20.8 C
Bengaluru
Sunday, March 19, 2023
spot_img

ಮುಂದಿನ ವರ್ಷ 1 ತಿಂಗಳು ಬ್ಯಾಂಕ್ ಸೇವೆ ಇರಲ್ಲ..!

-ಶೌರ್ಯ ಡೆಸ್ಕ್

ಮುಂದಿನ ವರ್ಷ 1 ತಿಂಗಳು ಬ್ಯಾಂಕ್​ ರಜಾ! ಯಾವ್ಯಾವ ದಿನ ಅಂತ ತಿಳಿದುಕೊಳ್ಳುವುದು ಒಳಿತು. ಏಕೆಂದರೆ ನಮ್ಮ ವ್ಯವಹಾರ ಸುಗಮವಾಗಿರಬೇಕು ನೋಡಿ ಅದಕ್ಕೆ.

ಹೊಸ ವರ್ಷ ಇನ್ನೇನು 15 ದಿನಗಳಲ್ಲಿ ಬರಲಿದೆ. 2023 ಆರಂಭದ ಹೊಸ್ತಿಲಲ್ಲಿ ನಾವಿದ್ದೇವೆ. ಈಗಾಗಲೇ ಹೊಸ ವರ್ಷದ ಕ್ಯಾಲೆಂಡರ್ ಮತ್ತು ಸರ್ಕಾರಿ ರಜೆಗಳ ಬಗ್ಗೆ ನಮಗೆಲ್ಲ ಇದೆ. ಈಗ ಬ್ಯಾಂಕ್ ರಜೆಗಳ ಬಗ್ಗೆ ತಿಳಿದುಕೊಳ್ಳುವುದು ಒಳಿತು. ಏಕೆಂದರೆ ನಮ್ಮ ವ್ಯವಹಾರ ಸುಗಮವಾಗಿರಬೇಕು ನೋಡಿ ಅದಕ್ಕೆ. ಭಾರತೀಯ ರಿಸರ್ವ್ ಬ್ಯಾಂಕ್(RBI) ಅಧಿಕೃತ ವೆಬ್‌ಸೈಟ್‌ನಲ್ಲಿ 2023 ರ ರಜಾದಿನಗಳನ್ನು ನವೀಕರಿಸಿದೆ. 30 ದಿನ ಬ್ಯಾಂಕ್ ರಜೆ ಇದೆ. ಏಪ್ರಿಲ್ ತಿಂಗಳಲ್ಲಿ 6 ದಿನ ಬ್ಯಾಂಕುಗಳು ಕಾರ್ಯ ನಿರ್ವಹಿಸುವುದಿಲ್ಲ. ಕರ್ನಾಟಕದಲ್ಲಿ ಯಾವ ದಿನಗಳಲ್ಲಿ ಬ್ಯಾಂಕ್ ರಜೆ ಇರುತ್ತೆ ಅಂತ ನೋಡೋಣ ಬನ್ನಿ.

2023 ಬ್ಯಾಂಕ್ ರಜಾದಿನಗಳ  ಪಟ್ಟಿ!

ದಿನ ದಿನಾಂಕರಜಾದಿನ
ಭಾನುವಾರ15-ಜನವರಿ-23ಸಂಕ್ರಾಂತಿ
ಗುರುವಾರ26-ಜನವರಿ-23ಗಣರಾಜ್ಯೋತ್ಸವ
ಶನಿವಾರ18-ಫೆಬ್ರವರಿ-23ಮಹಾ ಶಿವರಾತ್ರಿ
ಬುಧವಾರ22-ಮಾರ್ಚ್​-23ಚಂದ್ರಮಾನ ಯುಗಾದಿ
ಶನಿವಾರ01-ಏಪ್ರಿಲ್​-23ಬ್ಯಾಂಕ್‌ಗಳ ವಾರ್ಷಿಕ ಖಾತೆಗಳ ಮುಕ್ತಾಯ ದಿನ
ಸೋಮವಾರ03-ಏಪ್ರಿಲ್​-23ಮಹಾವೀರ ಜಯಂತಿ
ಶುಕ್ರವಾರ07-ಏಪ್ರಿಲ್​-23ಗುಡ್​ ಫ್ರೈಡೇ
ಶುಕ್ರವಾರ14-ಏಪ್ರಿಲ್​-23ಡಾ.ಬಿ.ಆರ್​ ಅಂಬೇಡ್ಕರ್​ ಜಯಂತಿ
ಶನಿವಾರ22-ಏಪ್ರಿಲ್​-23ರಂಜಾನ್​
ಭಾನುವಾರ23-ಏಪ್ರಿಲ್​-23ಬಸವ ಜಯಂತಿ
ಸೋಮವಾರ1-ಮೇ-23ಕಾರ್ಮಿಕರ ದಿನ
ಗುರುವಾರ29-ಜೂನ್​-23ಬಕ್ರೀದ್​
ಶನಿವಾರ29-ಜುಲೈ-23ಮೊಹರಂನ ಕೊನೆಯ ದಿನ
ಮಂಗಳವಾರ15-ಆಗಸ್ಟ್​-23ಸ್ವಾತಂತ್ರ್ಯ ದಿನಾಚರಣೆ
ಸೋಮವಾರ18-ಸೆಪ್ಟೆಂಬರ್​-23ಗಣೇಶ ಚತುರ್ಥಿ
ಗುರುವಾರ28-ಸೆಪ್ಟೆಂಬರ್​-23ಈದ್ ಮಿಲಾದ್​
ಸೋಮವಾರ2-ಅಕ್ಟೋಬರ್​-23ಗಾಂಧಿ ಜಯಂತಿ
ಶನಿವಾರ14-ಅಕ್ಟೋಬರ್​-23ಮಹಾಲಯ ಅಮವಾಸ್ಯೆ
ಸೋಮವಾರ23-ಅಕ್ಟೋಬರ್​-23ಮಹಾ ನವಮಿ, ಆಯುಧಪೂಜೆ
ಮಂಗಳವಾರ24-ಅಕ್ಟೋಬರ್​-23ವಿಜಯದಶಮಿ
ಶನಿವಾರ28-ಅಕ್ಟೋಬರ್​-23ಮಹರ್ಷಿ ವಾಲ್ಮೀಕಿ ಜಯಂತಿ
ಬುಧವಾರ1-ನವೆಂಬರ್-23ಕನ್ನಡ ರಾಜ್ಯೋತ್ಸವ
 ಭಾನುವಾರ12-ನವೆಂಬರ್​-23ನರಕ ಚತುರ್ದಶಿ
ಮಂಗಳವಾರ14-ನವೆಂಬರ್-23ಬಲಿ ಪಾಡ್ಯಮಿ, ದೀಪಾವಳಿ
ಗುರುವಾರ30-ನವೆಂಬರ್​-23ಕನಕದಾಸರ ಜಯಂತಿ
ಸೋಮವಾರ25-ಡಿಸೆಂಬರ್​ಕ್ರಿಸ್ಮಸ್​

ಈ ರಜಾದಿನಗಳನ್ನು ಹೊರತುಪಡಿಸಿ ಸಾಮಾನ್ಯ ರಜಾದಿನಗಳಿವೆ. ಪ್ರತಿ ತಿಂಗಳ ಪ್ರತಿ ಭಾನುವಾರ, ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್‌ಗಳು ತೆರೆಯುವುದಿಲ್ಲ. ಈ ರಜಾದಿನಗಳು ಸಾಮಾನ್ಯವಾಗಿ ಪ್ರತಿ ತಿಂಗಳ 6 ಅಥವಾ 7 ರಂದು ಬರುತ್ತವೆ. ಮೇಲೆ ವಿವರಿಸಿದಂತೆ ಈ ಸಾರ್ವಜನಿಕ ರಜಾದಿನಗಳ ಜೊತೆಗೆ. ಬ್ಯಾಂಕ್‌ಗಳು ಮುಚ್ಚಿದಾಗ ಗ್ರಾಹಕರು ಆನ್‌ಲೈನ್ ಬ್ಯಾಂಕಿಂಗ್, ನೆಟ್‌ಬ್ಯಾಂಕಿಂಗ್, UPI, NEFT ನಂತಹ ಸೇವೆಗಳನ್ನು ಬಳಸಬಹುದು. ಈ ಸೇವೆಗಳು ದಿನದ 24 ಗಂಟೆಯೂ ಲಭ್ಯ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles