29.2 C
Bengaluru
Sunday, March 19, 2023
spot_img

ದೇಸಿ ಸೀರೆಗೆ ಪಾಶ್ಚಾತ್ಯ ಸ್ಪರ್ಶ: ಹೊಸ ಫ್ಯಾಷನ್

=ಎಸ್.ವಿ. ಜ್ಯೋತಿ

ನಿತ್ಯ ವೆಸ್ಟರ್ನ್ ಶೈಲಿಯ ಉಡುಪು ಹಾಗೂ ಸಲ್ವಾರ್ ಕಮೀಜ್ ಹಾಕಿ ಬೋರ್ ಆದವರು ಇನ್ನು ಹೊಸ ಫ್ಯಾಷನ್‌ಗೆ ಯತ್ನಿಸಬಹುದು. ಆದರೆ ಪೂರ್ತಿ ಸಾಂಪ್ರದಾಯಿಕ ಆಗಿರಬಾರದು ಎನ್ನುವವರಿಗೆ ಮಾತ್ರ ಈ ಫ್ಯಾಷನ್ ಒಗ್ಗುತ್ತದೆ.

ಭಾರತೀಯ ಮಹಿಳೆಯರು ಅತಿ ಹೆಚ್ಚು ಇಷ್ಟಪಡುವ ಸಾಂಪ್ರದಾಯಿಕ ಉಡುಗೆ ಎಂದರೆ ಅದು ಸೀರೆ. ಈ ಸಾಂಪ್ರದಾಯಿಕ ಸೀರೆಗೆ ಪಾಶ್ಚಾತ್ಯ ಸ್ಪರ್ಶ ಕೊಟ್ಟು ತರಹೇವಾರಿಯ ಫ್ಯಾಷನ್ ಚಾಲ್ತಿಗೆ ಬರುತ್ತಲೇ ಇದೆ. ಈಗ ಹೈಬ್ರಿಡ್ ಸೀರೆ, ವೆಸ್ಟರ್ನ್ ಬ್ಲೌಸ್ ಸೀರೆಗಳು ಟ್ರೆಂಡಿಂಗ್‌ನಲ್ಲಿವೆ.

ನಿತ್ಯ ವೆಸ್ಟರ್ನ್ ಶೈಲಿಯ ಉಡುಪು ಹಾಗೂ ಸಲ್ವಾರ್ ಕಮೀಜ್ ಹಾಕಿ ಬೋರ್ ಆದವರು ಇನ್ನು ಹೊಸ ಫ್ಯಾಷನ್‌ಗೆ ಯತ್ನಿಸಬಹುದು. ಆದರೆ ಪೂರ್ತಿ ಸಾಂಪ್ರದಾಯಿಕ ಆಗಿರಬಾರದು ಎನ್ನುವವರಿಗೆ ಮಾತ್ರ ಈ ಫ್ಯಾಷನ್ ಒಗ್ಗುತ್ತದೆ.

ಹೈಬ್ರಿಡ್ ಸೀರೆ ಫ್ಯಾಷನ್

ಪಾಶ್ಚಾತ್ಯ ಉಡುಗೆಯ ಸಂಯೋಜನೆಯೊಂದಿಗೆ ವಿನ್ಯಾಸಗೊಂಡ ಹೈಬ್ರಿಡ್ ಸೀರೆ ಫ್ಯಾಷನ್ ಲೋಕಕ್ಕೆ ಬಂದಿದೆ. ಇಂಡೋ-ವೆಸ್ಟ್ರನ್ ಶೈಲಿಯ ಈ ಸೀರೆ ಕಟ್ ವಿನ್ಯಾಸ ಮತ್ತು ಲೋ ವೆಸ್ಟ್ನಲ್ಲಿ ಉಡುವ ಶೈಲಿಯ ಜೊತೆಗೆ ಸೀರೆಯದೇ ಭಾಗದಿಂದ ಹೊಲಿದ ರವಿಕೆಯನ್ನು ಒಳಗೊಂಡಿರುತ್ತದೆ. ನೆರಿಗೆ ಮತ್ತು ಸೆರಗನ್ನು ಹಿಡಿಯುವ ಶಿಸ್ತು ಕಲಿಯದ ಮಹಿಳೆಯರು ಈ ಸಮಸ್ಯೆಗೆ ಪರಿಹಾರ ರೂಪದಲ್ಲಿ ಈ ಹೈಬ್ರಿಡ್ ಸೀರೆಯನ್ನು ಕಂಡುಕೊಂಡಿದ್ದಾರೆ. ಕಚ್ಛೆ ಸೀರೆ, ಪ್ಯಾಂಟ್ ಸೀರೆ, ಸೆರಗು ಮತ್ತು ನೆರಿಗೆಯ ಭಾಗದಲ್ಲಿ ಹೊಲಿಗೆ ಹಾಕಿದ ಸೀರೆಗಳು ಹೈಬ್ರಿಡ್ ಮಾದರಿಯವೇ. ಕೆಲ ತಿಂಗಳಿಂದೀಚೆಗೆ ಹೈಬ್ರಿಡ್ ಸೀರೆಗಳಲ್ಲಿಯೂ ರೂಪಾಂತರಗಳನ್ನು ಮಾಡಲಾಗುತ್ತಿದೆ.

ಡೆನಿಮ್ ಫ್ಯಾಷನ್: ನೀವು ಯಾವುದೇ ರಂಗಿನ ಹತ್ತಿ, ಲಿನನ್ ಹಾಗೂ ಕೈಮಗ್ಗದ ಸೀರೆಗಳ ಜೊತೆ ಸಾಂಪ್ರದಾಯಿಕ ರವಿಕೆ ಬದಲು ಡೆನಿಮ್ ಕ್ರಾಪ್‌ಟಾಪ್ ಹಾಗೂ ಡೆನಿಮ್ ಫ್ಯಾನ್ಸಿ ಟಾಪ್‌ಗಳನ್ನು ಹಾಕಬಹುದು.

ಟೀ ಶರ್ಟ್, ಕ್ರಾಪ್‌ಟಾಪ್ ಬ್ಲೌಸ್: ಸಿನಿಮಾ ನಟಿಯರು ಸೀರೆಯ ಜೊತೆ ಬ್ಲೌಸ್ ಬದಲು ಟೀ ಶರ್ಟ್ ಹಾಕುತ್ತಾ ಅದನ್ನೇ ಒಂದು ಫ್ಯಾಷನ್ ಮಾಡಿದ್ದಾರೆ. ಈ ರೀತಿಯ ಸೀರಗೆ ಆಧುನಿಕ ಸ್ಪರ್ಶ ನೀಡುವಾಗ ವಸ್ತ್ರವಿನ್ಯಾಸಕರು ನಟಿಯರ ಮೇಲೆ ಇಂತಹ ಪ್ರಯೋಗಗಳನ್ನು ಮಾಡಿ ಫ್ಯಾಷನ್ ಟ್ರೆಂಡ್ ಸೃಷ್ಟಿಸುತ್ತಾರೆ. ಇದೇ ರೀತಿ ಪ್ರಯತ್ನಿಸುವುದಾದರೆ ಕಪ್ಪು ಅಥವಾ ಬಿಳಿಯ ಟೀ ಶರ್ಟ್ಗೆ ವಿರುದ್ಧ ಬಣ್ಣದ ಶಿಫಾನ್, ಜಾರ್ಜೆಟ್, ಕ್ರೇಪ್, ಹತ್ತಿ, ಲಿನನ್ ಇವುಗಳಲ್ಲಿ ಯಾವುದಾದರೂ ಸೀರೆಯನ್ನು ಹೊಂದಿಸಿಕೊಳ್ಳಿ. ಆಗ ಆಕರ್ಷಕ ನೋಟವನ್ನು ನೀಡುತ್ತದೆ.

ಉದ್ದನೆಯ ಟಾಪ್ ಅಥವಾ ಟ್ಯುನಿಕ್: ಸೀರೆಗೆ ಹೊಂದಿಕೆಯಾಗುವ ರವಿಕೆ ಯಾವಾಗಲೂ ಗಿಡ್ಡನೆಯ ಅಥವಾ ಕ್ರಾಪ್‌ಟಾಪ್ ಆಗಿರಬೇಕಿಲ್ಲ. ನಿಮ್ಮಿಷ್ಟದ ಉದ್ದನೆಯ ಟಾಪ್ ಅಥವಾ ಟ್ಯುನಿಕ್ ಅನ್ನು ಹೊಂದಿಸಬಹುದು. ಇದು ಅಪರೂಪದ ಪ್ಯೂಷನ್ ಅಂದ ನೀಡುತ್ತದೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles