ.

ಪ್ರಿಯಾಂಕ ಮದುವೆ ಆಗುವುದಕ್ಕೂ ಮೊದಲು ನಿಕ್ 2012 ಮಿಸ್ ಯುನಿವರ್ಸ್ ವಿನ್ನರ್ ಒಲಿವಿಯಾ ಕುಲ್ಪೋ ಜತೆ ರಿಲೇಶನ್​ಶಿಪ್​ನಲ್ಲಿದ್ದರು. 2013-2015ರ ಅವಧಿಯಲ್ಲಿ ಇಬ್ಬರೂ ಸುತ್ತಾಟ ನಡೆಸಿದ್ದರು. ಈ ಹಂತದಲ್ಲಿ ನಿಕ್ ನೋಡಿ ಇನ್ನಿಲ್ಲದಂತೆ ಇಷ್ಟಪಟ್ಟಿದ್ದ ಪ್ರಿಯಾಂಕ ತಾನೇ ಆತನಿಗೆ ಪ್ರಪೋಸ್ ಮಾಡಿ, ತನ್ನ ಅಪಾರ ಆಸ್ತಿಯ ಆಮಿಷ ತೋರಿ ಒಲಿವಿಯಾ ಜೊತೆ ನಿಕ್ ಬ್ರೇಕಪ್ ಮಾಡಿಸಿದರೆ ಎಂಬ ವಿಚಾರವೂ ಚರ್ಚೆ ಆಗುತ್ತಿದೆ. ಒಲಿವಿಯಾ ನೀಡಿರುವ ಹೇಳಿಕೆಗಳೇ ಈ ಚರ್ಚೆ ಏಳುವಂತೆ ಮಾಡಿದೆ.‌

ಸಂದರ್ಶನ ಒಂದರಲ್ಲಿ ಒಲಿವಿಯಾಗೆ ಈ ಬಗ್ಗೆ ಪ್ರಶ್ನೆಸಿದಾಗ, ಇದಕ್ಕೆ ಅವರು ಆರಂಭದಲ್ಲಿ ಉತ್ತರಿಸೋಕೆ ಹಿಂಜರಿದರೂ ತನ್ನ ಪ್ರೇಮ ಪ್ರಣಯ ದ ಬಗ್ಗೆ ಹೇಳಿಕೊಂಡಿದ್ದಾರೆ. ‘ಆ ಬಗ್ಗೆ ನಾನು ಮಾತನಾಡಬೇಕಾ’ ಎಂದು ಪ್ರಶ್ನೆ ಮಾಡಿದ ಅವರು ನಂತರ ಒಂದು ಗ್ಯಾಪ್ ತೆಗೆದುಕೊಂಡು ಈ ಬಗ್ಗೆ ಮಾತನಾಡುತ್ತಾ ಹೋಗಿದ್ದಾರೆ. ‘ನಾನು ನಿಕ್ ಜತೆ ಡೇಟ್ ಮಾಡಿದ್ದು ನಿಜ. ಅದೊಂದು ಸುಂದರ ಅನುಭವ. ನಾನು ಲಾಸ್ ಏಂಜಲಿಸ್​ಗೆ ನಿಕ್​ ಜತೆ ತೆರಳಿದ್ದೆ. ನಾನು ಆಗ ಬ್ರ್ಯಾಂಡ್ ಆಗಿರಲಿಲ್ಲ. ಕೈಯಲ್ಲಿ ಹಣ ಇರಲಿಲ್ಲ. ನಾನು ಪ್ರೀತಿಯಲ್ಲಿದ್ದೆ. ಅದು ನಿಜಕ್ಕೂ ಖುಷಿಯ ವಿಚಾರ. ನನ್ನ ಜತೆ ಅವರು ಬ್ರೇಕಪ್ ಮಾಡಿಕೊಂಡಾಗ ನನಗೆ ಗುರುತೇ ಇಲ್ಲ ಅನಿಸಿತು’ ಎಂದಿದ್ದಾರೆ ಅವರು.


ನನ್ನ ಗುರುತೆಲ್ಲ ನಿಕ್ ಆಗಿದ್ದರು. ನಾವಿಬ್ಬರು ಮದುವೆ ಆಗಬೇಕಿತ್ತು. ಆದರೆ, ಹಾಗಾಗಿಲ್ಲ. ಬ್ರೇಕಪ್ ಆದ ನಂತರ ನಾನು ಎಲ್ಲ ವಿಚಾರಗಳನ್ನು ಯೋಚಿಸುತ್ತಾ ರಾತ್ರಿ ಕಳೆಯುತ್ತಿದ್ದೆ. ನನ್ನ ಅಪಾರ್ಟ್​ಮೆಂಟ್​ನ ಬಾಡಿಗೆ ಕಟ್ಟಲೂ ನನ್ನ ಬಳಿ ಹಣ ಇರಲಿಲ್ಲ. ದಿನಸಿ ತರಲೂ ನನ್ನ ಬಳಿ ಹಣ ಇರಲಿಲ್ಲ, ನಿಕ್ ಅರ್ಧದಾರಿಯಲ್ಲಿ ಬಿಟ್ಟು ಹೋದ’ ಎಂದು ಹೇಳಿದ್ದಾರೆ.
ಬ್ರೇಕಪ್ ಆದ ನಂತರ ಮೊದಲ ಕಷ್ಟವಾಯಿತು. ಆ ಬಳಿಕ ನಾನು ಸ್ಟ್ರಾಂಗ್​ ಆದೆ’ ಎಂದಿದ್ದಾರೆ ಒಲಿವಿಯಾ. ಮಾಡೆಲ್ ಆಗಿ, ನಟಿಯಾಗಿ ಒಲಿವಿಯಾ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ನಿಕ್ ಹಾಗೂ ಪ್ರಿಯಾಂಕಾ ಚೋಪ್ರಾ ಮದುವೆ ಆದರು. ಇದಕ್ಕೂ ಮುನ್ನ ಒಲಿವಿಯಾ ಜತೆ ನಿಕ್ ಗೆ ಪ್ರೇಮವಿತ್ತು.


ಆ ನಂತರ ಜೋನಾಸ್ ಗೆ ಪ್ರಿಯಾಂಕಳೇ ಪ್ರಪೋಸ್ ಮಾಡಿ ಡೇಟಿಂಗ್ ಪ್ರಾರಂಭಿಸಿದರು. 19 ಜುಲೈ 2018 ರಂದು , ಗ್ರೀಸ್‌ನ ಕ್ರೀಟ್‌ನಲ್ಲಿ ಅವರ ಜನ್ಮದಿನದ ನಂತರ ಜೋನಾಸ್ ಅವರಿಗೆ ಪ್ರೇಮ ನಿವೇದನೆ ಮಾಡಿದರು.‌ ಸಂಪತ್ತು ಮತ್ತು ಆಕೆಯ ಸ್ಟಾರ್ ಡಮ್ ಕಾರಣಕ್ಕೆ ಆತ ಒಲಿವಿಯಾ ತ್ಯಜಿಸಿ ಪ್ರಿಯಾಂಕ ಜತೆ ಸಂಬಂಧ ಶುರುಮಾಡಿದ.

ತನಗಿಂತ 11 ವರ್ಷ ಚಿಕ್ಕವನು ಹೀಗಾಗಿ ಗಂಡಾಳ್ವಿಕೆ ಮನಸ್ಥಿತಿ ಇರುವುದಿಲ್ಲ ಅಲ್ಲದೆ ಫಿಟ್ ಅಂಡ್ ಫೈನ್ ಇರುವುದರಿಂದ ಸಂತೃಪ್ತ ಲೈಂಗಿಕ ಜೀವನ ಸಾಧ್ಯ. ಮೇಲಾಗಿ ಆತ ಅಮೆರಿಕ ಪ್ರಜೆ ಆಗಿರುವುದರಿಂದ ತನಗೂ ಪೌರತ್ವ ಸಿಗುತ್ತದೆ ಎಂಬ ಕಾರಣಕ್ಕೆ ಪ್ರಿಯಾಂಕ ತಾನೇ ಮುಂದಾಗಿ ನಿಕ್ ಹಿಂದೆ ಬಿದ್ದಳು. ಒಲಿವಿಯಾ ಪ್ರೀತಿ ಬಲಿ ಪಡೆದಳು ಎನ್ನಲಾಗುತ್ತಿದೆ.
ಈಗ ಒಲಿವಿಯಾ ಬಾಯ್ಬಿಟ್ಟಿರುವುದು ಇಂತಹ ಊಹಾಪೋಹಕ್ಕೆ ಕಾರಣವಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles