30.6 C
Bengaluru
Wednesday, March 15, 2023
spot_img

ಜನಸಂಖ್ಯೆ: ಮುಂದಿನ ವರ್ಷ ಚೀನಾ ಹಿಂದಿಕ್ಕಲಿದೆ ಭಾರತ

-ಶೌರ್ಯ ಡೆಸ್ಕ್

ಜಗತ್ತಿನ ಎರಡು ಅತ್ಯಂತ ಜನಸಂಖ್ಯೆಯ ದೇಶಗಳಾದ ಚೀನಾ ಮತ್ತು ಭಾರತಗಳು, 2023ರ ಆರಂಭದ ವೇಳೆಗೆ ತಮ್ಮ ಸ್ಥಾನಗಳನ್ನು ಅದಲುಬದಲು ಮಾಡಿಕೊಳ್ಳಲಿವೆ ಎಂದು ವರದಿ ಹೇಳಿದೆ. ಚೀನಾದ 140 ಕೋಟಿ ಜನಸಂಖ್ಯೆಯು ಕ್ರಮೇಣವಾಗಿ ಇಳಿಕೆಯಾಗಲಿದೆ. 2050ರ ವೇಳೆಗೆ ಇದು 130 ಕೋಟಿಗೆ ತಗ್ಗಲಿದೆ. ಈ ಶತಮಾನದ ಅಂತ್ಯಕ್ಕೆ ಚೀನಾ ಜನಸಂಖ್ಯೆ ಕೇವಲ 800 ಮಿಲಿಯನ್‌ಗೆ ಇಳಿಕೆಯಾಗಲಿದೆ.

ಅನೇಕ ಗಂಭೀರ ಸವಾಲುಗಳನ್ನು ಎದುರಿಸುತ್ತಿರುವ ವಿಶ್ವದ ಜನಸಂಖ್ಯೆಯು ನವೆಂಬರ್ 15 ರಂದು ಎಂಟು ಬಿಲಿಯನ್ (800 ಮಿಲಿಯನ್) ತಲುಪಿದೆ. ವಿಶ್ವಸಂಸ್ಥೆ ಈ ಅಂದಾಜು ಮಾಡಿದೆ. ವರದಿಯ ಪ್ರಕಾರ, 2023 ರಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ. 1950 ರ ನಂತರ ಮೊದಲ ಬಾರಿಗೆ 2020 ರಲ್ಲಿ ಜಾಗತಿಕ ಜನಸಂಖ್ಯೆಯ ಬೆಳವಣಿಗೆಯು ಶೇಕಡಾ ಒಂದಕ್ಕಿಂತ ಕಡಿಮೆಯಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಯುಎನ್ ಅಂದಾಜಿನ ಪ್ರಕಾರ, ವಿಶ್ವದ ಜನಸಂಖ್ಯೆಯು 2030 ರಲ್ಲಿ 850 ಕೋಟಿ, 2050 ರಲ್ಲಿ 970 ಕೋಟಿ ಮತ್ತು 2080 ರಲ್ಲಿ ಸುಮಾರು 1400 ಕೋಟಿ ತಲುಪುತ್ತದೆ. ಅದರ ನಂತರ ಇದು ಇನ್ನೂ ಇಪ್ಪತ್ತು ವರ್ಷಗಳವರೆಗೆ ಅಂದರೆ 2100 ರವರೆಗೆ ಸ್ಥಿರವಾಗಿ ಮುಂದುವರಿಯುತ್ತದೆ. 2050 ರ ವೇಳೆಗೆ ಯೋಜಿತ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಬೆಳವಣಿಗೆಯು ಕೇವಲ ಎಂಟು ದೇಶಗಳಲ್ಲಿ ಕೇಂದ್ರೀಕೃತವಾಗಿರುತ್ತದೆ ಎಂದು ವರದಿ ಹೇಳಿದೆ. ಅವುಗಳೆಂದರೆ. ಕಾಂಗೋ, ಈಜಿಪ್ಟ್, ಇಥಿಯೋಪಿಯಾ, ಭಾರತ, ನೈಜೀರಿಯಾ, ಪಾಕಿಸ್ತಾನ, ಫಿಲಿಪೈನ್ಸ್ ಮತ್ತು ತಾಂಜಾನಿಯಾ.

ಭಾರಿ ಪ್ರಮಾಣದಲ್ಲಿ ವೃದ್ಧರನ್ನು ಹೊಂದಲಿರುವ ರಾಷ್ಟ್ರಗಳಲ್ಲಿ ದುಡಿಯುವ ವರ್ಗ ಕುಸಿತಗೊಂಡು ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳು ತಲೆದೋರಲಿವೆ ಎಂದು ವಿಶ್ಲೇಷಿಸಲಾಗಿದೆ. 1960ರ ದಶಕದ ಆರಂಭದಲ್ಲಿ ಉತ್ತುಂಗದಲ್ಲಿದ್ದ ವಿಶ್ವದ ಜನಸಂಖ್ಯೆ ಏರಿಕೆ ಪ್ರಮಾಣವು ನಂತರದಲ್ಲಿ ಗಮನಾರ್ಹ ರೀತಿಯಲ್ಲಿ ಇಳಿಕೆ ಕಂಡಿದೆ.

ವಾರ್ಷಿಕ ಬೆಳವಣಿಗೆ ದರವು 1962 ಮತ್ತು 1965ರ ಮಧ್ಯೆ ಇದ್ದ ಶೇ .2.1 ರಿಂದ 2020ರ ಹೊತ್ತಿಗೆ ಶೇ. 1ಕ್ಕೆ ಇಳಿಕೆಯಾಗಿದೆ. ಸಂತಾನೋತ್ಪತ್ತಿ ಶಕ್ತಿ (ಫರ್ಟಿಲಿಟಿ) ಕುಂದುವಿಕೆಯಿಂದ ಈ ಪ್ರಮಾಣವು 2050ರ ಹೊತ್ತಿಗೆ ಶೇ. 1.5ಕ್ಕೆ ಕುಗ್ಗಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಹೆಚ್ಚುತ್ತಿರುವ ಜನಸಂಖ್ಯೆಯನ್ನು ಮನುಷ್ಯನ ಮಹತ್ವದ ಹೆಜ್ಜೆ ಎಂದು ಕರೆದಿದ್ದಾರೆ. ಸಾರ್ವಜನಿಕ ಆರೋಗ್ಯ, ವೈಯಕ್ತಿಕ ನೈರ್ಮಲ್ಯ, ಪೋಷಣೆ ಮತ್ತು ಔಷಧದಲ್ಲಿನ ಸುಧಾರಣೆಗಳಿಂದಾಗಿ ಮಾನವನ ಜೀವಿತಾವಧಿಯಲ್ಲಿ ಕ್ರಮೇಣ ಹೆಚ್ಚಳವಾಗಿದ್ದು ಈ ಅಭೂತಪೂರ್ವ ಬೆಳವಣಿಗೆಗೆ ಕಾರಣವಾಗಿದೆ ಎಂದು ಯುಎನ್ ಹೇಳಿದೆ

ಚೀನಾ ಹಿಂದಿಕ್ಕಲಿದೆ ಭಾರತ

ಜಗತ್ತಿನ ಎರಡು ಅತ್ಯಂತ ಜನಸಂಖ್ಯೆಯ ದೇಶಗಳಾದ ಚೀನಾ ಮತ್ತು ಭಾರತಗಳು, 2023ರ ಆರಂಭದ ವೇಳೆಗೆ ತಮ್ಮ ಸ್ಥಾನಗಳನ್ನು ಅದಲುಬದಲು ಮಾಡಿಕೊಳ್ಳಲಿವೆ ಎಂದು ವರದಿ ಹೇಳಿದೆ. ಚೀನಾದ 140 ಕೋಟಿ ಜನಸಂಖ್ಯೆಯು ಕ್ರಮೇಣವಾಗಿ ಇಳಿಕೆಯಾಗಲಿದೆ. 2050ರ ವೇಳೆಗೆ ಇದು 130 ಕೋಟಿಗೆ ತಗ್ಗಲಿದೆ. ಈ ಶತಮಾನದ ಅಂತ್ಯಕ್ಕೆ ಚೀನಾ ಜನಸಂಖ್ಯೆ ಕೇವಲ 800 ಮಿಲಿಯನ್‌ಗೆ ಇಳಿಕೆಯಾಗಲಿದೆ.

ಪ್ರಸ್ತುತ ಚೀನಾಕ್ಕಿಂತ ಕೊಂಚ ಹಿಂದಿರುವ ಭಾರತದ ಜನಸಂಖ್ಯೆಯು 2023ರಲ್ಲಿ ನೆರೆಯ ದೇಶವನ್ನು ಹಿಂದಿಕ್ಕುವ ನಿರೀಕ್ಷೆ ಇದೆ. 2050ರ ವೇಳೆಗೆ ಇದು 170 ಕೋಟಿ ದಾಟಲಿದೆ. ದೇಶದಲ್ಲಿನ ಜನರ ಫಲವತ್ತಿಕೆ ಶಕ್ತಿ ಈಗಾಗಲೇ ಸಾಕಷ್ಟು ಇಳಿಕೆಯಾಗಿದ್ದರೂ, ಜನಸಂಖ್ಯೆಯ ಏರಿಕೆಯ ಗತಿ ನಿಯಂತ್ರಣಕ್ಕೆ ಬರುವುದಿಲ್ಲ. 2050ರ ವೇಳೆಗೂ ಅಮೆರಿಕ ಮೂರನೇ ಅತಿ ಜನಸಂಖ್ಯೆಯ ದೇಶವಾಗಿ ಇರಲಿದೆ. ಆದರೆ ನೈಜೀರಿಯಾ ಕೂಡ 375  ಮಿಲಿಯನ್ ಜನಸಂಖ್ಯೆಯೊಂದಿಗೆ ಅಮೆರಿಕದೊಂದಿಗೆ ಸ್ಥಾನ ಹಂಚಿಕೊಳ್ಳಲಿದೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles