30.6 C
Bengaluru
Wednesday, March 15, 2023
spot_img

ಕಾಂತಾರ: ತೈಕುಡಮ್ ಬ್ರಿಡ್ಜ್ ಗೆ ಉಗಿದು ಉಪ್ಪಿನಕಾಯಿ ಹಾಕುತ್ತಿರುವ ನೆಟ್ಟಿಗರು

-ಶೌರ್ಯ ಡೆಸ್ಕ್

ಕೇರಳದಲ್ಲಿ  ಕಾಂತಾರ ಹವಾ ಸೃಷ್ಟಿಸಿರುವ ಬೆನ್ನಲೇ ಸಿನಿಮಾವನ್ನು  ಮೆಚ್ಚಿ ಅಲ್ಲಿನ ಸಿನಿಮಾ ಪ್ರೇಮಿಗಳು ಕಾಂತರದ ಬೆನ್ನಿಗೆ ನಿಂತಿದ್ದಾರೆ. ನೆಟ್ಟಿಗರು ಆ ಬ್ಯಾಂಡ್ ಅನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಂತರ ಜಗತ್ತಿನೆಲ್ಲೆಡೆ ಸುಪ್ತ ಮನಸಿನ ಆಧ್ಯಾತ್ಮಿಕ ಜಾಗೃತಿಯನ್ನು ಬಡಿದೆಬ್ಬಿಸಿದ ಸಿನಿಮಾ. ಕನ್ನಡದಲ್ಲೇ ರಿಲೀಸ್ ಆಗಿ ಭಾರತದ ಎಲ್ಲಾ ರಾಜ್ಯಗಳಲ್ಲೂ ತೆರೆಕಂಡು ಎಲ್ಲಾ ಭಾಷಿಕರನ್ನು ಸೆಳೆದು ಕೋಟಿಕೋಟಿ ಬಾಚಿದ ಚಿತ್ರಕ್ಕೆ ದೇವೇಂದ್ರ ಸುತೂರು ಎನ್ನುವ ಪಾತ್ರದ ಜೊತೆಗೆ ಅಯ್ಯಪ್ಪ ಮಾಲಾಧಾರಿ ಒಬ್ಬ ವಿಲನ್ ಇದ್ದಾನಲ್ಲ ಅವನ ಹಾಗೆ ಕೇರಳದಲ್ಲಿ ಈ ಸಿನಿಮಾದ ಹಾಡು ‘ವರಾಹ ರೂಪ’ ಅನ್ನುವ ಹಾಡಿನ ನಕಲು ಎಂದು ‘ಥೈಕುಡಮ್ ಬ್ರಿಡ್ಜ್’ ಎನ್ನುವ ರಾಪ್ ಬ್ಯಾಂಡ್ ಕೇಸ್ ಕೊಟ್ಟರು. ಅದು ನಮ್ಮ ಹಾಡು. ಅದು ನಮ್ಮ ಹಾಡಿನ ಟ್ಯೂನ್ ಕದ್ದು ಮಾಡಿದ್ದು ಅಂತ ಆರೋಪ ಮಾಡಿರುವ ಬೆನ್ನಲ್ಲೇ ಕೇರಳದ ಮಲಯಾಳಿಗರು ಆ ಬ್ಯಾಂಡ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇರಳದಲ್ಲಿ  ಕಾಂತಾರ ಹವಾ ಸೃಷ್ಟಿಸಿರುವ ಬೆನ್ನಲೇ ಸಿನಿಮಾವನ್ನು  ಮೆಚ್ಚಿ ಅಲ್ಲಿನ ಸಿನಿಮಾ ಪ್ರೇಮಿಗಳು ಕಾಂತರದ ಬೆನ್ನಿಗೆ ನಿಂತಿದ್ದಾರೆ. ನೆಟ್ಟಿಗರು ಆ ಬ್ಯಾಂಡ್ ಅನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಒಂದು ಸಿನಿಮಾ ಗೆದ್ದಾಗ ಅದಕ್ಕೆ ಈ ರೀತಿ ಮಾಡಿ ಹಣ ಕೀಳುವ ಪರಿಪಾಟ ಇದ್ದದ್ದೇ. ಅದನ್ನೇ ಇಲ್ಲಿ ಈ ಥೈಕುಡಮ್ ಬ್ರಿಡ್ಜ್ ಮಾಡುತ್ತಿರುವುದು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಮತ್ತೆ ಕೆಲವರು ಹೇಳುವುದು “ನೀವು ಕೂಡ ಮಲಯಾಳಂ ಹಳೆಯ ಹಾಡನ್ನೇ ರಿಮಿಕ್ಸ್ ಮಾಡಿ ಫೇಮಸ್ ಆಗಿರುವುದು ಅದು ಕೂಡ ತಪ್ಪಲ್ಲವೇ ಮತ್ತು ಹಾಗೆ ನೋಡಿದರೆ ಥೈಕುಡಮ್ ಬ್ರಿಡ್ಜ್ ಅನ್ನುವ ಹೆಸರು ಇಟ್ಟ ನಿಮಗೆ ಮೊದಲು ಕೊಚ್ಚಿ (Calicut) ಕಾರ್ಪೋರೇಷನವರು ನಿಮ್ಮ ಮೇಲೆ ಕೇಸ್ ಹಾಕಬೇಕು ಯಾಕೆಂದರೆ ಅಲ್ಲಿಯ ಆ ಸ್ಥಳದ ಹಾಗೂ ಆ ಬ್ರಿಡ್ಜ್‌ ನ ಹೆಸರು ಹಾಕಿದ ಕಾರಣಕ್ಕಾಗಿ. ಅದೆ ರೀತಿ ಮಟ್ಟoಜೇರಿ ಮಾಫಿಯಾದ ಕೈಯಲ್ಲಿ ನಲುಗುತ್ತಿರುವ ಗಾಂಜಾದ ಮತ್ತಿನಲ್ಲಿ ಇರುವ ಈ ರಾಪ್ ಬ್ಯಾಂಡ್ ನ ನಿಮ್ಮನ್ನೇ ಬ್ಯಾನ್ ಮಾಡಬೇಕೆಂದು ಕಾಂತಾರಕ್ಕೆ ಬೆಂಬಲ ಕೊಟ್ಟು ಥೈಕುಡಮ್ ಬ್ರಿಡ್ಜ್ ಅನ್ನು ವ್ಯಾಪಕವಾಗಿ ವಿಮರ್ಶೆ ಮಾಡುತ್ತಿದ್ದಾರೆ.

ಮತ್ತೆ ನಮ್ಮ ತುಳುನಾಡಿನ ದೈವಗಳು ಹಾಗೂ ಕೇರಳದ ದೈವ ಭೂತಗಳ ಆಚರಣೆಯಲ್ಲಿ ತುಂಬಾ ಹತ್ತಿರದ ಸಾದೃಶ್ಯ ಇರುವ ಈ ಆಚರಣೆಯನ್ನು ಬಿಂಬಿಸುವ ಈ ಸಿನಿಮಾವನ್ನು ಮಲಯಾಳಿಗರು ತಮ್ಮ ಹೃದಯದಲ್ಲಿ ಇಟ್ಟು ನೋಡುತ್ತಿರುವುದು ದೇವರ ಸ್ವಂತ ನಾಡಿನಲ್ಲಿ ದೇವರನ್ನೇ ಕಡೆಗಣಿಸಿದ ಜನಗಳಲ್ಲಿ ಮತೊಮ್ಮೆ ಧಾರ್ಮಿಕ ಭಾವನೆಯನ್ನು ಬಡಿದೆಬ್ಬಿಸಿದೆ.  ಕಾಂತಾರ ಸಿನಿಮಾ ಮಾತ್ರ ಆಗದೆ ಕೇರಳದ ಕಲೆ, ಸಂಪ್ರದಾಯ, ನೆಲದ ಸಂಸ್ಕೃತಿಯ ಅಲೆಯೇ ಆಗಿದೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles