30.6 C
Bengaluru
Wednesday, March 15, 2023
spot_img

ಇಂದು ರಾಜ್ಯೋತ್ಸವ ಪ್ರಶಸ್ತಿ ಘೋಷಣೆ? ಹೇಗಿರಲಿದೆ ಪಟ್ಟಿ?

-ಶೌರ್ಯ ಡೆಸ್ಕ್

ಈ ಸಲವೂ ಹಿಂದಿನ ವರ್ಷದಂತೆ ಸಾಧನೆ ಮಾಡಿಯೂ ಪ್ರಚಾರ ಗಳಿಸದೆ ಎಲೆಮರೆಕಾಯಿಯಂತೆಯೇ ಉಳಿದ ಸಾಧಕರನ್ನು ಗುರುತಿಸಲಾಗುವುದು ಎನ್ನಲಾಗಿದೆ.
ಚುನಾವಣೆಗೆ ಅನುಕೂಲವಾಗುವಂತೆಯೂ ಪಟ್ಟಿ ಇರಲಿದೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಆಯ್ಕೆಯಾದ ಸಾಧಕರ ಅಂತಿಮ ಪಟ್ಟಿ ಇಂದು (ಶನಿವಾರ) ಸಂಜೆಯೊಳಗೆ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿ ಸಭೆ ನಡೆದಿದೆ. ಅದರಲ್ಲಿ 134 ಜನರ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿದೆ. ನಂತರ ರಾತ್ರಿ ಮುಖ್ಯಮಂತ್ರಿಗಳು ಮತ್ತೊಂದು ಸುತ್ತಿನ ಸಭೆ ನಡೆಸಿ ಪಟ್ಟಿಯನ್ನು ಆಖೈರುಗೊಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಬದಲಾವಣಿಗಳಿದ್ದರೆ ಮಾಡಿ ಇಂದು ಸಂಜೆಯೊಳಗೆ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಈ ವರ್ಷ 67 ನೇ ರಾಜ್ಯೋತ್ಸವ ಆಗಿರುವುದರಿಂದ ಒಟ್ಟು 67 ಮಂದಿ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಲಾಗುವುದು. ಹೈಕೋರ್ಟ್‌ ಆದೇಶ ಇರುವುದರಿಂದ ಈ ಬಾರಿಯೂ 60 ವರ್ಷ ಮೇಲ್ಪಟ್ಟವರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಈ ಸಲವೂ ಹಿಂದಿನ ವರ್ಷದಂತೆ ಸಾಧನೆ ಮಾಡಿಯೂ ಪ್ರಚಾರ ಗಳಿಸದೆ ಎಲೆಮರೆಕಾಯಿಯಂತೆಯೇ ಉಳಿದ ಸಾಧಕರನ್ನು ಗುರುತಿಸಲಾಗುವುದು ಎನ್ನಲಾಗಿದೆ.
ಚುನಾವಣೆಗೆ ಅನುಕೂಲವಾಗುವಂತೆಯೂ ಪಟ್ಟಿ ಇರಲಿದೆ. ಪ್ರಾದೇಶಿಕ, ನಿರ್ದಿಷ್ಟ ಸಿದ್ದಾಂತ, ಜಾತಿಯೂ ಗಣನೆಗೆ ಬರುತ್ತದೆ. ಕೊಂಚ ಮಟ್ಟಿಗೆ ಮೇಲ್ಮಟ್ಟದ ವಶೀಲಿಯೂ ನಡೆಯಬಹುದು ಆದರೆ ಹಿಂದಿನಂತೆ ನೂರಾರು ಮಂದಿಗೆ ಪ್ರಶಸ್ತಿ ಕೊಡಲು ಸಾಧ್ಯವಿಲ್ಲದಿರುವುದರಿಂದ ಸಾಧಕರಿಗೆ ಮಾತ್ರ ಪ್ರಶಸ್ತಿ ಸಿಗಬಹುದು ಅನ್ನುತ್ತಿದ್ದಾರೆ ಪತ್ರಕರ್ತರ ವಲಯದ ಹಿರಿಯರು.

ದಾಖಲೆ ಪ್ರಮಾಣದ ಅರ್ಜಿ ಸಲ್ಲಿಕೆ

ಈ ಸಲ ದಾಖಲೆ ಪ್ರಮಾಣದ 28, 857 ಅರ್ಜಿಗಳು ಸಲ್ಲಿಕೆಯಾಗಿವೆ.
ಕಚೇರಿಗೆ ಭೌತಿಕವಾಗಿ 1450 ಅರ್ಜಿಗಳು ಹಾಗೂ `ಸೇವಾ ಸಿಂಧು’ ಮೂಲಕ 4770 ಹೆಸರುಗಳು ಬಂದಿದ್ದು ಅವುಗಳನ್ನು 28,857 ಜನರು ಆನ್ಲೈನ್ ಮೂಲಕ ಶಿಫಾರಸ್ಸು ಮಾಡಿದ್ದಾರೆ. ಶಿಕ್ಷಣ, ಸಾಹಿತ್ಯ, ಸಂಗೀತ, ಕಲೆ, ನಾಟಕ, ಕ್ರೀಡೆ, ಕೃಷಿ, ವಿಜ್ಞಾನ-ತಂತ್ರಜ್ಞಾನ ಸೇರಿದಂತೆ 26 ಕ್ಷೇತ್ರಗಳಲ್ಲಿ ಸಾಧಕರ ಅರ್ಜಿಗಳು ಬಂದಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles