30.6 C
Bengaluru
Wednesday, March 15, 2023
spot_img

ಪುರುಷ ಸಂಗಾತಿಯ ಯಾವ ವರ್ತನೆಗಳಿಗೆ ಹುಡುಗಿಗೆ ಸಿಟ್ಟು ಗೊತ್ತೇ!

-ಶೌರ್ಯ ಸಂಗ್ರಹ

ವಾಸ್ತವವಾಗಿ ಪುರುಷ ಸಂಗಾತಿಯ ಕೆಲವು ಕ್ರಿಯೆಗಳನ್ನು ಮಹಿಳೆಯರು ಇಷ್ಟಪಡುವುದಿಲ್ಲ, ಪದೇ ಪದೇ ಈ ಬಗ್ಗೆ ಹೇಳಿದ ನಂತರವೂ ಪುರುಷರು ಒಪ್ಪದಿದ್ದರೆ, ಮಹಿಳೆಯರು ಸಂಬಂಧ ಕಡಿದುಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೆಣ್ಣುಮಕ್ಕಳಿಗೆ ತಾಳ್ಮೆ ಮತ್ತು ಸಹನೆ ಜಾಸ್ತಿ ಇರುವುದರಿಂದ ಅವರು ಸಾಕಷ್ಟು ಕಾಲ ಬದಲಾಗಬಹುದು ಅಂತ ಕಾಯುತ್ತಾರೆ. ಅಂತಿಮವಾಗಿ ದೂರವಾಗುವ ನಿರ್ಣಯ ತೆಗೆದುಕೊಳ್ಳುತ್ತಾರೆ.  ಯಾವು ವಿಚಾರಗಳು ಮಹಿಳೆಗೆ ರೇಜಿಗೆ ಹುಟ್ಟಿಸಿ ಸಂಬಂಧ ಕಡಿದುಕೊಳ್ಳುವುದಕ್ಕೆ ಪ್ರೇರೇಪಿಸುತ್ತವೆ ನೋಡೋಣ ಬನ್ನಿ.

ಬಹುತೇಕ ಹುಡುಗಿಯರು ತಮ್ಮ ಪುರುಷ ಸಂಗಾತಿಯ ಕೆಲವು ಅಭ್ಯಾಸಗಳನ್ನು ಇಷ್ಟಪಡುವುದಿಲ್ಲ. ಅದರಲ್ಲೂ ಕೆಲವನ್ನು ಕಂಡರೆ ಅವರಿಗೆ ಸಹಿಸಲಸಾಧ್ಯವಾದ ಸಿಟ್ಟು. ಒಬ್ಬ ಮಹಿಳೆ ತನ್ನ ಮನಸ್ಸನ್ನು ಯಾವುದೇ ಒಬ್ಬ ಪುರುಷನಿಗೆ ಒಪ್ಪಿಸಿದಾಗ ಮತ್ತು ಆತನೊಂದಿಗೆ ತನ್ನ ಇಡೀ ಜೀವನ ಕಳೆಯಲು ಉದ್ದೇಶಿಸಿದಾಗ, ಆ ಗೆಳತಿಯ ಪ್ರತಿಯೊಂದು ಅಗತ್ಯ ನೋಡಿಕೊಳ್ಳುವುದು ಪುರುಷ ಸಂಗಾತಿಯ ಜವಾಬ್ದಾರಿ. ಹೆಣ್ಣುಮಕ್ಕಳು ತಮ್ಮ ಪುರುಷ ಸಂಗಾತಿಯೊಂದಿಗೆ ಭಾವನಾತ್ಮಕ ಬಾಂಧವ್ಯವನ್ನು ನಿರೀಕ್ಷಿಸುತ್ತಾರೆ. ಸಂಬಂಧಗಳಲ್ಲಿರುವಾಗ ಪುರುಷರು ಸಾಮಾನ್ಯವಾಗಿ ಅನೇಕ ತಪ್ಪುಗಳನ್ನು ಮಾಡುತ್ತಾರೆ. ಇದು ಮುಂದೆ ಸಂಬಂಧಗಳಲ್ಲಿ ಬಿರುಕುಗಳಿಗೆ ಕಾರಣವಾಗುತ್ತದೆ. ವಾಸ್ತವವಾಗಿ ಪುರುಷ ಸಂಗಾತಿಯ ಕೆಲವು ಕ್ರಿಯೆಗಳನ್ನು ಮಹಿಳೆಯರು ಇಷ್ಟಪಡುವುದಿಲ್ಲ, ಪದೇ ಪದೇ ಈ ಬಗ್ಗೆ ಹೇಳಿದ ನಂತರವೂ ಪುರುಷರು ಒಪ್ಪದಿದ್ದರೆ, ಮಹಿಳೆಯರು ಸಂಬಂಧ ಕಡಿದುಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೆಣ್ಣುಮಕ್ಕಳಿಗೆ ತಾಳ್ಮೆ ಮತ್ತು ಸಹನೆ ಜಾಸ್ತಿ ಇರುವುದರಿಂದ ಅವರು ಸಾಕಷ್ಟು ಕಾಲ ಬದಲಾಗಬಹುದು ಅಂತ ಕಾಯುತ್ತಾರೆ. ಅಂತಿಮವಾಗಿ ದೂರವಾಗುವ ನಿರ್ಣಯ ತೆಗೆದುಕೊಳ್ಳುತ್ತಾರೆ.  ಯಾವು ವಿಚಾರಗಳು ಮಹಿಳೆಗೆ ರೇಜಿಗೆ ಹುಟ್ಟಿಸಿ ಸಂಬಂಧ ಕಡಿದುಕೊಳ್ಳುವುದಕ್ಕೆ ಪ್ರೇರೇಪಿಸುತ್ತವೆ ನೋಡೋಣ ಬನ್ನಿ.

ನಿಮ್ಮ ಬಗ್ಗೆ ಮಾತ್ರ ಯೋಚಿಸುವುದು

ನಿಮ್ಮ ಬಗ್ಗೆ ನೀವು ಯೋಚಿಸುವುದು ತಪ್ಪಲ್ಲ. ಅದು ಅಗತ್ಯ ಕೂಡಾ. ಆದರೆ, ನೀವು ಸಂಬಂಧದಲ್ಲಿರುವಾಗ ಸ್ತ್ರೀ ಸಂಗಾತಿಯ ಅಗತ್ಯತೆಗಳ ಬಗ್ಗೆಯೂ ಯೋಚಿಸಬೇಕು. ನೀವು ಅವರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುವುದಿಲ್ಲವೆಂದು ಅವರು ಭಾವಿಸುವ ಯಾವುದೇ ಕೆಲಸ ಮಾಡುವುದು ಸರಿಯಲ್ಲ. ಇಲ್ಲದಿದ್ದರೆ ನಿಮ್ಮ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ.

ಸುಳ್ಳು ಹೇಳುವ ಅಭ್ಯಾಸ

ಪ್ರತಿಯೊಂದು ಸಂಬಂಧವು ನಂಬಿಕೆ ಎಂಬ ಸೂಕ್ಷ್ಮ ಹಳಿಯ ಮೇಲೆ ನಿಂತಿರುತ್ತದೆ. ಇದರಲ್ಲಿ ಮೋಸ ಮತ್ತು ವಂಚನೆ ಕಾಣಿಸಿಕೊಳ್ಳಲು ಶುರುವಾದರೆ, ನೀವು ನಿಧಾನವಾಗಿ ವಿಘಟನೆಯತ್ತ ಹೆಜ್ಜೆ ಹಾಕುತ್ತಿದ್ದೀರಿ ಎಂದೇ ಅರ್ಥಮಾಡಿಕೊಳ್ಳಿ. ಸುಳ್ಳು ಹೇಳುವುದು ಅಥವಾ ಸತ್ಯವನ್ನು ಮರೆಮಾಚುವುದನ್ನು ಹುಡುಗಿಯರು ಇಷ್ಟಪಡುವುದಿಲ್ಲ. ಹೀಗಾಗಿ ನೀವು ತಪ್ಪು ಮಾಡಿದರೂ ಕ್ಷಮೆ ಯಾಚಿಸುವುದು ಉತ್ತಮ. ಇಲ್ಲವಾದಲ್ಲಿ ನಿಮ್ಮ ಬಗ್ಗೆ ಅವರಲ್ಲಿ ಅನಗತ್ಯ ಸಂದೇಹಗಳು ಮೂಡುತ್ತವೆ.

ತಪ್ಪು ತಿಳುವಳಿಕೆ ಬರದಂತೆ ನೋಡಿಕೊಳ್ಳಿರಿ

ಪುರುಷರು ಸಂಬಂಧದಲ್ಲಿದ್ದರೂ ತಮ್ಮ ಸ್ತ್ರೀ ಸಂಗಾತಿಯತ್ತ ಗಮನ ಕೊಡದಿದ್ದರೆ ಅಥವಾ ಅವರಿಗೆ ಸಮಯ ನೀಡದಿದ್ದರೆ ಹುಡುಗಿಯರ ಮನಸ್ಸಿನಲ್ಲಿ ಕೋಪ ಮತ್ತು ತಪ್ಪು ತಿಳುವಳಿಕೆ ಬೆಳೆಯಲು ಪ್ರಾರಂಭಿಸುತ್ತದೆ. ಆದ್ದರಿಂದ ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯಲು ಬಿಡುವು ತೆಗೆದುಕೊಳ್ಳಿ. ಅವರನ್ನು ಸಿನಿಮಾ ನೋಡಲು, ಪ್ರವಾಸಕ್ಕೆ ಅಥವಾ ಲಾಂಗ್ ಡ್ರೈವ್‌ಗಳಿಗೆ ಕರೆದೊಯ್ಯಿರಿ. ಇದು ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ.

ಇತರ ಹುಡುಗಿಯರೊಂದಿಗೆ ಫ್ಲರ್ಟಿಂಗ್

ನೀವು ನಿಮ್ಮ ಸಂಗಾತಿಯ ಜೊತೆ ಪ್ರೀತಿಯ ಸಂಬಂಧ ಹೊಂದಿರುವಾಗ, ಬೇರೆ ಯಾವುದೇ ಹುಡುಗಿಯೊಂದಿಗೆ ಫ್ಲರ್ಟ್ ಮಾಡಬಾರದು. ಸಾಮಾನ್ಯವಾಗಿ ಪುರುಷರು ಸಂಬಂಧದಲ್ಲಿದ್ದರೂ, ಮಹಿಳಾ ಸಹೋದ್ಯೋಗಿ, ನೆರೆಹ್ರೆರೆಯವರು ಅಥವಾ ತಮ್ಮ ಆಪ್ತ ಸ್ನೇಹಿತೆಯರೊಂದಿಗೆ ಸಲುಗೆಯಿಚಿದ ಇರುತ್ತಾರೆ. ಇದು ನಿಮ್ಮ ಸಂಗಾತಿಗೆ ಇಷ್ಟವಾಗುವುದಿಲ್ಲ. ಮುಂದೆ ಆಕೆ ನಿಮ್ಮ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳಬಹುದು. ಹೀಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ ಎಂಬುದು ಮನೋಶಾಸ್ತ್ರ ತಜ್ಞರ ಅಭಿಮತ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles