-ಶೌರ್ಯ ಡೆಸ್ಕ್
ಈಗಾಗಲೇ 8 ವರ್ಷದ ಮಗು ಇರೋ ಮಹಾಲಕ್ಷ್ಮಿ ನನಗೆ ಮತ್ತೊಂದು ಮಗು ಬೇಕು ಎಂದು ಕೇಳಿದ್ದರಂತೆ. ನನಗೆ ಮಗು ಬೇಕೇ ಬೇಕು ಎಂದು ಒಪ್ಪಿಕೊಂಡ್ರೆ ಮಾತ್ರ ಮದುವೆಯಾಗೋದಾಗಿ ರವೀಂದ್ರಗೆ ಮಹಾಲಕ್ಷ್ಮಿ ಷರತ್ತು ಹಾಕಿದ್ದರಂತೆ ಇದಕ್ಕೆ ರವೀಂದರ್ ಕೂಡಲೇ ಷರತ್ತನ್ನು ಒಪ್ಪಿಕೊಂಡಿದ್ದಾರೆ.

ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಜೋಡಿಯ ಹನಿಮೂನ್ ಟೂರ್ ಫೋಟೋ ಸಖತ್ ವೈರಲ್ ಆಗಿವೆ. ಗಾಸಿಪ್ ಗಳು ಸೃಷ್ಟಿ ಆಗುತ್ತಿದ್ದರೂ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ ಜೋಡಿ ಹನಿಮೂನ್ ಎಂಜಾಯ್ ಮಾಡುತ್ತಿದೆ.
ಸದ್ಯ ಈ ದಂಪತಿ ಮಹಾಬಲಿಪುರಂ ಇಂಟರ್ ಕಾಂಟಿನೆಂಟಲ್ ರೆಸಾರ್ಟ್ ನಲ್ಲಿ ತಂಗಿದ್ದು, ಅಲ್ಲಿಂದಲೇ ಅಭಿಮಾನಿಗಳು ಸಂದೇಶ ರವಾನಿಸಿದ್ದಾರೆ. ಮಹಾಲಕ್ಷ್ಮಿ ‘ಲೈಫ್ ಇಸ್ ಬ್ಯೂಟಿಫುಲ್’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರೆ, ರವೀಂದರ್ ‘ಲೈಫ್ ಗೆ ಪ್ರೀತಿ ಬೇಕು, ಈ ಪ್ರೀತಿಗೆ ಮಹಾಲಕ್ಷ್ಮಿ ಇರಬೇಕು’ ಎಂದು ಕಾವ್ಯಾತ್ಮಕವಾಗಿ ಭಾವನೆ ಹೊರ ಹಾಕಿದ್ದಾರೆ.

ಈಗಾಗಲೇ 8 ವರ್ಷದ ಮಗು ಇರೋ ಮಹಾಲಕ್ಷ್ಮಿ ನನಗೆ ಮತ್ತೊಂದು ಮಗು ಬೇಕು ಎಂದು ಕೇಳಿದ್ದರಂತೆ. ನನಗೆ ಮಗು ಬೇಕೇ ಬೇಕು ಎಂದು ಒಪ್ಪಿಕೊಂಡ್ರೆ ಮಾತ್ರ ಮದುವೆಯಾಗೋದಾಗಿ ರವೀಂದ್ರಗೆ ಮಹಾಲಕ್ಷ್ಮಿ ಷರತ್ತು ಹಾಕಿದ್ದರಂತೆ ಇದಕ್ಕೆ ರವೀಂದರ್ ಕೂಡಲೇ ಷರತ್ತನ್ನು ಒಪ್ಪಿಕೊಂಡಿದ್ದಾರೆ.
ಅದಕ್ಕೆ ರವೀಂದರ್, ನಾನು ಮಹಾಲಕ್ಷ್ಮಿಯನ್ನು ಪ್ರೀತಿಸುತ್ತೇನೆ, ಮಹಾಲಕ್ಷ್ಮಿ ನನ್ನನ್ನು ತುಂಬಾ ಪ್ರೀತಿಸುವುದು ನಿಜವಾದ ಪ್ರೀತಿ ಎಂದರು.
ಆರೋಪ: ಮಹಾಲಕ್ಷ್ಮಿ ಮತ್ತು ರವೀಂದರ್ ಜೋಡಿ ಹನಿಮೂನ್ ಅನ್ನು ಎಂಜಾಯ್ ಮಾಡುತ್ತಿದ್ದರೆ ಈ ನಡುವೆ ಮತ್ತೊಂದು ಸುದ್ದಿ ಹೊರ ಬಂದಿದ್ದು, ಮಹಾಲಕ್ಷ್ಮಿಗೆ ಈ ಮೊದಲೇ ಮದುವೆ ಆಗಿತ್ತು. ಎರಡು ಮಕ್ಕಳು ಕೂಡ ಇವೆ. ಮೊದಲ ಗಂಡನಿಂದ ಡಿವೋರ್ಸ್ ಪಡೆದ ನಂತರ ತಮ್ಮೊಂದಿಗೆ ನಟಿಸುತ್ತಿದ್ದ ಸಹ ನಟ ಈಶ್ವರ್ ಎನ್ನುವವರ ಜತೆ ಅಫೇರ್ ಇಟ್ಟುಕೊಂಡಿದ್ದರು ಎಂದು ಸ್ವತಃ ಈಶ್ವರ್ ಅವರ ಪತ್ನಿಯೇ ಆರೋಪ ಮಾಡಿದ್ದಾರೆ. ನನ್ನ ಗಂಡನ ಜೊತೆ ಮಹಾಲಕ್ಷ್ಮಿ ದಿನ ರಾತ್ರಿಯೂ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಳು. ಅದಕ್ಕೆ ಬೇಕಾದ ಸಾಕ್ಷಿ ನನ್ನ ಬಳಿ ಇದೆ ಎಂದು ಈಶ್ವರ್ ಪತ್ನಿ ಜಯಶ್ರೀ ಆರೋಪ ಮಾಡಿದ್ದರು.
ಮಹಾಲಕ್ಷ್ಮಿ ಮತ್ತು ಈಶ್ವರ್ ಲವ್ವಿ ಡವ್ವಿ ವಿಚಾರ ರವೀಂದರ್ ಅವರಿಗೂ ಗೊತ್ತಿತ್ತು ಎಂದು ವರದಿಯಾಗಿದೆ. ಎಲ್ಲ ಗೊತ್ತಿದ್ದರೂ ಮಹಾಲಕ್ಷ್ಮಿಯನ್ನು ರವೀಂದರ್ ಮದುವೆ ಆಗಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗುತ್ತಿದೆ.
