-ಶೌರ್ಯ ಡೆಸ್ಕ್
ಬಿಜೆಪಿಯಿಂದ ಕುದುರೆ ವ್ಯಾಪಾರದ ಯತ್ನ ನಡೆಯುತ್ತಿದೆ ಎಂಬ ಸುಳಿವು ಸ್ಥಳೀಯ ನಾಯಕರಿಂದ ಸಿಗುತ್ತಿದ್ದಂತೆಯೇ ಗೆದ್ದ ಶಾಸಕರನ್ನು ತಾವು ಹೇಳಿದ ಜಾಗಕ್ಕೆ ಕರೆತರುವಂತೆ ಕ್ಷೇತ್ರಾವಾರು ಪಕ್ಷ ಪದಾಧಿಕಾರಿಗಳಿಗೆ ಕಾಂಗ್ರೆಸ್ ಹುಕುಂ ಜಾರಿಗೊಳಿಸಿದೆ.

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸುತ್ತಿದ್ದಂತೆಯೇ ಬಿಜೆಪಿಯಿಂದ ಕುದುರೆ ವ್ಯಾಪಾರದ ಭೀತಿಯೂ ಕಾಡಿದೆ. ಬಿಜೆಪಿ 25 ಸ್ಥಾನ ಗಳಿಸಿದ್ದು ಮೂವರು ಪಕ್ಷೇತರರನ್ನು ಹಿಡಿದಿಟ್ಟುಕೊಂಡು ನಂತರ 7-8 ಬಿಜೆಪಿ ಶಾಸಕರ ಸೆಳೆಯಬಹುದು ಎಂಬ ಭೀತಿ ಹಿನ್ನೆಲೆ ಕಾಂಗ್ರೆಸ್ ತನ್ನ ಶಾಸಕರನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಮೂವರು ನಾಯಕರನ್ನು ನಿಯೋಜಿಸಿ ಶಿಮ್ಲಾಗೆ ಕಳುಹಿಸಿದೆ.
ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದ್ದು 40 ಕ್ಷೇತ್ರ ಗೆದ್ದುಕೊಂಡಿದೆ. 68 ಸ್ಥಾನಗಳ ವಿಧಾನಸಭೆಯಲ್ಲಿ ಬಹುಮತ ಪಡೆದುಕೊಂಡು ಹೆಚ್ಚುವರಿ 5 ಸ್ಥಾನ ಗಳಿಸಿದೆ. ಆದರೆ ಬಿಜೆಪಿ ಅಪರೇಷನ್ ಕಮಲದ ವಾಸನೆ ಅರಿತು ಗೆದ್ಧ ಶಾಸಕರ ರಕ್ಷಿಸಿಕೊಳ್ಳಲು ಎಚ್ಚರದ ಹೆಜ್ಜೆ ಇಡುತ್ತಿದೆ. ಕ್ಷಿಪ್ರಗತಿಯಲ್ಲಿ ಕಾರ್ಯತಂತ್ರ ರಚಿಸುತ್ತಿದೆ.

ಬಿಜೆಪಿಯಿಂದ ಕುದುರೆ ವ್ಯಾಪಾರದ ಯತ್ನ ನಡೆಯುತ್ತಿದೆ ಎಂಬ ಸುಳಿವು ಸ್ಥಳೀಯ ನಾಯಕರಿಂದ ಸಿಗುತ್ತಿದ್ದಂತೆಯೇ ಗೆದ್ದ ಶಾಸಕರನ್ನು ತಾವು ಹೇಳಿದ ಜಾಗಕ್ಕೆ ಕರೆತರುವಂತೆ ಕ್ಷೇತ್ರಾವಾರು ಪಕ್ಷ ಪದಾಧಿಕಾರಿಗಳಿಗೆ ಹುಕುಂ ಜಾರಿಗೊಳಿಸಿದೆ.
ಇದಕ್ಕಾಗಿ ತನ್ನ ಶಾಸಕರನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಮೂವರು ನಾಯಕರನ್ನು ನಿಯೋಜಿಸಲಾಗಿದೆ.
ಮೂಲಗಳ ಪ್ರಕಾರ ಆಡಳಿತಾರೂಢ ಬಿಜೆಪಿಯಿಂದ ಕುದುರೆ ವ್ಯಾಪಾರದ ಭೀತಿಯಿಂದ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪೇಂದರ್ ಹೂಡಾ, ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಅವರನ್ನು ಶಿಮ್ಲಾಕ್ಕೆ ಕಳುಹಿಸಲಾಗಿದೆ.

ಈ ಮಧ್ಯೆ, ಹಿರಿಯ ಬಿಜೆಪಿ ಮುಖಡ ವಿನೋದ್ ತಾವ್ದೆ ಕೂಡಾ ಶಿಮ್ಲಾ ಕೂಡಾ ಸಿಮ್ಲಾಕ್ಕೆ ಧಾವಿಸಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
ಹಿಮಾಚಲ ಪ್ರದೇಶದ ಸಿಎಂ ಜೈರಾಮ್ ಠಾಕೂರ್ ರಾಜೀನಾಮೆ
ಈ ನಡುವೆ ನಿರ್ಗಮಿತ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಗುರುವಾರ ಸಂಜೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ನಿರ್ಗಮಿತ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಹಿಮಾಚಲ ವಿಧಾನಸಭೆ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದ ಹಿನ್ನೆಲೆಯಲ್ಲಿ ಜೈರಾಮ್ ಠಾಕೂರ್ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕೂರ್, “ನಾನು ನನ್ನ ರಾಜೀನಾಮೆಯನ್ನು ರಾಜ್ಯಪಾಲರಿಗೆ ನೀಡಿದ್ದೇನೆ. ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ನಾವು ಸೋಲಿನ ಪರಾಮರ್ಶೆ ಮಾಡಬೇಕಾಗಿದೆ. ಕೆಲವು ವಿಚಾರಗಳು ಫಲಿತಾಂಶದ ದಿಕ್ಕನ್ನು ಬದಲಾಯಿಸಿವೆ” ಎಂದು ಹೇಳಿದರು.