-ಜಿ. ಅರುಣ್‌ಕುಮಾರ್
ಗೋಲ್ಡನ್ ಸ್ಟಾರ್ ಗಣೇಶ್ ಅದೃಷ್ಟ ಚೆನ್ನಾಗಿತ್ತು. ಈಗ ಗಾಳಿಪಟ-2 ಸೂಪರ್ ಹಿಟ್ ಅನ್ನಿಸಿಕೊಂಡಿದೆ. ಹೇಗಾದರೂ ಮಾಡಿ ಪಾರ್ಟ್ 3ರನ್ನೂ ಇದೇ ನಿರ್ಮಾಪಕರಿಂದ ಮಾಡಿಸಬೇಕು ಅನ್ನೋದು ಭಟ್ಟನ ಸ್ಕೆಚ್ಚು. ಆದರೆ ರಮೇಶ್ ರೆಡ್ಡಿ ಒಪ್ಪುತ್ತಾರಾ ಅನ್ನೋದೇ ಡೌಟು!

ಸಿನಿಮಾರಂಗದವರೇ ಹೀಗೆ. ಮೀಡಿಯಾ, ಮೈಕು ಸಿಕ್ಕತಕ್ಷಣ ಸುಳ್ಳುಗಳ ಮೇಲೆ ಸುಳ್ಳುದುರಿಸಲು ಶುರು ಮಾಡುತ್ತಾರೆ. ಒಬ್ಬರನ್ನೊಬ್ಬರು ಹೊಗಳಲು ಶುರು ಮಾಡುತ್ತಾರೆ. ನಿರ್ದೇಶಕ ಯೋಗರಾಜ್ ಭಟ್ ಈಗ ಗಾಳಿಪಟ ಚಿತ್ರದ ನಿರ್ಮಾಪಕರನ್ನು ವೇದಿಕೆಯಲ್ಲಿ ಸಿಕ್ಕಾಪಟ್ಟೆ ಹೊಗಳುತ್ತಿದ್ದಾರೆ. ಆದರೆ ಇವರಿಬ್ಬರ ನಡುವಿನ ಸ್ನೇಹ ಸವೆದು ಹೋಗಿ ಬಹಳಷ್ಟು ದಿನಗಳೇ ಕಳೆದಿವೆ.
ಗಾಳಿಪಟ-2 ಎನ್ನುವ ಸಿನಿಮಾ ಹಿಟ್ ಆಗದೇ ಹೋಗಿದ್ದಿದ್ದರೆ ರಮೇಶ್ ರೆಡ್ಡಿ ಎನ್ನುವ ಧೀಮಂತ ನಿರ್ಮಾಪಕ ಇನ್ನೆಂದೂ ಚಿತ್ರರಂಗದತ್ತ ತಿರುಗಿ ನೋಡದೇ ಓಡಿ ಹೋಗುತ್ತಿದ್ದರು. ನಮ್ಮ ಚಿತ್ರರಂಗದವರು ಉತ್ತಮ ನಿರ್ಮಾಪಕರನ್ನು ಯಾವತ್ತೂ ಉಳಿಸಿಕೊಳ್ಳುವುದಿಲ್ಲ. ಹಿಂದೆ ಇದೇ ರಮೇಶ್ ರೆಡ್ಡಿ `ಉಪ್ಪು ಉಳಿ ಖಾರ’ ಎನ್ನುವ ಸಿನಿಮಾವನ್ನು ನಿರ್ಮಿಸಿದ್ದರು. ಅದು ಇವರ ಮೊದಲ ಚಿತ್ರ ಕೂಡ ಆಗಿತ್ತು. ಆ ಚಿತ್ರದ ನಿರ್ದೇಶಕ ಇಮ್ರಾನ್ ಸರ್ದಾರಿಯಾ ರಮೇಶ್ ರೆಡ್ಡಿ ಜೇಬಿಗೆ ಭರ್ಜರಿ ಸರ್ಜರಿ ಮಾಡಿ ಹಾಕಿದ್ದ. ಆ ನಂತರ ಗುರು ದೇಶಪಾಂಡೆ ಕೂಡಾ ಸರಿಯಾಗಿ ಬ್ಲೇಡು ಹಾಕಿದ್ದರು. ಮನ್ಸೋರೆ ಒಬ್ಬರೇ ನಾತಿಚರಾಮಿ ಸಿನಿಮಾದಲ್ಲಿ ರಮೇಶ್ ರೆಡ್ಡ್ಡಿಗೆ ದ್ರೋಹವಾಗದಂತೆ ನೋಡಿಕೊಂಡವರು. ಒಟ್ಟಾರೆ ಕೆಟ್ಟ ಅನುಭವಗಳನ್ನೇ ಹೆಚ್ಚಾಗಿ ಅನುಭವಿಸಿದ್ದ ರಮೇಶ್ ರೆಡ್ಡಿಗೆ ಯೋಗರಾಜ ಭಟ್ಟ ಕೊಟ್ಟ ಕಾಟ ಕಡಿಮೆಯೇನಲ್ಲ. ಇಷ್ಟು ದಿನ ವ್ಯವಹಾರದ ವಿಚಾರದಲ್ಲಿ ಕೈ ಕೆಡಿಸಿಕೊಳ್ಳದ ಭಟ್ಟ ಅದ್ಯಾಕೆ ಈ ಸಲ ಹಿಂಗಾದನೋ ಗೊತ್ತಿಲ್ಲ. ರಮೇಶ್ ರೆಡ್ಡಿ ಬಳಿ ಕಾಸು ಕೀಳದವನೇ ದಡ್ಡ ಅಂತಾ ತೀರ್ಮಾನಿಸಿದ್ದನೋ ಏನೋ? ಒಂದೇ ಸಲಕ್ಕೆ ನಾಲ್ಕು ಕೋಟಿ ಎಗರಿಸುವ ಪ್ಲಾನು ಮಾಡಿದ್ದ. ಯೂರೋಪ್‌ಗೆ ಚಿತ್ರೀಕರಣಕ್ಕೆಂದು ಹೋದಾಗ ರ‍್ರಾಬರ‍್ರಿ ಬಜೆಟ್ಟು ಕೊಟ್ಟಿದ್ದ. ಈ ವಿಚಾರವಾಗಿ ರಮೇಶ್ ರೆಡ್ಡಿಗೂ ಭಟ್ಟನಿಗೂ ಭಯಾನಕ ಕಿತ್ತಾಟಗಳಾಗಿದ್ದವು. ಸ್ವತಃ ರಮೇಶ್ ರೆಡ್ಡಿ ಭಟ್ಟನ ವಿರುದ್ಧ ಸಿಡಿದು ನಿಂತಿದ್ದರು. ಒಂದು ವೇಳೆ ಪಟ ಹಾರದೇ ಹೋಗಿದ್ದಿದ್ದರೆ ಈ ಹೊತ್ತಿಗೆ ಅವೆಲ್ಲವನ್ನೂ ರೆಡ್ಡಿ ಜಾಹೀರು ಮಾಡಿರುತ್ತಿದ್ದರು.
ಗೋಲ್ಡನ್ ಸ್ಟಾರ್ ಗಣೇಶ್ ಅದೃಷ್ಟ ಚೆನ್ನಾಗಿತ್ತು. ಈಗ ಗಾಳಿಪಟ-2 ಸೂಪರ್ ಹಿಟ್ ಅನ್ನಿಸಿಕೊಂಡಿದೆ. ಹೇಗಾದರೂ ಮಾಡಿ ಪಾರ್ಟ್ 3ರನ್ನೂ ಇದೇ ನಿರ್ಮಾಪಕರಿಂದ ಮಾಡಿಸಬೇಕು ಅನ್ನೋದು ಭಟ್ಟನ ಸ್ಕೆಚ್ಚು. ಆದರೆ ರಮೇಶ್ ರೆಡ್ಡಿ ಒಪ್ಪುತ್ತಾರಾ ಅನ್ನೋದೇ ಡೌಟು!