-ಶೌರ್ಯ ಡೆಸ್ಕ್
ತಮ್ಮ ಸಮಾನ ಶತ್ರು, ರಾಜಕೀಯ ಎದುರಾಳಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ಸೋಲಿಸಲು ಪಣ ತೊಟ್ಟಿರುವ ಪವನ್ ಕಲ್ಯಾಣ್, ಪ್ರತಿಪಕ್ಷಗಳ ಮತಗಳು ಚದುರದಂತೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಚಂದ್ರಬಾಬು ನಾಯ್ಡು ಅವರ ಜೊತೆ ಕೈಜೋಡಿಸಲು ಮುಂದಾಗಿದ್ದಾರೆ. ಹೈದರಬಾದ್ ನಗರದ ಜುಬಿಲಿ ಹಿಲ್ಸ್ ನಲ್ಲಿನ ಮನೆಯಲ್ಲಿ ಉಭಯ ಪಕ್ಷಗಳ ಮುಖಂಡರು ಭೇಟಿಯಾಗಿದ್ದು, ಹಲವು ವರ್ಷಗಳ ಬಳಿಕ ಮೊದಲ ಬಾರಿಗೆ ಔಪಚಾರಿಕವಾಗಿ ಮಾತುಕತೆ ನಡೆಸಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ವೈ.ಎಸ್.ಆರ್.ಸಿ. ಪಿಯ ಜಗನ್ ಸರ್ಕಾರ ಕಿತ್ತೊಗೆಯಲು ಟಿ.ಡಿ.ಪಿ ಹಾಗೂ ಜನಸೇನಾ ನಡುವೆ ಮೈತ್ರಿ ಏರ್ಪಡುತ್ತಿದೆ. ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಭಾನುವಾರ ತೆಲುಗು ದೇಶಂ ಪಾರ್ಟಿ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ಚುನಾವಣೆಗೆ ವರ್ಷವಿರುವಾಗಲೇ ಜಂಟಿ ತಂತ್ರ ಹೆಣೆಯಲು ಮುಂದಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ.

ತಮ್ಮ ಸಮಾನ ಶತ್ರು, ರಾಜಕೀಯ ಎದುರಾಳಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ಸೋಲಿಸಲು ಪಣ ತೊಟ್ಟಿರುವ ಪವನ್ ಕಲ್ಯಾಣ್, ಪ್ರತಿಪಕ್ಷಗಳ ಮತಗಳು ಚದುರದಂತೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಚಂದ್ರಬಾಬು ನಾಯ್ಡು ಅವರ ಜೊತೆ ಕೈಜೋಡಿಸಲು ಮುಂದಾಗಿದ್ದಾರೆ. ಹೈದರಬಾದ್ ನಗರದ ಜುಬಿಲಿ ಹಿಲ್ಸ್ ನಲ್ಲಿನ ಮನೆಯಲ್ಲಿ ಉಭಯ ಪಕ್ಷಗಳ ಮುಖಂಡರು ಭೇಟಿಯಾಗಿದ್ದು, ಹಲವು ವರ್ಷಗಳ ಬಳಿಕ ಮೊದಲ ಬಾರಿಗೆ ಔಪಚಾರಿಕವಾಗಿ ಮಾತುಕತೆ ನಡೆಸಿದ್ದಾರೆ.
ಪ್ರಸ್ತುತ ಜನಸೇನಾ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೆ ಟಿಡಿಪಿ 2018ರಿಂದ ಬಿಜೆಪಿಯೊಂದಿಗೆ ಸಖ್ಯ ತೊರೆದು ಏಕಾಂಗಿಯಾಗಿದೆ.

ಕಳೆದ ವರ್ಷ ಅಕ್ಟೋಬರ್ ನಲ್ಲಿ ವಿಜಯವಾಡದಲ್ಲಿ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ್ದರು. ಅಲ್ಲಿಂದಾಚೆಗೆ ಇಲ್ಲಿಯವರೆಗೂ ಉಭಯ ನಾಯಕರ ನಡುವೆ ಯಾವುದೇ ಭೇಟಿ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು ಮತ್ತು ಪವನ್ ಕಲ್ಯಾಣ್ ಅವರ ಭೇಟಿ ಮಹತ್ವದ್ದಾಗಿದೆ.