19.8 C
Bengaluru
Monday, March 20, 2023
spot_img

ಹಣ ಅಕ್ರಮ ವರ್ಗಾವಣೆ: ನಟಿ ಜಾಕ್ವೆಲಿನ್ ಫರ್ನಾಂಡಿಸ್ ಜೈಲೂಟ?

-ಶೌರ್ಯ ಡೆಸ್ಕ್

ಈ ಹಿಂದೆ ಫರ್ನಾಂಡೀಸ್ ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದ ವಿಶೇಷ ನ್ಯಾಯಾಧೀಶ ಶೈಲೇಂದ್ರ ಮಲಿಕ್, ನಟಿ ಹಾಗೂ ಇ.ಡಿ ಪರ ವಾದ ಮಂಡಿಸಿದ ವಕೀಲರ ವಾದ ಆಲಿಸಿದ ಬಳಿಕ ಶುಕ್ರವಾರಕ್ಕೆ ಆದೇಶವನ್ನು ಕಾಯ್ದಿರಿಸಿದ್ದಾರೆ.

ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿ ವಂಚಕ, ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ವಿರುದ್ಧದ 200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಜೈಲಾ ಬೇಲಾ ಎಂಬುದು ಶುಕ್ರವಾರ ನಿರ್ಧಾರವಾಗಲಿದೆ.

ಜಾಮೀನು ನೀಡಬೇಕೆ ಅಥವಾ ಬೇಡವೇ ಎಂಬುದರ ಕುರಿತು ದೆಹಲಿ ನ್ಯಾಯಾಲಯ ತನ್ನ ಆದೇಶವನ್ನು ಪ್ರಕಟಿಸಲಿದೆ.

ಸುಖೇಶ್ ನಿಂದ ಜಾಕ್ವೆಲಿನಾ ಕೋಟಿಕೋಟಿ ಮೌಲ್ಯದ ಉಡುಗೊರೆಗಳು, ವಿಲ್ಲಾ, ಐಷಾರಾಮಿ ಕಾರು, ಆಭರಣಗಳನ್ನು ಕೊಡಿಸಿಕೊಂಡಿದ್ದರು. ಇಬ್ಬರು ಅರೆನಗ್ನವಾಗಿರುವ ಮತ್ತು ಕಿಸ್ಸಿಂಗ್ ಮಾಡಿಕೊಳ್ಳುವ ವೈರಲ್ ಆಗಿದ್ದವು. ಇಬ್ಬರ ನಡುವೆ ಪರಸ್ಪರ ಪ್ರೇಮ ಮತ್ತು ಸಂಬಂಧವಿತ್ತು ಎಂಬ ಮಾಹಿತಿ ಲೀಕ್ ಆಗಿತ್ತು.

ಈ ಹಿಂದೆ ಫರ್ನಾಂಡೀಸ್ ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದ ವಿಶೇಷ ನ್ಯಾಯಾಧೀಶ ಶೈಲೇಂದ್ರ ಮಲಿಕ್, ನಟಿ ಹಾಗೂ ಇ.ಡಿ ಪರ ವಾದ ಮಂಡಿಸಿದ ವಕೀಲರ ವಾದ ಆಲಿಸಿದ ಬಳಿಕ ಶುಕ್ರವಾರಕ್ಕೆ ಆದೇಶವನ್ನು ಕಾಯ್ದಿರಿಸಿದ್ದಾರೆ.

ನವೆಂಬರ್ 24 ರಂದು ನ್ಯಾಯಾಲಯವು ಆರೋಪದ ಬಗ್ಗೆ ವಾದವನ್ನು ಆಲಿಸಲಿದೆ. ಸೆಪ್ಟೆಂಬರ್ 26 ರಂದು ನ್ಯಾಯಾಲಯವು ನಟಿಗೆ 50,000 ರೂಪಾಯಿಗಳ ವೈಯಕ್ತಿಕ ಬಾಂಡ್ ಮೇಲೆ ಮಧ್ಯಂತರ ಜಾಮೀನು ನೀಡಿತ್ತು.

ನ್ಯಾಯಾಲಯವು ಆಗಸ್ಟ್ 31 ರಂದು ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ ಪೂರಕ ಚಾರ್ಜ್ ಶೀಟ್ ಅನ್ನು ಗಮನಕ್ಕೆ ತೆಗೆದುಕೊಂಡಿತು ಮತ್ತು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಫರ್ನಾಂಡಿಸ್ ಅವರಿಗೆ ತಿಳಿಸಿತ್ತು.

ತನಿಖೆಗೆ ಸಂಬಂಧಿಸಿದಂತೆ ಇ.ಡಿಯಿಂದ ಹಲವು ಬಾರಿ ಸಮನ್ಸ್ ಪಡೆದಿದ್ದ ಫರ್ನಾಂಡಿಸ್ ಅವರನ್ನು ಪೂರಕ ಚಾರ್ಜ್ ಶೀಟ್ನಲ್ಲಿ ಮೊದಲ ಬಾರಿಗೆ ಆರೋಪಿ ಎಂದು ಹೆಸರಿಸಲಾಗಿದೆ. ಇ.ಡಿಯ ಹಿಂದಿನ ಚಾರ್ಜ್ ಶೀಟ್ ಮತ್ತು ಪೂರಕ ಚಾರ್ಜ್ ಶೀಟ್ನಲ್ಲಿ ಆಕೆಯನ್ನು ಆರೋಪಿ ಎಂದು ನಮೂದಿಸಿರಲಿಲ್ಲ.

ಆದಾಗ್ಯೂ, ದಾಖಲೆಗಳಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸಹ ನಟಿ ನೋರಾ ಫತೇಹಿ ದಾಖಲಿಸಿದ ಹೇಳಿಕೆಗಳ ವಿವರಗಳನ್ನು ಉಲ್ಲೇಖಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles