-ಶೌರ್ಯ ಡೆಸ್ಕ್
ಡಿಸೆಂಬರ್ 5 ರಂದು ಉದಯ ಸಿಂಗ್ ಅವರ ಹುಟ್ಟುಹಬ್ಬವಿತ್ತು. ಬೆಂಗಳೂರಿನ ಹೆಬ್ಬಾಳದ ಕಾಫಿಬೋರ್ಡ್ ಲೇಔಟ್ ನಿವಾಸಕ್ಕೆ ಅಂದು ಬೆಳಗಿನಿಂದಲೇ ತಂಡೋಪತಂಡವಾಗಿ ಹರಿದುಬಂದ ಅಭಿಮಾನಿಗಳು, ಕಾರ್ಯಕರ್ತರು ಹುಟ್ಟುಹಬ್ಬದ ಶುಭಾಶಯ ಕೋರತೊಡಗಿದರು. ಹೊತ್ತೇರಿದಂತೆ ಅಭಿನಂದನೆ ಸಲ್ಲಿಸಲು ಬರುವವರು ಸಂಖ್ಯೆ ಹೆಚ್ಚಾಗತೊಡಗಿತು. ಉದಯ ಸಿಂಗ್ ಅವರು ಎಲ್ಲರ ಶುಭ ಹಾರೈಕೆಗಳು ಸ್ವೀಕರಿಸಿ ಧನ್ಯವಾದ ಅರ್ಪಿಸುತ್ತಿದ್ದದ್ದು ಕಂಡುಬಂತು.

ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷರು, ಕ್ಷತ್ರಿಯ ಸಮುದಾಯದ ನಾಯಕರಾದ ಉದಯ್ ಸಿಂಗ್ ಅವರ ಹುಟ್ಟುಹಬ್ಬವನ್ನು ಇತ್ತೀಚೆಗೆ ಅವರ ಸ್ನೇಹಿತರು, ಅಭಿಮಾನಿಗಳು, ಬೆಂಬಲಿಗರು ಹಾಗೂ ಕ್ಷತ್ರಿಯ ಒಕ್ಕೂಟದ ಕಾರ್ಯಕರ್ತರು ಮುಖಂಡರು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಿದರು.

ಡಿಸೆಂಬರ್ 5 ರಂದು ಉದಯ ಸಿಂಗ್ ಅವರ ಹುಟ್ಟುಹಬ್ಬವಿತ್ತು. ಬೆಂಗಳೂರಿನ ಹೆಬ್ಬಾಳದ ಕಾಫಿಬೋರ್ಡ್ ಲೇಔಟ್ ನಿವಾಸಕ್ಕೆ ಅಂದು ಬೆಳಗಿನಿಂದಲೇ ತಂಡೋಪತಂಡವಾಗಿ ಹರಿದುಬಂದ ಅಭಿಮಾನಿಗಳು, ಕಾರ್ಯಕರ್ತರು ಹುಟ್ಟುಹಬ್ಬದ ಶುಭಾಶಯ ಕೋರತೊಡಗಿದರು. ಹೊತ್ತೇರಿದಂತೆ ಅಭಿನಂದನೆ ಸಲ್ಲಿಸಲು ಬರುವವರು ಸಂಖ್ಯೆ ಹೆಚ್ಚಾಗತೊಡಗಿತು. ಉದಯ ಸಿಂಗ್ ಅವರು ಎಲ್ಲರ ಶುಭ ಹಾರೈಕೆಗಳು ಸ್ವೀಕರಿಸಿ ಧನ್ಯವಾದ ಅರ್ಪಿಸುತ್ತಿದ್ದದ್ದು ಕಂಡುಬಂತು.

ಸಂಜೆ ಸ್ನೇಹಿತರು, ಅನುಯಾಯಿಗಳು ಮತ್ತು ಕರ್ನಾಟಕ ಕ್ಷತ್ರಿಯ ಒಕ್ಕೂಟದ ವತಿಯಿಂದ ಹುಟ್ಟುಹಬ್ಬ ಆಚರಣೆ ಸಮಾರಂಭ ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಕಾರ್ಯಕರ್ತರು, ಪದಾಧಿಕಾರಿಗಳು, ಕ್ಷತ್ರಿಯ ಸಮುದಾಯದ ಹಿರಿಯರು, ಸಮಾಜದ ವಿವಿಧ ವಲಯಗಳ ಪ್ರಮುಖರು ಉದಯ್ ಸಿಂಗ್ ಅವರಿಗೆ ಪುಷ್ಪಗುಚ್ಛ, ಹೂವಿನ ಹಾರ, ಸ್ಮರಣಿಕೆ ನೀಡಿ ಶುಭ ಕೋರಿದರು.

ಮಹಿಳಾ ಘಟಕದ ನೂರಾರು ಮಂದಿ ಕ್ಷಾತ್ರಾಣಿಯರು ತಮ್ಮ ನೆಚ್ಚಿನ ನಾಯಕನಿಗೆ ಕ್ಷತ್ರಿಯರ ಸಂಕೇತವಾದ ಖಡ್ಗ ನೀಡಿ ಗೌರವಿಸಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿಹಂಚಿ ಹರ್ಷ ವ್ಯಕ್ತಪಡಿಸಿದರು.

ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಆಗಮಿಸಿ ಪುಷ್ಪಗುಚ್ಛ ನೀಡಿ ಶುಭಾಶಯ ಕೋರಿದರು.
ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮತ್ತು ಮಾಜಿ ಶಾಸಕರಾದ ಡಾ. ಎಂ.ಜಿ. ಮುಳೆ, ತಿಗಳ ಕ್ಷತ್ರಿಯ ಮಹಾಸಭಾ ಅಧ್ಯಕ್ಷರಾದ ಹೆಚ್. ಸುಬ್ಬಣ್ಣ, ವಹ್ನಿಕುಲ ಕ್ಷತ್ರಿಯ ತಿಗಳ ಸಂಘದ ರಾಜ್ಯಾಧ್ಯಕ್ಷ ಸಿ. ಜಯರಾಜ್, ಹಿರಿಯ ಮುಖಂಡ ವೇಣುಗೋಪಾಲ್, ಕರ್ನಾಟಕ ರಾಜ್ಯ ತಿಗಳ ಕ್ಷತ್ರಿಯ ಯುವ ವೇದಿಕೆ ರಾಜ್ಯಾಧ್ಯಕ್ಷ, ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಉಪಸ್ಥಿತರಿದ್ದು ಶುಭ ಕೋರಿದರು.

ಕರ್ನಾಟಕ ವಿಧಾನಸಭೆ ನಿಕಟಪೂರ್ವ ಕಾರ್ಯದರ್ಶಿ ಮೂರ್ತಿ, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ನಾಗರಾಜ್ ಬಳ್ಳೇಕೆರೆ, ಶೌರ್ಯ ಸಂದೇಶ್ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ನೀರಕಲ್ಲು ಶಿವಕುಮಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಗಿರೀಶ್ ಪಟೇಲ್, ರಜಪೂತ್ ಯುವಕ ಸಂಘದ ಅಧ್ಯಕ್ಷರಾದ ಎನ್. ಸೋಮಸಿಂಗ್, ಭಾವಸಾರ ಕ್ಷತ್ರಿಯ ಮುಖಂಡರಾದ ರಘುನಂದನ್ ಅಂಬರಕರ್ ಮತ್ತು ರಮೇಶ್ ತೇಲ್ಕರ್, ಕರ್ನಾಟಕ ಕ್ಷತ್ರಿಯ ಒಕ್ಕೂಟದ ಮಹಿಳಾ ಘಟಕ ರಾಜ್ಯಾಧ್ಯಕ್ಷರಾದ ಡಾ. ಎಸ್. ಉಮಾಮೂರ್ತಿ ರಾವ್,

ಸಂಘಟನಾ ಕಾರ್ಯದರ್ಶಿ ರೋಹಿತ್ ಎಂ. ಯುವ ಮುಖಂಡರಾದ ಜಗದೀಶ್, ರಾಜ್‌ಕುಮಾರ್ ಪಾಚಂಗಿ, ಪರಶುರಾಮ್ ರಜಪೂತ್, ನಾಗರಾಜ್ ಜೋರಾಪುರ್, ರಾಜೇಶ್ ಚಿಕ್ಕಬೆಳ್ಳಂದೂರು, ಜಗದೀಶ್ ಗುಂಜೂರು, ಚನ್ನಪ್ಪ ಕಲಾಲ್, ಹರೀಶ್ ಕಲಾಲ್, ನಟ ಗಣೇಶ್ ರಾವ್, ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗು ಭಾವಸಾರ ಸಮಾಜದ ಮುಖಂಡರಾದ ಸತೀಶ್ ಅಂಬುರೆ,

ಕಾರ್ಪೊರೇಟರ್ ಶಿವುಕುಮಾರ. ಹೆಬ್ಬಾಳ ಗೋವಿಂದ್ ರಾಜು , ಸೂರ್ಯನಾರಾಯಣ , ದೇವಿನಗರ ಗೋವಿಂದಪ್ಪ, ರಾಜಣ್ಣ , ಒಕ್ಕೂಟದ ರಾಜ್ಯ ಉಪಾಧ್ಯಕ್ಷ ರಾದ ರಾಮಚಂದ್ರಪ್ಪ ವಿಜ್ಜಿಪುರ,

ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮುದಾಯ ಮತ್ತು ಅಗ್ನಿವಂಶ ಕ್ಷತ್ರಿಯ ಸಮುದಾಯ ಮತ್ತು ಸೂರ್ಯವಂಶ ಕ್ಷತ್ರಿಯ ಕಲಾಲ್ ಖಾಟಿಕ ಸಮಾಜದ ಅನೇಕ ಮುಖಂಡರು, ಕಾರ್ಯಕರ್ತರು ಶುಭ ಕೋರಿದರು.

ಆಗಮಿಸಿದ್ದ ಎಲ್ಲರಿಗೂ ಅನ್ನದಾನ ಕಾರ್ಯಕ್ರಮವೂ ಇತ್ತು.
