-ಶೌರ್ಯ ಡೆಸ್ಕ್
ಹನ್ಸಿಕಾ ಮದುವೆಯಾಗುತ್ತಿರುವ ಹುಡುಗ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಆತ ಯಾರು ಗೊತ್ತಾ? ಅವರಿಬ್ಬರ ನಡುವೆ ಕ್ರಶ್ ಆಗಿದ್ದು ಹೇಗೆ? ತಮಿಳು ನಟನ ಜೊತೆ ಪ್ರೀತಿಯಲ್ಲಿದ್ದ ಹನ್ಸಿಕಾ ಆತನಿಂದ ಬೇರ್ಪಟ್ಟಿದ್ದು ಏಕೆ ಎಂಬುದು ತಿಳಿಯುವ ಕುತೂಹಲವಿದ್ದರೆ ಈ ಸುದ್ದಿ ಪೂರ್ತಿ ಓದಿ.

ದಕ್ಷಿಣ ಸಿನಿಮಾರಂಗದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ತನ್ನ ನೆಚ್ಚಿನ ಹುಡುಗನ ಜೊತೆ ಇದೇ ಡಿಸೆಂಬರ್ ಮಾಸದಲ್ಲಿ ಹಸಮಣೆ ಏರುತ್ತಿದ್ದಾರೆ.
ಅಂದಹಾಗೆ ಹನ್ಸಿಕಾ ಮದುವೆಯಾಗುತ್ತಿರುವ ಹುಡುಗ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಆತ ಯಾರು ಗೊತ್ತಾ? ಅವರಿಬ್ಬರ ನಡುವೆ ಕ್ರಶ್ ಆಗಿದ್ದು ಹೇಗೆ? ತಮಿಳು ನಟನ ಜೊತೆ ಪ್ರೀತಿಯಲ್ಲಿದ್ದ ಹನ್ಸಿಕಾ ಆತನಿಂದ ಬೇರ್ಪಟ್ಟಿದ್ದು ಏಕೆ ಎಂಬುದು ತಿಳಿಯುವ ಕುತೂಹಲವಿದ್ದರೆ ಈ ಸುದ್ದಿ ಪೂರ್ತಿ ಓದಿ.

ಈಗಾಗಲೇ ಮದುವೆಗೆ ಹನ್ಸಿಕಾ ಮತ್ತು ಹುಡುಗನ ಕಡೆಯವರು ಜಾಗವನ್ನು ಫಿಕ್ಸ್ ಮಾಡಿದ್ದಾರೆ. ಹನ್ಸಿಕಾ ಜೈಪುರ್‌ನಲ್ಲಿ ಮದುವೆಯಾಗುತ್ತಿದ್ದಾರೆ. ಇದು ರಾಯಲ್ ವಿವಾಹ ಆಗಿರಲಿದೆ. ಜೈಪುರದ 450 ವರ್ಷ ಇತಿಹಾಸವಿರುವ ಮಂಡೋಟ ಕೋಟೆಯನ್ನು ಈಗಾಗಲೇ ಬುಕ್ ಮಾಡಲಾಗಿದ್ದು ಸುಮಾರು 10 ದಿನಗಳ ಕಾಲ ಮದುವೆ ನಡೆಯಲಿದೆಯಂತೆ. ಮದುವೆ ನಡೆಯುವ ಸ್ಪಷ್ಟ ದಿನಾಂಕ ಬಹಿರಂಗವಾಗಿಲ್ಲ.

ಅಂದಹಾಗೆ ಮಂಡೋಟ ಅರಮನೆ ಈಗ ಹೋಟೆಲ್ ಆಗಿ ಬದಲಾಗಿದೆ. ರಾಯಲ್ ಆಗಿ ಮದುವೆಯಾಗಬೇಕು ಅನ್ನುವ ಕನಸನ್ನು ತನ್ನ ಹುಡುಗನೊಂದಿಗೆ ಹನ್ಸಿಕಾ ಹೇಳಿಕೊಂಡಿದ್ದಕ್ಕೆ ಪುರಾತನ ಮತ್ತು ಪಾರಂಪರಿಕ ಹಳೆಯ ಅರಮನೆಯಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ತನ್ನ ಮದುವೆ ಸುದ್ದಿ ಬಗ್ಗೆ ಹನ್ಸಿಕಾ ಎಲ್ಲಿಯೂ ಗುಟ್ಟು ಬಿಟ್ಟುಕೊಟ್ಟಿಲ್ಲ.

ಬಾಲನಟಿಯಾಗಿ ಹಿಂದಿ ಸಿನಿಮಾರಂಗ ಪ್ರವೇಶ ಮಾಡಿದ ನಟಿ ಹನ್ಸಿಕಾ ಬಳಿಕ ನಾಯಕಿಯಾಗಿ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಹನ್ಸಿಕಾ ನಟಿಸಿದ್ದಾರೆ. ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಬಿಂದಾಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಸ್ಯಾಂಡಲ್ ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಬಳಿಕ ಮತ್ತೆ ಕನ್ನಡದಲ್ಲಿ ಕಾಣಿಸಿಕೊಂಡಿಲ್ಲ. ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ನಟಿಸಿರುವ ಬಹುಭಾಷ ನಟಿ ಹನ್ಸಿಕಾ ಕೊನೆಯದಾಗಿ ಮಹಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಅಂದಹಾಗೆ ಮಹಾ ಹನ್ಸಿಕಾ ನಟನೆಯ 50ನೇ ಸಿನಿಮಾವಾಗಿದೆ. ಸದ್ಯ ಅನೇಕ ಸಿನಿಮಾಗಳು ಹನ್ಸಿಕಾ ಕೈಯಲ್ಲಿವೆ.

ಸಿಂಬು ಜತೆ ಇತ್ತು ಸಂಬಂಧ
ನಟಿ ಹನ್ಸಿಕಾ ತಮಿಳಿನ ಖ್ಯಾತ ನಟ ಸಿಂಬು ಜೊತೆ ಡೇಟಿಂಗ್‌ನಲ್ಲಿದ್ದರು. ಸಿಂಬು ಮತ್ತು ಹನ್ಸಿಕಾ ತೀರ ಆಪ್ತರಾಗಿರುವ ಅನೇಕ ಫೋಟೋಗಳು ವೈರಲ್ ಆಗಿತ್ತು. ಇಬ್ಬರೂ ಮದುವೆ ಆಗುವ ತಯಾರಿ ನಡೆಸಿದ್ದರು. ಆದರೆ ಹನ್ಸಿಕಾಗೆ ಮುಂಬೈ ಉದ್ಯಮಿ ಪುತ್ರನ ಜೊತೆಗೆ ರಿಲೇಷನ್ ಶಿಪ್ ಇದೆಯೆಂಬ ಕಾರಣಕ್ಕೆ ಸಿಂಬು ಆಕೆಯಿಂದ ದೂರಾಗಲು ಪ್ರಯತ್ನಿಸಿದ್ದರು. ಕೊನೆಗೆ ಇದೇ ಕಾರಣದ ಕಲಹದಿಂದ ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡು ದೂರ ದೂರ ಆದರು.

ಬಳಿಕ ಮುಂಬೈ ಮೂಲದ ಉದ್ಯಮಿ ಪುತ್ರನ ಜತೆ ಹನ್ಸಿಕಾ ಪ್ರಣಯ ಬಿರುಸಾಯಿತು. ಇದೀಗ ಅವರ ಜೊತೆ ಹಸೆಮಣೆ ಏರುತ್ತಿದ್ದಾರೆ ಎನ್ನಲಾಗಿದೆ.
ಯಾರು ಗೊತ್ತಾ ಹುಡುಗ?
ಮೂಲಗಳ ಪ್ರಕಾರ ಮುಂಬೈನ ಖ್ಯಾತ ಉದ್ಯಮಿ, ಹೆಸರಾಂತ ವಿಮಾನಯಾನ ಕಂಪನಿ ಪಾಲುದಾರರ ಪುತ್ರನೇ ಹನ್ಸಿಕಾ ಪ್ರಿಯಕರ. ಆತನ ಜತೆ ಮದುವೆ ನಡೆಯಲಿದೆ.
