-ಶೌರ್ಯ ಡೆಸ್ಕ್
ಯೋಗರಾಜ್ ಭಟ್ ಅವರ ಗರಡಿಯಲ್ಲಿ ಪಳಗಿರುವ ಹರಿಪ್ರಸಾದ್ ಜಯಣ್ಣ ಮೊದಲ ಬಾರಿಗೆ ನಿರ್ದೇಶಕರ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳ್ತಾ ಇರೋ ಹದಿಹರೆಯದ ಲವ್ ಸ್ಟೋರಿ ಬಗ್ಗೆ ಇಂಡಸ್ಟ್ರಿಯಲ್ಲಿ ಈಗಾಗ್ಲೆ ಟಾಕ್ ಶುರುವಾಗಿದೆ.

ಯೋಗರಾಜ್ ಭಟ್ ಅವ್ರ ಮಾರ್ಗದರ್ಶನದಲ್ಲಿ, ಅವರದೇ ನಿರ್ಮಾಣ ಸಂಸ್ಥೆ ಯೋಗರಾಜ್ ಭಟ್ ಮೂವೀಸ್ ಹಾಗೂ ರವಿ ಶ್ಯಾಮನೂರ್ ಫಿಲಮ್ಸ್ ಬ್ಯಾನರನಲ್ಲಿ ರೆಡಿಯಾಗಿರೋ ಯೂತ್‌ಪುಲ್ ಲವ್ ಸ್ಟೋರಿ “ಪದವಿ ಪೂರ್ವ” ಈ ವರ್ಷದ ಕೊನೆಯ ವಾರ, ಡಿ. 30ಕ್ಕೆ ರಿಲೀಸ್ ಆಗುತ್ತಿದೆ. ಯೋಗರಾಜ್ ಭಟ್ ಅವರ ಗರಡಿಯಲ್ಲಿ ಪಳಗಿರುವ ಹರಿಪ್ರಸಾದ್ ಜಯಣ್ಣ ಮೊದಲ ಬಾರಿಗೆ ನಿರ್ದೇಶಕರ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳ್ತಾ ಇರೋ ಹದಿಹರೆಯದ ಲವ್ ಸ್ಟೋರಿ ಬಗ್ಗೆ ಇಂಡಸ್ಟ್ರಿಯಲ್ಲಿ ಈಗಾಗ್ಲೆ ಟಾಕ್ ಶುರುವಾಗಿದೆ.

ಪದವಿ ಪೂರ್ವ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಮೋಸ್ಟ್ ಹ್ಯಾಂಡಸಮ್ ಹುಡುಗ ಪೃಥ್ವಿ ಶ್ಯಾಮನೂರ್ ಎಂಟ್ರಿ ಕೊಡ್ತಾ ಇದ್ದಾರೆ. ಚಾಕ್ಲೆಟ್ ಹೀರೋ ಥರಾ ಇರೋ ಪೃಥ್ವಿಗೆ ಅಂಜಲಿ ಅನೀಶ್ ನಾಯಕಿಯಾಗಿದ್ದಾರೆ. ಇವರ ಜೊತೆಗೆ ಈಗಾಗ್ಲೆ ಮಾನ್ಸೂನ್ ರಾಗ ಹಾಗೂ ಭೈರಾಗಿ ಸಿನಿಮಾಗಳಲ್ಲಿ ಮಿಂಚಿ, ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯ ನಟಿಯಾಗಿ ಮಿನುಗುತ್ತಿರುವ ಯಶ ಶಿವಕುಮಾರ್ ಲೀಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಈ ಯೂತ್‌ಪುಲ್ ಲವ್ ಸ್ಟೋರಿಗೆ ಮ್ಯೂಸಿಕ್ ಕಂಪೋಸ್ ಮಾಡ್ತಾ ಇದ್ದು, ಟೀನೇಜ್ ಲವ್ ಸ್ಟೋರಿಗಳನ್ನು ಬ್ಯೂಟಿಫುಲ್ಲಾಗಿ ಕಟ್ಟಿಕೊಡುವ ಕ್ಯಾಮರಾಮನ್ ಸಂತೋಷ್ ರೈ ಪಾತಾಜೆ ಈ ಸಿನಿಮಾಕ್ಕೂ ತಮ್ಮ ಕ್ಯಾಮರಾ ಕೈ ಚಳಕ ತೋರಿಸಿದ್ದಾರೆ. ಯೋಗರಾಜ್ ಭಟ್ ಲಿರಿಕ್ಸ್ ಬರೆದು, ವಿಜಯ್ ಪ್ರಕಾಶ್ ಹಾಡಿರೋ ಫ್ರೆಂಡ್‌ಶಿಪ್ ಹಾಡು ಈಗಾಗ್ಲೆ ರಿಲೀಸ್ ಆಗಿ ಪಾಪ್ಯುಲರ್ ಕೂಡ ಆಗಿದೆ. ಈ ಸಿನಿಮಾದ ಹಾಡುಗಳ ಬಗ್ಗೆ ದೊಡ್ ನಿರೀಕ್ಷೆ ಇದೆ.
ಫ್ರೆಶ್ ಪ್ರತಿಭೆಗಳಿಂದಲೇ ಕೂಡಿರೋ ಈ ಫ್ರೆಶ್ ಪ್ರೇಮಕಥೆಯಲ್ಲಿ ಯುವಕರ ಜೊತೆಗೆ ಶರತ್ ಲೋಹಿತಾಶ್ವ, ರಂಗಾಯಣ ರಘು, ಗೆಸ್ಟ್ ಅಪಿಯರೆನ್ಸ್ ನಲ್ಲಿ ಅದಿತಿ ಪ್ರಭುದೇವ, ಪ್ರಭು ಮುಂದ್ಕರ್, ಶ್ವೇತಾ ಪ್ರಸಾದ್, ಕಾಮಿಡಿ ಕಿಲಾಡಿ ನಯನ, ಮಹಂತೇಶ್ ಸಜ್ಜನ್, ಸುಶ್ಮಿತಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.