-ಶೌರ್ಯ ಡೆಸ್ಕ್
ಕಾಂಗ್ರೆಸ್ ಸಾಕಷ್ಟು ಸ್ಥಾನಗಳನ್ನು ಕಳೆದುಕೊಳ್ಳುತ್ತಿದೆ. ಎಕ್ಸಿಟ್ ಪೋಲ್ ಅನ್ವಯ, 2017 ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾವಾರು ಮತಗಳ ವಿಷಯದಲ್ಲಿ ಬಿಜೆಪಿ ನಷ್ಟವನ್ನು ಅನುಭವಿಸಿದೆ, ಆದರೆ ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ಹೆಚ್ಚು ನಷ್ಟವನ್ನು ಅನುಭವಿಸಿದೆ.

ಬಹುತೇಕ ಎಲ್ಲಾ ಎಕ್ಸಿಟ್ ಪೋಲ್ ಸಮೀಕ್ಷೆಗಳು ಭಾರತೀಯ ಜನತಾ ಪಕ್ಷ ಪ್ರಚಂಡ ಬಹುಮತದೊಂದಿಗೆ ಗುಜರಾತ್ ನಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ.
1995 ರಿಂದ ಬಿಜೆಪಿ ಗುಜರಾತ್ ನಲ್ಲಿ ಅಧಿಕಾರದಲ್ಲಿದೆ. ಕಳೆದ 27 ವರ್ಷಗಳ 6 ಚುನಾವಣೆಗಳಲ್ಲಿ ಕಮಲ ಅರಳುತ್ತಲೇ ಇದೆ. ಮೋದಿ ಪ್ರಧಾನಿಯಾದ ಬಳಿಕ ನಾಯಕತ್ವದ ಕೊರತೆ ಅನುಭವಿಸಿದರೂ ಮುಖ್ಯಮಂತ್ರಿಗಳನ್ನು ಬದಲಾಯಿಸುವ ಮೂಲಕ ಆಡಳಿತ ವಿರೋಧಿ ಅಲೆಯನ್ನು ಕಡಿಮೆ ಮಾಡುವ ತಂತ್ರಗಾರಿಕೆ ಬಿಜೆಪಿಗೆ ನೆರವಾಗಿದೆ.

ಎಕ್ಸಿಟ್ ಪೋಲ್ ಪ್ರಕಾರ, ರಿಪಬ್ಲಿಕ್ ಟಿವಿ ಬಿಜೆಪಿ 128-148, ಕಾಂಗ್ರೆಸ್+ 30-42, ಆಪ್ 2-10 ಸ್ಥಾನ ಗೆಲ್ಲಲಿದೆ ಎಂದು ಹೇಳಿದೆ. ನ್ಯೂಸ್ ಎಕ್ಸ್ ಬಿಜೆಪಿ 117-140, ಕಾಂಗ್ರೆಸ್ + 34-51, ಆಪ್ 6-13 ಸ್ಥಾನ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ.
ಒಟ್ಟು 182 ಸ್ಥಾನಗಳಿದ್ದು ಸರಳ ಬಹುಮತಕ್ಕೆ 92 ಸ್ಥಾನಗಳ ಅಗತ್ಯವಿದೆ. ಗುಜರಾತ್ ಚುನಾವಣೆಯ ಫಲಿತಾಂಶ ಡಿ.8 ರಂದು ಪ್ರಕಟವಾಗಲಿದೆ.

ಎಎಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ನಷ್ಟ
ಮತ್ತೊಂದೆಡೆ, ಅಹಮದಾಬಾದ್ ಕಾರ್ಪೊರೇಷನ್ ಚುನಾವಣೆಯಲ್ಲಿ ಖಾತೆ ತೆರೆದ ನಂತರ ವಿಧಾನಸಭೆ ಚುನಾವಣೆಯಲ್ಲೂ ಆಮ್ ಆದ್ಮಿ ಪಕ್ಷ ಕೆಲವು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದರೆ, ಕಾಂಗ್ರೆಸ್ ಸಾಕಷ್ಟು ಸ್ಥಾನಗಳನ್ನು ಕಳೆದುಕೊಳ್ಳುತ್ತಿದೆ. ಎಕ್ಸಿಟ್ ಪೋಲ್ ಅನ್ವಯ, 2017 ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾವಾರು ಮತಗಳ ವಿಷಯದಲ್ಲಿ ಬಿಜೆಪಿ ನಷ್ಟವನ್ನು ಅನುಭವಿಸಿದೆ, ಆದರೆ ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ಹೆಚ್ಚು ನಷ್ಟವನ್ನು ಅನುಭವಿಸಿದೆ.

ಟೈಮ್ಸ್ ನೌ ಮತ್ತು ಇಟಿಜಿಯ ಸಮೀಕ್ಷೆಗಳ ಪ್ರಕಾರ, ಕಳೆದ ಚುನಾವಣೆಯಲ್ಲಿ ಬಿಜೆಪಿ 49.3% ಮತಗಳನ್ನು ಪಡೆದಿದ್ದರೆ, ಈ ಬಾರಿ ಮತಗಟ್ಟೆ ಸಮೀಕ್ಷೆಗಳು 42% ಮತ ಹಂಚಿಕೆಯನ್ನು ಅಂದಾಜಿಸಿದೆ. ಈ ದೃಷ್ಟಿಯಿಂದ ನೋಡಿದರೆ ಬಿಜೆಪಿಗೆ ಶೇ.7.3ರಷ್ಟು ನಷ್ಟವಾಗಿದೆ.ಆದರೆ, 2017ರಲ್ಲಿ ಕಾಂಗ್ರೆಸ್ ಮತಗಳಿಕೆ 41.7 ಆಗಿದ್ದು, ಎಕ್ಸಿಟ್ ಪೋಲ್ ನಲ್ಲಿ 30 ಎಂದು ಹೇಳಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಅವರು -11.7 ರಷ್ಟು ಮತಗಳ ನಷ್ಟವನ್ನು ಸಹಿಸಬೇಕಾಗಬಹುದು. ಕಾಂಗ್ರೆಸ್ ಕಳೆದುಕೊಂಡ ಮತಗಳು ಅತಿಹೆಚ್ಚು ವರ್ಗಾವಣೆ ಆಗಿರುವುದು ಎಎಪಿ ಎಂದು ಹೇಳಲಾಗುತ್ತಿದೆ. ನಗರ ಪ್ರದೇಶಗಳ, ಅದರಲ್ಲೂ ಅಹಮದಾಬಾದ್, ಗಾಂಧಿನಗರ, ಸೂರತ್, ರಾಜ್ ಕೋಟ್ , ವಡೋದರಾ, ಜಾಮ್ ನಗರ್..ಹೀಗೆ ಎಲ್ಲಾ ಮಹಾನಗರಗಳಲ್ಲೂ ಕಾಂಗ್ರೆಸ್ ಮತಬ್ಯಾಂಕ್ ಎಎಪಿಯತ್ತ ವಾಲಿದೆ. ಹೀಗಾಗಿ ಎಎಪಿ ಶೇ. 15-20 ರಷ್ಟು ಮತ ಬಾಚಲಿದೆ. ಅದರ ನೇರ ಪರಿಣಾಮ ಕಾಂಗ್ರೆಸ್ ಪಕ್ಷದ ಮೇಲೆ ತಟ್ಟಲಿದೆ ಎನ್ನುತ್ತದೆ ಸಮೀಕ್ಷೆ ಅಂಕಿಅಂಶಗಳ ಸಾರ.

ಇನ್ನು ಸಮೀಕ್ಷೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ , “ಗುಜರಾತ್ ಬಗ್ಗೆ ನಾವು ಧನಾತ್ಮಕವಾಗಿ ಆಗಿ ಇದ್ದೇವೆ. ನಮ್ಮದು ಅಲ್ಲಿಗೆ ಹೊಸ ಪಕ್ಷ ನಾವು ಅಲ್ಲಿ ಶೇ15 ರಿಂದ 20 ರಷ್ಟು ಮತ ಗಳಿಸಿಕೊಂಡರೂ ಅದು ನಮಗೆ ದೊಡ್ಡದು” ಅಂದಿದ್ದಾರೆ.