-ಎಸ್.ವಿ. ಜ್ಯೋತಿ
ಓವರ್‌ಕೋಟ್ ಬ್ಲೌಸ್ ಸಾಂಪ್ರದಾಯಿಕ ಹಾಗೂ ಆಧುನಿಕ ವಿನ್ಯಾಸದ ಮಿಶ್ರಣ ಎನ್ನಬಹುದು. ಮಹಿಳಾ ಉದ್ಯೋಗಿಗಳೇ ಹೆಚ್ಚಾಗಿ ಇಂತಹ ಬ್ಲೌಸ್ ತೊಡುತ್ತಾರೆ. ಕಾಟನ್, ಫ್ಯಾನ್ಸಿ, ಆರ್ಗಾಂಜಾ, ಕ್ರೇಪ್ ಹೀಗೆ ಎಲ್ಲಾ ರೀತಿಯ ಸೀರೆಗಳಿಗೆ ಈ ಓವರ್‌ಕೋಟ್ ಬ್ಲೌಸ್ ಹೊಲಿಸಿಕೊಳ್ಳಬಹುದು. ಇದೇ ಮಾದರಿಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡು ಇಷ್ಟಕ್ಕೆ ತಕ್ಕಂತೆ ಮಾರ್ಪಡಿಸಿಕೊಂಡು ಇಷ್ಟದ ಸೀರೆಯೊಂದಿಗೆ ಮ್ಯಾಚಿಂಗ್ ಮಾಡಿಕೊಂಡು ಉಟ್ಟಾಗ ದೇಹಕ್ಕೆ ಹಿತವಾಗಿರುತ್ತದೆ.

ಸೀರೆ ಉಡುವ ಶೈಲಿ ಬದಲಾದಂತೆ ರವಿಕೆಗಳ ವಿನ್ಯಾಸವೂ ಬದಲಾಗುತ್ತಿದೆ. ತರಹೇವಾರಿ ರವಿಕೆಗಳು ಫ್ಯಾಷನ್ ಲೋಕದಲ್ಲಿ ಟ್ರೆಂಡ್ ಸೃಷ್ಟಿಸುತ್ತಿವೆ. ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ಮಾಡುವ ವಿನ್ಯಾಸದ ವಸ್ತ್ರಗಳ ಹೊಸ ಶೈಲಿಯ ಫ್ಯಾಷನ್ ಜೊತೆ ಈ ಓವರ್ ಕೋಟ್ ಬ್ಲೌಸ್ ಕೂಡಾ ಜನಪ್ರಿಯತೆ ಪಡೆದುಕೊಂಡಿದೆ.
ಸೀರೆ ಉಟ್ಟಾಗ ಸೊಂಟ ಕಾಣಬೇಕು ಎಂಬ ಅಲಿಖಿತ ನಿಯಮವನ್ನು ಓವರ್‌ಕೋಟ್ ಬ್ಲೌಸ್‌ಗಳು ಮುರಿದಿವೆ. ಸೊಂಟದವರೆಗೆ ಚಾಚಿಕೊಳ್ಳುವ, ಮೊಣಕೈ ಉದ್ದದ ತೋಳಿನ ಈ ಕೋಟ್ ಬ್ಲೌಸ್ ಈಗ ಮಹಿಳೆಯರ ಅಚ್ಚುಮೆಚ್ಚಾಗಿವೆ. ಹೊಸ ತಲೆಮಾರಿನ ನಟಿಮಣಿಯರು ಕೂಡ ಈ ಟ್ರೆಂಡ್‌ಗೆ ಫಿದಾ ಆಗಿದ್ದಾರೆ.

ಓವರ್‌ಕೋಟ್ ಬ್ಲೌಸ್ ಚಳಿಗಾಲದ ಟ್ರೆಂಡಿ ಡ್ರೆಸ್ ಆಗಿದೆ. ತೊಡಲು ಆರಾಮದಾಯಕ ಎನ್ನಿಸುವ ಈ ಬ್ಲೌಸ್, ಫ್ಯಾಷನ್ ವಿಚಾರದಲ್ಲಿ ಹೊಸತನವನ್ನು ತುಂಬಿಕೊಂಡಿದೆ.
ಓವರ್‌ಕೋಟ್ ಬ್ಲೌಸ್ ಸಾಂಪ್ರದಾಯಿಕ ಹಾಗೂ ಆಧುನಿಕ ವಿನ್ಯಾಸದ ಮಿಶ್ರಣ ಎನ್ನಬಹುದು. ಮಹಿಳಾ ಉದ್ಯೋಗಿಗಳೇ ಹೆಚ್ಚಾಗಿ ಇಂತಹ ಬ್ಲೌಸ್ ತೊಡುತ್ತಾರೆ. ಕಾಟನ್, ಫ್ಯಾನ್ಸಿ, ಆರ್ಗಾಂಜಾ, ಕ್ರೇಪ್ ಹೀಗೆ ಎಲ್ಲಾ ರೀತಿಯ ಸೀರೆಗಳಿಗೆ ಈ ಓವರ್‌ಕೋಟ್ ಬ್ಲೌಸ್ ಹೊಲಿಸಿಕೊಳ್ಳಬಹುದು. ಇದೇ ಮಾದರಿಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡು ಇಷ್ಟಕ್ಕೆ ತಕ್ಕಂತೆ ಮಾರ್ಪಡಿಸಿಕೊಂಡು ಇಷ್ಟದ ಸೀರೆಯೊಂದಿಗೆ ಮ್ಯಾಚಿಂಗ್ ಮಾಡಿಕೊಂಡು ಉಟ್ಟಾಗ ದೇಹಕ್ಕೆ ಹಿತವಾಗಿರುತ್ತದೆ ಎನ್ನುತ್ತಾರೆ ವಸ್ತ್ರವಿನ್ಯಾಸಕಿ ಚೈತ್ರಾ.

ಈ ಓವರ್‌ಕೋಟ್ ಬ್ಲೌಸ್ ತೊಟ್ಟ ನಂತರ ಮೇಲಿಂದ ಸೀರೆ ಸೆರಗನ್ನು ಪಿನ್ ಮಾಡಿದರೆ ಕಾರ್ಪೋರೇಟ್ ಲುಕ್ ಕಾಣುತ್ತದೆ. ಗುಜರಾತಿ ಶೈಲಿಯಂತೆಯೂ ಮುಂದೆ ಸೆರಗು ಹಾಕಿಕೊಳ್ಳಬಹುದು. ಹಾಗೆಯೇ ಮಾಮೂಲಿಯಂತೆ ಸೀರೆ ಉಟ್ಟು ಈ ಓವರ್‌ಕೋಟ್‌ಗಳನ್ನು ಮೇಲಿಂದ ಕೋಟ್‌ನಂತೆಯೂ ತೊಟ್ಟುಕೊಂಡರೆ ಹೊಸ ಲುಕ್ ಬರುತ್ತದೆ. ಎಲ್ಲರೊಳಗೆ ಆಕರ್ಷಣೆ ಹೆಚ್ಚಿಸುವಂತಹ ಸಾಂಪ್ರದಾಯಿಕ ಹೊಸ ಶೈಲಿ ಗಮನ ಸೆಳೆಯುತ್ತದೆ.
ಪ್ಲೇನ್ ಸೀರೆಗಳಿಗೆ ಎಂಬ್ರಾಯ್ಡರಿ ಅಥವಾ ಅದ್ಧೂರಿ ವಿನ್ಯಾಸದ ಸೀರೆಗಳಿಗೆ ಸರಳ ವಿನ್ಯಾಸದ, ಸೀರೆಯ ವಿರುದ್ಧ ಬಣ್ಣದ (ಕಾಂಟ್ರಾಸ್ಟ್ ಕಲರ್) ಓವರ್‌ಕೋಟ್ ಆಕರ್ಷಕವಾಗಿ ಕಾಣುತ್ತವೆ.

ಈ ಓವರ್‌ಕೋಟ್ ಬ್ಲೌಸ್‌ಗಳನ್ನು ವಯಸ್ಸಿನ ಹಂಗಿಲ್ಲಲ್ಲದೆ ಎಲ್ಲಾ ವಯೋಮಾನದ ಮಹಿಳೆಯರೂ ತೊಡಬಹುದಾಗಿದೆ. ಸಪೂರ ದೇಹದ, ಎತ್ತರ ನಿಲುವಿನ ಮಹಿಳೆಯರಿಗೆ ಇದು ಹೆಚ್ಚು ಹೊಂದಿಕೆ ಆಗುತ್ತದೆ. ರಿಸೆಪ್ಷನ್, ಪಾರ್ಟಿ, ಕಚೇರಿ ಸಮಾರಂಭಗಳಿಗೆ ತೊಟ್ಟರೆ ರಿಚ್ ಲುಕ್ ಇರುತ್ತದೆ. ಇದು ಎಕ್ಸಿಕ್ಯುಟಿವ್ ಲುಕ್ ನೀಡುತ್ತದೆ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಇಷ್ಟವಿಲ್ಲದವರಿಗೆ ಇದು ಉತ್ತಮ ಆಯ್ಕೆ ಎನ್ನುತ್ತಾರೆ ವಸ್ತ್ರವಿನ್ಯಾಸಕರು.

ಟ್ರೆಂಡಿ ಶೂ: ಚಳಿಗಾಲಕ್ಕೆ ಜಾಕೆಟ್, ಓವರ್‌ಕೋಟ್ ಅಷ್ಟೇ ಅಲ್ಲ, ಪಾದವನ್ನು ಮುಚ್ಚುವ, ಮಂಡಿಯವರೆಗೂ ಬೆಚ್ಚಗಿಡುವ ಶೂಗಳಿಗೂ ಹೆಚ್ಚು ಆದ್ಯತೆ ಇದೆ.

ಲೇಸ್ ಅಪ್ ಬೂಟ್‌ಗಳು ಎಲ್ಲಾ ಕಾಲಕ್ಕೂ ಹೊಂದುವಂತಹವು. ಸ್ಕಿನ್ ಫಿಟ್ ಪ್ಯಾಂಟ್‌ನೊಂದಿಗೆ ಈ ಶೂ ಹೆಚ್ಚು ಹೊಂದುತ್ತದೆ. ಟೀ ಶರ್ಟ್ ಧರಿಸಿ ಅದೇ ಬಣ್ಣದ ಲೇಸ್ ಅಪ್ ಬೂಟ್ ಧರಿಸಿದರೆ ಭಿನ್ನ ನೋಟ ಸಿಗುತ್ತದೆ.
ಹೈಟಾಪ್ ಸ್ನೀಕರ್ಸ್: ಸ್ನೀಕರ್ಸ್ ಇಂದಿನ ಯುವತಲೆಮಾರಿನ ಮಂದಿ ಹೆಚ್ಚು ಇಷ್ಟಪಡುವ ಶೂ. ಟ್ರೆಂಡಿ ಹಾಗೂ ಸ್ಟೈಲಿಶ್ ನೋಟ ಸಿಗುವಂತೆ ಮಾಡುವ ಸ್ನೀಕರ್ಸ್ಗಳು ಬೇರೆ ಬೇರೆ ಬಣ್ಣ ಹಾಗೂ ವಿನ್ಯಾಸಗಳಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ. ಚಳಿಗಾಲದಲ್ಲಿ ಹೈ ಟಾಪ್ ಸ್ನೀಕರ್ಸ್ ಹೆಚ್ಚು ಸೂಕ್ತ. ಇದು ಧರಿಸಲು ಆರಾಮದಾಯಕ. ಜೊತೆಗೆ ಕಾಲಿನ ಅಂದವನ್ನೂ ಹೆಚ್ಚಿಸುತ್ತವೆ. ನಿಮ್ಮ ಆದ್ಯತೆಗೆ ತಕ್ಕಂತೆ ಇದನ್ನು ಧರಿಸಬಹುದು. ಮಿಕ್ಸ್ ಅಂಡ್ ಮ್ಯಾಚ್ ಪ್ರಿಂಟ್ ಇರುವ ದಿರಿಸಿನ ಜೊತೆ ಧರಿಸಲು ಇದು ಹೆಚ್ಚು ಸೂಕ್ತ. ಇದರಲ್ಲಿ ಲೆದರ್ ಶೂಗಳು ಲಭ್ಯವಿವೆ.
