-ಶೌರ್ಯ ಡೆಸ್ಕ್
ವರದಿಯ ಪ್ರಕಾರ, 300 ಮಂದಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಸಿಬ್ಬಂದಿಗಳು ಅಲ್ಲಿದ್ದು, ಬೃಹತ್ ಪ್ರಮಾಣದಲ್ಲಿ ಚೀನಾದ ಸಿಬ್ಬಂದಿಗಳಿಗೆ ಗಾಯಗಳಾಗಿವೆ. ಎಷ್ಟು ಹೇಳಿದರೂ ಕೇಳದೆ ಪುಂಡಾಟ ನಡೆಸಿದ ಚೀನಿ ಸೈನಿಕರನ್ನು ಭಾರತ ಸಿಪಾಯಿಗಳು ಅಟ್ಟಿಸಿಕೊಂಡು ಹೋಗಿ ಹೊಡೆದಿದ್ದಾರೆ. ಕ್ಯಾತೆ ತೆಗದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಚಚ್ಚಿದ್ದಾರೆ ಎನ್ಬಲಾಗಿದೆ.

ವಾಸ್ತವ ನಿಯಂತ್ರಣ ರೇಖೆ ಬಳಿ ಚೀನಾ ಮತ್ತೆ ಕಿತಾಪತಿ ಆರಂಭಿಸಿದ್ದು, ಭಾರತೀಯ ಸೇನೆ ಹಾಗೂ ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿಯ ನಡುವೆ ಗಡಿಯಲ್ಲಿ ಸಂಘರ್ಷ ಏರ್ಪಟ್ಟಿದೆ.
ಎಲ್ಎಸಿಯಲ್ಲಿ ಉಭಯ ದೇಶಗಳ ಸಿಬ್ಬಂದಿಗಳ ನಡುವೆ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ನಲ್ಲಿ ಘರ್ಷಣೆ ಉಂಟಾಗಿದ್ದು, ಚೀನಾದ ನೂರಾರು ಮಂದಿ ಸೈನಿಕರನ್ನು ಭಾರತೀಯ ಯೋಧರು ಅಟ್ಟಾಡಿಸಿ ಹೊಡೆದಿದ್ದಾರೆ. ಘರ್ಷಣೆಯಲ್ಲಿ 6 ಮಂದಿ ಭಾರತೀಯ ಯೋಧರಿಗೂ ಗಾಯಗಳಾಗಿವೆ ಎಂದು ಭಾರತೀಯ ಸೇನೆ ಸೋಮವಾರ ಬಹಿರಂಗಪಡಿಸಿದೆ. ಈ ನಡುವೆ ಚೀನಾ ಸೇನೆಗೆ ಭಾರತ ಸೇನೆ ಖಡಕ್ ತಿರುಗೇಟು ಕೊಟ್ಟಿರುವುದು ಬಹಿರಂಗವಾಗಿದೆ.
ಗಡಿ ದಾಟಲು ಬಂದು ದೊಣ್ಣೆಗಳಿಂದ ಹಿಗ್ಗಾಮುಗ್ಗಾ ಚಚ್ಚಿಸಿಕೊಂಡ ಚೀನಿ ಸೈನಿಕರು ಅಲ್ಲಿಂದ ಎದ್ದೂ ಬಿದ್ದು ಓಡಿಹೋದರು. 100 ಭಾರತೀಯ ಸಿಪಾಯಿಗಳು 300ಕ್ಕೂ ಹೆಚ್ಚು ಚೀನಿಗಳನ್ನು ಹಿಮ್ಮೆಟ್ಟಿಸಿ ಓಡಿಸಿದರು ಎನ್ನಲಾಗಿದೆ.

ಡಿ.09 ರಂದು ಚೀನಾ ಸೇನಾ ಸಿಬ್ಬಂದಿಗಳು ಎಲ್ಎಸಿ ಬಳಿ ಮುಖಾಮುಖಿಯಾಗಿದ್ದು, ಭಾರತೀಯ ಪಡೆಗಳು ಈ ನಡೆಯನ್ನು ತೀವ್ರವಾಗಿ ಖಂಡಿಸಿತ್ತು. ವರದಿಯ ಪ್ರಕಾರ, 300 ಮಂದಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಸಿಬ್ಬಂದಿಗಳು ಅಲ್ಲಿದ್ದು, ಬೃಹತ್ ಪ್ರಮಾಣದಲ್ಲಿ ಚೀನಾದ ಸಿಬ್ಬಂದಿಗಳಿಗೆ ಗಾಯಗಳಾಗಿವೆ. ಎಷ್ಟು ಹೇಳಿದರೂ ಕೇಳದೆ ಪುಂಡಾಟ ನಡೆಸಿದ ಚೀನಿ ಸೈನಿಕರನ್ನು ಭಾರತ ಸಿಪಾಯಿಗಳು ಅಟ್ಟಿಸಿಕೊಂಡು ಹೋಗಿ ಹೊಡೆದಿದ್ದಾರೆ. ಕ್ಯಾತೆ ತೆಗದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಚಚ್ಚಿದ್ದಾರೆ ಎನ್ಬಲಾಗಿದೆ.
2020 ರಲ್ಲಿ ಸಂಭವಿಸಿದ್ದ ಗಲ್ವಾನ್ ಘರ್ಷಣೆಯ ನಂತರ ಚೀನಾ- ಭಾರತದ ನಡುವೆ ಈ ಹೊಸ ಘರ್ಷಣೆ ಉಂಟಾಗಿದೆ. ಚೀನಾ ಹಾಗೂ ಭಾರತ 1962 ರಲ್ಲಿ ಪೂರ್ಣ ಪ್ರಮಾಣದ ಯುದ್ಧ ನಡೆಸಿದ್ದವು, ಅರುಣಾಚಲ ಪ್ರದೇಶದ ಮೇಲಿನ ಹಕ್ಕು ಸ್ಥಾಪನೆಯ ವಿಷಯವಾಗಿ ಈ ಯುದ್ಧ ನಡೆದಾಗಿನಿಂದಲೂ ಚೀನಾ ಅರುಣಾಚಲ ಪ್ರದೇಶವನ್ನು ತನ್ನದೆಂದು ಹಕ್ಕು ಪ್ರತಿಪಾದನೆ ಮಾಡುತ್ತಿದ್ದು, ಅದನ್ನು ಟಿಬೆಟ್ ನ ಭಾಗ ಎಂದು ಹೇಳುತ್ತಿದೆ.

ಚೀನಾ ಗಡಿ ಪ್ರದೇಶದಲ್ಲಿ ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಿಸುತ್ತಿದೆ. ಡಿಸೆಂಬರ್ 9 ರಂದು, ಚೀನಾದ ಗಡಿ ವಾಸ್ತವ ರೇಖೆಯಲ್ಲಿ ಚೀನಾದ ಸೇನಾಪಡೆ ಯೋಧರು ಯಾಂಗ್ಟ್ಸೆ, ತವಾಂಗ್ ಸೆಕ್ಟರ್ನಲ್ಲಿ ಆಕ್ರಮಣ ಮಾಡಿಕೊಂಡು ಒಳನುಸುಳಿದರು. ಅಲ್ಲಿನ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿತು. ಇದನ್ನು ನಮ್ಮ ಪಡೆಗಳು ದೃಢವಾದ ರೀತಿಯಲ್ಲಿ ನಿಭಾಯಿಸಿದರು ಎಂದು ಸದನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾರತ- ಅಮೇರಿಕಾ ಜಂಟಿ ಸಮರಾಭ್ಯಾಸದ ಬೆನ್ನಲ್ಲೇ ಗಡಿಯಲ್ಲಿ ಚೀನಾ ಹೊಸದಾಗಿ ಘರ್ಷಣೆಗೆ ಮುಂದಾಗಿದ್ದು, ಎರಡೂ ದೇಶಗಳ ಸೈನಿಕರಿಗೆ ಗಾಯಗಳಾಗಿವೆ ಎಂದು ರಾಜನಾಥ್ ಸಿಂಗ್ ಸದನಕ್ಕೆ ಮಾಹಿತಿ ನೀಡಿದ್ದಾರೆ.
ಚೀನಾ ಹೇಳುವುದೇನು?
ಕಳೆದ ವಾರ ಅರುಣಾಚಲ ಗಡಿಯ ಯಾಂಗ್ಟ್ಸೆ ಪ್ರದೇಶದಲ್ಲಿ ಭಾರತ – ಚೀನಾ ಸೇನಿಕರ ನಡುವೆ ಘರ್ಷಣೆ ನಡೆದಿದೆ ಎಂದು ವರದಿಯಾದ ನಂತರ ಭಾರತದೊಂದಿಗಿನ ತನ್ನ ಗಡಿಯಲ್ಲಿ ಪರಿಸ್ಥಿತಿ “ಸ್ಥಿರವಾಗಿದೆ” ಎಂದು ಚೀನಾ ಹೇಳಿದೆ. ಆದರೆ ಅಲ್ಲಿ ಘರ್ಷಣೆ ನಡೆದಿದೆಯೇ? ಅಥವಾ ಇಲ್ಲವೇ? ನಡೆದಿದ್ದರೆ ಚೀನಾದ ಸೈನಿಕರಿಗೆ ಗಾಯಗಳಾಗಿರುವುದು ನಿಜವೇ ಎಂಬುದರ ಬಗ್ಗೆ ಚೀನಾ ತುಟಿಬಿಚ್ಚಿಲ್ಲ.

ರಾಜ್ಯಸಭೆಯಲ್ಲಿ ಭಾರತ-ಚೀನಾ ಗಡಿ ಘರ್ಷಣೆ ಗದ್ದಲ
ಭಾರತ-ಚೀನಾ ಗಡಿಯಲ್ಲಿ ಡಿ.09 ರಂದು ನಡೆದ ಘರ್ಷಣೆಯ ವಿಷಯವಾಗಿ ಚರ್ಚೆ ನಡೆಸಲು ವಿಪಕ್ಷಗಳು ಸಂಸತ್ ಕಲಾಪದಲ್ಲಿ ಆಗ್ರಹಿಸಿವೆ. ಇದೇ ವಿಷಯವಾಗಿ ರಾಜ್ಯಸಭೆ ಕಲಾಪದಲ್ಲಿ ಕೋಲಾಹಲ ಉಂಟಾಗಿ ಚರ್ಚೆಯ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಕಲಾಪದಿಂದ ವಿಪಕ್ಷಗಳು ಹೊರನಡೆದಿವೆ.
ಚರ್ಚೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿ, ಎನ್ ಸಿಪಿ, ಆರ್ ಜೆಡಿ, ಎಸ್ ಪಿ, ಜೆಎಂಎಂ, ಶಿವಸೇನೆ ಸೇರಿದಂತೆ ವಿಪಕ್ಷಗಳ ಸಂಸದರು ಸಭಾತ್ಯಾಗಕ್ಕೂ ಮುನ್ನ ಘೋಷಣೆ ಕೂಗಿದರು.
“ತವಾಂಗ್ ಸೆಕ್ಟರ್ ನಲ್ಲಿ ನಡೆದ ಭಾರತ-ಚೀನಾ ಸಿಬ್ಬಂದಿಗಳ ಘರ್ಷಣೆಯ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಹೇಳಿಕೆಯಲ್ಲಿ ಗಡಿಗೆ ಸಂಬಂಧಿಸಿದ ವಾಸ್ತವ ಸ್ಥಿತಿಯ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ, ಘರ್ಷಣೆಯ ವಿಷಯದ ಬಗ್ಗೆ ಸದನದಲ್ಲಿ ವಿಸ್ತೃತ ಚರ್ಚೆ ನಡೆಯಬೇಕಿದೆ” ಎಂದು ವಿಪಕ್ಷ ನಾಯಕ ಖರ್ಗೆ ಆಗ್ರಹಿಸಿದ್ದಾರೆ. “ಚೀನಾ ಖಾಲಿ ಜಾಗದಲ್ಲಿ ಸೇತುವೆಗಳನ್ನು ನಿರ್ಮಿಸಿದೆ ಎಂಬ ಮಾಹಿತಿ ಇದೆ, ಆರಂಭದಿಂದಲೂ ಪೂರ್ಣ ಮಾಹಿತಿ ಪಡೆಯುವುದಕ್ಕೆ ನಾವು ಶ್ರಮಿಸುತ್ತಿದ್ದೇವೆ, ದೇಶಕ್ಕೆ ಗಡಿಯಲ್ಲಿನ ಸ್ಥಿತಿ ಬಗ್ಗೆ ಮಾಹಿತಿ ನೀಡಬೇಕು” ಎಂದು ಖರ್ಗೆ ಹೇಳಿದ್ದಾರೆ.