21.9 C
Bengaluru
Thursday, March 16, 2023
spot_img

ಸೋಲಿನ ಸುಳಿಯಲ್ಲಿದ್ದ ಜಿಗ್ನೇಶ್‌ ಗೆಲುವಿಗೆ ಕಾರಣವಾಗಿದ್ದು ಸಾಲಿಡ್ ಬೂತ್ ಗಳು!!!

-ನೀರಕಲ್ಲು ಶಿವಕುಮಾರ್

ಪ್ರಾಥಮಿಕ ವರದಿಗಳ ಪ್ರಕಾರ ಆರಂಭದಲ್ಲಿ ಜಿಗ್ನೇಶ್ ಮೆವಾನಿ ಹಿನ್ನಡೆಗೆ ಮುಸ್ಲಿಂ ಮತ್ತು ಚಾಮಾರೇತರ ದಲಿತ ಸಮುದಾಯಗಳ ಬೂತ್ ಗಳಲ್ಲಿ ಮತಗಳು ಎಎಪಿ, ಎಐಎಂಐಎಂ ಮತ್ತು ಕಾಂಗ್ರೆಸ್ ನಡುವೆ ಹಂಚಿಕೆಯಾಗಿದ್ದೇ ಕಾರಣ. ಮತ ಎಣಿಕೆ ಮುಗಿದಂತೆ ಚಾಮಾರ್ ಸಮುದಾಯ ಬಾಹುಳ್ಯದ ಮತಗಟ್ಟೆಗಳು ಎಣಿಕೆಗೆ ಬಂದಾಗ ಮೆವಾನಿ ಹಿನ್ನಡೆ ಮುರಿದು ಮುನ್ನುಗ್ಗಿದರು. ನಿಧಾನವಾಗಿ ಅಂತರ ಹೆಚ್ಚಿಸಿಕೊಂಡರು. ಕೊನೆಗೆ ಗೆಲುವು ದಾಖಲಿಸಿದರು.

ಗುಜರಾತ್ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ 156 ಸ್ಥಾನ ಗಳಿಸಿ ಅಧಿಕಾರ ಹಿಡಿದಿದೆ. ಆದರೆ ಆ ಪಕ್ಷದ ಒಂದು ದೊಡ್ಡ ಆಸೆ ಈಡೇರದೆ ನಿರಾಶೆಯಾಗಿದೆ. ಬಿಜೆಪಿಯ ಪಾಲಿನ ಆ ನಿರಾಶೆ ಎಂದರೆ ಅದು ಫೈರ್ ಬ್ರ್ಯಾಂಡ್ ಯುವಕ, ದೇಶದ ದಲಿತ ನಾಯಕನಾಗಿ ಬೆಳೆಯುತ್ತಿರುವ ಜಿಗ್ನೇಶ್ ಮೆವಾನಿ ಗೆಲುವು.

ಹೌದು‌.  ಕಾಂಗ್ರೆಸ್‌ನ ಪ್ರಮುಖ ನಾಯಕ ಜಿಗ್ನೇಶ್ ಮೆವಾನಿ ವಡಗಾಂ ಕ್ಷೇತ್ರದಲ್ಲಿ ವಿರೋಚಿತ ಗೆಲುವು ಕಂಡಿದ್ದಾರೆ. ಎರಡನೇ ಬಾರಿ ಆಯ್ಕೆ ಬಯಸಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಹಾಲಿ ಶಾಸಕ ಜಿಗ್ನೇಶ್ ಮೆವಾನಿ ಬಿಜೆಪಿ ಅಭ್ಯರ್ಥಿ ಮಣಿಬಾಯ್ ವಘೇಲಾ ಎದುರು 3,840 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ರೋಚಕವಾಗಿ ನಡೆದ ಮತ ಎಣಿಕೆ ಮುಕ್ತಾಯವಾದಾಗ ಮೆವಾನಿ ಗೆಲುವಿನ ನಗೆ ಬೀರಿದರು.

ಜಿಗ್ನೇಶ್ ಮೆವಾನಿ ಸೋಲಿಸಲು ಬಿಜೆಪಿ ಶತಪ್ರಯತ್ನಪಟ್ಟಿತ್ತು. ಮತ ಎಣಿಕೆ ಆರಂಭದಲ್ಲಿ ಮೆವಾನಿ ತೀವ್ರ ಹಿನ್ನಡೆ ಕಂಡಿದ್ದರು. ಮತ ಎಣಿಕೆ ಹೆಚ್ಚಿದಂತೆ ಅವರು ಪ್ರಾಬಲ್ಯ ಸಾಧಿಸುತ್ತಾ ಬಂದರು.

ಕಳೆದ ಬಾರಿ ಕಾಂಗ್ರೆಸ್ ಟಿಕೆಟ್ ಸಿಗದೇ ಬಿಜೆಪಿಗೆ ಜಿಗಿದು ಸೋಲು ಕಂಡಿದ್ದ ಮಣಿಭಾಯ್ ವಘೇಲಾ ಈ ಬಾರಿ ಮತ್ತೆ ವಡಗಾಂ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು. ಜಿಗ್ನೇಶ್ ಮೆವಾನಿ ಎದುರು ಮಣಿಭಾಯ್ ವಘೇಲಾ ಪ್ರಬಲ ಅಭ್ಯರ್ಥಿಯಾಗಿದ್ದರು. ಇದರ ಜೊತೆಗೆ ಬಿಜೆಪಿ ಮೆವಾನಿ ಸೋಲಿಸಲೇಬೇಕೆಂದು ಪಣ ತೊಟ್ಟು ನಾನಾ ಕಸರತ್ತು ನಡೆಸಿತ್ತು.

ಮಣಿಭಾಯ್ ವಘೇಲಾ.

ಮಣಿಭಾಯ್ ವಘೇಲಾ ಅವರು 2012 ರಿಂದ 2017ರವರೆಗೂ ಕಾಂಗ್ರೆಸ್ ಶಾಸಕರಾಗಿದ್ದರೂ ಟಿಕೆಟ್ ನಿರಾಕರಿಸಿದ್ದ ಕಾಂಗ್ರೆಸ್ ಜಿಗ್ನೇಶ್ ಮೆವಾನಿಗೆ ಬೆಂಬಲ ನೀಡಿತ್ತು. ಎಎಪಿ ಕೂಡ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಬೆಂಬಲ ಸೂಚಿಸಿತ್ತು. ಆದರೆ, ಈ ಬಾರಿ ಎಎಪಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಅದರ ಜೊತೆ ಎಐಎಂಐಎಂ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಇದರ ನಡುವೆಯೇ ಜಿಗ್ನೇಶ್ ಮೆವಾನಿ ಗೆದ್ದಿದ್ದಾರೆ.

ಗೆದ್ದಿದ್ದು ಹೇಗೆ?

ಕಾಂಗ್ರೆಸ್ ಸೇರ್ಪಡೆ ಬಳಿಕ ಗುಜರಾತ್ ನಲ್ಲಿ ಮೆವಾನಿ ಕಾಂಗ್ರೆಸ್‌ನ ಪ್ರಮುಖ ನಾಯಕರಲ್ಲೊಬ್ಬರಾಗಿದ್ದರು. ದಲಿತ ಸಮುದಾಯ ಬಲವಾಗಿ ಜಿಗ್ನೇಶ್ ಮೆವಾನಿ ಬೆನ್ನಿಗೆ ನಿಂತಿತ್ತು. ಚುನಾವಣೆಗೆ ಮುನ್ನ ಕಳೆದ ಎರಡು ತಿಂಗಳ ಹಿಂದೆ  ಗಾಂಧಿನಗರದಲ್ಲಿ ನಡೆದಿದ್ದ ಸಂತ ರವಿದಾಸ ಸ್ಮರಣೆ ಕಾರ್ಯಕ್ರಮಕ್ಕೆ ಬಂದ ಜಿಗ್ನೇಶ್ ಮೆವಾನಿಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ದೆಹಲಿಯ ಹಿರಿಯ ಬಿಜೆಪಿ ನಾಯಕರು ಇದ್ದ ವೇದಿಕೆಯಲ್ಲಿ ಅಭೂತಪೂರ್ವ ಸ್ವಾಗತ ಸಿಕ್ಕಿತ್ತು. ಚಮಾರ್ ಸಮುದಾಯ ಆಯೋಜಿಸಿದ್ದ ಆ ಇಡೀ ಸಭೆ ಜಿಗ್ನೇಶ್ ಎಂಟ್ರಿ ಕೊಡುತ್ತಲೇ ರೋಮಾಂಚನಗೊಂಡು ಕಿವಿಗಡಚಿಕ್ಕುವ ಶಿಳ್ಳೆ, ಚಪ್ಪಾಳೆ, ಜೈಕಾರ, ಅಬ್ಬರ, ಆರ್ಭಟದೊಂದಿಗೆ ತಮ್ಮ ನೆಚ್ಚಿನ ಯುವ ನೇತಾರನತ್ತ ಅಭಿಮಾನ ತೋರಿತ್ತು. ಮೆವಾನಿ ಬರುತ್ತಲೇ ಇಡೀ ಸಭೆ ಆತನತ್ತಲೇ ಕೇಂದ್ರೀಕೃತವಾಗಿತ್ತು. ಮುಖ್ಯಮಂತ್ರಿ ಇದ್ದ ವೇದಿಕೆಯನ್ನು ಮೆವಾನಿ ಅಕ್ಷರಶಃ ಕಬ್ಜಾ ಮಾಡಿದ್ದರು. ಇದು ಬಿಜೆಪಿ ನಾಯಕರ ಇರಿಸುಮುರಿಸಿಗೆ ಕಾರಣವಾಗಿತ್ತು. ಮೇವಾನಿ ದೊಡ್ಡ ನಾಯಕನಾಗಿ ಬೆಳೆಯುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಬೂಸ್ಟ್ ನೀಡಿದಂತಾಗಿತ್ತು. ಆಗಿನಿಂದಲೇ ಮೆವಾನಿ ಸೋಲಿಸಲು ಬಿಜೆಪಿ ತಂತ್ರಗಾರಿಕೆ ನಡೆಸಿತ್ತು.

ಆದರೆ ಈಗ ಎಲ್ಲಾ ಸವಾಲು ಮೆಟ್ಟಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಗುಜರಾತ್ ರಾಜಕೀಯದಲ್ಲಿ ಮೆವಾನಿ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ ಆರಂಭದಲ್ಲಿ ಜಿಗ್ನೇಶ್ ಮೆವಾನಿ ಹಿನ್ನಡೆಗೆ ಮುಸ್ಲಿಂ ಮತ್ತು ಚಾಮಾರೇತರ ದಲಿತ ಸಮುದಾಯಗಳ ಬೂತ್ ಗಳಲ್ಲಿ ಮತಗಳು ಎಎಪಿ, ಎಐಎಂಐಎಂ ಮತ್ತು ಕಾಂಗ್ರೆಸ್ ನಡುವೆ ಹಂಚಿಕೆಯಾಗಿದ್ದೇ ಕಾರಣ. ಮತ ಎಣಿಕೆ ಮುಗಿದಂತೆ ಚಾಮಾರ್ ಸಮುದಾಯ ಬಾಹುಳ್ಯದ ಮತಗಟ್ಟೆಗಳು ಎಣಿಕೆಗೆ ಬಂದಾಗ ಮೆವಾನಿ ಹಿನ್ನಡೆ ಮುರಿದು ಮುನ್ನುಗ್ಗಿದರು. ನಿಧಾನವಾಗಿ ಅಂತರ ಹೆಚ್ಚಿಸಿಕೊಂಡರು. ಕೊನೆಗೆ ಗೆಲುವು ದಾಖಲಿಸಿದರು.

ಎಸ್ಸಿ ಮೀಸಲು ಕ್ಷೇತ್ರದಲ್ಲಿ ಮುಸ್ಲಿಮರ ಪ್ರಾಬಲ್ಯ!

ವಡಗಾಂ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರವಾಗಿದ್ದು, ಮುಸ್ಲಿಂ ಮತಗಳು ಇಲ್ಲಿ ನಿರ್ಣಾಯಕ ಆಗಿವೆ. 90 ಸಾವಿರಕ್ಕೂ ಹೆಚ್ಚು ಮುಸ್ಲಿಂ ಮತಗಳನ್ನು ಹೊಂದಿರುವ ವಡಗಾಂ ಕ್ಷೇತ್ರ ಒಟ್ಟು 2.94 ಲಕ್ಷ ಮತದಾರರನ್ನು ಹೊಂದಿದೆ. ಇಲ್ಲಿ ದಲಿತರು 44 ಸಾವಿರ ಹಾಗೂ ರಜಪೂತ ಸಮುದಾಯ 15 ಸಾವಿರ ಮತದಾರರನ್ನು ಹೊಂದಿದ್ದು, ಉಳಿದ ಮತಗಳನ್ನು ಇತರೆ ಹಿಂದುಳಿದ ವರ್ಗದ ಸಮುದಾಯಗಳು ಹೊಂದಿವೆ.

ಮುಸ್ಲಿಂ ಪ್ರಾಬಲ್ಯ ಇರುವ ಕ್ಷೇತ್ರವಾಗಿರುವುದರಿಂದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಕಲ್ಪೇಶ್ ಸುಂಧೀಯಾ ಮುಸ್ಲಿಂ ಮತಗಳನ್ನು ತಮ್ಮತ್ತ ಸೆಳೆದಿದ್ದು ಜಿಗ್ನೇಶ್ ಹಿನ್ನಡೆಗೆ ಕಾರಣ. ಎಎಪಿ ಅಭ್ಯರ್ಥಿ ದಳಪತ್ ಭಾಟಿಯಾ ಕೂಡ ಮುಸ್ಲಿಂ ಹಾಗೂ ದಲಿತರ ಮತ ವಿಭಜಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles