-ಶೌರ್ಯ ಡೆಸ್ಕ್
ಹೌದು ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿರುವ ರಮ್ಯಾ ಬೆಂಗಳೂರಿನ ಹೃದಯ ಭಾಗದ ಪಂಚತಾರಾ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಸಿನಿಮಾ ತಯಾರಿಗೂ ಪ್ಲಾನ್ ಮಾಡುತ್ತಿದ್ದಾರೆ. ಇದೀಗ ಸಮಾರಂಭವೊಂದರಲ್ಲಿ ತಮ್ಮ ಮದುವೆಯ ಮೌನ ಮುರಿದಿದ್ದಾರೆ.

ಮದುವೆ ಆಗೋದಕ್ಕಿಂತ ನಂಗೆ ಜೀವನದಲ್ಲಿ ಖುಷಿಯಾಗಿರೋದು ಮುಖ್ಯ.. ನಂಗಿನ್ನು ಯಾರೂ ಸಿಕ್ಕಿಲ್ಲ, ಸಿಕ್ಕಿದ್ರೆ ಮದ್ವೆ ಮಾಡ್ಕೋತಿನಿ….
ಇವು ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರ ನೇರನುಡಿಗಳು.

ಹೌದು ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿರುವ ರಮ್ಯಾ ಬೆಂಗಳೂರಿನ ಹೃದಯ ಭಾಗದ ಪಂಚತಾರಾ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಸಿನಿಮಾ ತಯಾರಿಗೂ ಪ್ಲಾನ್ ಮಾಡುತ್ತಿದ್ದಾರೆ. ಇದೀಗ ಸಮಾರಂಭವೊಂದರಲ್ಲಿ ತಮ್ಮ ಮದುವೆಯ ಮೌನ ಮುರಿದಿದ್ದಾರೆ.
ಮದುವೆಯ ಕುರಿತು ಒಂದು ರೀತಿ ವೈರಾಗ್ಯ ಪ್ರದರ್ಶಿಸಿದ್ದಾರೆ.

ಸಾಕಷ್ಟು ವರ್ಷಗಳ ನಂತರ ರಮ್ಯಾ ಮತ್ತೆ ಬಣ್ಣ ಹಚ್ತಿದ್ದಾರೆ. ಡಾಲಿ ಧನಂಜಯ್ ಜತೆ ಸಿನಿಮಾ ಮಾಡುತ್ತಿದ್ದಾರೆ. ಈ ಮಧ್ಯೆ ತಮ್ಮ ಮದುವೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇತ್ತೀಚೆಗೆ ಬೆಂಗಳೂರು ಕಾಲೇಜುವೊಂದರಲ್ಲಿ ರಮ್ಯಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ನೆಚ್ಚಿನ ನಟಿ ರಮ್ಯಾಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ.

ಒಬ್ಬ ವಿದ್ಯಾರ್ಥಿ ” ಮೇಡಂ ನೀವೇಕೆ ಇನ್ನು ಮದುವೆ ಆಗಿಲ್ಲ” ಎಂದು ಪ್ರಶ್ನಿಸಿದಾಗ ಉತ್ತರಿಸಿರುವ ರಮ್ಯಾ
“ಮದುವೆ ಏನಕ್ಕೇ ಆಗಬೇಕು ಎಂಬುದು ಅರ್ಥವಾಗುತ್ತಿಲ್ಲ” ಅಂದಿದ್ದಾರೆ. ಅದಕ್ಕೆ ಆ ವಿದ್ಯಾರ್ಥಿ “ಅದೇ ನಾವು ಹೇಳುತ್ತಿರೋದು ಮದುವೆ ಆಗಬೇಡಿ. ಅದೇ ನಮಗೆ ಬೇಕಾಗಿರೋದು” ಎಂದು ಹೇಳಿದ್ದಾನೆ.
ಅದಕ್ಕೆ ರಮ್ಯಾ “ಮದುವೆ ಆಗಬಾರದು ಅಲ್ವಾ ಯೆಸ್ ಆಗಲ್ಲಾ” ಎಂದಿದ್ದಾರೆ. ಹ್ಯಾಪಿಯಾಗಿರೋದು ಅಥವಾ ಮದುವೆ ಎರಡರಲ್ಲಿ ಒಂದನ್ನ ಚೂಸ್ ಮಾಡಬೇಕು. ಅದಕ್ಕೆ ನಾನು ಹ್ಯಾಪಿಯಾಗಿರೋದನ್ನ ಚ್ಯೂಸ್ ಮಾಡ್ತೀನಿ ಎಂದಿದ್ದಾರೆ. ನಾನು ಮದುವೆ ಆಗಲ್ಲಾ ಎಂದು ರಮ್ಯಾ ರಿಯಾಕ್ಷನ್ ಕೊಟ್ಟಿದ್ದಾರೆ.

ಕೊನೆಗೆ, ಶಿಕ್ಷಣ, ಆರ್ಥಿಕ ಸಬಲತೆ ಮುಖ್ಯ ಅಮೇಲೆ ಒಳ್ಳೆಯ ಸೋಲ್‌ಮೇಟ್ ಸಿಕ್ಕಿದ್ರೆ ಮದುವೆ ಆಗಿ ಎಂದಿದ್ದಾರೆ. ನನಗೆ ಇನ್ನೂ ಸಿಕ್ಕಿಲ್ಲ, ಸಿಕ್ಕಿದ್ರೆ ಮದುವೆ ಆಗುತ್ತೀನಿ ಎಂದು ರಮ್ಯಾ ಮಾತನಾಡಿದ್ದಾರೆ.