-ಶೌರ್ಯ ಡೆಸ್ಕ್
ಇದೀಗ ಚೀನಿಯರು ಕುಂಗ್ಫು ಕಲೆಯಿಂದ ಇಡೀ ವಿಶ್ವದ ಸಮರ ಆಸಕ್ತರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಆ ಕುಂಗ್ಫು ಕಲೆಗೆ ಮೂಲ ನಮ್ಮ ಭಾರತ ದೇಶ ಎಂಬುದು ನಮ್ಮ ಸಾಕಷ್ಟು ಭಾರತೀಯರಿಗೆ ತಿಳಿದೇ ಇಲ್ಲ!

ಹೌದು. ಯಾವ ಚೀನಾ ದೇಶ ಇಂದಿನ ದಿನಗಳಲ್ಲಿ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಗೊಂಚಲುಗೊಂಚಲು ಚಿನ್ನವನ್ನು ಬಾಚುತ್ತಿದೆ ಮತ್ತು ಹೆಚ್ಚು ಹೆಚ್ಚು ಹೆಸರು ಮಾಡುತ್ತಿದೆಯೋ ಅದಕ್ಕೆ ಮೂಲ ಕಾರಣ ನಮ್ಮ ಭಾರತೀಯ ಕಲೆ.
ಕುಂಗ್ಫು ಕಲೆಯ ಜನಕ ನಮ್ಮ ಭಾರತ ದೇಶಕ್ಕೆ ಸೇರಿದ ಪಲ್ಲವ ರಾಜ ವಂಶದ ಕುಡಿ ಎನ್ನಲಾಗುತ್ತದೆ. ಒಮ್ಮೆ ಚೀನಾ ದೇಶದಲ್ಲಿ ಮಹಾನ್ ಕಾಯಿಲೆ ಒಂದು ಹರಡುತ್ತಿತ್ತು ಇದು ಒಂದು ಹರಡುವ ಕಾಯಿಲೆಯಾಗಿದ್ದು ಭಾರತ ದೇಶಕ್ಕೆ ಈ ಸಮಸ್ಯೆ ಬರಬಾರದೆಂದು ಪಲ್ಲವ ರಾಜವಂಶದ ತರುಣನೊಬ್ಬ ಚೀನಾ ದೇಶಕ್ಕೆ ಆ ಸಮಸ್ಯೆಗೆ ಗಿಡಮೂಲಿಕೆಗಳ ಔಷಧಿಯನ್ನು ತಿಳಿಸಿಕೊಡಲು ಹೋಗುತ್ತಾನೆ. ಆತನ ಹೆಸರು ಬೋಧಿ ಧರ್ಮ ಎಂದು. ಈತನನ್ನು ಚೀನಿಯರು ದಾಮು ಎಂದು ಕೂಡ ಕರೆದು ಈತನನ್ನು ಪೂಜಿಸುತ್ತಾರೆ. ಚೀನಿಯರ ಸಮಸ್ಯೆಗೆ ಪರಿಹಾರವನ್ನು ಕೊಡಲೆಂದು ಹೋದ ದಾಮು ಅಲ್ಲಿಯ ಜನರಿಗೆ ಕೆಲ ಅನಿವಾರ್ಯತೆಯಿಂದ ಕುಂಗ್ಫು ಕಲೆಯನ್ನು ಕಲಿಸಬೇಕಾಯಿತು.

ಚೀನಿಯರು ತಮ್ಮ ದೇಶದಲ್ಲಿ ಹರಡುತ್ತಿದ್ದ ಮಹಾನ್ ಸಾಂಕ್ರಾಮಿಕ ಕಾಯಿಲೆಗೆ ಪರಿಹಾರ ದೊರೆಯಿತೆಂದು ಖುಷಿಯಿಂದ ಕೊಂಡಾಡಿದರು. ಆದರೆ ಈ ಖುಷಿ ಸ್ವಲ್ಪ ದಿನ ಮಾತ್ರ ಇತ್ತು. ದಿನ ಕಳೆದ ನಂತರ ಕಳ್ಳಕಾಕರ ತೊಂದರೆ ಹೆಚ್ಚಾದ ಕಾರಣದಿಂದಾಗಿ ಚೀನಿಯರು ಈ ತೊಂದರೆಯಿಂದ ಬೇಸತ್ತು ಹೋದರು. ಆಗ ದಾಮು ಚೀನಿಯರಿಗೆ ಗುಂಪು ಕಲೆಯನ್ನು ಕಲಿಸಿಕೊಟ್ಟರು. ಈ ಸಮರ ಕಲೆಯಲ್ಲಿ ಚೀನಿಯರು ಮಹಾನ್ ಪಟಿಂಗರು ಕೂಡ ಆದರು.
ಚೀನಾ ದೇಶದಲ್ಲಿ ಎಲ್ಲ ಸಮಸ್ಯೆಯೂ ಪರಿಹಾರವಾದ ಬಳಿಕ ತನ್ನ ತಾಯ್ನಾಡಿಗೆ ಹೋಗಲು ಬಯಸಿದ ಬೋಧಿಧರ್ಮ ಆಸೆಯನ್ನು ತಿಳಿದು ಚೀನಿಯರು ಕುತಂತ್ರ ಬುದ್ಧಿಯನ್ನು ತೋರಿಸಿ ಬಿಟ್ಟಿದ್ದರು. ಹೇಗಾದರೂ ಮಾಡಿ ಬೋಧಿಧರ್ಮನನ್ನು ತಮ್ಮ ದೇಶದಲ್ಲಿ ಉಳಿಸಿಕೊಳ್ಳಬೇಕು. ಸಮರಕಲೆಯನ್ನು ಇನ್ನಷ್ಟು ಪ್ರಚುರಪಡಿಸಬೇಕು ಎಂಬ ದುರಾಲೋಚನೆಯಿಂದ ಆತನನ್ನು ನಿರ್ಬಂಧಕ್ಕೊಳಪಡಿಸುತ್ತಾರೆ. ಕೊನೆಗೆ ಆತ ಅಲ್ಲಿಯೇ ತನ್ನ ಪ್ರಾಣ ಬಿಡುತ್ತಾನೆ ಎಂಬ ಪ್ರತೀತಿ ಇದೆ.