-ಶೌರ್ಯ ಡೆಸ್ಕ್
ಹೀಗಿದ್ದಾಗ್ಯೂ ತಂದೆ ತಾಯಿ ಮರಣಿಸಿದಾಗ ಗಂಡು ಸಂತಾನವೇ ಅಂತಿಮ ವಿಧಿವಿಧಾನ ನೆರವೇರಿಸಿ ಅಂತ್ಯಕ್ರಿಯೆ ನಡೆಸಬೇಕು, ಚಿತೆಗೆ ಅಗ್ನಿಸ್ಪರ್ಶ ಮಾಡಬೇಕು, ಗಂಡು ಸಂತಾನವಿಲ್ಲದಿದ್ದರೆ ದಾಯಾದಿಗಳ ಗಂಡು ಸಂತಾನ ಅಂತ್ಯಕ್ರಿಯೆ ಮಾಡಿದರೆ ಮಾತ್ರ ತೀರಿಹೋದವರಿಗೆ ಮೋಕ್ಷ ಎಂಬ ಮೌಢ್ಯವನ್ನು ಸಮಾಜದಲ್ಲಿ ಬಿತ್ತಿಕೊಂಡು ಬರಲಾಗಿದೆ. ಈ ಸಂಪ್ರದಾಯ, ತಪ್ಪು ಪದ್ಧತಿಗೆ ಹೆಣ್ಣು ಮಕ್ಕಳಿಬ್ಬರು ತಿಲಾಂಜಲಿ ಇಟ್ಟು ಹೆತ್ತಪ್ಪನ ಅಂತ್ಯಕ್ರಿಯೆ ನಡೆಸಿರುವುದು ತುಮಕೂರಿನಿಂದ ವರದಿಯಾಗಿದೆ.

ಹೆಣ್ಣು ಮಕ್ಕಳನ್ನು ಹೀಗೆಳೆಯುವವರೇ ಹೆಚ್ಚು. ಇಂದಿನ ಯುಗದಲ್ಲಿ ಹೆಣ್ಣು ಮಕ್ಕಳ ಬಗೆಗಿನ ಲಿಂಗಭೇದ ಕಣ್ಮರೆಯಾಗುತ್ತಿದ್ದರೂ ಪರಿಸ್ಥಿತಿ ಸುಧಾರಿಸಿಲ್ಲ. ಆದರೆ ಹೆಣ್ಣು ಮಕ್ಕಳು ತಾವೇನೂ ಗಂಡಸರಿಗಿಂತ ಕಡಿಮೆಯಿಲ್ಲ ಎಂಬುದನ್ನು ನಿರಂತರವಾಗಿ ತೋರ್ಪಡಿಸುತ್ತಲೇ ಬಂದಿದ್ದಾರೆ. ಹೆಣ್ಣು ಸಂತಾನದ ಬಗ್ಗೆ ಹೆತ್ತವರು ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ.
ಹೀಗಿದ್ದಾಗ್ಯೂ ತಂದೆ ತಾಯಿ ಮರಣಿಸಿದಾಗ ಗಂಡು ಸಂತಾನವೇ ಅಂತಿಮ ವಿಧಿವಿಧಾನ ನೆರವೇರಿಸಿ ಅಂತ್ಯಕ್ರಿಯೆ ನಡೆಸಬೇಕು, ಚಿತೆಗೆ ಅಗ್ನಿಸ್ಪರ್ಶ ಮಾಡಬೇಕು, ಗಂಡು ಸಂತಾನವಿಲ್ಲದಿದ್ದರೆ ದಾಯಾದಿಗಳ ಗಂಡು ಸಂತಾನ ಅಂತ್ಯಕ್ರಿಯೆ ಮಾಡಿದರೆ ಮಾತ್ರ ತೀರಿಹೋದವರಿಗೆ ಮೋಕ್ಷ ಎಂಬ ಮೌಢ್ಯವನ್ನು ಸಮಾಜದಲ್ಲಿ ಬಿತ್ತಿಕೊಂಡು ಬರಲಾಗಿದೆ. ಈ ಸಂಪ್ರದಾಯ, ತಪ್ಪು ಪದ್ಧತಿಗೆ ಹೆಣ್ಣು ಮಕ್ಕಳಿಬ್ಬರು ತಿಲಾಂಜಲಿ ಇಟ್ಟು ಹೆತ್ತಪ್ಪನ ಅಂತ್ಯಕ್ರಿಯೆ ನಡೆಸಿರುವುದು ತುಮಕೂರಿನಿಂದ ವರದಿಯಾಗಿದೆ. ಹೆಣ್ಣು ಮಕ್ಕಳಿಬ್ಬರು ಮುಂದೆ ನಿಂತು ನಿಧನರಾದ ತಂದೆಯ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಮೃತಪಟ್ಟ ವ್ಯಕ್ತಿಗೆ ಗಂಡು ಸಂತಾನವಿರಲಿಲ್ಲ.
ಅನಾರೋಗ್ಯದಿಂದ ಗಂಗಾಧರ್ ಮೃತಪಟ್ಟಿದ್ದರು. ಇವರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ಇಬ್ಬರು ಪುತ್ರಿಯರಾದ ಸವಿತಾ ಮತ್ತು ಲಕ್ಷ್ಮಿ ನೆರವೇರಿಸಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಸಹ ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವ ಕೊರಗು ನಿವಾರಿಸಿ, ಸಮಾಜಕ್ಕೆ ಮಾದರಿಯಾಗಿದ್ದಾರೆ.
ಗಂಗಾಧರ್ ಅವರು ಜೀವಿತಾವಧಿಯಲ್ಲಿ ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದರು. ತುಮಕೂರಿನ ಚಿಕ್ಕಪೇಟೆಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಮಂಡಳಿಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದರು