23.8 C
Bengaluru
Saturday, March 18, 2023
spot_img

ಕಿಚ್ಚ ಮೆಚ್ಚಿದ ಕೌರವ!

-ಶೌರ್ಯ ಡೆಸ್ಕ್

ಕಳೆದ ಡಿಸೆಂಬರ್ 29ರಂದು ಕಲಾ ಕುಟುಂಬ ಬಳಗ ಮತ್ತು ಚಿಕ್ಕಬಳ್ಳಾಪುರ ಪೊಲೀಸ್ ಸಹಯೋಗದಲ್ಲಿ ನಾಟಕವೊಂದರ ಪ್ರದರ್ಶನವಾಗಿತ್ತು. ಅದು ಮಹಾಕವಿ ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರಂ ಆಧಾರಿತ ʻಕೌರವʼ ನಾಟಕ. ವಿಶೇಷವೆಂದರೆ ಈ ನಾಟಕದಲ್ಲಿ ಗೌರಿಬಿದನೂರಿನ ಪೊಲೀಸ್ ಸಿಬ್ಬಂದಿ ಅಭಿನಯಿಸಿದ್ದರು. ಸದ್ಯ ʻಕೌರವʼ ನಾಟಕದ ಪೂರ್ತಿ ಪ್ರದರ್ಶನವನ್ನು ತುಮಕೂರಿನ ಮಾನಸ ಮಂದಿರ ಯೂಟ್ಯೂಬ್ ಚಾನೆಲ್ ಮೂಲಕ ಲೋಕಾರ್ಪಣೆ ಮಾಡಲಾಗಿದೆ. ಈ ನಾಟಕವನ್ನು ನೋಡಿದ ಕಿಚ್ಚ ಸುದೀಪ್ ಶುಭಾಶಯ ತಿಳಿಸಿ ಟ್ವೀಟ್ ಮಾಡಿದ್ದಾರೆ.

ಕಣ್ಣೆದುರು ಯಾವುದಾದರೂ ಒಳ್ಳೇ ವಿಚಾರ ನಡೆದಾಗ ಆ ಕ್ಷಣವೇ ಅದನ್ನು ಪ್ರೋತ್ಸಾಹಿಸಿಬಿಡಬೇಕು. ಎಷ್ಟೋ ಜನ ಬರಿಯ ಹೊಗಳಿಕೆಯನ್ನು ಬಯಸುತ್ತಾರೆ. ಬೇರೊಬ್ಬರನ್ನು ಶ್ಲಾಘಿಸುವ ಮನಸ್ಸು ಮಾಡೋದೇ ಇಲ್ಲ. ಈ ನಿಟ್ಟಿನಲ್ಲಿ ನೋಡಿದರೆ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ನಿಜಕ್ಕೂ ವಿಶೇಷ ವ್ಯಕ್ತಿ ಅನ್ನಿಸಿಬಿಡುತ್ತಾರೆ.

ಬೆಳೆದ ನಂತರ ಸ್ಟಾರ್ ಗಳು ಸಮಾಜದ ಜೊತೆ ಬೆರೆಯೋದೇ ಇಲ್ಲ. ಜಗತ್ತಿನ ಆಗು ಹೋಗುಗಳಿಗೆ ಸರಿಯಾಗಿ ಸ್ಪಂದಿಸೋದಿಲ್ಲ. ಆದರೆ ಕಿಚ್ಚ ಹಾಗಲ್ಲ…! ತಮ್ಮ ಗಮನಕ್ಕೆ ಯಾವುದೇ ಉತ್ತಮ ವಿಚಾರಗಳು ಕಂಡುಬಂದರೆ ತಕ್ಷಣ ರಿಯಾಕ್ಟ್ ಮಾಡುತ್ತಾರೆ. ಅದು ಕ್ರೀಡೆ, ಸಿನಿಮಾ, ಡ್ರಾಮಾ ಯಾವುದೇ ಕ್ಷೇತ್ರವಿರಬಹುದು.

ಕಳೆದ ಡಿಸೆಂಬರ್ 29ರಂದು ಕಲಾ ಕುಟುಂಬ ಬಳಗ ಮತ್ತು ಚಿಕ್ಕಬಳ್ಳಾಪುರ ಪೊಲೀಸ್ ಸಹಯೋಗದಲ್ಲಿ ನಾಟಕವೊಂದರ ಪ್ರದರ್ಶನವಾಗಿತ್ತು. ಅದು ಮಹಾಕವಿ ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರಂ ಆಧಾರಿತ ʻಕೌರವʼ ನಾಟಕ. ವಿಶೇಷವೆಂದರೆ ಈ ನಾಟಕದಲ್ಲಿ ಗೌರಿಬಿದನೂರಿನ ಪೊಲೀಸ್ ಸಿಬ್ಬಂದಿ ಅಭಿನಯಿಸಿದ್ದರು. ಸದ್ಯ ʻಕೌರವʼ ನಾಟಕದ ಪೂರ್ತಿ ಪ್ರದರ್ಶನವನ್ನು ತುಮಕೂರಿನ ಮಾನಸ ಮಂದಿರ ಯೂಟ್ಯೂಬ್ ಚಾನೆಲ್ ಮೂಲಕ ಲೋಕಾರ್ಪಣೆ ಮಾಡಲಾಗಿದೆ. ಈ ನಾಟಕವನ್ನು ನೋಡಿದ ಕಿಚ್ಚ ಸುದೀಪ್ ಶುಭಾಶಯ ತಿಳಿಸಿ ಟ್ವೀಟ್ ಮಾಡಿದ್ದಾರೆ.

ಜವಾಬ್ದಾರಿಯ ಕೆಲಸಗಳು, ಒತ್ತಡದ ಬದುಕಿನ ನಡುವೆಯೂ ಪೊಲೀಸರು ಇತರೆ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುತ್ತಾ ಬಂದಿದ್ದಾರೆ. ಪೊಲೀಸರಲ್ಲಿರುವ ಸುಪ್ತ ಪ್ರತಿಭೆ ಈಗ ʻಕೌರವʼ ನಾಟಕದ ಮೂಲಕ ಅನಾವರಣಗೊಂಡಿದೆ. ಗೌರಿಬಿದನೂರಿನಲ್ಲಿ ಪ್ರದರ್ಶನಗೊಂಡ ಕೌರವ ನಾಟಕದಲ್ಲಿ  ಗೌರಿಬಿದನೂರು ಸರ್ಕಲ್ ಇನ್ಸ್ಪೆಕ್ಟರ್ ಕೆ.ಪಿ. ಸತ್ಯನಾರಾಯಣ್ ಕೌರವನ ಪಾತ್ರದಲ್ಲಿ ಅಮೋಘವಾಗಿ ಅಭಿನಯ ನೀಡಿದ್ದಾರೆ. ಒಂದು ಕಾಲದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಬಿ.ಸಿ. ಪಾಟೀಲ್ ಚಿತ್ರರಂಗಕ್ಕೆ ಬಂದು, ನಾಯಕನಟನಾಗಿಯೂ ಹೆಸರು ಮಾಡಿದವರು. ಪಾಟೀಲರಿಗೆ ʻಕೌರವʼ ಚಿತ್ರ ಅತ್ಯಂತ ಜನಪ್ರಿಯತೆ ತಂದುಕೊಟ್ಟಿತ್ತು. ಈಗ ಕೆ.ಪಿ. ಸತ್ಯನಾರಾಯಣ್ ಅವರ ಪಾಲಿಗೂ ಕೌರವ ಅಪಾರ ಗೌರವ ತಂದುಕೊಡುತ್ತಿದ್ದಾನೆ. ಕಳೆದ ಒಂದೂವರೆ ದಶಕದಲ್ಲಿ ತೀರಾ ಸವಾಲೆನಿಸುವ ಅಪರಾಧ ಪ್ರಕರಣಗಳ ಬೆನ್ನುಬಿದ್ದು, ಕ್ರಿಮಿನಲ್ಲುಗಳ ಹೆಡೆಮುರಿ ಕಟ್ಟಿದವರು ಕೆ.ಪಿ. ಸತ್ಯನಾರಾಯಣ್. ಇಂಥಾ ಖಡಕ್ ಪೊಲೀಸ್ ಅಧಿಕಾರಿ ವನ್ಯಜೀವಿ ಛಾಯಾಗ್ರಹಣದಲ್ಲೂ ದೊಡ್ಡ ಹೆಸರು ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿಯವರ ಅಪ್ಪಟ ಅಭಿಮಾನಿಯಾಗಿ ಗುರುತಿಸಿಕೊಂಡಿರುವ ಸತ್ಯನಾರಾಯಣ್ ಸಾಹೇಬರು ಚರ್ಚಾಕೂಟಗಳನ್ನು ಆಯೋಜಿಸುತ್ತಿರುತ್ತಾರೆ. ಇತ್ತೀಚೆಗೆ ಸತ್ಯನಾರಾಯಣ್ ಅವರು ಹಾಡಿದ್ದ ಕಾಂತಾರಾ ಚಿತ್ರದ ವರಾಹರೂಪಂ ಹಾಡು ವೈರಲ್ ಆಗಿತ್ತು. ಬಹುಮುಖ ಪ್ರತಿಭೆ ಅನ್ನೋ ಮಾತಿಗೆ ಅನ್ವರ್ಥದಂತಿರುವ ಸತ್ಯನಾರಾಯಣ್ ʻಕೌರವʼನ ಮೂಲಕ ಕಲಾಸಕ್ತರ ಗಮನ ಸೆಳೆಯುತ್ತಿದ್ದಾರೆ. ಕಿಚ್ಚ ಸುದೀಪ ಅವರ ಪ್ರೋತ್ಸಾಹದ ಟ್ವೀಟ್ ʻಕೌರವʼನ ಕಾಂತಿಯನ್ನು ಮತ್ತಷ್ಟು ಹೆಚ್ಚಿಸಲಿ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles