-ಶೌರ್ಯ ಡೆಸ್ಕ್
ದೀಪಗಳ ಹಬ್ಬ ದೀಪಾವಳಿ ಮುನ್ನ ದಿನ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಭೇಟಿ ನೀಡಲಿದ್ದು, ಶ್ರೀರಾಮನ ದರ್ಶನ ಪಡೆದು ಅಂದು ನಡೆಯಲಿರುವ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೋದಿ ಆಗಮನದಿಂದ ದೀಪಾವಳಿಗೆ ಅಯೋಧ್ಯೆ ಎಲ್ಲರ ಗಮನಸೆಳೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ಸಲದ ದೀಪಾವಳಿಯನ್ನು ರಾಮನ ನೆಲ ಅಯೋಧ್ಯೆಯಲ್ಲಿ ಆಚರಿಸುತ್ತಿದ್ದಾರೆ.
ದೀಪಗಳ ಹಬ್ಬ ದೀಪಾವಳಿ ಮುನ್ನ ದಿನ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಭೇಟಿ ನೀಡಲಿದ್ದು, ಶ್ರೀರಾಮನ ದರ್ಶನ ಪಡೆದು ಅಂದು ನಡೆಯಲಿರುವ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೋದಿ ಆಗಮನದಿಂದ ದೀಪಾವಳಿಗೆ ಅಯೋಧ್ಯೆ ಎಲ್ಲರ ಗಮನಸೆಳೆಯಲಿದೆ.
ನಿರ್ಮಾಣ ಹಂತದಲ್ಲಿರುವ ಭವ್ಯ ಶ್ರೀರಾಮ ಮಂದಿರದ ಕಾಮಗಾರಿಯನ್ನು ಪ್ರಧಾನಿ ಮೋದಿ ಅವರು, ಪರಿಶೀಲಿಸಲಿದ್ದಾರೆ. ಬಳಿಕ ಅವರು ರಾಮ್ ಲೀಲಾದಲ್ಲಿ ರಾಮ್ ಮತ್ತು ಇತರರ ಪಾತ್ರವನ್ನು ಬರೆಯುವವರನ್ನು ಸ್ವಾಗತಿಸಲು ರಾಮ್ ಕಥಾ ಪಾರ್ಕ್ಗೆ ಭೇಟಿ ನೀಡುವ ಸಾಧ್ಯತೆ ಇದೆ.

ನರೇಂದ್ರ ಮೋದಿ ಆಗಮನ ಹಿನ್ನಲೆ ರಾಮಮಂದಿರ ನಿರ್ಮಾಣ ಸಮಿತಿಯ (ಆರ್ಎಂಸಿಸಿ) ಎರಡು ದಿನಗಳ ಪರಿಶೀಲನಾ ಸಭೆ ನಡೆಸಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸದಸ್ಯರು ರಾಮಮಂದಿರದ ಸುಮಾರು 50 ಪ್ರತಿಶತದಷ್ಟು ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದು, ಇದನ್ನು ಪ್ರಧಾನಮಂತ್ರಿಗಳಿಗೆ ವಿವರಿಸಲಿದ್ದಾರೆ
ಅದೇ ದಿನ ಸಂಜೆ ಅವರು ಸರಯು ನದಿ ತಟದಲ್ಲಿ ನಡೆಯುವ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ದೀಪೋತ್ಸವ ಕಾರ್ಯಕ್ರಮಕ್ಕೂ ಚಾಲನೆ ನೀಡದಿದ್ದಾರೆ. ಅರ್ಧ ತಾಸಿಗೂ ಹೆಚ್ಚುಕಾಲ ಅಲ್ಲಿ ಇರಲಿದ್ದಾರೆ. ಈ ವೇಳೆ ಹಸಿರು ಡಿಜಿಟಲ್ ಪಟಾಕಿಗಳನ್ನು ಸಿಡಿಸಲು ಯೋಜಿಸಲಾಗಿದೆ. ಭಾನುವಾರದಿಂದ ಪ್ರಾರಂಭವಾಗುವ ಮೂರು ದಿನಗಳ ದೀಪೋತ್ಸವ ಆಚರಣೆಯಲ್ಲಿ, ರಷ್ಯಾ, ಮಲೇಷ್ಯಾ, ಶ್ರೀಲಂಕಾ ಮತ್ತು ಫಿಜಿ ಕಲಾವಿದರಿಂದ ರಾಮಲೀಲಾ ಪ್ರದರ್ಶನಗಳು ನಡೆಯಲಿವೆ. ಈ ಬಾರಿ ಹೊಸ ದಾಖಲೆಯನ್ನು ಸೃಷ್ಟಿಸಲು ನಿರ್ಧರಿಸಲಾಗಿದ್ದು, 17 ಲಕ್ಷ ದೀಪಗಳು ಬೆಳಗಲಾಗುತ್ತಿದೆ.

ಮೋದಿ ಪ್ರತಿವರ್ಷ ದೀಪಾವಳಿಯನ್ನು ದೇಶದ ವಿವಿಧೆಡೆ ಆಚರಿಸಿಕೊಳ್ಳುತ್ತಾರೆ. ದೇಶದ ಗಡಿಗೆ ಹೋಗಿ ಸೈನಿಕರೊಂದಿಗೂ ದೀಪಾವಳಿ ಆಚರಿಸಿದ್ದಾರೆ.