27.7 C
Bengaluru
Tuesday, March 14, 2023
spot_img

ಗುರು ಗೆದ್ದಾಯ್ತು; ಶಿಷ್ಯರ ಕಥೆಯೇನೋ?

-ಶೌರ್ಯ ಡೆಸ್ಕ್

ನಟ-ನಟಿಯರ ಮಕ್ಕಳನ್ನು ದೊಡ್ಡ ಮಟ್ಟದಲ್ಲಿ ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯಿಸಲಾಗುತ್ತದೆ. ಆದರೆ, ಇಲ್ಲಿ ಇವರ್ಯಾರೂ ಹೀರೋಗಳಲ್ಲ. ಎಲ್ಲರೂ ಪ್ರಮುಖ ಪಾತ್ರಧಾರಿಗಳು. ಆ ನಿಟ್ಟಿನಲ್ಲಿ ಒಂದೇ ಚಿತ್ರದಲ್ಲಿ ಇಷ್ಟೊಂದು ನಟರ ಮಕ್ಕಳನ್ನು ಪರಿಚಯಿಸುತ್ತಿರುವುದು ಹೊಸ ಪ್ರಯೋಗ ಮತ್ತು ಪ್ರಯತ್ನ. ಅದೇ ಕಾರಣಕ್ಕೆ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳು ಇದ್ದವು. ಇವರೆಲ್ಲ ಏನು ಮಾಡಬಹುದು? ಹೇಗೆ ನಟಿಸಿರಬಹುದು? ಮತ್ತು ಮುಂದೆ ಏನಾಗಬಹುದು? ಎಂಬ ಕುತೂಹಲ ಕೆಲವರಿಗಾದರೂ ಇತ್ತು. ಆದರೆ, ಚಿತ್ರತಂಡದವರು ಎಲ್ಲರ ನಿರೀಕ್ಷೆಗಳಿಗೆ ತಣ್ಣೀರು ಎರಚಿದ್ದಾರೆ.

ಶರಣ್ ಅಭಿನಯದ `ಗುರು ಶಿಷ್ಯರು’ ರಾಜ್ಯಾದ್ಯಂತ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಚಿತ್ರವನ್ನು ನೋಡಿದವರೆಲ್ಲ, ಮೆಚ್ಚಿ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಹಾಕಿದ ದುಡ್ಡನ್ನು ಮರಳಿ ಪಡೆಯುವುದರ ಜೊತೆಗೆ ಶರಣ್ ಮತ್ತು ತರುಣ್ ಸುಧೀರ್ ಒಳ್ಳೆಯ ಲಾಭವನ್ನೇ ಮಾಡುತ್ತಾರೆ. ಗುರುಗಳೇನೋ ಬಚಾವ್ ಆದರು. ಶಿಷ್ಯರ ಕಥೆಯೇನು ಎಂಬುದೇ ಗಾಂಧಿನಗರದ ಪ್ರಶ್ನೆ.

ಗುರು ಶಿಷ್ಯರು ಕನ್ನಡ ಚಿತ್ರರಂಗದಲ್ಲಿ ಒಂದು ವಿಭಿನ್ನ ಪ್ರಯತ್ನ. ಖೋಖೋದಂತಹ ದೇಸೀ ಕ್ರೀಡೆಯ ಕುರಿತು ಚಿತ್ರ ಮಾಡಿರುವುದು ಒಂದು ವಿಶೇಷತೆಯಾದರೆ, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಜನಪ್ರಿಯ ನಟರ ಮಕ್ಕಳು ಬಣ್ಣ ಹಚ್ಚಿ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಶರಣ್ ಮಗ ಹೃದಯ್, ನೆನಪಿರಲಿ ಪ್ರೇಮ್ ಮಗ ಏಕಾಂತ್, ಬುಲೆಟ್ ಪ್ರಕಾಶ್ ಮಗ ರಕ್ಷಕ್, ರವಿಶಂಕರ್ ಗೌಡ ಮಗ ಸೂರ್ಯ ಮತ್ತು ನವೀನ್ ಕೃಷ್ಣ ಮಗ ಹರ್ಷಿತ್ ಈ ಚಿತ್ರದಲ್ಲಿ ನಟಿಸಿದ್ದಾರೆ.

ಸಾಮಾನ್ಯವಾಗಿ, ನಟ-ನಟಿಯರ ಮಕ್ಕಳನ್ನು ದೊಡ್ಡ ಮಟ್ಟದಲ್ಲಿ ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯಿಸಲಾಗುತ್ತದೆ. ಆದರೆ, ಇಲ್ಲಿ ಇವರ್ಯಾರೂ ಹೀರೋಗಳಲ್ಲ. ಎಲ್ಲರೂ ಪ್ರಮುಖ ಪಾತ್ರಧಾರಿಗಳು. ಆ ನಿಟ್ಟಿನಲ್ಲಿ ಒಂದೇ ಚಿತ್ರದಲ್ಲಿ ಇಷ್ಟೊಂದು ನಟರ ಮಕ್ಕಳನ್ನು ಪರಿಚಯಿಸುತ್ತಿರುವುದು ಹೊಸ ಪ್ರಯೋಗ ಮತ್ತು ಪ್ರಯತ್ನ. ಅದೇ ಕಾರಣಕ್ಕೆ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳು ಇದ್ದವು. ಇವರೆಲ್ಲ ಏನು ಮಾಡಬಹುದು? ಹೇಗೆ ನಟಿಸಿರಬಹುದು? ಮತ್ತು ಮುಂದೆ ಏನಾಗಬಹುದು? ಎಂಬ ಕುತೂಹಲ ಕೆಲವರಿಗಾದರೂ ಇತ್ತು.

ಆದರೆ, ಚಿತ್ರತಂಡದವರು ಎಲ್ಲರ ನಿರೀಕ್ಷೆಗಳಿಗೆ ತಣ್ಣೀರು ಎರಚಿದ್ದಾರೆ. ನಟರ ಮಕ್ಕಳು ನಟಿಸಿದ್ದಾರೆ ಎಂಬುದಷ್ಟೇ ಹೆಗ್ಗಳಿಕೆ. ಯಾರು, ಯಾರ ಮಕ್ಕಳು ಎಂದು ಯಾರಿಗೂ ಗೊತ್ತಾಗುವುದಿಲ್ಲ. ಕನಿಷ್ಠ ಟೈಟಲ್ ಕಾರ್ಡ್ನಲ್ಲಾದರೂ ಅಥವಾ ಯಾವುದಾದರೂ ದೃಶ್ಯದಲ್ಲಾದರೂ ಈ ಮಕ್ಕಳೆಲ್ಲ ಯಾರು ಎಂದು ತೋರಿಸಬಹುದಿತ್ತು. ಅದ್ಯಾಕೋ ಚಿತ್ರತಂಡದವರಿಗೆ ಅದು ಗಮನಕ್ಕೇ ಬಂದಿಲ್ಲ.

ಇನ್ನು, ಚಿತ್ರದಲ್ಲಿ ಅವರಿಗೆ ಸ್ಕೋಪ್ ಇದೆಯಾ ಎಂದರೆ ಅದೂ ಇಲ್ಲ. ಒಂದೆರಡು ದೃಶ್ಯಗಳಲ್ಲಿ ಶರಣ್ ಮಗ ಹೃದಯ್ ಮತ್ತು ಇನ್ನೊಂದು ದೃಶ್ಯದಲ್ಲಿ ಪ್ರೇಮ್ ಮಗ ಏಕಾಂತ್ ಸ್ವಲ್ಪ ಗಮನಸೆಳೆಯುವುದು ಬಿಟ್ಟರೆ, ಮಿಕ್ಕಂತೆ ಯಾರೂ ಗಮನಕ್ಕೆ ಬರುವುದಿಲ್ಲ. ಎಲ್ಲರೂ ಪಾಸಿಂಗ್ ಶಾಟ್‌ಗಳಲ್ಲಿ ಹೀಗೆ ಬಂದು ಹೋಗುತ್ತಾರೆಯೇ ಹೊರತು, ಗಮನಕ್ಕೆ ಬರುವುದಿಲ್ಲ. ಇಡೀ ಚಿತ್ರದಲ್ಲಿ ಗಮನಕ್ಕೆ ಬರುವುದು ಶರಣ್ ಮತ್ತು ಖೋಖೋ ಮಾತ್ರ.

ಮೊದಲೇ ಹೇಳಿದಂತೆ, ಗುರು ಶಿಷ್ಯರು ಚಿತ್ರದಲ್ಲಿ ಈ ಮಕ್ಕಳು ಏನು ಮಾಡಬಹುದು ಎಂಬ ಕುತೂಹಲ ಕೆಲವರಿಗಾದರೂ ಇತ್ತು. ಅದರಲ್ಲೂ ಚಿತ್ರದ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ದುನಿಯಾ ವಿಜಯ್ ಸಹ ಈ ಮಕ್ಕಳು ಚದುರಿ ಹೋಗುವುದಕ್ಕೆ ಬಿಡಬಾರದು. ಈ ಮಕ್ಕಳ ಪ್ರತಿಭೆಯನ್ನು ಪೋಷಿಸಬೇಕು ಮತ್ತು ಇವರೆಲ್ಲರನ್ನು ಸೇರಿಸಿ ಇನ್ನೊಂದು ಚಿತ್ರ ಮಾಡಬೇಕು ಎಂದೆಲ್ಲ ಹೇಳಿದ್ದರು. ಎರಡನೆಯ ಚಿತ್ರ ಆಗುತ್ತದೋ, ಇಲ್ಲವೋ ಗೊತ್ತಿಲ್ಲ. ಆದರೆ, ಮೊದಲ ಚಿತ್ರದಲ್ಲೇ ಈ ಮಕ್ಕಳಿಗೆ ಇನ್ನಷ್ಟು ಸ್ಕೋಪ್ ನೀಡಿದ್ದರೆ, ಮುಂದೆ ಅವರಿಗೆ ವೈಯಕ್ತಿಕವಾಗಿ ಬೆಳೆಯುವುದಕ್ಕೆ ಅನುಕೂಲವಾಗುತ್ತಿತ್ತು. ಆದರೆ, ಅದು ಆಗಲಿಲ್ಲ ಎನ್ನುವುದಷ್ಟೇ ಬೇಸರದ ವಿಷಯ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles