19.8 C
Bengaluru
Tuesday, March 21, 2023
spot_img

ಉಜ್ಜಯಿನಿಗೆ ಪ್ರಧಾನಿ ಮೋದಿ ಬಂದಿದ್ದರ ಹಿಂದಿನ ರಹಸ್ಯ ಗೊತ್ತೇ?

-ನವರಂಗ್ ಕೊಬ್ಬೆ

ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಯನ್ನು ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಿಂತ ಕೆಲವು ತಿಂಗಳುಗಳ ಹಿಂದೆ ಮಾಡಿದಂತೆಯೇ, ಮಧ್ಯಪ್ರದೇಶದಲ್ಲೂ 2023 ರ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಮುಂಚಿತವಾಗಿ 800 ಕೋಟಿ ರೂ. ಮೊತ್ತದ ಮಹಾಕಾಲ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಲಾಗಿದೆ. ಅಲ್ಲದೆ, 2023-24ರಲ್ಲಿ ಯೋಜನೆಯ ಎರಡನೇ ಮತ್ತು ಅಂತಿಮ ಹಂತವನ್ನು ಪೂರ್ಣಗೊಳಿಸುವುದಾಗಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಭರವಸೆ ನೀಡಿದೆ. ಆದ್ದರಿಂದ ಈ ಬೃಹತ್ ಧಾರ್ಮಿಕ ಯೋಜನೆಯು ಬಿಜೆಪಿ ಸರ್ಕಾರದ ಸಾಧನೆಗಳ ಪಟ್ಟಿಯಲ್ಲಿ ರಾರಾಜಿಸುತ್ತದೆ. ಮತ್ತು ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಿಜೆಪಿಯಿಂದ ಮತ ಸೆಳೆಯುವ ಕಾರ್ಯತಂತ್ರವನ್ನು ಒಳಗೊಂಡಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಮಧ್ಯಪ್ರದೇಶ ಚುನಾವಣೆಗೆ ವರ್ಷವೊಪತ್ತು ಬಾಕಿಯಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತಂದು ಉಜ್ಜಯಿನಿ ಮಹಾಕಾಲ ಕಾರಿಡಾರ್ ಲೋಕಾರ್ಪಣೆ ಮಾಡಿಸಿರುವ ಬಿಜೆಪಿ ಮತ್ತು ಆ ಪಕ್ಷದ ರಾಜಕೀಯ ಚಾಣಾಕ್ಷ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾಜಕೀಯ ಲಾಭ ಎತ್ತಲು ತುದಿಗಾಲ ಮೇಲೆ ನಿಂತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎದುರು ಸೆಣಸಲು ಇನ್ನಿಲ್ಲದ ಕಸರತ್ತು ನಡೆಸಿದ್ದ ಚೌಹಾಣ್ ಅಲ್ಪ ಅಂತರದ ಸ್ಥಾನ ಗಳಿಕೆ ಕೊರತೆಯಿಂದ ಅಧಿಕಾರ ತಪ್ಪಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಬಿಜೆಪಿ ಕೇಂದ್ರ ನಾಯಕತ್ವದ ನೆರವಿನಿಂದ, ಕಾಂಗ್ರೆಸ್ ಒಡಕಿನ ಲಾಭ ಪಡೆದು ಅಧಿಕಾರಕ್ಕೇರಿದ್ದರು. ಈ ಸಲ ಅಂತಹ ಪರಿಸ್ಥಿತಿಯನ್ನು ತಂದುಕೊಳ್ಳುವುದು ಬೇಡ ಎಂಬ ಕಾರ್ಯತಂತ್ರ ಭಾಗವಾಗಿ ಜನರನ್ನು ಸೆಳೆಯುವ ಧಾರ್ಮಿಕ ಅಭಿವೃದ್ಧಿ ಮೊರೆ ಹೋಗಿ, ಅದರ ಭಾಗವಾಗಿ ಮಹಾಕಾಲ ಕಾರಿಡಾರ್ ಯೋಜನೆಯನ್ನು ಮುಗಿಸಿ ಉದ್ಘಾಟನೆ ಮಾಡಿಸಿರುವುದು ಗಮನಸೆಳೆಯುತ್ತಿದೆ. ರಾಜಕೀಯ ವಿಶ್ಲೇಷಣೆಗೆ ಒಳಪಡುತ್ತಿದೆ.

ಉಜ್ಜಯಿನಿಯ ಪೂಜ್ಯ ಮಹಾಕಾಲ್ ದೇವಾಲಯದ ಸುತ್ತ `ಮಹಾಕಾಲ ಲೋಕ’ ಯೋಜನೆಯನ್ನು ಕಳೆದ ಮಂಗಳವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಮೊದಲ ಹಂತವನ್ನು ಮಧ್ಯಪ್ರದೇಶ ಸರ್ಕಾರ ಉತ್ತರ ಪ್ರದೇಶದ ಕಾಶಿ ವಿಶ್ವನಾಥ ಕಾರಿಡಾರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿದೆ.

ಕಾಶಿ ವಿಶ್ವನಾಥ್ ಕಾರಿಡಾರ್ ಉದ್ಘಾಟನೆಯನ್ನು ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಿಂತ ಕೆಲವು ತಿಂಗಳುಗಳ ಹಿಂದೆ ಮಾಡಿದಂತೆಯೇ, ಮಧ್ಯಪ್ರದೇಶದಲ್ಲೂ 2023 ರ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಮುಂಚಿತವಾಗಿ 800 ಕೋಟಿ ಯೋಜನೆಯ ಮಹಾಕಾಲ ಕಾರಿಡಾರ್ ಮೊದಲ ಹಂತವನ್ನು ಉದ್ಘಾಟಿಸಲಾಗಿದೆ.

ಅಲ್ಲದೆ, 2023-24ರಲ್ಲಿ ಯೋಜನೆಯ ಎರಡನೇ ಮತ್ತು ಅಂತಿಮ ಹಂತವನ್ನು ಪೂರ್ಣಗೊಳಿಸುವುದಾಗಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಭರವಸೆ ನೀಡಿದೆ. ಆದ್ದರಿಂದ ಈ ಬೃಹತ್ ಧಾರ್ಮಿಕ ಯೋಜನೆಯು ಬಿಜೆಪಿ ಸರ್ಕಾರದ ಸಾಧನೆಗಳ ಪಟ್ಟಿಯಲ್ಲಿ ರಾರಾಜಿಸುತ್ತದೆ. ಮತ್ತು ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಿಜೆಪಿಯಿಂದ ಮತ ಸೆಳೆಯುವ ಕಾರ್ಯತಂತ್ರವನ್ನು ಒಳಗೊಂಡಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಬಿಜೆಪಿ ಕಾರ್ಯತಂತ್ರದ ಸುಳಿವು ಹಿಡಿದಿರುವ ಕಾಂಗ್ರೆಸ್ ಕಮಲ್ ನಾಥ್ ನೇತೃತ್ವದ ಸರ್ಕಾರವು 2019 ರಲ್ಲಿ ಯೋಜನೆಯನ್ನು ಪ್ರಾರಂಭಿಸಿತು ಮತ್ತು ಅದನ್ನು ರೂಪಿಸಲು ಕ್ರಮಗಳನ್ನು ಕೈಗೊಂಡಿದೆ ಎಂದು ಎದೆತಟ್ಟಿ ಹೇಳಿಕೊಳ್ಳುತ್ತಿದೆ. 2019ರ ಆಗಸ್ಟ್ ನಲ್ಲಿ ನಾಥ್ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದ್ದು, ಮಹಾಕಾಲ್ ದೇವಸ್ಥಾನದ ಅಭಿವೃದ್ಧಿಗಾಗಿ 300 ಕೋಟಿ ರೂ.ಗಳ ಮೊದಲ ಹಂತದ ಯೋಜನೆಯ ವಿವರಗಳನ್ನು ಸಂಪುಟ ಸದಸ್ಯರು ಮತ್ತು ಅರ್ಚಕರ ಮುಂದೆ ಇಡಲಾಗಿತ್ತು ಎಂದು ವಿರೋಧ ಪಕ್ಷದ ನಾಯಕ ಗೋವಿಂದ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡು ಬಿಜೆಪಿಯೊಂದೇ ಮಹಾಕಾಲ್ ಕಾರಿಡಾರ್ ಲಾಭ ಎತ್ತುವುದಕ್ಕೆ ನಾವು ಬಿಡುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಜತೆಗೆ ಬಿಜೆಪಿ ಸರ್ಕಾರವು ಸುಳ್ಳು ಹೇಳಿ ಕ್ರೆಡಿಟ್ ತೆಗೆದುಕೊಳ್ಳಲು ಯತ್ನಿಸುತ್ತಿದೆ ಎಂದು ಸ್ವತಃ ಕಮಲ್ ನಾಥ್ ಪದೇ ಪದೇ ಆರೋಪಿಸಿದ್ದಾರೆ. ಈ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವೇ ಆರಂಭಿಸಿದ್ದು ಎಂಬುದಕ್ಕೆ ಸರ್ಕಾರದ ಕಡತಗಳೇ ಸಾಕ್ಷಿಯಾಗಲಿವೆ ಎಂದಿದ್ದಾರೆ.

ಈ ಮಧ್ಯೆಯೇ ಬಿಜೆಪಿ ಸರ್ಕಾರವು ‘ಮಹಾಕಾಲ ಲೋಕ’ ಯೋಜನೆಯ ಉದ್ಘಾಟನೆಯನ್ನು ಹಬ್ಬ, ಧಾರ್ಮಿಕ ಸಂಭ್ರಮದ ಟಚ್ ನೀಡಿ ನೆರವೇರಿಸಿದೆ. ಯೋಜನೆಯನ್ನು ಉದ್ಘಾಟಿಸುವ ಮೊದಲು ಪ್ರಧಾನಿ ಮೋದಿ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಿದ್ದೂ ಮತ್ತು ನಂತರ ಉಜ್ಜಯಿನಿಯ ಕಾರ್ತಿಕ್ ಮೇಳ ಮೈದಾನದಲ್ಲಿ ಸುಮಾರು 60,000 ಜನರನ್ನು ಉದ್ದೇಶಿಸಿ ಮಾತನಾಡಿರುವುದೂ ಬಿಜೆಪಿಗೆ ಬೂಸ್ಟ್ ನೀಡುವ ಭಾಗವಾಗಿದೆ.

ಧಾರ್ಮಿಕ ಭಾವನೆ ಬಿತ್ತಿ ಬೆಳೆ ತೆಗೆಯುವ ಪ್ರಯತ್ನವೇ?

ಬಿಜೆಪಿ ಧಾರ್ಮಿಕ ಭಾವನೆಗಳನ್ನು ಬಲವಾಗಿ ಬಿತ್ತಿ ಹುಲುಸಾದ ಬೆಳೆ ತೆಗೆಯುತ್ತದೆ ಎಂಬುದಕ್ಕೆ ಅನೇಕ ಮಾದರಿಗಳು ಕಾಣಸಿಗುತ್ತವೆ. ಕಾಶಿ ಕಾರಿಡಾರ್ ಯೋಜನೆ ಉತ್ತರಪ್ರದೇಶದಲ್ಲಿ ಆ ಪಕ್ಷಕ್ಕೆ ಬಲ ತಂದಿದ್ದು ಸತ್ಯ. ಅಲಹಾಬಾದ್ ಹೆಸರು ಬದಲಾವಣೆ, ಅದ್ದೂರಿ ಕುಂಭಮೇಳ ಹೀಗೆ ಧಾರ್ಮಿಕ ದಾಳಗಳೆಲ್ಲವೂ ಬಿಜೆಪಿಗೆ ರಾಜಕೀಯ ಲಾಭ ತಂದಿರುವುದು ದಿಟ. ಹೀಗಿರುವಾಗಲೇ ಮಧ್ಯಪ್ರದೇಶದಲ್ಲೂ ಇದೇ ಪ್ರಯೋಗ ನಡೆದಿದೆ. ನ ಭೂತೋ ನ ಭವಿಷ್ಯತಿ ಎಂಬಂತೆ ಮಹಾಕಾಲ ಕಾರಿಡಾರ್ ಉದ್ಘಾಟನೆಯಾಗಿದೆ.

ಹೇಗಿತ್ತು ಸಂಭ್ರಮ?

ಇಂದೋರ್ ನಿಂದ ಉಜ್ಜಯಿನಿಯವರೆಗಿನ ಸಂಪೂರ್ಣ ಮಾರ್ಗವನ್ನು ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಉಜ್ಜಯಿನಿಯಾದ್ಯಂತ ದೀಪಗಳನ್ನು ಬೆಳಗಿಸಲಾಗಿತ್ತು. ಅಲ್ಲದೆ, ರಾಜ್ಯದಾದ್ಯಂತ ದೇವಾಲಯಗಳು, ನದಿ ದಡಗಳು ಮತ್ತು ಮನೆಗಳಲ್ಲಿ ಧಾರ್ಮಿಕ ವಿಧಿವಿಧಾನಗಳು, ಭಕ್ತಿಗೀತೆಗಳು, ಶಂಖ ಊದುವಿಕೆ ಮತ್ತು ಘಂಟೆಗಳ ನಾದ ಮತ್ತು ದೀಪಗಳನ್ನು ಬೆಳಗಿಸಲು ವ್ಯವಸ್ಥೆ ಮಾಡಲಾಗಿತ್ತು. ಸಮುದಾಯ ಔತಣಕೂಟಗಳನ್ನು ಆಯೋಜಿಸಿ ಉಜ್ಜಯಿನಿ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲು ಹಳ್ಳಿಗಳು ಮತ್ತು ನಗರ ಪ್ರದೇಶಗಳಲ್ಲಿನ ಪ್ರಮುಖ ದೇವಾಲಯಗಳಲ್ಲಿ ಎಲ್‌ಇಡಿ ಪರದೆಗಳನ್ನು ಸ್ಥಾಪಿಸಲಾಗಿತ್ತು. ಸಾವಿರಾರು ಭಕ್ತರು ಸೇರಿದ್ದ ಉಜ್ಜಯಿನಿಯ ಕ್ಷಿಪ್ರಾ ನದಿಯ ಎಲ್ಲಾ ಘಾಟ್‌ಗಳಲ್ಲಿ ಎಲ್‌ಇಡಿ ಪರದೆಗಳನ್ನು ಸ್ಥಾಪಿಸಲಾಗಿತ್ತು.

ಇಂದೋರ್ ಮತ್ತು ಉಜ್ಜಯಿನಿ ವಿಭಾಗದ ಎಲ್ಲಾ ಗ್ರಾಮಗಳ ಜನರನ್ನು ಸ್ಥಳೀಯ ಜನಪ್ರತಿನಿಧಿಗಳು, ಸಾಂಪ್ರದಾಯಿಕ ಗ್ರಾಮದ ಮುಖಂಡರು ಮತ್ತು ಅರ್ಚಕರೊಂದಿಗೆ ಪ್ರಧಾನಮಂತ್ರಿ ಕಾರ್ಯಕ್ರಮಕ್ಕೆ ಹಾಜರಾಗಲು ವಿಶೇಷವಾಗಿ ಆಹ್ವಾನಿಸಲಾಗಿತ್ತು.

ಉದ್ಘಾಟನೆಗೆ ಮುನ್ನ ಸಾಮಾಜಿಕ ಮಾಧ್ಯಮ ಸಂದೇಶದಲ್ಲಿ ಮುಖ್ಯಮಂತ್ರಿ ಚೌಹಾಣ್, ಇಡೀ ರಾಜ್ಯವು ಉತ್ಸಾಹ ಮತ್ತು ಸಂತೋಷದಿಂದ ತುಂಬಿದೆ ಮತ್ತು ಈ ದಿನವು ಮಧ್ಯಪ್ರದೇಶದ ಇತಿಹಾಸದಲ್ಲಿ ಚಿರಸ್ಥಾಯಿಯಾಗಲಿದೆ ಎಂದು ಹೇಳಿದರು. ಭಾರತೀಯ ಸಂಸ್ಕೃತಿ, ನೀತಿ ಮತ್ತು ಸಿದ್ಧಾಂತವನ್ನು ಹರಡುವ ಕೇಂದ್ರವಾಗಿ ಕಾರ್ಯನಿರ್ವಹಿಸುವ ಯೋಜನೆಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ ಎಂದು ಅವರು ಹೇಳಿದರು.

ಪ್ರಮುಖ ಆಕರ್ಷಣೆಗಳು

ಯೋಜನೆಯ ಮೊದಲ ಹಂತದ ಪ್ರಮುಖ ಆಕರ್ಷಣೆಯು ದೇವಾಲಯಕ್ಕೆ 200 ಮೀಟರ್ ಉದ್ದದ ನಡಿಗೆ ಮಾರ್ಗವಾಗಿದೆ, ಇದು 25 ಅಡಿ ಎತ್ತರ ಮತ್ತು 400 ಮೀಟರ್ ಉದ್ದದ ಮ್ಯೂರಲ್ ಗೋಡೆಯಿಂದ ಸುತ್ತುವರೆದಿದೆ.  ರುದ್ರ ಸಾಗರ ಕೊಳದ ಸುತ್ತಲಿನ ಕಾರಿಡಾರ್‌ನ ಒಂದು ಭಾಗ. ಪುನರುಜ್ಜೀವನಗೊಳಿಸಲಾಗಿದೆ. ಗೋಡೆಯ ಮೇಲಿನ ಭಿತ್ತಿಚಿತ್ರಗಳು ಶಿವ ಪುರಾಣದ ಕಥೆಗಳನ್ನು ಹೇಳುತ್ತವೆ. ಇತರೆ ಧಾರ್ಮಿಕ ವಿಗ್ರಹಗಳನ್ನೂ ಸ್ಥಾಪಿಸಲಾಗಿದೆ. ಹರಸಿದ್ಧಿ ದೇವಸ್ಥಾನ, ಚಾರ್ ಧಾಮ್ ದೇವಸ್ಥಾನ ಮತ್ತು ವಿಕ್ರಮ್ ತಿಲಾವನ್ನು ನವೀಕರಿಸಲಾಗಿದೆ ಮತ್ತು ಶಿವನನ್ನು ವಿವಿಧ ರೂಪಗಳಲ್ಲಿ ತೋರಿಸುವ 108 ಶಿವಸ್ತಂಭಗಳು (ಕಂಬಗಳು) ಪೂರ್ಣಗೊಂಡಿವೆ. ಇತರ ಆಕರ್ಷಣೆಗಳಲ್ಲಿ ಕಮಲದ ಕೊಳ, ಬಯಲು ರಂಗಮಂದಿರ, ಸರೋವರದ ಮುಂಭಾಗದ ಪ್ರದೇಶ ಮತ್ತು ಇ-ರಿಕ್ಷಾಗಳಂತಹ ಸೌಲಭ್ಯಗಳು ಮತ್ತು ತುರ್ತು ವಾಹನಗಳಿಗೆ ಮಾರ್ಗಗಳು ಸೇರಿವೆ ಎಂದು ಸರ್ಕಾರದ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles