-ಶೌರ್ಯ ಡೆಸ್ಕ್
ಎಲ್ಲವೂ ಕೂಲ್ ಆದ ನಂತರ ಪವಿತ್ರಾ ಜೊತೆ ಮತ್ತಷ್ಟು ನಿಕಟ ಸಂಬಂಧ, ಲೀವ್ ಇನ್ ಗೆ ಹಾತೊರೆದಿದ್ದರು. ಆದರೆ ಒಂದು ಮಟ್ಟದಲ್ಲಿ ಪವಿತ್ರಾ ಅಂತರವಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದರು. ಇದರಿಂದ ಇಬ್ಬರ ಮಧ್ಯೆ ಕಲಹ ಏರ್ಪಟ್ಟಿದೆ. ಈ ಇಬ್ಬರ ಸಂಬಂಧ ಹಳಸಿದೆ ಎನ್ನುವ ವಿಷಯ ಟಾಲಿವುಡ್‌ನ ಹರಿದಾಡಿದೆ.

ತೆಲುಗು ನಟ, ನಿರ್ಮಾಪಕ ನರೇಶ್ ಹಾಗೂ ಪವಿತ್ರಾ ಲೋಕೇಶ್ ನಡುವಿನ ಸಂಬಂಧ ತೆಲುಗು ಮತ್ತು ಕನ್ನಡ ನಾಡಿನಲ್ಲಿ ದೊಡ್ಡ ಹಲ್ ಚಲ್ ಸೃಷ್ಟಿಸಿತ್ತು. ಈಗ ಆ ಸಂಬಂಧ ಹದಗೆಟ್ಟಿದೆಯಂತೆ, ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಇಬ್ಬರ ಸಂಬಂಧದ ಒಳಗುಟ್ಟು ಬೀದಿಗೆಳೆದ ನಂತರ ಉಂಟಾದ ಮನೋಕ್ಲೇಷೆಯಲ್ಲಿ ಯಾವ್ಯಾವುದೋ ಕಾರಣಕ್ಕೆ ಪವಿತ್ರಾ-ನರೇಶ್ ಕಿತ್ತಾಟ ಮಾಡಿಕೊಂಡಿದ್ದಾರಂತೆ.
ಇಬ್ಬರೂ ಈಗ ಬೇರ್ಪಟ್ಟಿದ್ದಾರೆ ಎಂಬ ವಿಷಯಗಳು ಹರಿದಾಡುತ್ತಿವೆ.
ಪವಿತ್ರಾ ಜೊತೆ ಸ್ನೇಹ ಮಾತ್ರ ಇದೇ ಎಂದು ವಾದಿಸಿದ್ದ ನರೇಶ್ ಮೈಸೂರಿನ ಹೊಟೇಲ್ ನಲ್ಲಿ ರೆಡ್ ಹ್ಯಾಂಡ್ ಆಗಿ ಆಕೆ ಜೊತೆ ಸಿಕ್ಕಿಬಿದ್ದಿದ್ದರು. ಇಬ್ಬರೂ ಒಟ್ಟಿಗಿರುವುದು ತಿಳಿದು ಮಾಧ್ಯಮದವರನ್ನು ಕರೆದೊಯ್ದು ರಮ್ಯಾ ರಂಪಾಟ ಮಾಡಿದರೆ ವಿಜಯದ ಕೇಕೆ ಹಾಕುತ್ತಾ ನರೇಶ್ ಪವಿತ್ರಾ ಜೊತೆ ಅಲ್ಲಿಂದ ಕಾರು ಹತ್ತಿ ಪೇರಿ ಕಿತ್ತಿದ್ದರು. ಇದರಿಂದ ಕನ್ನಡ ಚಿತ್ರರಂಗದಲ್ಲಿ ಸಭ್ಯ ನಟಿ ಎಂದು ಹೆಸರು ಮಾಡಿದ್ದ ಪವಿತ್ರಾ ಲೋಕೇಶ್ ಗೌರವ ಮಣ್ಣು ಪಾಲಾಗಿತ್ತು.

ಮುಂದೆ ರಮ್ಯಾ ರಘುಪತಿ ತೆಲುಗು ಮತ್ತು ಕನ್ನಡ ಮಾಧ್ಯಮಗಳಲ್ಲಿ ಪವಿತ್ರಾ ಹಣಕ್ಕಾಗಿ ನರೇಶ್ ಹಿಂದೆ ಬಿದ್ದಿದ್ದಾಳೆ. ನಮ್ಮ ಅತ್ತೆ ವಿಜಯ ನಿರ್ಮಲಾ ಅಪರೂಪದ ಅಭರಣಗಳನ್ನು ನರೇಶ್ ನಿಂದ ಪಡೆದಿದ್ದಾಳೆ. ನನ್ನ ಗಂಡನಿಗೆ ಮೋಹದ ಬಲೆ ಬೀಸಿ ಹಣ ಆಸ್ತಿಗಾಗಿ ಮಾಯಾಂಗನೆ ರೀತಿ ವರ್ತಿಸುತ್ತಿದ್ದಾಳೆ ಎಂದು ಆರೋಪಗಳ ಸುರಿಮಳೆ ಸುರಿಸಿದ್ದರು.
ಆ ನಂತರ ಹಣಕ್ಕಾಗಿ ಪವಿತ್ರಾ ಲೋಕೇಶ್ ಇಷ್ಟು ಕೆಟ್ಟ ಹಾದಿ ಹಿಡಿಯಬಾರದಿತ್ತು ಎಂಬ ಸಾರ್ವಜನಿಕ ಅಭಿಪ್ರಾಯಗಳ ಜೊತೆಗೆ ಉತ್ತಮ ವ್ಯಕ್ತಿ ಸುಚೇಂದ್ರ ಪ್ರಸಾದ್ ಅವರಿಗೆ ಮೋಸ ಮಾಡಿ ಪವಿತ್ರಾ ಇಂತಹ ಮಟ್ಟಕ್ಕೆ ಕೆಳಜಾರಬಾರದಿತ್ತು ಎಂದು ಜನ ಮಾತನಾಡಿಕೊಂಡಿದ್ದರು.

ಇದರಿಂದ ಪವಿತ್ರಾ ನೊಂದಿದ್ದರು. ಆದರೆ ನರೇಶ್ ಈ ವಿಚಾರವನ್ನು ಮನಸಿಗೆ ಹಚ್ಚಿಕೊಳ್ಳದೆ ಪವಿತ್ರಾ ಜೊತೆ ಚೆಲ್ಲುಚೆಲ್ಲಾಗಿ ವರ್ತಿಸಿದ್ದರು.
ಎಲ್ಲವೂ ಕೂಲ್ ಆದ ನಂತರ ಪವಿತ್ರಾ ಜೊತೆ ಮತ್ತಷ್ಟು ನಿಕಟ ಸಂಬಂಧ, ಲೀವ್ ಇನ್ ಗೆ ಹಾತೊರೆದಿದ್ದರು. ಆದರೆ ಒಂದು ಮಟ್ಟದಲ್ಲಿ ಪವಿತ್ರಾ ಅಂತರವಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದರು. ಇದರಿಂದ ಇಬ್ಬರ ಮಧ್ಯೆ ಕಲಹ ಏರ್ಪಟ್ಟಿದೆ.

ಈ ಇಬ್ಬರ ಸಂಬಂಧ ಹಳಸಿದೆ ಎನ್ನುವ ವಿಷಯ ಟಾಲಿವುಡ್‌ನ ಹರಿದಾಡಿದೆ.
ನರೇಶ್ ಹೂವಿನಿಂದ ಹೂವಿಗೆ ಹಾರುವ ದುಂಬಿಯ ಗುಣದವ ಆತನನ್ನು ಪವಿತ್ರಾ ನಂಬಬಾರದಿತ್ತು ಎನ್ನುವ ಮಾತೂ ಕೇಳಿಬಂದಿದೆ. ಪವಿತ್ರಾ ಅವರಿಗೆ ನರೇಶ್ ಅಸಲಿ ಗುಣ ಅರ್ಥವಾಗಿದೆ ಆದ್ದರಿಂದ ಅವರು ತೀವ್ರವಾಗಿ ನೊಂದಿದ್ದಾರೆ ಎಂಬ ಮಾತೂ ಕೆಲ ಮೂಲಗಳಿಂದ ಕೇಳಿಬಂದಿದೆ.
ಪವಿತ್ರಾ ಮೈಸೂರಿನಲ್ಲಿದ್ದಾರೆ. ನರೇಶ್ ಹೈದರಾಬಾದ್ ನಲ್ಲಿ ಉಳಿದಿದ್ದಾರೆ. ಇಬ್ಬರ ನಡುವೆ ಮಾತಿಲ್ಲ. ಕಥೆಯಿಲ್ಲ ಅನ್ನುತ್ತಿವೆ ಮೂಲಗಳು.

ಅಧಿಕೃತವಾಗಿ ಈ ಬಗ್ಗೆ ಅವರಿಬ್ಬರು ಹೇಳುತ್ತಾರೆ ಅಂದರೆ ಅವರು ನಮ್ಮದು ಅಧಿಕೃತ ಸಂಬಂಧ ಅಂತ ಎಲ್ಲಿಯೂ ಒಪ್ಪಿಕೊಂಡೇ ಇಲ್ಲ.
ರಮ್ಯಾ-ನರೇಶ್-ಪವಿತ್ರಾ ತ್ರಿಕೋನ ಸಂಬಂಧ ಎಲ್ಲಿಗೆ ತಲುಪುತ್ತೋ ನೋಡಬೇಕು.