-ಶೌರ್ಯ ಡೆಸ್ಕ್
ಕೆಂಪೇಗೌಡ ರಥ ಚಲಾಯಿಸುತ್ತಿದ್ದ ಚಾಲಕನ ಮೇಲೂ ಹಲ್ಲೆ ಮಾಡಿ ಕೆಳಗೆಳೆದು ತಾನೇ ರಥದ ವಾಹನ ಚಲಾವಣೆ ಮಾಡಿ ದಾಂಧಲೆ ವಾತಾವರಣ ನಿರ್ಮಿಸಿದ್ದು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಸಂಸದ ಮುನಿಸ್ವಾಮಿ ಮುನಿಸ್ವಾಮಿ ಮಾತಿಗೂ ಕ್ಯಾರೆ ಅನ್ನದೆ ನುಗ್ಗುವ ಮಾಜಿ ಶಾಸಕನ ದೌರ್ಜನ್ಯದ ವಿರುದ್ಧ ಜನ ಎಚ್ಚೆತ್ತುಕೊಳ್ಳಬೇಕು ಎಂದು ಎಲ್ಲೆಡೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹರಿ ಬಿಡಲಾಗಿದೆ.

ಕೋಲಾರ ಜಿಲ್ಲೆ ಮಾಲೂರು ಮಾಜಿ ಶಾಸಕ ಮಂಜುನಾಥಗೌಡ ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿದ್ದು ಟಿಕೆಟ್ ನನ್ನದೇ ಎಂದು ಓಡಾಡಿಕೊಂಡಿದ್ದಾರೆ. ಈ ನಡುವೆ ಇದೇ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಅತಿರೇಕದಿಂದ ವರ್ತಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಸ್ಥಳೀಯ ಬಿಜೆಪಿ ನಾಯಕರು, ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಶುಕ್ರವಾರ ಸಂಜೆ ಬಂಗಾರಪೇಟೆಯಿಂದ ಮಾಲೂರು ತಾಲೂಕಿನ ಟೇಕಲ್ ಬಳಿಗೆ ಮೃತ್ತಿಕೆ (ಮಣ್ಣು) ಸಂಗ್ರಹ ಅಭಿಯಾನದ ಕೆಂಪೇಗೌಡ ರಥ ಬಂದ ವೇಳೆ ಪೊಲೀಸರನ್ನು ತಳ್ಳಿ ಬಿಜೆಪಿ ಮುಖಂಡರ ಮೇಲೆ ಮಂಜುನಾಥಗೌಡ ಹಲ್ಲೆ ನಡೆಸಿರುವ ವೀಡಿಯೋ ವೈರಲ್ ಆಗಿದ್ದು ಇದು ಹೊಸಕೋಟೆ ರೌಡಿಯಿಸಂ ಎಂದು ಎಲ್ಲೆಡೆ ವೈರಲ್ ಆಗಿದೆ. ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.

ಕೆಂಪೇಗೌಡ ರಥ ಚಲಾಯಿಸುತ್ತಿದ್ದ ಚಾಲಕನ ಮೇಲೂ ಹಲ್ಲೆ ಮಾಡಿ ಕೆಳಗೆಳೆದು ತಾನೇ ರಥದ ವಾಹನ ಚಲಾವಣೆ ಮಾಡಿ ದಾಂಧಲೆ ವಾತಾವರಣ ನಿರ್ಮಿಸಿದ್ದು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಸಂಸದ ಮುನಿಸ್ವಾಮಿ ಮುನಿಸ್ವಾಮಿ ಮಾತಿಗೂ ಕ್ಯಾರೆ ಅನ್ನದೆ ನುಗ್ಗುವ ಮಾಜಿ ಶಾಸಕನ ದೌರ್ಜನ್ಯದ ವಿರುದ್ಧ ಜನ ಎಚ್ಚೆತ್ತುಕೊಳ್ಳಬೇಕು ಎಂದು ಎಲ್ಲೆಡೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹರಿ ಬಿಡಲಾಗಿದೆ.
ಕೆಂಪೇಗೌಡ ರಥಯಾತ್ರೆಗೆ ಸ್ವಾಗತಿಸುವ ವೇಳೆಯಲ್ಲಿ ಬಿಜೆಪಿ ಎರಡು ಗುಂಪುಗಳ ನಡುವೆ ನಿನ್ನೆ ಸಂಜೆ ಮಾರಾಮಾರಿ ನಡೆದಿತ್ತು. ಆಗ ಕೋಡಿಹಳ್ಳಿ ಮಂಜುನಾಥ್ ಹೇರಾಪೇರಿ ವರ್ತನೆ ತೋರಿ ತಮ್ಮ ಪಟಾಲಂ ಜೊತೆ ನುಗ್ಗಿ ಕೆಂಪೇಗೌಡರ ರಥ ಹೈಜಾಕ್ ಮಾಡಿದರು ಎಂದು ಪ್ರತ್ಯಕ್ಷದರ್ಶಿ ಬಿಜೆಪಿ ಕಾರ್ಯಕರ್ತರು ತಿಳಿಸಿದ್ದಾರೆ.

ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಹಾಗೂ ಮಾಜಿ ಶಾಸಕ ಮಂಜುನಾಥಗೌಡ ಇಬ್ವರೂ ಮಾಲೂರು ಟಿಕೆಟ್ ಗೆ ಪೈಪೋಟಿ ನಡೆಸುತ್ತಿದ್ದು ವಿಜಯ್ ಕುಮಾರ್ ವರ್ಚಸ್ಸು ಕ್ಷೇತ್ರದಲ್ಲಿ ಏರುತ್ತಿರುವುದು ಬಣಗಳ ನಡುವೆ ಮಾರಾಮಾರಿಗೆ ಕಾರಣವಾಗಿದೆ. ತಳ್ಳಾಟ ನೂಕಾಟ ನಡೆದು ದೊಡ್ಡ ಹೈಡ್ರಾಮಾವೇ ನಡೆದಿದೆ.
ರಥಯಾತ್ರೆಗೆ ಕಳಶಗಳೊಂದಿಗೆ ಸ್ವಾಗತಕ್ಕೆ ಮಾಡಲಾಗಿದ್ದ ಮುತ್ತೈದರ ಮೇಲೆ ರಥದ ವಾಹನ ನುಗ್ಗಿಸಲು ಹೋಗಿರುವುದು ವೀಡಿಯೋದಲ್ಲಿದೆ. ಮಂಜುನಾಥಗೌಡ ರಥಯಾತ್ರೆ ಬರುವ ಮುನ್ನವೇ ಕಳಶಗಳನ್ನು ವೇದಿಕೆ ಬಳಿ ಕೆರದೊಯ್ದ ಹಿನ್ನೆಲೆ, ಹೂಡಿ ವಿಜಯ್ ಕುಮಾರ್ ಮತ್ತು ಬೆಂಬಲಿಗರು ಕಳಶಗಳನ್ನು ರಥಯಾತ್ರೆ ಜೊತೆಗೆ ಕೆರತರಲು ಒತ್ತಾಯಿಸಿ ರಥಯಾತ್ರೆ ಎದುರು ಪ್ರತಿಭಟನೆಯನ್ನು ನಡೆಸಿದ್ದಾರೆ.

ಈ ವೇಳೆ ನುಗ್ಗಿ ಬರುವ ಮಂಜುನಾಥಗೌಡ ಪೊಲೀಸರನ್ನು ತಳ್ಳಿ, ಬಿಜೆಪಿ ಮುಖಂಡ ಗೋಪಾಲಗೌಡ ಮೇಲೆ ಹಲ್ಲೆ ಮಾಡಿದ್ದಾರೆ.
ಈ ಮಂಜುನಾಥ್ ಗೌಡರ ದೌರ್ಜನ್ಯಕ್ಕೆ ಬಿಜೆಪಿ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ.