-ಶೌರ್ಯ ಡೆಸ್ಕ್
ಪಟೇಲ್ ಸೇರಿದಂತೆ ಸಚಿವರುಗಳಿಗೆ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಗಾಂಧಿನಗರದ ಹೊಸ ಸೆಕ್ರೆಟರಿಯೇಟ್ ಕಾಂಪ್ಲೆಕ್ಸ್‌ನಲ್ಲಿರುವ ಹೆಲಿಪ್ಯಾಡ್ ಮೈದಾನದಲ್ಲಿ ಪ್ರಮಾಣ ವಚನ ಬೋಧಿಸಿದರು.

ಗುಜರಾತಿನ ಗಾಂಧಿನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಸಂಪುಟದ ಒಟ್ಟು 16 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ನೂತನ ಸಚಿವ ಸಂಪುಟದ 17 ಸದಸ್ಯರ ಪೈಕಿ ಒಬ್ಬರು ಮಹಿಳೆ ಇದ್ದಾರೆ.

ಭೂಪೇಂದ್ರ ಪಟೇಲ್ ಅವರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಅವರ ಮಹಾರಾಷ್ಟ್ರ ಮತ್ತು ಗೋವಾ, ಕರ್ನಾಟಕ ಸಹವರ್ತಿಗಳಾದ ಏಕನಾಥ್ ಶಿಂಧೆ, ಪ್ರಮೋದ್ ಸಾವಂತ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮೊದಲಾದವರು ಭಾಗವಹಿಸಿದರು.

ಪಟೇಲ್ ಸೇರಿದಂತೆ ಸಚಿವರುಗಳಿಗೆ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಗಾಂಧಿನಗರದ ಹೊಸ ಸೆಕ್ರೆಟರಿಯೇಟ್ ಕಾಂಪ್ಲೆಕ್ಸ್‌ನಲ್ಲಿರುವ ಹೆಲಿಪ್ಯಾಡ್ ಮೈದಾನದಲ್ಲಿ ಪ್ರಮಾಣ ವಚನ ಬೋಧಿಸಿದರು.
ಕಳೆದ ವರ್ಷ ವಿಜಯ್ ರೂಪಾನಿ ಅವರನ್ನು ಬದಲಿಸಿ ಭೂಪೇಂದ್ರ ಪಟೇಲ್ ಅವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ಪ್ರಬಲ ಪಟೇಲ್ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ದಾಖಲೆ ವಿಜಯದ ಮೂಲಕ ಬಿಜೆಪಿ ಗುಜರಾತ್‌ನಲ್ಲಿ ಸತತ ಏಳನೇ ಅವಧಿಗೆ ಅಧಿಕಾರ ಸ್ಥಾಪಿಸಿದೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ತನ್ನದೇ ಆದ ದಾಖಲೆಯನ್ನು ಮುರಿದು 156 ಸ್ಥಾನಗಳನ್ನು ಗಳಿಸಿದೆ ಮತ್ತು ಭೂಪೇಂದ್ರ ಪಟೇಲ್ ಅವರು ಗುಜರಾತ್‌ನ 18 ನೇ ಮುಖ್ಯಮಂತ್ರಿಯಾಗಿದ್ದಾರೆ.
ಬಿಜೆಪಿಯ ಯುವ ಐಕಾನ್ ಹರ್ಷ ಸಂಘವಿ ಮತ್ತು ಜಗದೀಶ್ ವಿಶ್ವಕರ್ಮ ಅವರು ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ಪ್ರಮಾಣ ವಚನ ಸ್ವೀಕರಿಸಿದರು. ಪ್ರಫುಲ್ ಪನ್ಶೇರಿಯಾ, ಕುಂವರ್ಜಿ ಹಲ್ಪಾಟಿ ಮತ್ತು ಪರಶೋತ್ತಮ್ ಸೋಲಂಕಿ ಅವರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಸಂಪೂರ್ಣ ಪಟ್ಟಿ ಇಲ್ಲಿದೆ.
1. ಕನು ದೇಸಾಯಿ
2. ರುಷಿಕೇಶ್ ಪಟೇಲ್
3. ರಾಘವ್‌ಜಿ ಪಟೇಲ್
4. ಬಲ್ವಂತ್ ಸಿಂಗ್ ರಜಪೂತ್
5. ಕುನ್ವರ್ಜಿ ಬವಾಲಿಯಾ
6. ಮುಲುಭಾಯಿ ಬೇರಾ
7. ಕುಬೇರಭಾಯಿ ಮನ್ಸುಖಭಾಯಿ ದಿಂಡೋರ್
8. ಭಾನುಬೆನ್ ಬಬಾರಿಯಾ
9. ಹರ್ಷ ಸಾಂಘ್ವಿ
10. ಜಗದೀಶ್ ವಿಶ್ವಕರ್ಮ
11. ಪರಸತ್ತಮ್ ಸೋಲಂಕಿ
12. ಬಾಚುಭಾಯಿ ಖಬದ್
13. ಮುಕೇಶಭಾಯ್ ಜಿನ್ಭಾಯಿ ಪಟೇಲ್
14. ಭಿಖುಭಾಯಿ ಪರ್ಮಾರ್
15. ಪ್ರಫುಲ್ ಪನ್ಸೇರಿಯಾ ಕಾಮ್‌ರೇಜ್