ನಾನೇ ಹೀರೋ, ನಾನೇ ವಿಲನ್ ಅಂದ ಧೃವಾ!
-ಜಿ. ಅರುಣ್‌ಕುಮಾರ್
ಕೆಲವು ಚಿತ್ರಗಳು ಅಂದುಕೊಂಡು ಶುರುಮಾಡಿದ್ದಕ್ಕಿಂದ ಎರಡು ಪಟ್ಟು ಹೆಚ್ಚು ಹಣವನ್ನು ತಿನ್ನುತ್ತವೆ. ಸದ್ಯ ಧೃವಾ ಸರ್ಜಾ ಅಭಿನಯದ ಮಾರ್ಟಿನ್ ಅದೇ ಥರ ಅಂದುಕೊಳ್ಳಬಹುದು. ಯಾಕೆಂದರೆ ಆರಂಭದಲ್ಲಿ ನಲವತ್ತರಿಂದ ಐವತ್ತು ಕೋಟಿ ಬಜೆಟ್ಟಿನಲ್ಲಿ ಈ ಚಿತ್ರ ತಯಾರಾಗುತ್ತದೆ ಅನ್ನೋ ಮಾತಿತ್ತು. ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಅದಾಗಲೇ ಮಾರ್ಟಿನ್ ತೊಂಭತ್ತು ಕೋಟಿ ರುಪಾಯಿಗಳಿಗೂ ಮೀರಿ ಖರ್ಚು ಮಾಡಿಸಿದ್ದಾನಂತೆ. ಅದಕ್ಕೆ ತಕ್ಕಂತೆ ಈಗಾಗಲೇ ಮಾರ್ಟಿನ್ ಖರೀದಿಸಲು ಕಂಪೆನಿಗಳು ಮುಗಿಬಿದ್ದಿವೆ. ಬರೀ ಹಿಂದಿ ಡಬ್ಬಿಂಗ್ ರೈಟ್ಸ್ ಒಂದೇ ಮೂವತ್ತೈದು ಕೋಟಿ ರೂಗಳಿಗೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದೆಯಂತೆ.

ಸಿನಿಮಾಗಳ ಅಸಲೀ ಬಜೆಟ್ಟು ಸಾಮಾನ್ಯಕ್ಕೆ ಹೊರಬೀಳೋದಿಲ್ಲ. ಮಾಡಿದ ಖರ್ಚಿಗೆ ಎರಡು ಅಥವಾ ಮೂರು ಪಟ್ಟು ಹೇಳಿಕೊಳ್ಳೋದು ಸಿನಿಮಾದವರ ರೂಢಿ. ತಮ್ಮ ಸಿನಿಮಾದ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಇಂಥ ತಂತ್ರ ಅನುಸರಿಸೋದು ಮಾಮೂಲು. ಇದರ ನಡುವೆ ಕೆಲವು ಚಿತ್ರಗಳು ಅಂದುಕೊಂಡು ಶುರುಮಾಡಿದ್ದಕ್ಕಿಂದ ಎರಡು ಪಟ್ಟು ಹೆಚ್ಚು ಹಣವನ್ನು ತಿನ್ನುತ್ತವೆ. ಸದ್ಯ ಧೃವಾ ಸರ್ಜಾ ಅಭಿನಯದ ಮಾರ್ಟಿನ್ ಅದೇ ಥರ ಅಂದುಕೊಳ್ಳಬಹುದು.

ಯಾಕೆಂದರೆ ಆರಂಭದಲ್ಲಿ ನಲವತ್ತರಿಂದ ಐವತ್ತು ಕೋಟಿ ಬಜೆಟ್ಟಿನಲ್ಲಿ ಈ ಚಿತ್ರ ತಯಾರಾಗುತ್ತದೆ ಅನ್ನೋ ಮಾತಿತ್ತು. ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಅದಾಗಲೇ ಮಾರ್ಟಿನ್ ತೊಂಭತ್ತು ಕೋಟಿ ರುಪಾಯಿಗಳಿಗೂ ಮೀರಿ ಖರ್ಚು ಮಾಡಿಸಿದ್ದಾನಂತೆ.

ಅದಕ್ಕೆ ತಕ್ಕಂತೆ ಈಗಾಗಲೇ ಮಾರ್ಟಿನ್ ಖರೀದಿಸಲು ಕಂಪೆನಿಗಳು ಮುಗಿಬಿದ್ದಿವೆ. ಬರೀ ಹಿಂದಿ ಡಬ್ಬಿಂಗ್ ರೈಟ್ಸ್ ಒಂದೇ ಮೂವತ್ತೈದು ಕೋಟಿ ರೂಗಳಿಗೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದೆಯಂತೆ.
ಇನ್ನೊಂದು ವಿಚಾರವೆಂದರೆ, ಮಾರ್ಟಿನ್ ಸಿನಿಮಾದಲ್ಲಿ ಧೃವಾ ಸರ್ಜಾ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಿನ ಕಮರ್ಷಿಯಲ್ ಸಿನಿಮಾಗಳಲ್ಲಿ ಡಬಲ್ ರೋಲ್ ಕಡಿಮೆಯಾಗಿದೆ. ಈ ಹೊತ್ತಲ್ಲಿ ಮತ್ತೊಮ್ಮೆ ಮಾರ್ಟಿನ್ ಹಳೇ ಟ್ರೆಂಡನ್ನು ಪುನರಾರಂಭಿಸುತ್ತಿದ್ದಾನೆ.

ಈ ಚಿತ್ರದಲ್ಲಿ ಧೃವಾ ಅರ್ಜುನ್ ಮತ್ತು ಮಾರ್ಟಿನ್ ಎಂಬ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅರ್ಜುನ್ ಮತ್ತು ಮಾರ್ಟಿನ್ ಎಂಬೆರಡೂ ರೋಲುಗಳಲ್ಲಿ ಧೃವಾ ಅವತಾರವೆತ್ತಲಿದ್ದಾರೆ. ಅರ್ಜುನ್ ಯೋಧನಾದರೆ, ಮಾರ್ಟಿನ್ ವಿಲನ್ ಅಂತೆ. ಹೀಗಿದ್ದೂ ಸಿನಿಮಾಗೆ ಮಾರ್ಟಿನ್ ಅಂತಲೇ ಯಾಕೆ ಹೆಸರಿಟ್ಟಿದ್ದಾರೆ ಅನ್ನೋದು ಸಿನಿಮಾದಲ್ಲಿ ತೆರೆದುಕೊಳ್ಳಲಿರುವ ಗುಟ್ಟು. ಎ.ಪಿ. ಅರ್ಜುನ್ ಈ ಸಲ ಹೈ ವೋಲ್ಟೇಜ್ ಸಿನಿಮಾಗೇ ಕೈ ಇಟ್ಟಿದ್ದಾರೆ. ಏನಾಗತ್ತೋ ನೋಡಬೇಕು!
