-ಶೌರ್ಯ ಸಂಗ್ರಹ
ಗಮನಿಸಬೇಕಾದ ಸಂಗತಿಯೆಂದರೆ ಚೀನಾದಲ್ಲಿ ಹೊಸ ವರ್ಷದ ಸಮಯದಲ್ಲಿ ಬಾಡಿಗೆಗೆ ಗರ್ಲ್ ಫ್ರೆಂಡ್ ನೇಮಿಕೊಳ್ಳುವುದು ಅತ್ಯಂತ ದುಬಾರಿಯಾಗುತ್ತದೆ. ಆಗ 10 ಸಾವಿರ ಯುವಾನ್ ಅಂದರೆ 1,14,139 ರೂ. ಕೊಟ್ಟರೂ ಬಾಡಿಗೆಗೆ ಗರ್ಲ್ ಫ್ರೆಂಡ್‌ಗಳು ಸಿಗುವುದಿಲ್ಲ. ಏಕೆಂದರೆ ಹೊಸ ವರ್ಷದಂದು ಹೆಚ್ಚಿನ ಜನರು ತಮ್ಮ ಕರ್ತವ್ಯ ಕೇಂದ್ರದಿಂದ ರಜಾ ದಿನಕ್ಕಾಗಿ ಮನೆಗೆ ತೆರಳುವ ಪರಿಪಾಠ ಇಲ್ಲಿದೆ.

ರಂಗುರಂಗಿನ ಈ ಆಧುನಿಕ ಯುಗದಲ್ಲಿ ಬಹುತೇಕರಿಗೆ ಗರ್ಲ್ ಫ್ರೆಂಡ್ ಇರುವುದು ಸಾಮಾನ್ಯ. ಆದರೆ ಗರ್ಲ್ ಫ್ರೆಂಡ್ ಬಾಡಿಗೆಗೆ ಸಿಗುವುದು ನೀವೆಲ್ಲಾದರೂ ಕೇಳಿದ್ದೀರಾ? ಹೌದು, ಇದು ಚೀನಾದಲ್ಲಿ ನಡೆಯುತ್ತದೆ. ಈ ಕಮ್ಯೂನಿಸ್ಟ್ ರಾಷ್ಟ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಲಿಂಗಾನುಪಾತ ಏರುಪೇರಾಗಿದೆ. ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳ ಸಂಖ್ಯೆಯೇ ಹೆಚ್ಚಿದೆ. ಹೀಗಾಗಿ ಎಲ್ಲರಿಗೂ ಗೆಳತಿ ಸಿಗುವುದು, ಮದುವೆ ಆಗುವುದೂ ದುರ್ಲಾಭ. ಆದರೆ ಹುಡುಗನ ಮನೆಯವರು ಮಗನಿಗೊಬ್ಬಳು ಗರ್ಲ್ ಫ್ರೆಂಡ್ ಇರಲಿ. ಆಕೆಯೊಂದಿಗೆ ಮದುವೆಯಾಗಿ ಆಕೆ ಸಂಸಾರಿಯಾಗಲೆಂದು ಬಯಸುತ್ತಾರೆ. ಹೀಗಾಗಿ ಇಲ್ಲಿನ ಯುವಕರು ತಮ್ಮ ಕುಟುಂಬಗಳನ್ನು ಸಂತೃಪ್ತಿಪಡಿಸಲು, ಪೋಷಕರನ್ನು ಭೇಟಿ ಮಾಡಲು ತಮ್ಮ ಊರುಗಳಿಗೆ ತೆರಳುವಾಗ ಬಾಡಿಗೆ ಗೆಳತಿಯರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಇದಕ್ಕಾಗಿ ಅಲ್ಲಿ ಸಾಕಷ್ಟು ಆ್ಯಪ್‌ಗಳಿವೆ. ಅದರ ಸಹಾಯದಿಂದ ಗೆಳತಿಯರನ್ನು ಬಾಡಿಗೆಗೆ ತೆಗೆದುಕೊಳ್ಳಬಹುದು. ಇದಕ್ಕೆ ಅನೇಕ ಷರತ್ತುಗಳಿರುತ್ತವೆ. ಆ ಒಪ್ಪಂದಗಳ ಅನುಸಾರ ಹುಡುಗ ನಡೆದುಕೊಳ್ಳಬೇಕಾಗುತ್ತದೆ. ಬಾಡಿಗೆಗೆ ಗೆಳತಿಯಾಗಿ ಬರುವ ಹುಡುಗಿ ಹುಡುಗನೊಂದಿಗೆ ಸಹಕರಿಸಿ ನಿಜಕ್ಕೂ ಗರ್ಲ್ ಫ್ರೆಂಡ್ ಎಂಬಷ್ಟು ಸಹಜವಾಗಿ ವರ್ತಿಸುವ ತರಬೇತಿ ಹೊಂದಿರುತ್ತಾಳೆ.
ಮಾಹಿತಿ ಪ್ರಕಾರ ಗರ್ಲ್ ಫ್ರೆಂಡ್ ನೇಮಿಸಿಕೊಳ್ಳುವ ಹುಡುಗರು 1999 ಯುವಾನ್‌ವರೆಗೆ ಅಂದರೆ ಸುಮಾರು 22,816 ರೂ. ಹಣ ನೀಡಬೇಕು. ಇಷ್ಟು ಹಣ ನೀಡಿದ ನಂತರ ಬಾಡಿಗೆ ಪಡೆದ ಗೆಳತಿಯನ್ನು ತಮ್ಮಕುಟುಂಬದೊಂದಿಗೆ ಸೇರಿಸಬಹುದು. ಆಕೆ ಅಲ್ಲಿರುವಷ್ಟು ದಿನ ಅವರೊಂದಿಗೆ ಬೆರೆಯುತ್ತಾಳೆ. ಈ ಹಂತದಲ್ಲಿ ಹುಡುಗನೊಂದಿಗೆ ಡೇಟಿಂಗ್‌ಗೂ ಕೂಡ ಸಿದ್ಧಳಿರುತ್ತಾಳೆ. ಒಪ್ಪಂದ ಮುಗಿಯುವವರೆಗೂ ಚಾಟಿಂಗ್, ಔಟಿಂಗ್‌ಗೂ ಸೈ ಎನ್ನುತ್ತಾಳೆ. ಆದರೆ ಗರ್ಲ್ ಫ್ರೆಂಡ್ ಬಾಡಿಗೆಗೆ ಪಡೆಯುವ ಯುವಕ ಆಕೆಯನ್ನು ಕುಟುಂಬದವರ ಮುಂದೆ ಅವಶ್ಯ ಅನಿವಾರ್ಯವಲ್ಲದೆ ಯಾವುದೇ ಸಂದರ್ಭದಲ್ಲಿ ಮುಟ್ಟುವಂತಿಲ್ಲ, ತಬ್ಬಿಕೊಳ್ಳುವಂತಿಲ್ಲ, ಮನಸೋಇಚ್ಛೆ ವರ್ತಿಸುವಂತಿಲ್ಲ. ಹುಡುಗಿ ತನ್ನ ಅಗ್ರಿಮೆಂಟ್ ಬಾಯ್ ಫ್ರೆಂಡ್‌ಗೆ ಭಾವನಾತ್ಮಕ ಬೆಂಬಲ ನೀಡುತ್ತಾಳೆ. ಅವನ ಗರ್ಲ್ ಫ್ರೆಂಡ್‌ನಂತೆ ವರ್ತಿಸುತ್ತಾಳೆ.

ಹೆಚ್ಚಿನ ಚೀನಾದ ಯುವಕರು ರಜಾ ದಿನಗಳಿಗಾಗಿ ತಮ್ಮ ಮನೆಗಳಿಗೆ ಹೋದಾಗ ಬಾಡಿಗೆಗೆ ಗೆಳತಿಯರನ್ನು ನೇಮಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ ಪೋಷಕರು ಮತ್ತು ಸಂಬಂಧಿಕರಿಂದ ಬೈಗುಳ ಕೇಳಬೇಕಾಗುತ್ತದೆ. ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಅನೇಕ ಸಲ ಯುವಜನರು ಮದುವೆ ಮತ್ತು ಗೆಳತಿಯರನ್ನು ಹೊಂದುವ ಅನಿವಾರ್ಯತೆ ಮತ್ತು ಮಹತ್ವದ ಬಗ್ಗೆ ಸಂಬಂಧಿಕರಿಂದ ಸುದೀರ್ಘವಾದ ಉಪನ್ಯಾಸಗಳನ್ನು ಕೇಳಬೇಕಾಗುತ್ತದೆ. ಇದನ್ನು ತಪ್ಪಿಸಿಕೊಳ್ಳಲು ಬಾಡಿಗೆ ಗರ್ಲ್ ಫ್ರೆಂಡ್‌ಗಳು ಸಹಾಯ ಮಾಡುತ್ತಾರೆ.
ಗಮನಿಸಬೇಕಾದ ಸಂಗತಿಯೆಂದರೆ ಚೀನಾದಲ್ಲಿ ಹೊಸ ವರ್ಷದ ಸಮಯದಲ್ಲಿ ಬಾಡಿಗೆಗೆ ಗರ್ಲ್ ಫ್ರೆಂಡ್ ನೇಮಿಕೊಳ್ಳುವುದು ಅತ್ಯಂತ ದುಬಾರಿಯಾಗುತ್ತದೆ. ಆಗ 10 ಸಾವಿರ ಯುವಾನ್ ಅಂದರೆ 1,14,139 ರೂ. ಕೊಟ್ಟರೂ ಬಾಡಿಗೆಗೆ ಗರ್ಲ್ ಫ್ರೆಂಡ್‌ಗಳು ಸಿಗುವುದಿಲ್ಲ. ಏಕೆಂದರೆ ಹೊಸ ವರ್ಷದಂದು ಹೆಚ್ಚಿನ ಜನರು ತಮ್ಮ ಕರ್ತವ್ಯ ಕೇಂದ್ರದಿಂದ ರಜಾ ದಿನಕ್ಕಾಗಿ ಮನೆಗೆ ತೆರಳುವ ಪರಿಪಾಠ ಇಲ್ಲಿದೆ.
