21.8 C
Bengaluru
Saturday, March 18, 2023
spot_img

ಈಗಿರುವ ಆರೆಸ್ಸೆಸ್ ಕಳ್ಳಕಾಕರ, ಶೋಕಿವಾಲಾರ ಆರೆಸ್ಸೆಸ್ : ಪರಿಷತ್ ಸದಸ್ಯ ರಾಜೇಂದ್ರ

-ಶೌರ್ಯ ಡೆಸ್ಕ್

ಬಿಜೆಪಿ ನಡೆ ನುಡಿಯಲ್ಲಿ ವ್ಯತಾಸಗಳಿದೆ, ಹಿಂದಿನ ಸೈದ್ಧಾಂತಿಕ ಆರೆಸ್ಸೆಸ್ ಈಗಿಲ್ಲ, ಆರೆಸ್ಸೆಸ್ ಹೆಸರಿನಲ್ಲಿ ಐಷಾರಾಮಿ ಕಾರ್ ನಲ್ಲಿ ಓಡಾಡ್ಕೊಂಡು ಶೋಕಿ ಮಾಡುತ್ತಿದ್ದಾರೆ. ಈಗ ಸಂಘದಲ್ಲಿರುವವರ ಕಳ್ಳರು ಎಂದರು.

ಬಿಜೆಪಿ ಮಾತೃಸಂಸ್ಥೆ ಎಂದು ಕರೆಸಿಕೊಳ್ಳುವ ಆರೆಸ್ಸೆಸ್ ಸಂಘಟನೆ ಮೊದಲಿನಂತಿಲ್ಲ, ಈಗಿನ ನಾಯಕರು ಸಂಘದ ಹೆಸರಿನಲ್ಲಿ ಸಂಪತ್ತು ಮಾಡಿಕೊಂಡುಐಷಾರಾಮಿ ಕಾರಿನಲ್ಲಿ ಓಡಾಡಿಕೊಂಡು ಶೋಕಿ ಮಾಡುತ್ತಿದ್ದಾರೆ, ಈಗಿರುವ ಆರೆಸ್ಸೆಸ್ ಕಳ್ಳರ ಆರೆಸ್ಸೆಸ್ ಆಗಿದೆ ಎಂದು ತುಮಕೂರು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಟೀಕಿಸಿದ್ದಾರೆ.

ನವದೆಹಲಿಯಲ್ಲಿ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿ.ಟಿ ರವಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿದ್ದರಾಮಉಲ್ಲಾ ಖಾನ್ ಎಂದಿದ್ದಾರೆ, ಸಿ.ಟಿ. ರವಿ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಬೇಕು. ಅವರು, ನಾಲ್ಕು ಬಾರಿ ಶಾಸಕರು, ಎರಡು ಸಲ ಸಚಿವರು ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ಗೌರವಯುತವಾಗಿ ಮಾತನಾಡಬೇಕು ಎಂದು ಕಿಡಿಕಾರಿದ್ದಾರೆ.

ಸಿ.ಟಿ. ರವಿ ಅವರನ್ನು ಹಿಟ್ ಅಂಡ್ ರನ್ ಕೇಸ್ ಗಿರಾಕಿ ಅಂತಾರೆ, ಲೂಟಿ ರವಿ ಅಂತಾ ಅವರ ಕ್ಷೇತ್ರದ ಜನರು ಹೇಳುತ್ತಾರೆ. ಬಿಜೆಪಿ ನಾಯಕರು ಹತಾಶರಾಗಿ ನಮ್ಮ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕ, 5 ವರ್ಷ ಉತ್ತಮ ಆಡಳಿತ ನೀಡಿದ ನಾಯಕ ಎಂದು ಸಮರ್ಥಿಸಿಕೊಂಡರು. ಮುಸಲ್ಮಾನರು ಬೇರೆ ದೇಶದಿಂದ ಬಂದಿದ್ದಾರಾ ಎಂದು ಪ್ರಶ್ನಿಸಿದ ಅವರು, ನಮ್ಮ ರಾಜ್ಯ, ದೇಶದ ಪ್ರಜೆಗಳೇ ಅಲ್ವ? ಕೋಮು ಸೌಹಾರ್ದ ಹಾಳುಗೆಡವಲು ಬಿಜೆಪಿ ನಾಯಕರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.

ಬಿಜೆಪಿ ನಡೆ ನುಡಿಯಲ್ಲಿ ವ್ಯತಾಸಗಳಿದೆ, ಹಿಂದಿನ ಸೈದ್ಧಾಂತಿಕ ಆರೆಸ್ಸೆಸ್ ಈಗಿಲ್ಲ, ಆರೆಸ್ಸೆಸ್ ಹೆಸರಿನಲ್ಲಿ ಐಷಾರಾಮಿ ಕಾರ್ ನಲ್ಲಿ ಓಡಾಡ್ಕೊಂಡು ಶೋಕಿ ಮಾಡುತ್ತಿದ್ದಾರೆ. ಈಗ ಸಂಘದಲ್ಲಿರುವವರ ಕಳ್ಳರು ಎಂದರು.

ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಬೇಕಾಬಿಟ್ಟಿ ಮಾತನಾಡಿದ್ರೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles