-ಶೌರ್ಯ ಡೆಸ್ಕ್
ಶ್ರೀ ಲಂಕಾದ ಮೂಲದ ನಟಿಗೆ ಆ ದ್ವೀಪ ರಾಷ್ಟ್ರದಲ್ಲಿ ಒಂದು ಐಷಾರಾಮಿ ಫಾರ್ಮ್ ಹೌಸ್, ಮುಂಬೈ ಮತ್ತು ಬೆಂಗಳೂರಿನಲ್ಲಿ ದುಬಾರಿ ಫ್ಲಾಟ್‌ಗಳು, ಕೋಟ್ಯಂತರ ಮೌಲ್ಯದ ಚಿನ್ನ, ವಜ್ರದ ಆಭರಣ, ಕಾರುಗಳು, ಬೆಲೆಬಾಳುವ ಕುದುರೆ, ನಾಯಿಗಳನ್ನು ಸುಕೇಶ್ ಜಾಕ್ವೆಲಿನ್‌ಗೆ ಕೊಡಿಸಿದ್ದ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.

ಸುಕೇಶ್ ಚಂದ್ರಶೇಖರ್ ಮಾಡಿದ್ದಾರೆ ಎನ್ನಲಾದ 200 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿದ್ದ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಕೊನೆಗೂ ನ್ಯಾಯಾಲಯ ರಿಲೀಫ್ ನೀಡಿದೆ.

ಸುಕೇಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ಸತತವಾಗಿ ವಿಚಾರಣೆಗೆ ಹಾಜರಾಗುತ್ತಿದ್ದರು. ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಕೋರ್ಟಿಗೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಜಾಕ್ವೆಲಿನ್ ಹೆಸರು ಕೂಡ ಇತ್ತು. ಹಾಗಾಗಿಯೇ ಜಾಮೀನಿಗಾಗಿ ನಟಿ ಕೋರ್ಟ್ ಮೊರೆ ಹೋಗಿದ್ದರು. ಸದ್ಯ ಅವರಿಗೆ ಮಧ್ಯಂತರ ಜಾಮೀನು ದೊರೆಕಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಲಾಗಿದೆ.

ಈಗ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎನ್ನುವುದನ್ನು ರಾ ರಾ ರಕ್ಕಮ್ಮ ಖ್ಯಾತಿಯ ನಟಿ ಆಧಾರ ಸಹಿತ ಕೋರ್ಟ್ಗೆ ಸಾಬೀತು ಪಡಿಸಬೇಕಾಗಿದೆ. ಅಲ್ಲದೇ, ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಪ್ರಕರಣದ ಗಂಭೀರತೆಯನ್ನು ವಿವರಿಸಿದ್ದರಿಂದ ಜಾಕ್ವೆಲಿನ್ ತಮ್ಮನ್ನು ತಾವು ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಉದ್ಯಮಿಯೊಬ್ಬರಿಗೆ 200 ಕೋಟಿ ವಂಚಿಸಿದ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು ತಳುಕು ಹಾಕಿಕೊಂಡಿದ್ದು, ಸುಕೇಶ್ ನಿಂದ ದುಬಾರಿ ಗಿಫ್ಟ್ ಗಳನ್ನು ಆಕೆ ಪಡೆದುಕೊಂಡಿದ್ದಳು. ವಂಚನೆ ಹಣದಿಂದಲೇ ದುಬಾರಿ ಗಿಫ್ಟ್ ಗಳನ್ನು ಸುಕೇಶ್ ಕೊಡಿಸಿದ್ದಾನೆ ಎಂದೂ ಹೇಳಲಾಗುತ್ತಿದೆ.

ಶ್ರೀ ಲಂಕಾದ ಮೂಲದ ನಟಿಗೆ ಆ ದ್ವೀಪ ರಾಷ್ಟçದಲ್ಲಿ ಒಂದು ಐಷಾರಾಮಿ ಫಾರ್ಮ್ ಹೌಸ್, ಮುಂಬೈ ಮತ್ತು ಬೆಂಗಳೂರಿನಲ್ಲಿ ದುಬಾರಿ ಫ್ಲಾಟ್‌ಗಳು, ಕೋಟ್ಯಂತರ ಮೌಲ್ಯದ ಚಿನ್ನ, ವಜ್ರದ ಆಭರಣ, ಕಾರುಗಳು, ಬೆಲೆಬಾಳುವ ಕುದುರೆ, ನಾಯಿಗಳನ್ನು ಸುಕೇಶ್ ಜಾಕ್ವೆಲಿನ್‌ಗೆ ಕೊಡಿಸಿದ್ದ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.
