30.6 C
Bengaluru
Wednesday, March 15, 2023
spot_img

ಕಾಂತಾರದ ‘ವರಾಹ ರೂಪಂ’ ಹಾಡಿಗೆ ಕೋರ್ಟ್ ತಡೆಯಾಜ್ಞೆ

-ಶೌರ್ಯ ಡೆಸ್ಕ್

ತೈಕುಡಂ ಬ್ಯಾಂಡ್ ತಂಡವು ಕೊಯಿಕ್ಕೋಡು ಕೋರ್ಟ್ ಗೆ ಮೊರೆ ಹೋಗಿತ್ತು. ಈ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೈಕ್ಕುಡಂ ಬ್ರಿಡ್ಜ್ ನ ಅನುಮತಿ ಇಲ್ಲದೇ ಈ ಹಾಡನ್ನು ಬಳಸುವಂತಿಲ್ಲ ಎಂದು ತಡೆಯಾಜ್ಞೆ ನೀಡಿದೆ. ಈ ಕುರಿತು ಸ್ವತಃ ತೈಕುಡಂ ಬ್ರಿಡ್ಜ್ ಬ್ಯಾಂಡ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. ”ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ, ಕೋಜಿಕ್ಕೋಡ ನ್ಯಾಯಾಲಯ ಚಿತ್ರದ ಹಾಡಿನ ಪ್ರಸಾರಕ್ಕೆ ತಡೆಯಾಜ್ಞೆ ನೀಡಿದೆ’ ಎಂದು ಟ್ವೀಟ್ ಮಾಡಿದೆ.

ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೇರಿಸಿದ ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾದ ‘ ವರಾಹ ರೂಪಂ’ ಹಾಡಿಗೆ ಕೋರ್ಟ್ ತಡೆಯಾಜ್ಞೆ ನೀಡಿದೆ,
ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಬರುವ ‘ವರಾಹ ರೂಪಂ’ (Varaha Rupam) ಹಾಡನ್ನು ಸಿನಿಮಾದಲ್ಲಿ ಬಳಸದಂತೆ ತಡೆಯಾಜ್ಞೆ ನೀಡಲಾಗಿದ್ದು, ಇದರಿಂದಾಗಿ ಚಿತ್ರಕ್ಕೆ ಕಾನೂನು ತೊಡಕು ಎದುರಾಗಿದೆ. ಆ ಹಾಡನ್ನು ಚಿತ್ರದಿಂದ ತೆಗೆದು ಸಿ‌ನಿಮಾ ಪ್ರದರ್ಶನ ಮಾಡುವ ಸಂದಿಗ್ಧ ಎದುರಾಗಿದೆ.

ಈ ಹಾಡನ್ನು ನಾನು ಯಾವುದರಿಂದಲೂ ಕದ್ದಿಲ್ಲ ಎಂದು ಈಗಾಗಲೇ ಚಿತ್ರತಂಡ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದರು. ಆದರೂ, ಕೇರಳದ ಕೊಯಿಕ್ಕೋಡು  ಕೋರ್ಟ್ ಈ ಹಾಡಿನ ಬಳಕೆಗೆ ತಡೆಯಾಜ್ಞೆ ನೀಡಿ ಆದೇಶ ಮಾಡಿದೆ.
ಕೇರಳದ ತೈಕುಡಂ ಬಿಡ್ಜ್ ಬ್ಯಾಂಡ್ (Thaikudam Bidge Band) ಕಾಂತಾರ ಸಿನಿಮಾದ ವರಾಹ ರೂಪಂ ಹಾಡನ್ನು ತಮ್ಮ ಬ್ಯಾಂಡ್ ನ ಹಾಡಿನಿಂದ ಕದಿಯಲಾಗಿದೆ ಎಂದು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿತ್ತು.

ಇದರ ಬಗ್ಗೆ ಕೇರಳಿಗರೇ ವಿರೋಧಿ ವ್ಯಕ್ತಪಡಿಸಿ ಆ ಹಾಡಿಗೂ ಆ ಹಾಡಿಗೂ ಈ ಹಾಡಿಗೂ ಸಂಬಂಧವಿಲ್ಲ ಎಂದು ಕಾಂತಾರ ಪರ ನಿಂತಿದ್ದರು. ಈ ನಡುವೆಯೇ ತೈಕುಡಂ ಬ್ಯಾಂಡ್ ತಂಡವು ಕೊಯಿಕ್ಕೋಡು ಕೋರ್ಟ್ ಗೆ ಮೊರೆ ಹೋಗಿತ್ತು. ಈ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೈಕ್ಕುಡಂ ಬ್ರಿಡ್ಜ್ ನ ಅನುಮತಿ ಇಲ್ಲದೇ ಈ ಹಾಡನ್ನು ಬಳಸುವಂತಿಲ್ಲ ಎಂದು ತಡೆಯಾಜ್ಞೆ ನೀಡಿದೆ.
ಈ ಕುರಿತು ಸ್ವತಃ ತೈಕುಡಂ ಬ್ರಿಡ್ಜ್ ಬ್ಯಾಂಡ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. ”ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ, ಕೋಜಿಕ್ಕೋಡ ನ್ಯಾಯಾಲಯ ಚಿತ್ರದ ಹಾಡಿನ ಪ್ರಸಾರಕ್ಕೆ ತಡೆಯಾಜ್ಞೆ ನೀಡಿದೆ’ ಎಂದು ಟ್ವೀಟ್ ಮಾಡಿದೆ.

‘ನಮ್ಮ ನವರಸಂ (Navarasam) ಮತ್ತು ವರಾಹ ರೂಪಂ ಹಾಡು ಅದೊಂದು ಹೋಲಿಕೆಯಲ್ಲಿ ನಮ್ಮ ಸಂಗೀತವನ್ನು ಕದಿಯಲಾಗಿದೆ’ ಎಂದು ಈ ಹಿಂದೆ ಬ್ಯಾಂಡ್ ಆರೋಪ ಮಾಡಿತ್ತು. ಕಾಂತಾರ ಟೀಮ್ ಹಾಡನ್ನು ಪ್ರೇರಿತವಾಗಿ ತಗೆದುಕೊಂಡಿಲ್ಲ, ಕೃತಿಚೌರ್ಯ ಮಾಡಿದೆ ಎಂದೂ ಹೇಳಿದ್ದರು.
ಈಗ ಆ ಕೇರಳ ನ್ಯಾಯಾಲಯದ ತೀರ್ಪು ಕೇವಲ ಕೇರಳಕ್ಕೆ ಮಾತ್ರ ಅನ್ವಯವಾಗಬಹುದೋ ಅಥವಾ ಇಡೀ ಚಿತ್ರಕ್ಕೋ ಅನ್ನುವುದು ಸ್ಪಷ್ಟವಾಗಿಲ್ಲ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles